Tuesday, March 11, 2025

Guidelines on the duties and responsibilities to be performed by various levels of officers and staff of the department in relation to the SSLC Examination-1 for the year 2024-25.

  Wisdom News       Tuesday, March 11, 2025
Hedding ::: Guidelines on the duties and responsibilities to be performed by various levels of officers and staff of the department in relation to the SSLC Examination-1 for the year 2024-25......


2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-)ನ್ನು ದಿನಾಂಕ: 21.03.2025 ರಿಂದ ದಿನಾಂಕ: 04.04.2025ರವರೆಗೆ

ನಡೆಸಲಾಗುತ್ತಿದ್ದು, ಪರೀಕ್ಷೆಯನ್ನು ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವುದು ಪರೀಕ್ಷಾ ಕಾರ್ಯದಲ್ಲಿ ಭಾಗಿಯಾದವರೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷಾ ಪೂರ್ವದಲ್ಲಿ, ಪರೀಕ್ಷಾ ಸಮಯದಲ್ಲಿ ಹಾಗೂ ಪರೀಕ್ಷಾ ನಂತರದಲ್ಲಿ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಉಪನಿರ್ದೇಶಕರು (ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ಕೊಠಡಿ ಮೇಲ್ವಿಚಾರಕರು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಜವಾಬ್ದಾರಿಗಳನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಮಗೆ ನಿಗದಿಪಡಿಸಿರುವ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ.

I. ಉಪನಿರ್ದೇಶಕರು (ಆಡಳಿತ)ರವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು:

ಆಯಾ ಜಿಲ್ಲೆಯಲ್ಲಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಉಪನಿರ್ದೇಶಕರು (ಆಡಳಿತ)ರವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಿಕೊಂಡು ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರ ಹಾಗೂ ಇನ್ನಿತರೆ ಆಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸುವುದು ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರ ಜವಾಬ್ದಾರಿಯಾಗಿರುತ್ತದೆ. ಅದರಂತೆ ಉಪನಿರ್ದೇಶಕರು(ಆಡಳಿತ)ರವರಿಗೆ ಈ ಕೆಳಕಂಡ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿದೆ.

1. ಜಿಲ್ಲಾ ಉಪನಿರ್ದೇಶಕರು ಸಲ್ಲಿಸಿರುವ ಪರೀಕ್ಷಾ ಕೇಂದ್ರಗಳ ರಚನೆಯ ಪ್ರಸ್ತಾವನೆಗಳನ್ವಯ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತವಾದ ಅಗತ್ಯ ಪೀಠೋಪಕರಣ/ಆಸನದ ವ್ಯವಸ್ಥೆ, ಕುಡಿಯಲು ಶುದ್ಧವಾದ ನೀರು, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳು ಲಭ್ಯವಿರುವ ಬಗ್ಗೆ ಶಿಕ್ಷಣಾಧಿಕಾರಿಗಳು/ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳು/ವಿಷಯ ಪರಿವೀಕ್ಷಕರನ್ನು ನಿಯೋಜಿಸಿ ಖಾತರಿಪಡಿಸಿಕೊಳ್ಳುವುದು.

2. ಪರೀಕ್ಷಾ ಕೇಂದ್ರದಲ್ಲಿ ಪೀಠೋಪಕರಣಗಳ ಕೊರತೆ ಇದ್ದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರಕ್ಕೆ ಸಂಯೋಜಿಸಿರುವ ಶಾಲೆಗಳಿಂದ ಪಡೆಯುವುದು. ಈ ಸಂಬಂಧವಾಗಿ ಮಂಡಳಿಯಿಂದ ಯಾವುದೇ ವಿಧವಾದ ಸಾಗಾಣಿಕೆ ವೆಚ್ಚ ಹಾಗೂ ಪೀಠೋಪಕರಣಗಳ ಬಾಡಿಗೆಯನ್ನು ನೀಡಲಾಗುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದನ್ನು ನಿಷೇಧಿಸಿದೆ.

3. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಬಯಲಿನಲ್ಲಿ ಪರೀಕ್ಷೆ ಬರೆಯದಂತೆ ಮುಂಜಾಗ್ರತೆ ವಹಿಸುವುದು, ವಿದ್ಯಾರ್ಥಿಗಳು ಪ್ರದೇಶ ದ್ವಾರದ ವಿರುದ್ಧವಾಗಿ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನದ ವ್ಯವಸ್ಥೆಯನ್ನು ಮಾಡುವುದು.

4. ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿ ಅಲ್ವೇರಾದಲ್ಲಿಟ್ಟುಕೊಳ್ಳುವ, ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೊಠಡಿಗಳಿಗೆ ಹಂಚಿಕೆ ಮಾಡುವ ಹಾಗೂ ಪರೀಕ್ಷೆ ಮುಗಿದ ನಂತರ ಉತ್ತರಪತ್ರಿಕೆಗಳನ್ನು ಬಂಡಲ್ ಮಾಡುವಂತಹ ಕಾರ್ಯಗಳನ್ನು ನಿರ್ವಹಿಸುವ ಮುಖ್ಯ ಅಧೀಕ್ಷಕರ ಕಛೇರಿ/ಕೊಠಡಿಗೆ ಹಾಗೂ ಪರೀಕ್ಷಾ ಕೇಂದ್ರದ ಕಾರಿಡಾರ್ಗಗಳು ಹಾಗೂ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ.


5. ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಕಡ್ಡಾಯವಾಗಿದ್ದು, ವೆಬ್ ಕಾಸ್ಟಿಂಗ್‌ಗೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

6. ವೆಬ್ ಕಾಸ್ಟಿಂಗ್ ಪ್ರಕ್ರಿಯೆಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿಯಲ್ಲಿ ನಿರ್ವಹಣೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು.

7. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿಇ ಅಳವಡಿಸಿರುವುದನ್ನು ಖಾತರಿಪಡಿಸಿಕೊಂಡು, ವೆಬ್ ಕಾಸ್ಟಿಂಗ್ ಮಾಡಲು ಅಗತ್ಯ ವ್ಯವಸ್ಥೆ ಮಾಡಿಕೊಂಡು, ಪರೀಕ್ಷಾ ಪೂರ್ವದಲ್ಲೇ ಪೂರ್ವಾಭ್ಯಾಸ (Dry run) ಮಾಡುವುದು.

8. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ತೆರೆಯುವಾಗ ಹಾಗೂ ಉತ್ತರಪತ್ರಿಕೆಗಳನ್ನು ಸ್ವೀಕರಿಸಿ ಬಂಡಲ್ ಮಾಡುವ ಕಾರ್ಯಗಳನ್ನು ಕಡ್ಡಾಯವಾಗಿ ಸಿಸಿಟಿವಿ ವೀಕ್ಷಣೆಯಡಿಯಲ್ಲಿ ನಡೆಸುವಂತೆ ಕ್ರಮವಹಿಸುವುದು. ಹಾಗೆಯೇ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಎಲ್ಲಾ ಪರೀಕ್ಷಾ ಕೊಠಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಾ ಅವಧಿಯಲ್ಲಿ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲು ಕ್ರಮ ತೆಗೆದುಕೊಳ್ಳುವುದು.

9. ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು/ಉಪಮುಖ್ಯ ಅಧೀಕ್ಷಕರನ್ನಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು.

10. ಕಸ್ಟೋಡಿಯನ್ (ಪ್ರಶ್ನೆಪತ್ರಿಕೆ/ಉತ್ತರಪತ್ರಿಕೆ ಅಭಿರಕ್ಷಕರು)ರವರನ್ನಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಕೊರತೆಯಿದ್ದಲ್ಲಿ ಪ್ರೌಢಶಾಲಾ ಪ್ರಭಾರಿ ಮುಖ್ಯ ಶಿಕ್ಷಕರು/ಪ್ರೌಢಶಾಲಾ ದೈಹಿಕ ಶಿಕ್ಷಕರು/ ಪ್ರೌಢಶಾಲಾ ವಿಶೇಷ ಶಿಕ್ಷಕರನ್ನು ನೇಮಕ ಮಾಡುವುದು.

ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸುವ ಮುಖ್ಯ ಅಧೀಕ್ಷಕರು/ಉಪಮುಖ್ಯ ಅಧೀಕ್ಷಕರು ಹಾಗೂ ಕಸ್ಟೋಡಿಯನ್ ಪಟ್ಟಿಯನ್ನು ಉಪನಿರ್ದೇಶಕರು (ಆಡಳಿತ)ರವರು ಅನುಮೋದಿಸುವುದು.

11. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಆಯಾ ಪರೀಕ್ಷಾ ಕೇಂದ್ರದ ಶಾಲಾ ಮುಖ್ಯ ಶಿಕ್ಷಕರನ್ನೇ ಮುಖ್ಯ ಅಧೀಕ್ಷಕರನ್ನಾಗಿ ನೇಮಕಾತಿ ಮಾಡದೇ ಬೇರೊಂದು ಕ್ಲಸ್ಟರ್‌ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನಾಗಿ ನೇಮಕಾತಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದು ಹಾಗೂ ಪಟ್ಟಿಯನ್ನು ಅನುಮೋದಿಸುವುದು.

12. ಉಪನಿರ್ದೇಶಕರು ಪರೀಕ್ಷೆಯ ವಿಧಿವಿಧಾನಗಳ ಬಗ್ಗೆ ತಮ್ಮ ಹಂತದಲ್ಲಿ "ಪರೀಕ್ಷಾ ಕಾರ್ಯಸೂಚಿ ಪಟ್ಟಿ"ಯನ್ನು(ಚೆಕ್‌ಲಿಸ್ಟ್) ಸಿದ್ಧಪಡಿಸಿಕೊಂಡು, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಸಭೆ ಕರೆದು ಕಾರ್ಯಸೂಚಿಯ ಪಟ್ಟಿಯಂತೆ ಕ್ರಮಕೈಗೊಂಡಿರುವ ಬಗ್ಗೆ ದೃಢೀಕರಿಸಿಕೊಳ್ಳುವುದು.

13. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳು ಪ್ರತ್ಯೇಕವಾಗಿರುತ್ತವೆ. ಜಿಲ್ಲೆಯ ತಾಲ್ಲೂಕುವಾರು, ಪರೀಕ್ಷಾ ಕೇಂದ್ರವಾರು ಉತ್ತರಪತ್ರಿಕೆ ಬುಕ್‌ಲೆಟ್ ಹಾಗೂ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದ ಇತರೆ ಲೇಖನ ಸಾಮಗ್ರಿಗಳನ್ನು ಬಂಡಲ್ ಮಾಡಿ ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗುತ್ತಿದ್ದು, ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ತಲುಪಿಸಲು ಜಿಲ್ಲಾ ಉಪನಿರ್ದೇಶಕರು ಅಗತ್ಯ ಕ್ರಮ ತೆಗೆದುಕೊಳ್ಳುವುದು.

14. 2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರಿಂದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಲಾಗಿನ್ ಸೃಜಿಸಲಾಗುತ್ತಿದ್ದು, ಅದರ ವಿವರವನ್ನು ಈ ಕೆಳಗೆ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳ ಸಭೆಯಲ್ಲಿ ಈ ವಿಷಯವನ್ನು ಅವರಿಗೆ ಮನನ ಮಾಡಿಸಿ, ಈ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸುವುದು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಲಾಗಿನ್ ಆಗಲು ಮತ್ತು ಪ್ರಿಂಟೌಟ್ ತೆಗೆದುಕೊಳ್ಳಲು ಅನುವಾಗುವಂತೆ ಇಂಟರ್‌ನೆಟ್ ಸೌಲಭ್ಯ, ಗಣಕಯಂತ್ರ ಮತ್ತು ಪ್ರಿಂಟರ್‌ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸುವುದು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ನ್ನು ಎಸ್.ಎಂ.ಎಸ್. ಮೂಲಕ ರವಾನಿಸಲಾಗುವುದೆಂದು ತಿಳಿಸುವುದು.

ಆಯಾಯ ಪರೀಕ್ಷಾ ಕೇಂದ್ರಕ್ಕೆ ಹಂಚಿಕೆಯಾಗಿರುವ ಅಭ್ಯರ್ಥಿಗಳ ಎ.ಎಂ.ಎಲ್. ಮತ್ತು ಸಿ.ಎನ್.ಆರ್.ಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು. ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅದರಂತೆ ಪರೀಕ್ಷೆ ನಡೆಸಲು ಕ್ರಮವಹಿಸುವುದು.

