Sunday, October 20, 2024

Kitturu Girls Sainik School admission 2025-26

  Wisdom News       Sunday, October 20, 2024
Hedding ; Kitturu Girls Sainik School admission 2025-26


ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು ಬಾಲಕಿಯರಿಗಾಗಿಯೇ ಇರುವ ಭಾರತದ ಏಕಮೇವ ಪಬ್ಲಿಕ್ ಶಾಲೆಯಾಗಿದ್ದು ಶೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವ ಗುರಿ ಹೊಂದಿದೆ. ಶೈಕ್ಷಣಿಕ ವರ್ಷ 2025-26ನೇ ಸಾಲಿಗೆ 6ನೇ ವರ್ಗದ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆಯಲಾಗಿದ್ದು ಅಖಿಲ ಭಾರತ ಪ್ರವೇಶ ಪರೀಕ್ಷೆಯು ಲಿಖಿತ, ದೇಹದಾರ್ಢನೆ, ವೈದ್ಯಕೀಯ ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷಾ ದಿನಾಂಕ ಯಾವಾಗ?
6 ನೇ ತರಗತಿ ಪ್ರವೇಶ ಪರೀಕ್ಷೆಗಳು ದಿನಾಂಕ:02-02- 2025 ರಂದು ನಡೆಯಲಿವೆ.

ಪರೀಕ್ಷಾ ವಿಧಾನ ಹೇಗಿರಲಿದೆ?

2025-26 ನೇ ಸಾಲಿನ ಪ್ರವೇಶ ಪರೀಕ್ಷೆಗೆ ಓ.ಎಮ್.ಆರ್.[ OMR] ಮಾದರಿ ವಿಧಾನದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಯಾವ ಮಾಧ್ಯಮದಲ್ಲಿ ಪರೀಕ್ಷೆ?

ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ಕನ್ನಡ ದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಪರೀಕ್ಷಾ ಕೇಂದ್ರಗಳ ಮಾಹಿತಿ:

6 ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಕಿತ್ತೂರ, ವಿಜಯಪುರ, ಬೆಂಗಳೂರು, ಕಲಬುರಗಿ [ಕರ್ನಾಟಕದಲ್ಲಿ ಮಾತ್ರ] ನಡೆಸಲಾಗುತ್ತದೆ


ವಿದ್ಯಾರ್ಥಿಗಳ ವಯೋಮಿತಿ ಮಾಹಿತಿ:

6 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡುವ ವಿದ್ಯಾರ್ಥಿಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ‌ ಸಲ್ಲಿಕೆ ಮಾಡಬೇಕು. ವಯೋಮಿತಿ: ಜೂನ್ 1, 2013 ಮತ್ತು ಮೇ 31, 2015ರ ನಡುವೆ ಜನಿಸಿದ 5ನೆಯ ವರ್ಗದಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಪರೀಕ್ಷಾ ಶುಲ್ಕ ಎಷ್ಟು ಇರಲಿದೆ:

6 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡುವ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ರೂ.2000/-, (ರೂ.1,600/-ಪಜಾ/ಪಪಂ ಅಭ್ಯರ್ಥಿಗಳು, ಕರ್ನಾಟಕದ ರಹವಾಸಿಗಳು ಮಾತ್ರ. ಇತ್ತೀಚಿನ ಅಧಿಕೃತ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಲಗತ್ತಿಸಬೇಕು).

ಶುಲ್ಕದ ವಿವರ:

ರೂ. 2,24,300/-(ಊಟ, ವಸತಿ, ಸಮವಸ್ತ್ರ ಮತ್ತು ಇತರೆ ಠೇವಣಿಗಳು ಸೇರಿ) ಶೈಕ್ಷಣಿಕ ಸಾಮಗ್ರಿ ಮತ್ತು ಇತರೆ ಶುಲ್ಕ ಹೊರತುಪಡಿಸಿ. ಶುಲ್ಕ ಭರಿಸಬೇಕಾಗುತ್ತದೆ.

