6 ವರ್ಷ ತುಂಬಿದ್ದರೆ ಮಾತ್ರ 1ನೇ ತರಗತಿ ದಾಖಲಾತಿಗೆ ಅವಕಾಶ; ಹೊಸ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ...
ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಆಯಾ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿದ್ದರೆ ಮಾತ್ರ 1ನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯ. ಶಿಕ್ಷಣ ಹಕ್ಕು ಕಾಯ್ದೆ 2009 (Right To Education – RTE) ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರ ಅನ್ವಯ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ 2016-17ನೇ ಶೈಕ್ಷಣಿಕ ವರ್ಷದಲ್ಲಿ ಎಲ್ಕೆಜಿ ಪ್ರವೇಶಕ್ಕೆ ಮಗುವಿಗೆ 4 ವರ್ಷ, 10 ತಿಂಗಳು ತುಂಬಿರಬೇಕು ಎಂದು ನಿಯಮ ಮಾಡಲಾಯಿತು. ಅದಕ್ಕೂ ಮೊದಲು ಎಲ್ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳು ಆಗಿದ್ದರೆ ಸಾಕಾಗಿತ್ತು. ಅದೇ ರೀತಿ 1ನೇ ತರಗತಿ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ನಡುವೆ ಮಗುವಿನ ವಯಸ್ಸು ಇದ್ದರೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು.
1ನೇ ತರಗತಿಗೆ ಪ್ರವೇಶಕ್ಕೆ ನಿಯಮ ರೂಪಿಸಿ ಸರ್ಕಾರ ಹೊರಡಿಸಿರುವ ಆದೇಶ
ಕರ್ನಾಟಕ ಸರ್ಕಾರವು ಈ ನಿಯಮವನ್ನು 2018ರಲ್ಲಿ ಮತ್ತೊಮ್ಮೆ ಸಡಿಲಿಸಿತ್ತು. 1ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳು, ಗರಿಷ್ಠ 7 ವರ್ಷ ಆಗಿರಬೇಕು ಎಂದು ಅಧಿಸೂಚನೆ ಹೊರಡಿಸಿತು. ಇದೀಗ ಮತ್ತೊಮ್ಮೆ ಈ ಆದೇಶ ಮಾರ್ಪಾಟಾಗಿದ್ದು, ಆಯಾ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿದ್ದರೆ ಮಾತ್ರ 1ನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.
ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ದಾಖಲಿಸಲು ಈ ಮೊದಲು ಇದ್ದ ವಯೋಮಿತಿಯನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ. ಹೊಸ ಆದೇಶವನ್ನು ಹೊರಡಿಸಿದೆ.
ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿಯನ್ನು ರಾಜ್ಯ ಸರ್ಕಾರ ಪರಿಷ್ಕರಣೆ ನಡೆಸಿದೆ. 1ನೇ ತರಗತಿಗೆ ದಾಖಲಾಗಲು ಮಕ್ಕಳ ವಯೋಮಿತಿಯನ್ನು ಕನಿಷ್ಠ 6 ವರ್ಷದಿಂದ ಗರಿಷ್ಠ 7 ವರ್ಷಕ್ಕೆ ಪರಿಷ್ಕರಿಸಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
2016-17ನೇ ಶೈಕ್ಷಣಿಕ ಸಾಲಿನಿಂದ ಆರ್.ಟಿ.ಇ ಕಾಯ್ದೆ ಅಡಿಯಲ್ಲಿ ಅನುದಾನರಹಿತ ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಎಲ್.ಕೆ.ಜಿ ತರಗತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಆಗಿರಬೇಕು. 1ನೇ ತರಗತಿಗೆ ಮಕ್ಕಳನ್ನು ಸೇರಿಸಲು ಕನಿಷ್ಠ 6ವರ್ಷ ಆಗಿರಬೇಕು, ಗರಿಷ್ಠ 7 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಸರ್ಕಾರದ ಆದೇಶ ಪ್ರತಿಸರ್ಕಾರದ ಆದೇಶ ಪ್ರತಿಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪೂರ್ವ ಪ್ರಾಥಮಿಕ ( ಎಲ್.ಕೆ.ಜಿ ) ಹಾಗೂ ಪ್ರಾಥಮಿಕ ಶಾಲೆಯ 1ನೇ ತರಗತಿ ಮಕ್ಕಳನ್ನು ದಾಖಲಾತಿ ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆ - 1983ರ ನಿಯಮ -20 ರನ್ವಯ ಆಯಾ ಶೈಕ್ಷಣಿಕ ವರ್ಷದ ಜೂ.1 ಕ್ಕೆ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ ) 3 ವರ್ಷ 10 ತಿಂಗಳು, 1 ನೇ ತರಗತಿಗೆ 5 ವರ್ಷ 10 ತಿಂಗಳು ಎಂಬುದಾಗಿ 2017 ರ ಜ.13ರಲ್ಲಿ ವಯೋಮಿತಿಯನ್ನು ನಿಗದಿಪಡಿಸಿದ್ದರು.