ಪರೀಕ್ಷೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಎ.ಎಂ.ಎಲ್. ಮತ್ತು ಸಿ.ಎನ್.ಆರ್.ಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಡೌನ್‌ಲೋಡ್ ಮಾಡಿಕೊಂಡಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

ಯಾವುದೇ ಪರೀಕ್ಷಾ ಕೇಂದ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ಪರೀಕ್ಷಾ ವಿಷಯಗಳು/ಮಾಧ್ಯಮ/ದೈಹಿಕ ಸ್ಥಿತಿ/ಭಾವಚಿತ್ರ/ಸಹಿ ಇವುಗಳ ಬದಲಾವಣೆಯಾದಾಗ ಪರಿಷ್ಕೃತ ಎ.ಎಂ.ಎಲ್. ಮತ್ತು ಸಿ.ಎನ್.ಆರ್.ಗಳನ್ನು ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಲಾಗಿನ್‌ ಲಭ್ಯಗೊಳಿಸಲಾಗುವುದು. ಪರಿಷ್ಕೃತ ಎ.ಎಂ.ಎಲ್. ಮತ್ತು ಸಿ.ಎನ್.ಆರ್.ಗಳನ್ನು ಡೌನಲೋಡ್ ಮಾಡಿಕೊಂಡು, ಅದರಂತೆ ಪರೀಕ್ಷೆ ನಡೆಸಲು ತಿಳಿಸುವುದು.

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಲ್ಲಿ ಆ ದಿನದ ಪರೀಕ್ಷಾ ವಿಷಯ ಹಾಗೂ ಸದರಿ ವಿಷಯಗಳಿಗೆ ನೋಂದಾಯಿಸಿರುವ ಅಭ್ಯರ್ಥಿವಾರು ಹಾಜರಾತಿ, ಗೈರುಹಾಜರಿ ಮತ್ತು ಪರೀಕ್ಷಾ ನಕಲು ಬಗ್ಗೆ ನಮೂದಿಸಲು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು. ಪರೀಕ್ಷಾ ಕೇಂದ್ರಕ್ಕೆ ಹಂಚಿಕೆಯಾಗಿರುವ ಎಲ್ಲಾ ಅಭ್ಯರ್ಥಿಗಳ ಹಾಜರಾತಿಯು ಪೂರ್ವನಿಯೋಜಿತವಾಗಿ (by default) "Present" ಎಂದು ಇರುತ್ತದೆ. ಗೈರುಹಾಜರಾದ ಅಭ್ಯರ್ಥಿಗಳ ಹಾಜರಾತಿಯನ್ನು ಮಾತ್ರ "Absent" ಎಂದು ನಮೂದಿಸಬೇಕು. ಪರೀಕ್ಷಾ ಆವ್ಯವಹಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಯಾರಾದರೂ ಇದ್ದಲ್ಲಿ, ಸದರಿ ಅಭ್ಯರ್ಥಿಗೆ "Malpractice" ಎಂದು ನಮೂದಿಸಬೇಕು. ಇವುಗಳನ್ನು ನಮೂದಿಸಿದ ನಂತರ ಎಲ್ಲಾ ಸರಿಯಾಗಿರುವುದನ್ನು ಖಾತರಿಪಡಿಸಿಕೊಂಡು "Freeze" Attendance entry, Absentees, Malpractice reports ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

vil. ಪರೀಕ್ಷಾ ದಿನಗಳಂದು ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಲಾಗಿನ್‌ನಲ್ಲಿ ಅಭ್ಯರ್ಥಿಗಳ ಹಾಜರಾತಿಯನ್ನು ನಮೂದಿಸಿರುವುದನ್ನು ಪರೀಕ್ಷೆ ಮುಗಿಯುವ ಮುನ್ನವೇ ಖಚಿತಪಡಿಸಿಕೊಳ್ಳುವಂತೆ ತಿಳಿಸುವುದು.

15. ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಜಿಲ್ಲಾ ಉಪನಿರ್ದೇಶಕರು(ಆಡಳಿತ)ರವರಿಗೆ ತಲುಪಿಸಲಾಗುವುದು. ಪ್ರಶ್ನೆಪತ್ರಿಕೆ ಬಂಡಲ್‌ಗಳು ಬರುವ ದಿನದಂದು ಜಿಲ್ಲಾ ಉಪನಿರ್ದೇಶಕರಿಗೆ ದೂರವಾಣಿ ಕರೆ ಮೂಲಕ ತಿಳಿಸಲಾಗುವುದು. ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವಾಹನದೊಂದಿಗೆ ಬರಲು ತಿಳಿಸುವುದು. ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರವಾರು, ವಿಷಯವಾರು, ಮಾಧ್ಯಮವಾರು, ದಿನಾಂಕವಾರು ಮುದ್ರಿತವಾಗಿ ಬಂದಿರುವ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಜಿಲ್ಲಾ ಉಪನಿರ್ದೇಶಕರು ಜಿಲ್ಲಾಮಟ್ಟದಲ್ಲಿ ಸ್ವೀಕರಿಸಿ, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳು, ಕಛೇರಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಪ್ರಶ್ನೆ ಪತ್ರಿಕೆಗಳನ್ನು ತಾಲ್ಲೂಕಿಗೆ ಸಾಗಾಣಿಕೆ ಮಾಡಲು ಕ್ರಮವಹಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ಉಪಖಜಾನೆಯ ಭದ್ರತಾ ಕೊಠಡಿಯಲ್ಲಿ, ತಹಶೀಲ್ದಾರ್ ಹಾಗೂ ಉಪಖಜಾನಾಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ವೇಳಾಪಟ್ಟಿಯಂತೆ ಪೊಲೀಸ್ ಭದ್ರತೆಯೊಂದಿಗೆ ಶೇಖರಿಸಿಡುವಂತೆ ಕ್ರಮವಹಿಸುವುದು.

16. ಜಿಲ್ಲಾ ಉಪನಿರ್ದೇಶಕರು ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿತರಿಸಿದ ನಂತರ ಸ್ವೀಕೃತಿಯನ್ನು ಪಡೆದು. ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಸಾಗಾಣಿಕೆ ಮಾಡುವ ವಾಹನದಲ್ಲಿ ಕಡ್ಡಾಯವಾಗಿ ಪೊಲೀಸ್ ಎಸ್ಕಾರ್ಟ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದು ಇರುವ ಬಗ್ಗೆ ಖಾತರಿಪಡಿಸಿಕೊಂಡು ವಾಹನವನ್ನು ತೆರಳುವಂತೆ ಸೂಚಿಸುವುದು.

17. ಪ್ರಶ್ನೆಪತ್ರಿಕೆಗಳ ಸಾಗಾಣಿಕೆ ಸಮಯದಲ್ಲಿ ಪೊಲೀಸ್ ಎಸ್ಕಾರ್ಟ್‌ನ್ನು ಒದಗಿಸಲು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಜಿಲ್ಲಾ ಉಪನಿರ್ದೇಶಕರು ಕೋರುವುದು ಮತ್ತು ಪ್ರಶ್ನೆಪತ್ರಿಕೆಗಳ ಸಾಗಾಣಿಕೆಯ ಸಮಯದಲ್ಲಿ ಪೊಲೀಸ್ ಎಸ್ಕಾರ್ಟ್‌ನ್ನು ತಪ್ಪದೇ ಪಡೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡುವುದು. ಪ್ರಶ್ನೆಪತ್ರಿಕೆಗಳ ಸಾಗಾಣಿಕೆ ಸಮಯದಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗದಂತೆ ಎಚ್ಚರಿಕೆವಹಿಸುವುದು.

18. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಸಾಗಾಣಿಕೆ ಮಾಡುವ ವಾಹನದಲ್ಲಿ ಪರೀಕ್ಷೆಗೆ ನಿಯೋಜಿಸಿದ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಯಾವುದೇ ಖಾಸಗಿ ವ್ಯಕ್ತಿಗಳು ಇರದಂತೆ ಕ್ರಮವಹಿಸುವುದು.

19. ತಾಲ್ಲೂಕು/ಜಿಲ್ಲಾ ಉಪಖಜಾನೆಯ ಭದ್ರತಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಶೇಖರಿಸಿಡುವ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪಖಜಾನಾಧಿಕಾರಿಗಳು ಹಾಗೂ ತಹಶೀಲ್ದಾರ್‌ರವರು ಕಡ್ಡಾಯವಾಗಿ ಹಾಜರಿರುವ ಬಗ್ಗೆ ದೃಢಪಡಿಸಿಕೊಳ್ಳುವುದು.

