Hedding ; regarding grant of Special Allowance to Lecturers
2007-08 ಸಾಲಿನ ಅಧಿಸೂಚನೆ ಅನ್ವಯ ದಿನಾಂಕ : 01-08- 20080 ನಂತರ, ಕಾರ್ಯವರದಿ ಮಾಡಿಕೊಂಡಿರುವ ಉಪನ್ಯಾಸಕರುಗಳಿಗೆ ವಿಶೇಷ ಭತ್ಯೆಯನ್ನು ನೀಡುವ ಬಗ್ಗೆ.
96:
1. ಸರ್ಕಾರದ ಆದೇಶ ಸಂಖ್ಯೆ ಆಇ 18 ಎಸ್‌ಆರ್‌ಪಿ 2023 2:05.12.2023.
2. ಅಧ್ಯಕ್ಷರು, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ(ರಿ), ಬೆಂಗಳೂರು ಇವರ ಮನವಿ ದಿನಾಂಕ:10.06.2024.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಧ್ಯಕ್ಷರು, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ(ರಿ), ಬೆಂಗಳೂರು ಇವರ ದಿನಾಂಕ:10.06.2024ರ ಉಲ್ಲೇಖ(2)ರ ಪತ್ರವನ್ನು ಪರಿಶೀಲಿಸಲಾಯಿತು. ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:4412-4428 ರಲ್ಲಿ ದಿನಾಂಕ:05.05.2021 ರ ತೀರ್ಪಿನಲ್ಲಿ ನೀಡಿದ ನಿರ್ದೇಶನ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು W.P. No:6902/2022 ರಲ್ಲಿ ದಿನಾಂಕ:20.06.2023 ರಂದು ನೀಡಿದ ತೀರ್ಪಿನಲ್ಲಿನ ಅಭಿಪ್ರಾಯದ ಬೆಳಕಿನಲ್ಲಿ, 2007-08 ರ ಶಿಕ್ಷಕರುಗಳ ನೇರ ನೇಮಕಾತಿ ಅಧಿಸೂಚನೆಯನ್ವಯ ನೇಮಕಾತಿ ಪ್ರಕ್ರಿಯೆ ಕೈಗೊಂಡು ಪ್ರಕಟಿಸಲಾದ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಶಿಕ್ಷಕರುಗಳಿಗೆ ಸೀಮಿತಗೊಂಡಂತೆ ವಿಶೇಷ ಭತ್ಯೆಯನ್ನು ಮಂಜೂರು ಮಾಡಿ, ವಿಸ್ತ್ರತವಾದ ಆದೇಶಗಳನ್ನು ಉಲ್ಲೇಖ-1 ರಲ್ಲಿ ಹೊರಡಿಸಲಾಗಿರುತ್ತದೆ. ಸದರಿ ಆದೇಶವು ಸ್ವಯಂ ವೇದ್ಯವಾಗಿದ್ದು ಸ್ಪಷ್ಟವಾಗಿರುತ್ತದೆ.
ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿರ್ದೇಶನದಂತೆ ರಾಜ್ಯ ಸರ್ಕಾರವು ಹೊರಡಿಸಿದ ಈ ಮೇಲೆ ತಿಳಿಸಿರುವ ದಿನಾಂಕ:05.12.2023 ರ ಆದೇಶವನ್ನು ಪರಿಗಣಿಸಿದ ಮಾನ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:CTA 533-134/2021 ಪ್ರಕರಣದಲ್ಲಿ ದಿನಾಂಕ:08.12.2023 ರಂದು ನೀಡಿದ ತೀರ್ಪಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನಾ ಪ್ರಕರಣವನ್ನು ಕೈಬಿಟ್ಟಿರುತ್ತದೆ.
No comments:
Post a Comment