ಅರ್ಜಿ‌ ಸಲ್ಲಿಕೆಗೆ ಆರಂಭಿಕ ದಿನಾಂಕ [ದಂಡ ರಹಿತ]:

24 ಅಕ್ಟೋಬರ್ ರಿಂದ 15 ಡಿಸೆಂಬರ್ 2024 ರೂ. 2000/- (1600/- ಪ.ಜಾ/ಪ.ಪಂ. ದವರಿಗೆ, ಅವರು ಕರ್ನಾಟಕ ನಿವಾಸಿಯಾಗಿರಬೇಕು) ಭರ್ತಿ ಮಾಡಲಾದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:20 ಡಿಸೆಂಬರ್ 2024.

ದಂಡ ಸಹಿತವಾಗಿ ಅರ್ಜಿ ಸಲ್ಲಿಕೆ ದಿನಾಂಕ:16 ರಿಂದ 31 ಡಿಸೆಂಬರ್ 2024.

ರೂ. 2,500/- (2,100/- ಪ.ಜಾ/ಪ.ಪಂ. ದವರಿಗೆ. ಅವರು ಕರ್ನಾಟಕ ನಿವಾಸಿಯಾಗಿರಬೇಕು) ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05 ಜನವರಿ 2025

ಮುಖ್ಯ ಸೂಚನೆ ನೋಡಿ :

ಆನ್ ಲೈನ್ ಹಣ ಪಾವತಿಯನ್ನು ಚಾಲತಾಣ: www.kittursainikschool.org ಮುಖಾಂತರ ಮಾಡಬೇಕು. ಇದೇ ಜಾಲತಾಣದಿಂದಲೂ ವಿವರಣಾ ಪುಸ್ತಕ ಹಾಗೂ ಅರ್ಜಿಪಾರ್ಮಗಳನ್ನು ಪಡೆಯಬಹುದು.( (Ph: 08288-234607)

ಸೂಚನೆಗಳು:

ಪರೀಕ್ಷಾ ಮಾದರಿ, ಪ್ರವೇಶ ಮಾನದಂಡ ಮತ್ತು ಪ್ರಶ್ನೆಪತ್ರಿಕೆಗಳ ವಸ್ತುತಾತ್ಪರ್ಯವನ್ನು ಬದಲಿಸುವ ಹಕ್ಕನ್ನು ಶಾಲಾ ಆಡಳಿತ ಮಂಡಳಿಯು ಹೊಂದಿದೆ.
ಪ್ರವೇಶ ಪತ್ರಗಳನ್ನು ಸಾಮಾನ್ಯ ಅಂಚೆ ಚೀಟಿ ಮುಖಾಂತರ ಕಳಿಸಲಾಗುವುದು.
ವಿವರಣಾ ಪುಸ್ತಕಗಳ ಪ್ರವೇಶ ಪತ್ರ ಹಾಗೂ ಫಲಿತಾಂಶ ಅಂಚೆ ಮೂಲಕ ತಲುಪದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ಶಾಲೆ ಜವಾಬ್ದಾರಿಯಾಗಿರುವದಿಲ್ಲ.
ಭರ್ತಿಮಾಡಿದ ಅರ್ಜಿ ಫಾರ್ಮಗಳ ಜೊತೆ ಸ್ವ- ವಿಳಾಸ ಹೊಂದಿದ ರೂ 5/- ಸ್ಟಾಂಪ್ ಲಗತ್ತಿಸಿದ ಲಕೋಟೆಯನ್ನು ಕಳುಹಿಸತಕ್ಕದ್ದು,


ಕಿತ್ತೂರು ಹೋಬಳಿ ಹಾಗೂ ರಕ್ಷಣಾ ಸೇವಾ ಸಿಬ್ಬಂದಿ ಮೀಸಲಾತಿ ಬಯಸುವವರು ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು,