20. ಜಿಲ್ಲಾ ಉಪನಿರ್ದೇಶಕರು ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿತರಿಸಿದ ನಂತರ, ಪ್ರಶ್ನೆಪತ್ರಿಕೆ ಸಾಗಾಣಿಕೆ ವಾಹನವು ತಾಲ್ಲೂಕು/ಜಿಲ್ಲಾ ಉಪಖಜಾನೆಗೆ ಸುರಕ್ಷಿತವಾಗಿ ತಲುಪಿರುವ ಬಗ್ಗೆ ಹಾಗೂ ಪ್ರಶ್ನೆಪತ್ರಿಕೆಗಳನ್ನು ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಶೇಖರಿಸಿಟ್ಟಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವರದಿ ಪಡೆಯುವುದು.

21. ಗ್ರಾಮಾಂತರ ಪ್ರದೇಶದಲ್ಲಿನ ಪರೀಕ್ಷಾ ಕೇಂದ್ರಗಳಿಗಿರುವ ದೂರವನ್ನು ಹಾಗೂ ನಿಗದಿತ ಸಮಯದಲ್ಲಿ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲು ಬೇಕಾಗುವ ಸಮಯವನ್ನು ಪರಿಗಣಿಸಿ ಆಗತ್ಯಕ್ಕೆ ತಕ್ಕಂತೆ ಮಾರ್ಗ (Route)ಗಳನ್ನು ರಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸುವುದು.

22. ಪರೀಕ್ಷಾ ದಿನಗಳಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಗೂ ಉಪಖಜಾನಾಧಿಕಾರಿಗಳು ಉಪಖಜಾನೆಯಲ್ಲಿ ಕಡ್ಡಾಯವಾಗಿ ಹಾಜರಿದ್ದು, ಪರೀಕ್ಷಾ ಕೇಂದ್ರವಾರು, ವಿಷಯವಾರು, ಮಾಧ್ಯಮವಾರು, ದಿನಾಂಕವಾರು ಪ್ರಶ್ನೆಪತ್ರಿಕೆಗಳನ್ನು ಉಪಖಜಾನೆಯ ಭದ್ರತಾ ಕೊಠಡಿಯಿಂದ ಪಡೆದು ಮಾರ್ಗನಕ್ಷೆ ಪ್ರಕಾರ ನೇಮಕ ಮಾಡಿದ ಮಾರ್ಗಾಧಿಕಾರಿಗಳಿಗೆ ಪ್ರಶ್ನೆ ಪತ್ರಿಕೆಗಳ ಬಂಡಲ್‌ಗಳನ್ನು ವಿತರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಉಪನಿರ್ದೇಶಕರು


23. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆಯಿಂದ ಒಂದು ಗಂಟೆ ಮುಂಚಿತವಾಗಿ ಮಾತ್ರ ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ವಿತರಿಸಲು ಕ್ರಮವಹಿಸುವುದು. ಗ್ರಾಮೀಣ ಪ್ರದೇಶದ ಪರೀಕ್ಷಾ ಕೇಂದ್ರಗಳಿಗೆ ಖಜಾನೆಯಿಂದ ಇರುವ ದೂರವನ್ನಾಧರಿಸಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ಕ್ರಮವಹಿಸುವುದು.

24. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕಸ್ಟೋಡಿಯನ್ ಇಬ್ಬರೂ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಮಾರ್ಗಾಧಿಕಾರಿಗಳಿಂದ ಸ್ವೀಕರಿಸಿ, ಆಲ್ವೇರಾದಲ್ಲಿಟ್ಟು ಮೊಹರು ಹಾಕಿ, ಆರಾದ ಬೀಗವನ್ನು ಕಸ್ಟೋಡಿಯನ್ ವಶದಲ್ಲಿಟ್ಟುಕೊಳ್ಳಲು ನಿರ್ದೇಶನ ನೀಡುವುದು.

25. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ತೆರೆಯುವಾಗ ಹಾಗೂ ತೆರೆದ ನಂತರ ಮುಖ್ಯ ಅಧೀಕ್ಷಕರು ಹಾಗೂ ಕಸ್ಟೋಡಿಯನ್‌ರವರ ವಶದಲ್ಲಿರುವ ಪ್ರಶ್ನೆಪತ್ರಿಕೆಯ ಯಾವುದೇ ಪ್ರಶ್ನೆಗಳು WhatsApp ಅಥವಾ ಯಾವುದೇ ರೂಪದಲ್ಲಿ ಹೊರಬರದಂತೆ ಎಚ್ಚರವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡುವುದು.

26. ಪರೀಕ್ಷೆ ಪ್ರಾರಂಭವಾಗಿ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಗಳನ್ನು ಹಾಗೂ ಉಳಿಕೆ ಇರುವ ಪ್ರಶ್ನೆಪತ್ರಿಕೆಗಳನ್ನು ಗೌಪ್ಯ ಲಕೋಟೆಯಲ್ಲಿಟ್ಟು ಕೋರಾ ಬಟ್ಟೆಯಿಂದ ಬಂಡಲ್ ಮಾಡಿ ಮೊಹರನ್ನು ಹಾಕಿ ಆಲ್ವೇರಾದಲ್ಲಿಟ್ಟು ಬೀಗ ಹಾಕಿ ಬೀಗವನ್ನು ಕಸ್ಟೋಡಿಯನ್ ವಶದಲ್ಲಿಟ್ಟುಕೊಳ್ಳಲು ಸೂಚಿಸುವುದು.

27. ಕಸ್ಟೋಡಿಯನ್ ಪ್ರಶ್ನೆಪತ್ರಿಕೆಯ ಲೆಕ್ಕಾಚಾರದ ದಾಖಲೆಯ ನಿರ್ವಹಣೆ ಮಾಡಲು ಹಾಗೂ ಜಾಗೃತದಳವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ಪ್ರಶ್ನೆಪತ್ರಿಕೆ ಲೆಕ್ಕಾಚಾರ ನಿರ್ವಹಣೆಯ ದಾಖಲೆಯನ್ನು ಒದಗಿಸಲು ಸೂಚಿಸುವುದು,

28. 2024-25ನೇ ಸಾಲಿನ ಪರೀಕ್ಷೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳು ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರಗಳಿರುವುದಿಲ್ಲ. ಎಲ್ಲಾ ಬಗೆಯ ಪರೀಕ್ಷಾರ್ಥಿಗಳಿಗೆ (ರೆಗ್ಯುಲರ್ ವಿದ್ಯಾರ್ಥಿಗಳು, ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು) ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿಯೇ ಹಂಚಿಕೆ ಮಾಡಲಾಗುತ್ತದೆ. ಪ್ರಶ್ನೆಪತ್ರಿಕೆ ವರ್ಷನ್‌ಗಳ ಬಗ್ಗೆ ಪುಟ ಸಂಖ್ಯೆ: 15 ರಿಂದ 17ರವರಗಿನ ಕೋಷ್ಠಕದಲ್ಲಿ ವಿವರಿಸಲಾಗಿದೆ.

29. ಮಾರ್ಚ್/ಏಪ್ರಿಲ್-2017ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಿಂದ ಎನ್.ಎಸ್.ಕ್ಯೂ.ಎಫ್. ಯೋಜನೆಯಡಿಯಲ್ಲಿ ತೃತೀಯ ಭಾಷೆಗೆ ವಿನಾಯಿತಿ ನೀಡಿ ವೃತ್ತಿಶಿಕ್ಷಣದ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್ ಹಾಗೂ ಬ್ಯೂಟಿ & ವೆಲ್‌ನೆಸ್ ವಿಷಯಗಳನ್ನು ಹಾಗೂ 2023-24ನೇ ಸಾಲಿನಿಂದ ಅಪರೆಲ್ ಮೇಡ್ ಅಪ್ & ಹೋಂ ಫರ್ನಿಷಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ & ಹಾರ್ಡ್‌ ವೇರ್ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ರಾಜ್ಯದ ಆಯ್ದ ಸಂಯುಕ್ತ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ವೃತ್ತಿಶಿಕ್ಷಣದ ಪ್ರಶ್ನೆಪತ್ರಿಕೆ ಬಗ್ಗೆ, ಪರೀಕ್ಷಾ ಸಮಯದ ಬಗ್ಗೆ, ಉತ್ತರಪತ್ರಿಕೆಗಳನ್ನು ಬಂಡಲ್ ಮಾಡುವ ಬಗ್ಗೆ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಜಿಲ್ಲಾ ಉಪನಿರ್ದೇಶಕರು ಮಾರ್ಗದರ್ಶನ ನೀಡುವುದು ಹಾಗೂ ವೃತ್ತಿಶಿಕ್ಷಣ ವಿಷಯಗಳ ಆಂತರಿಕ ಮೌಲ್ಯಮಾಪನದ ಹಾಗೂ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನಿಗದಿತ ಸಮಯದೊಳಗೆ ಮಂಡಳಿಯ KSEAB School

