ಮಾರ್ಚ್-2025 ರಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆ - 1 ಕ್ಕೆ ಅರ್ಹ ಅಭ್ಯರ್ಥಿಗಳ ನೋಂದಣಿ ८ (https://kseab.karnataka.gov.in))
ಪಡೆಯಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಸ್ತರು ತಮ್ಮ ಶಾಲೆಯ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಶಾಲಾ ಹಾಗೂ ಖಾಸಗಿ ಅಭ್ಯರ್ಥಿಗಳು) ಮಾರ್ಚ್-2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆ - 1 ನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್ ಮೂಲಕ ಅಪ್ ಲೋಡ್ ಮಾಡುವಂತೆ ಈ ಮೂಲಕ ಆದೇಶಿಸಿದೆ.
1) ಈ ನೋಂದಣಿ ಕಾರ್ಯಕ್ಕೆ ದಿನಾಂಕ: 18-10-2024 ರಿಂದ 11-11-2024 ರವರೆಗೆ ಮಾಹಿತಿಯನ್ನು
ಅಪ್‌ಲೋಡ್ ಮಾಡಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ. 2) ಮಾಹಿತಿಗಳನ್ನು ಅಪ್ ಲೋಡ್ ಮಾಡಲು ಬಳಸಬೇಕಾದ ಫಾರಂನ್ನು ಮಂಡಲಿಯ ಜಾಲತಾಣ https://kseab.karnataka.gov.in
3) ಮುಖ್ಯ ಶಿಕ್ಷಕರು ಮಂಡಲಿಯ ಶಾಲಾ ಲಾಗಿನಲ್ಲಿ ಮಂಡಲಿಯ ವತಿಯಿಂದ ಈಗಾಗಲೇ ನೀಡಿರುವ Username and Password ? এটা ওঠে ? Password Update ad Screen . Registered Mobile Numbert w OTP Password update ಮಾಡಿಕೊಳ್ಳುವುದು. ಇದರ ನಂತರವೇ ನೋಂದಣಿ ಕಾರ್ಯ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ.
4) ಮಾರ್ಚ್-2025 ರ ಪರೀಕ್ಷೆ -1 ಕ್ಕೆ ಈ ಕೆಳಕಂಡ ಅಭ್ಯರ್ಥಿಗಳನ್ನು ನೋಂದಾಯಿಸಬೇಕಾಗಿರುತ್ತದೆ. ಶಾಲಾ ವಿದ್ಯಾರ್ಥಿಗಳ (CCERF) ಪೂರ್ಣ ಮಾಹಿತಿ ಹಾಗೂ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು.
ಖಾಸಗಿ ವಿದ್ಯಾರ್ಥಿಗಳ (CCEPF) - ಪೂರ್ಣ ಮಾಹಿತಿ ಹಾಗೂ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು.
ಮಾರ್ಚ್-2023ರ ಮುಖ್ಯ ಪರೀಕ್ಷೆಯಿಂದ 2024 ಪರೀಕ್ಷೆ-3 ರವರಗಿನ (CCERR /CCEPR) ಪುನರಾವರ್ತಿತ ಶಾಲಾ ಅಭ್ಯರ್ಥಿಗಳ ಹಾಗೂ ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು ನಮೂದಿಸಿದರೆ ಡೇಟಾ Auto Fetch ಆಗುತ್ತದೆ. ಪೋಷಕರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು.
5) ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಾಲಾ ವಿದ್ಯಾರ್ಥಿಗಳ ಬಹುತೇಕ ಮಾಹಿತಿಗಳನ್ನು SATS ನ ಡೇಟಾಬೇಸ್‌ನಿಂದ ಪಡೆಯುತ್ತಿರುವುದರಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಧರ್ಮ, ಲಿಂಗ ಮತ್ತು ಮಾಧ್ಯಮ ಇವುಗಳಲ್ಲಿ ಯಾವುದೇ ತಿದ್ದುಪಡಿಗಳು ಇದ್ದಲ್ಲಿ ಮಂಡಲಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಮೊದಲು SATS ಡೇಟಾಬೇಸ್‌ನಲ್ಲಿ ತಿದ್ದುಪಡಿ ಮಾಡಿ ನಂತರ ಮಂಡಲಿಯ ಶಾಲಾ ಲಾಗಿನ್ನಲ್ಲಿ ಪರೀಕ್ಷಾ ನೋಂದಣಿ ಮಾಡುವುದು.
6) ಆನ್‌ಲೈನ್ ನೋಂದಣಿ ಪ್ರಾರಂಭಿಸುವ ಮೊದಲು ಶಾಲೆಯ ಪ್ರತಿ ವಿದ್ಯಾರ್ಥಿಯ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಭಾವಚಿತ್ರ (20-80kb) ಹಾಗೂ ಸಹಿಯನ್ನು (20-50kb) jpeg format ನಲ್ಲಿ ಅವರ ಎಸ್.ಎ.ಟಿ.ಎಸ್. ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು.
ಉದಾ:- ಅಭ್ಯರ್ಥಿಯ SATS ಸಂಖ್ಯೆಯು 012345678 ಆಗಿದ್ದಲ್ಲಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ P012345678 20, 5012345678 20 soft copy 그렇 ಮಾಡಿಟ್ಟುಕೊಳ್ಳುವುದು ಇದೇ ರೀತಿ ಖಾಸಗಿ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಸಹಿಗಳನ್ನು ಆ ಅಭ್ಯರ್ಥಿಗಳ ಪೂರ್ಣ ಹೆಸರಿನೊಂದಿಗೆ ಸೇವ್ ಮಾಡಿಟ್ಟುಕೊಳ್ಳಬಹುದಾಗಿದೆ.
7) ಶಾಲಾ ವಿದ್ಯಾರ್ಥಿಗಳ (CCERF) ನೋಂದಣಿ ಪ್ರಾರಂಭಿಸುವ ಮೊದಲು ಶಾಲೆಯಲ್ಲಿ ಬೋಧಿಸಲಾಗುವ १० ಸಂಯೋಜನೆಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಶಾಲೆಯಲ್ಲಿ ಬೋಧಿಸಲ್ಪಡುತ್ತಿರುವ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಭಾಷಾ ಸಂಯೋಜನೆಗಳನ್ನು ಆಯ್ಕೆ ಮಾಡಿದ ನಂತರವನ್ನೇ ಶಾಲಾ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
8) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಿದ್ಯಾರ್ಥಿಗಳ Aadhar linked ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಹಿಂದುಳಿದ ವರ್ಗಕ್ಕೆ (OBC) ಸೇರಿದ ವಿದ್ಯಾರ್ಥಿಗಳು ಶುಲ್ಕ, ವಿನಾಯಿತಿ ಪಡೆಯಬೇಕಾದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ RD NUMBER ನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. RD NUMBER ನಮೂದಿಸಿದ ನಂತರ ಮುಖ್ಯ
ಶಿಕ್ಷಕರು ವಿದ್ಯಾರ್ಥಿಯ ಪ್ರವರ್ಗದ ಮಾಹಿತಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

No comments:
Post a Comment