ಒಮ್ಮೆ ಸಂದಾಯಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರುಪಾವತಿಸುವುದಿಲ್ಲ.
ಇತ್ತೀಚಿನ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಸುಳ್ಳು ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಾರದು.
ಕಛೇರಿಯ ಸಮಯ: ವಾರದ ದಿನಗಳಲ್ಲಿ ಸೋಮವಾರ ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂಜೆ .5.30 ರ ವರಗೆ ಭಾನುವಾರ/ ರಜಾದಿನಗಳಂದು ತೆರೆದಿರುವುದಿಲ್ಲ.
VI ನೇ ತರಗತಿಗೆ (2025-26) ಪ್ರವೇಶದ ಸಮಯದಲಿ ಸಲಿ ಸಬೇಕಾದ ಪ್ರಮುಖ ದಾಖಲೆಗಳು/ ತೆಗೆದುಕೊಳ್ಳಬೇಕಾದ ಕ್ರಮಗಳು.



1. ಹಾಲ್ ಟಿಕೆಟ್

2. ಅಭ್ಯರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್ ಅನ್ನು ನವೀಕರಿಸಲಾಗಿದೆ. (updated)

3. ಎಸ್‌ಬಿಐ ಅಥವಾ ಕೆನರಾ ಬ್ಯಾಂಕ್‌ನಲ್ಲಿ ಬ್ಯಾಂಕ್ ಖಾತೆ ತೆರೆಯಿರಿ ಮತ್ತು ಅಭ್ಯರ್ಥಿಯ ಖಾತೆ ವಿವರಗಳನ್ನು ಒದಗಿಸಿ. ಅಭ್ಯರ್ಥಿಯು ಡಿಬಿಟಿಗಾಗಿ ತನ್ನ ಸ್ವಂತ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಸರ್ಕಾರದಿಂದ ವಿದ್ಯಾರ್ಥಿವೇತನದ ಮೊತ್ತದ ನೇರ ಬ್ಯಾಂಕ್ ವರ್ಗಾವಣೆ.

4. ಇತ್ತೀಚಿನ ಆದಾಯ ಪ್ರಮಾಣಪತ್ರ. ಪೋಷಕರು/ಗಳು ಸರ್ಕಾರಿ ನೌಕರರಾಗಿದ್ದರೆ, ಕಳೆದ ತಿಂಗಳ ವೇತನ ಚೀಟಿಯನ್ನು ಒದಗಿಸಿ. (recent)

5. ಪೋಷಕರು/ಗಳು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಇತ್ತೀಚಿನ ITR ಅನ್ನು ಒದಗಿಸಿ.

6. ಜಾತಿ ಪ್ರಮಾಣಪತ್ರ. (updated)

7. ವರ್ಗಾವಣೆ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು SATS ನಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ಒಂದೇ ಆಗಿರಬೇಕು. ಯಾವುದೇ ವ್ಯತ್ಯಾಸಗಳು/ಅಸಾಮರಸ್ಯಗಳಿದ್ದಲ್ಲಿ, ವಿದ್ಯಾರ್ಥಿವೇತನದ ಮೊತ್ತವನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ಅವುಗಳನ್ನು ಸರಿಪಡಿಸುವ ಜವಾಬ್ದಾರಿಯು ಪೋಷಕರ ಮೇಲಿರುತ್ತದೆ. ಆದ್ದರಿಂದ, ನಿಮ್ಮ ಸ್ವಂತ ಹಿತಾಸಕ್ತಿಯಲ್ಲಿ, ಯಾವುದೇ ತಿದ್ದುಪಡಿಗಳನ್ನು ಮಾಡಬೇಕಾದರೆ, ಪ್ರವೇಶ ಪ್ರಕ್ರಿಯೆಯ ಸುಲಭತೆ ಮತ್ತು ನಂತರದ ಅನಾನುಕೂಲತೆಗಾಗಿ ದಯವಿಟ್ಟು ಅವುಗಳನ್ನು ಮಾಡಿ.
























ಎಲ್ಲರಿಗೂ ಶೇರ್ ಮಾಡಿ 🙏🙏🙏




logoblog

Thanks for reading Kitturu Girls Sainik School admission 2025-26

Previous
« Prev Post

No comments:

Post a Comment