ಅದೇ ತಿಂಗಳ 18 ರಂದು ಆದೇಶವನ್ನು ಮಾರ್ಪಡಿಸಿ ಶೈಕ್ಷಣಿಕ ವರ್ಷ 2018-19ನೇ ಸಾಲಿನಿಂದ ಸರ್ಕಾರಿ, ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಸಂಬಂಧಿಸಿದ ಶೈಕ್ಷಣಿಕ ವರ್ಷದ ಜೂನ್ 1 ರಂದು 5 ವರ್ಷ, 10 ತಿಂಗಳು ಪೂರ್ಣಗೊಂಡಿರಬೇಕೆಂದು ನಿಗದಿಪಡಿಸಿದ್ದರು. 2009ರಲ್ಲಿ ಆರ್.ಟಿ.ಇ. ಕಾಯ್ದೆ ಮತ್ತು 2012 ರಲ್ಲಿ ಕಡ್ಡಾಯ ಶಿಕ್ಷಣ ನಿಯಮಗಳು ಜಾರಿಗೆ ಬಂದಿವೆ. ಇವುಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ಎಲ್ಲಾ ನಿಯಮಗಳನ್ನು / ಆದೇಶಗಳನ್ನು ರದ್ದುಪಡಿಸಿ, ಈ ಹೊಸ ಆದೇಶ ನೀಡಲಾಗಿದೆ.
ಈ ಮೊದಲು ಶಾಲೆಗೆ ಸೇರಲು ಬಯಸುವ ಮಕ್ಕಳ ವಯೋಮಿತಿ ಬಗ್ಗೆ ಇದ್ದ ಗೊಂದಲಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ತೆರೆ ಎಳೆದಿತ್ತು. ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ಮತ್ತು ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ನಿಗಧಿಗೊಳಿಸಿರುವ ವಯೋಮಿತಿಯಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ಗಮನಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಏಕರೂಪ ವಯೋಮಿತಿಯನ್ನು ನಿರ್ಧರಿಸಿ ಸ್ಪಷ್ಟ ಪಡಿಸಿದೆ.
ಈ ಹಿಂದಿನ ಸರ್ಕಾರಗಳು ನಿಗದಿ ಪಡಿಸಿದ್ದ ಮಕ್ಕಳ ದಾಖಲಾತಿ ವಯೋಮಿತಿ ಆದೇಶಗಳನ್ನು ರಾಜ್ಯ ಸರ್ಕಾರ ರದ್ದು ಪಡಿಸಿದಂತಾಗಿದೆ. ಮಕ್ಕಳಿಗೆ 5 ವರ್ಷ ತುಂಬಿದ ಕೂಡಲೇ ಪೋಷಕರು ಶಾಲೆಗೆ ಸೇರಿಸುತ್ತಾರೆ. ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ. ಆದರೆ, ಹೊಸ ನಿಯಮದ ಪ್ರಕಾರ ಕನಿಷ್ಠ ಆರು ಪೂರ್ಣಗೊಂಡಿದ್ದರೆ ಮಾತ್ರ ಶಾಲೆಗೆ ದಾಖಲಿಸಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
No comments:
Post a Comment