Thursday, May 1, 2025

CHECK YOUR SSLC EXAMINATION - 1 RESULT....

  Wisdom News       Thursday, May 1, 2025
SUBJECT : CHECK YOUR SSLC EXAMINATION - 1 RESULT 2025 - 26....

ಎಸ್‌ಎಸ್‌ಎಲ್‌ಸಿ ಆಯ್ತು, ಮುಂದೇನು? ಯಾವ ವಿಷಯದ ಆಯ್ಕೆಯಲ್ಲಿದೆ ಹೆಚ್ಚಿನ ಅವಕಾಶ? ಇಲ್ಲಿದೆ ಸಂಪೂರ್ಣ ಮಾಹಿತಿ.....*
👇👇👇👇👇


ಸಾಮಾನ್ಯವಾಗಿ ಪ್ರತಿ ವರ್ಷ ಎಸ್‌ಎಸ್ಎಲ್‌ಸಿ ಫಲಿತಾಂಶ ಬಂದ ನಂತರ ಎಲ್ಲರನ್ನೂ ಕಾಡುವ ಪ್ರಶ್ನೆ ಮುಂದೆ ಏನು? ವಿದ್ಯಾರ್ಥಿಗಳು, ಪಾಲಕರು, ಬಂಧು ಬಳಗದವರು ಎಲ್ಲರೂ ಈ ಪ್ರಶ್ನೆ ಹಿಡಿದುಕೊಂಡು ಆ ಮಕ್ಕಳ ಹಿಂದೆ ಬೀಳುತ್ತಾರೆ. ನೀನು ಆ ಕೋರ್ಸ್ ತಗೋ, ಇಲ್ಲ ನಾನು ಹೇಳಿದ್ದು ತೆಗೆದುಕೊಂಡ್ರೆ ಇದರಲ್ಲಿ ಬಾರಿ ಸ್ಕೋಪ್ ಇದೆ ಎಂದು ಪದೇಪದೆ ಕೇಳಿ ಮಕ್ಕಳಲ್ಲಿ ದ್ವಂದ್ವ ಸೃಷ್ಟಿಮಾಡಿ, ಆ ಮಕ್ಕಳಿಗೆ ಏನು ಬೇಕು ಎನ್ನುವುದನ್ನೇ ಮರೆಸಿ ಬಿಡುತ್ತಾರೆ. ಆದರೆ, ಕೋರ್ಸ್ ತಗೆದುಕೊಳ್ಳುವುದರಿಂದ ಹಿಡಿದು ಅವರ ಮುಂದಿನ ಭವಿಷ್ಯದ ನಿರ್ಮಾತೃಗಳು ಅವರೇ ಆಗಿರುತ್ತಾರೆ. ಅದು ಅವರ ಹಕ್ಕೂ ಹೌದು. ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಎಂದರೆ ವಿದ್ಯಾರ್ಥಿಯ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅರಿತು ಸಲಹೆಯನ್ನು ನೀಡಿ ಅವರ ಆಸಕ್ತಿಯ ವಿಷಯವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ಕೊಟ್ಟು ಪ್ರೇರೇಪಿಸಬೇಕು ಅಷ್ಟೆ. ಅದೇ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡುತ್ತಿದ್ದೇವೆ.

*ಎಸ್ಸೆಸ್ಸೆಲ್ಸಿ ನಂತರ ಏನು?*

👉 ಸೈನ್ಸ್ (ವಿಜ್ಞಾನ ವಿಭಾಗ)

👉 ಕಾಮರ್ಸ್(ವಾಣಿಜ್ಯ ವಿಭಾಗ)

👉 ಆಟ್ಸ್ (ಕಲಾ ವಿಭಾಗ)

👉 ಡಿಪ್ಲೊಮ ಕೋರ್ಸ್‌ಗಳು.

👉 *ಸೈನ್ಸ್‌ (ವಿಜ್ಞಾನ ವಿಭಾಗ)*

ವಿಜ್ಞಾನದ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಈ ವಿಭಾಗವನ್ನು ಆರಿಸಿಕೊಂಡರೆ ಭವಿಷ್ಯದಲ್ಲಿ ಅವರಿಗೆ ಹೆಚ್ಚು ಆಯ್ಕೆಗಳು ಲಭ್ಯವಾಗುತ್ತದೆ. ಉದಾ: ಇಂಜಿನಿಯರಿಂಗ್, ವೈದ್ಯಕೀಯ, ಬಿ.ಫಾರ್ಮಾ, ಬಿ.ಟೆಕ್, ಆರ್ಕಿಟೆಕ್ಟರ್, ರೊಬೋಟಿಕ್ಸ್, ಏರೋನಾಟಿಕ್ಸ್... ಹೀಗೆ ಅನೇಕ ವಿಷಯಗಳ ಮೇಲೆ ತಮ್ಮ ಪದವಿಯನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪದವಿ ಪೂರ್ವ ಕೋರ್ಸ್ ಗಳು ಇವೆ. PCMB, PCMC, PCME, PCMH, PCMG, CBPH ಯಾವ ಯಾವ ಕೋರ್ಸ್ ಗಳು ಯಾವ ಕಾಲೇಜಿನಲ್ಲಿ ಲಭ್ಯವಿದೆ ಎಂದು ನೋಡಿ ಬೇಕಿರುವ ವಿಷಯ ಆರಿಸಿಕೊಳ್ಳಬಹುದಾಗಿದೆ.

