ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನಗಳನ್ನು ಅನುಮತಿ ನೀಡುವ ಬಗ್ಗೆ. ಉಲ್ಲೇಖ: ಉಪನಿರ್ದೇಶಕರು (ಆಡಳಿತ), ಬೆಂಗಳೂರು ದಕ್ಷಿಣ ಜಿಲ್ಲೆ
ಇವರ ಪತ್ರ ಸಂಖ್ಯೆ:ಲೆಪ6:ಸಪ್ರಾಪ್ರೌ:ತರಗತಿ:ಸ್ಥಳ:100/2011-12 2:22-12-2012 & 07-01-2013
ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಉಪನಿರ್ದೇಶಕರು (ಆಡಳಿತ), ಬೆಂಗಳೂರು ದಕ್ಷಿಣ ಜಿಲ್ಲೆ ಇವರು ಖಾಸಗಿ ಸಂಸ್ಥೆಗಳ ಮನವಿಯ ಮೇರಗೆ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರೌಢಶಾಲೆ, ಕೋಟೆ, ಚಾಮರಾಜಪೇಟೆ, ಬೆಂಗಳೂರು ಈ ಶಾಲೆಯ ಮೈದಾನದಲ್ಲಿ ನಡೆಸುವ ಬಗ್ಗೆ ಅನುಮತಿ ಕೋರಿರುತ್ತಾರೆ.
ಈ ಕುರಿತು ಪರಿಶೀಲಿಸಲಾಗಿ, ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠಪ್ರವಚನಗಳೊಂದಿಗೆ ಪತ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿವಿನಿಯೋಗವಾಗಬೇಕು.
ಆದ್ದರಿಂದ, ಶಾಲಾ ಮೈದಾನ / ಆವರಣವನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ / ಉದ್ದೇಶಗಳಿಗೆ ಬಳಸಬಾರದಾಗಿ ಹಾಗೂ ಅನುಮತಿಯನ್ನು ನೀಡಬಾರದಾಗಿ ಸೂಚಿಸಿದೆ.
ಮುಂದುವರೆದು, ಈ ರೀತಿಯ ಖಾಸಗಿ/ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಸಂಬಂದಿಸಿದಂತೆ ಶಾಲಾ ಮೈದಾನ/ಆವರಣವನ್ನು ಬಳಸಲು ಅನುಮತಿಗಾಗಿ ಈ ಕಛೇರಿಗೆ ಪ್ರಸ್ತಾವನೆಗಳು/ಮನವಿಗಳನ್ನು ಸಲ್ಲಿಸ ಬಾರದಾಗಿಯೂ ಸಹಾ ಸೂಚಿಸಿದೆ.
ಪ್ರತಿಯನ್ನು:
1. ಆಪ್ತ ಕಾರ್ಯದರ್ಶಿಗಳು, ಸನ್ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು, ಕರ್ನಾಟ ಸರ್ಕಾರ, ವಿಧಾನ ಸೌದ, ಬೆಂಗಳೂರು -560001
2. ಸರ್ಕಾರದ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ). ಬಹುಮಹಡಿಗಳ ಕಟ್ಟಡ, ಬೆಂಗಳೂರು -560001
3. ನಿರ್ದೇಶಕರು (ಪ್ರಾಥಮಿಕ), (ಪ್ರೌಢಶಿಕ್ಷಣ), ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು -560001
4. ನಿರ್ದೇಶಕರು, ಡಿ.ಎಸ್.ಇ.ಆರ್.ಟಿ, ಹೊಸಕೆರೆಹಳ್ಳಿ, ಬನಶಂಕರಿ 3 ನೇ ಹಂತ, ಬೆಂಗಳೂರು-85
5. ನಿರ್ದೇಶಕರು, ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ನೃಪತುಂಗ ರಸ್ತೆ, ಬೆಂಗಳೂರು-01
6. ಸಹ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ವಿಭಾಗ, ಮೈಸೂರು ವಿಭಾಗ
7. ಕಡತ ಪ್ರತಿ.
No comments:
Post a Comment