2023-24 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡಿ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅತಿ ಹೆಚ್ಚು ಅಂಕ ಪಡೆದ 03 ವಿದ್ಯಾರ್ಥಿ ಗಳಿಗೆ ಹಾಗೂ ಸಮಾನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಯದಾಯಕವಾಗಿ ಲ್ಯಾಪ್ ಟಾಪ್ ಗಳನ್ನು ವಿತರಿಸುವ ಯೋಜನೆಗೆ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪರಿಶೀಲಿಸಿ ತಿನ್ನುಪಡಿ/ ಸೇರ್ಪಡೆ ವಿವರ ಗಳನ್ನು ಇ-ಮೇಲ್ ಮುಖಾಂತರ ಹಾಗೂ ಮುದ್ರಿತ ಪ್ರತಿಯನ್ನು ಮಂಡಲಿಗೆ ಸಲ್ಲಿಸುವ ಬಗ್ಗೆ,
2023-24 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡಿ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅತಿ ಹೆಚ್ಚು ಅಂಕ ಪಡೆದ 03 ವಿದ್ಯಾರ್ಥಿಗಳಿಗೆ ಹಾಗೂ ಸಮಾನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಯದಾಯಕವಾಗಿ ಲ್ಯಾಪ್ ಟಾಪ್ ಗಳನ್ನು ವಿತರಿಸುವ ಯೋಜನೆಗೆ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿಯನ್ನು ಉಪನಿರ್ದೇಶಕರು (ಆಡಳಿತ). ಶಾ.ಶಿ.ಇ ಕಛೇರಿಗೆ ಇ-ಮೇಲ್ ಮುಖಾಂತರ ಕಳುಹಿಸಲಾಗಿದೆ.
ಸದರಿ ಪಟ್ಟಿಯನ್ನು ತಮ್ಮ ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗೆ ರವಾನಿಸಿ, ಕ್ಷೇತ್ರಶಿಕ್ಷಣಾಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲು ತಿಳಿಸಿದೆ.
1. ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಕರೆಯುವುದು.
2. ಕ್ರಮ ಸಂಖ್ಯೆ 01 ರಂತೆ ಕರೆಯಲಾದ ಸಭೆಯಲ್ಲಿ ಮಂಡಲಿ ರವಾನಿಸಿರುವ ಫಲಾನುಭವಿಗಳ ಪಟ್ಟಿಯನ್ನು ಮುಖ್ಯಶಿಕ್ಷಕರು ಪರಿಶೀಲನೆಗೆ ನೀಡುವುದು.
3. ಮುಖ್ಯಶಿಕ್ಷಕರ ಪರಿಶೀಲನೆಯ ಹಂತದಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದಾದರೂ ಅರ್ಹ ಫಲಾನುಭವಿಗಳು ಕೈಬಿಟ್ಟು ಹೋಗಿರುವುದನ್ನು ಗುರುತಿಸಿದಲ್ಲಿ, ಮುಖ್ಯಶಿಕ್ಷಕರಿಂದ ಅರ್ಹ ವಿದ್ಯಾರ್ಥಿಯ ಎಲ್ಲಾ ವಿವರಗಳನ್ನು ದೃಢಿಕರಣದೊಂದಿಗೆ ಪಡೆಯುವುದು ಹಾಗೂ ಶಾಲಾ ಶಿಕ್ಷಣ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆ ಹೊರತುಪಡಿಸಿದಂತೆ ಬೇರೆ ಶಾಲೆಯ ವಿದ್ಯಾರ್ಥಿಗಳು/ ಅನರ್ಹ ವಿದ್ಯಾರ್ಥಿಗಳು ಪಟ್ಟಿಯಲ್ಲಿ ಸೇರ್ಪಡೆಗೊಂಡಿದಲ್ಲಿ ಅಂತಹ ವಿದ್ಯಾರ್ಥಿಗಳ ಮಾಹಿತಿಯನ್ನು ಸರ್ಕಾರಿ ಶಾಲೆಗೆ / ತಮ್ಮ ಶಾಲೆಗೆ ಸೇರಿಲ್ಲದಿರುವ ಬಗ್ಗೆ, ದೃಢೀಕರಣವನ್ನು ಪಡೆಯುವುದು.
4. ಉಪನಿರ್ದೆಶಕರು ( ಆಡಳಿತ ) ರವರು ತಮ್ಮ ವ್ಯಾಪ್ತಿಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಮೇಲ್ಕಂಡಂತೆ ವರದಿ ನಡೆದು, ಕ್ರೋಢಿಕರಿಸಿ ಮಂಡಲಿಗೆ ದಿನಾಂಕ: 24/10/2024 ರ ಒಳಗೆ ತನ್ನದೆ ಯಾವುದೇ ವಿಳಂಬಕ್ಕೆ, ಅವಕಾಶ ನೀಡದ ತುರ್ತಾಗಿ SOFT ಪ್ರತಿಯನ್ನು ಮಂಡಲಿಯ b.sadpikseeb @gmail.com ಇ - ಮೇಲ್ ವಿಳಾಸಕ್ಕೆ ಹಾಗೂ ಭೌತಿಕ ಪ್ರತಿಯನ್ನು ಅಂಚೆ ಮೂಲಕ ಮಂಡಲಿಯ ಹಿರಿಯ ಸಹಾಯಕ ನಿರ್ದೇಶಕರು' ಬಿ 'ಶಾಖೆ, ಇವರಿಗೆ ಕಳುಹಿಸಿ ಕೊಡಲು ಈ ಮೂಲಕ ಸೂಚಿಸಿದೆ.

No comments:
Post a Comment