👉 *ಕಾಮರ್ಸ್(ವಾಣಿಜ್ಯ ವಿಭಾಗ)*
ವಾಣಿಜ್ಯ ವಿಭಾಗವೂ ಕೂಡ ವಿಜ್ಞಾನದಷ್ಟೇ ಬಾರಿ ಬೇಡಿಕೆ ಇರುವ ವಿಷಯವಾಗಿದೆ. ಕಾರಣ ಇಲ್ಲಿಯೂ ಕೂಡ ಹಲವಾರು ಉದ್ಯೋಗಾವಕಾಶವಿದೆ. ಉದಾ: ಸಿ.ಎ, ಸಿ.ಎಸ್, ಬ್ಯಾಂಕಿಂಗ್‌, ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್, ಚಾರ್‌ಟೆಡ್ ಫೈನಾನ್ಶಿಯಲ್ ಅನಲಿಸ್ಟ್, ಕಾಸ್ಟ್ ಅಕೌಂಟೆಂಟ್‌, ಮ್ಯಾನೇಜೆಂಟ್ ಇನ್ನೂ ಅನೇಕ ವೃತ್ತಿಗಳ ಆಯ್ಕೆ ಅವರಿಗಿದೆ. ವಿದ್ಯಾರ್ಥಿಗಳಿಗೆ ಕಾಮರ್ಸ್ ವಿಷಯಕ್ಕೆ ಸಂಬಂಧಪಟ್ಟಂತೆ ಪದವಿ ಪೂರ್ವ ಕೋರ್ಸ್ ಗಳು ಇವೆ.

👉 *ಆಟ್ಸ್ (ಕಲಾ ವಿಭಾಗ)*
ಆರ್ಟ್ಸ್ ಎಂದರೆ ಅತೀ ಕಡಿಮೆ ಅಂಕ ಬಂದವರು ಸೇರುವ ಕೊರ್ಸ್‌ ಎಂಬ ಹಣೆಪಟ್ಟಿ ಈಗ ಸಂಪೂರ್ಣ ದೂರವಾಗಿದೆ. ಕಾರಣ ಈ ಕೋರ್ಸ್ ಆಯ್ಕೆ ಮಾಡಿದರೆ ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಐ.ಎ.ಎಸ್, ಕೆ.ಎ.ಎಸ್, ಎಫ್.ಡಿ.ಸಿ, ಎಸ್.ಡಿ.ಸಿ, ಐ.ಪಿ.ಎಸ್, ಜತೆಗೆ ಅನೇಕ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಇಲಾಖೆಗಳಲ್ಲಿ ಅವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಕಲೆ ಮತ್ತು ಭಾಷೆಯ ವಿಷಯದಲ್ಲಿ ಆಸಕ್ತಿ ಇರುವವರು ಈ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಕಲಾ ವಿಷಯಕ್ಕೆ ಸಂಬಂಧಪಟ್ಟಂತೆ ಪದವಿಪೂರ್ವ ಕೋರ್ಸ್‌ಗಳಿವೆ.

👉 *ಡಿಪ್ಲೊಮ ಕೋರ್ಸ್‌ಗಳು.*
ಮೇಲಿನ ಮೂರು ಸಾಂಪ್ರದಾಯಿಕ ಕೋರ್ಸ್‌ಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಅವರವರ ಆಸಕ್ತಿಗನುಸಾರ ಡಿಪ್ಲೊಮಾ ಜೊತೆಗೆ ಅನೇಕ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಓದನ್ನು ಮುಂದುವರಿಸಲು ಇಚ್ಚಿಸಿದ್ದಲ್ಲಿ, ಡಿಪ್ಲೊಮಾ ನಂತರ ಇಂಜಿನಿಯರಿಂಗ್ ಕೂಡ ಮಾಡಬಹುದು, ಹೀಗೆ ಮಾಡಿದ್ದಲ್ಲಿ ಎಂಜಿನಿಯರಿಂಗ್‌ನಲ್ಲಿ ಒಂದು ವರ್ಷ ಕೂಡ ಉಳಿಯುತ್ತದೆ. ಈ ವರ್ಷದಿಂದ ಮೊದಲ ಬಾರಿ ಕರ್ನಾಟಕದಲ್ಲಿ ಡಿಪ್ಲೊಮಾ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಪರೀಕ್ಷೆ ಬರೆಯುವ ಅವಕಾಶವಿದೆ. ಡಿಪ್ಲೊಮಾವನ್ನು ಪಿಯುಸಿಗೆ ತತ್ಸಮ ಎಂದು ಆದೇಶಿಸಲಾಗಿದೆ. ಡಿಪ್ಲೊಮಾದಂತೆಯೇ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳು ಹೀಗಿವೆ.

*ಡಿಪ್ಲೊಮಾ ಕೋರ್ಸ್‌ಗಳು*

👉ಡಿಪ್ಲೊಮಾ ಇನ್ ಇಂಜಿನಿಯರಿಂಗ್.

👉 ಹೋಟೆಲ್ ಮ್ಯಾನೇಜ್‌ಮೆಂಟ್‌.

👉 ಜರ್ನಲಿಸಮ್.

👉 ಫೋಟೋಗ್ರಫಿ.

👉 ಸೈಕಾಲಜಿ.

👉 ಡಿಜಿಟಲ್ ಮಾರ್ಕೆಟಿಂಗ್.

👉 ಇನ್ನಿತರ.








ಧನ್ಯವಾದಗಳು 💐💐💐💐💐
logoblog

Thanks for reading CHECK YOUR SSLC EXAMINATION - 1 RESULT....

Previous
« Prev Post

No comments:

Post a Comment