Monday, October 28, 2024

About organizing flag hoisting and cultural programs on Kannada Rajyotsava on November-1, 2024...

  Wisdom News       Monday, October 28, 2024
Hedding ; About organizing flag hoisting and cultural programs on Kannada Rajyotsava on November-1, 2024...


2024 ನವಂಬರ್-1 ರ ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ...


ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷಗಳು ಸಂದಿರುವ ಈ ಶುಭ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024 ನವಂಬರ್-01 ರಂದು ಕಡ್ಡಾಯವಾಗಿ ಕನ್ನಡ ರಜ್ಯೋತ್ಸವವನ್ನು ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ.ನಾಡುನುಡಿ,ಸಂಸ್ಕೃತಿ ಮತ್ತು ಕಲೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ.

ಪ್ರಯುಕ್ತ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಧ್ವಜ ಸಂಹಿತೆಯನ್ವಯ ಬೆಳಗ್ಗೆ 8.30 ರಿಂದ 9.00 ರ ಒಳಗಾಗಿ ಧ್ವಜಾರೋಹಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸಿ 69ನೇ ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮಕ್ಕಳೊಂದಿಗೆ ಪೂರ್ವ ತಯಾರಿಯೊಂದಿಗೆ, ಕಡ್ಡಾಯವಾಗಿ ಅರ್ಥಪೂರ್ಣವಾಗಿ ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲು ಶಾಲಾ ಮುಖ್ಯಸ್ಥರಿಗೆ, ಮತ್ತು ಆಡಳಿತ short

ಸಲ್ಲಿಸುವುದು.

ಸೂಚನೆ: ರಾಷ್ಟ್ರಧ್ವಜ ಮತ್ತು ಕರ್ನಾಟಕ ಧ್ವಜವನ್ನು ಪ್ರತ್ಯೇಕ ಕಂಬಗಳಲ್ಲಿ ಕಬ್ಬಿಣದ ಎಂ.ಎಸ್‌ ಪೈಪುಗಳನ್ನು ಉಪಯೋಗಿಸುವುದು. (ಮರದ ಕಂಬಗಳನ್ನು ಉಪಯೋಗಿಸ ಬಾರದು) ಎರಡು ಧ್ವಜಗಳನ್ನು ಧ್ವಜಾರೋಹಣ ಮಾಡುವುದು. ರಾಷ್ಟ್ರಧ್ವಜಕ್ಕಿಂತ ನಾಡ ಧ್ವಜವು ಎತ್ತರವಾಗಿರಬಾರದು ಹಾಗೂ ಐದು ಅಡಿ ಮಧ್ಯದಲ್ಲಿ ಅಂತರವಿರಬೇಕು ಮೊದಲು ರಾಷ್ಟ್ರ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆಯನ್ನು ಹೇಳುವುದು. ನಂತರ ನಾಡ ಧ್ವಜಾರೋಹಣ ಮಾಡಿ ನಾಡಗೀತೆಯನ್ನು ಹೇಳುವುದು.






logoblog

Thanks for reading About organizing flag hoisting and cultural programs on Kannada Rajyotsava on November-1, 2024...

Previous
« Prev Post

No comments:

Post a Comment