Login ನಲ್ಲಿ ಎಂಟ್ರಿ ಮಾಡಿ ಕ್ರಮಬದ್ದಗೊಳಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಜಿಲ್ಲಾ ಉಪನಿರ್ದೇಶಕರು ನಿರ್ದೇಶನ ನೀಡುವುದು. 30. ಜಿಲ್ಲಾ ಹಂತದಲ್ಲಿ ಪರಿಣಾಮಕಾರಿಯಾದ ಜಾಗೃತದಳಗಳನ್ನು ನೇಮಿಸಿ, ಪರೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆಯುವಂತೆ ಹಾಗೂ ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ಕ್ರಮವಹಿಸುವುದು.

31. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಉಪಸ್ಥಿತಿಯಲ್ಲಿ ಪರೀಕ್ಷಾ ಪೂರ್ವಸಿದ್ಧತಾ ಪರಿಶೀಲನಾ ಸಭೆ ನಡೆಸಿ, ನಡವಳಿಯನ್ನು ದಾಖಲಿಸಿ, ಅದರಂತೆ ಕ್ರಮವಹಿಸುವುದು. ಸಭೆಯಲ್ಲಿ ಜಿಲ್ಲೆಯ ಒಟ್ಟು ಪರೀಕ್ಷಾ ಕೇಂದ್ರಗಳ ಕುರಿತು ಹಾಗೂ ವಿಚಕ್ಷಣಾ ದಳವನ್ನು ರಚಿಸುವ ಮತ್ತು ತಾಲ್ಲೂಕುವಾರು ತಾಲ್ಲೂಕು/ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರನ್ನಾಗಿ ನೇಮಿಸುವ ಬಗ್ಗೆ ಚರ್ಚಿಸಿ ಕಾರ್ಯ ಯೋಜನೆ ಸಿದ್ಧಪಡಿಸಿಕೊಳ್ಳುವುದು.

32. ಪರೀಕ್ಷಾ ದಿನಗಳಂದು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿಸಲು ಹಾಗೂ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚಿಸಲು ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಜಿಲ್ಲಾಧಿಕಾರಿಗಳಿಂದ ಆದೇಶ ಹೊರಡಿಸಲು ಕ್ರಮವಹಿಸುವುದು.

33. ಸುಳ್ಳು ವದಂತಿ ಹಬ್ಬಿಸುವವರ ಹಾಗೂ ಕುಚೋದ್ಯ ಚಟುವಟಿಕೆಗಳಿಗೆ ಅವಕಾಶ ನೀಡುವವರ ಬಗ್ಗೆ ನಿಗಾವಹಿಸಿ, ಕಾನೂನು ಕ್ರಮವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಮಾಡುವುದು.

34. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಖಜಾನಾಧಿಕಾರಿಗಳನ್ನು ಸಂಪರ್ಕಿಸಿ, ಸಭೆ ನಡೆಸಿ, ಗೌಪ್ಯಸಾಮಗ್ರಿಗಳನ್ನು ಸುರಕ್ಷಿತವಾಗಿಡಲು ಹಾಗೂ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ಕ್ರಮಕೈಗೊಳ್ಳುವುದು.

35. ಉಪನಿರ್ದೇಶಕರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ಒಟ್ಟು ಪರೀಕ್ಷಾ ಕೇಂದ್ರಗಳು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಮಾಹಿತಿ, ಪರೀಕ್ಷಾ ಕೇಂದ್ರಗಳಿಗೆ ಮಾರ್ಗನಕ್ಷೆ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಇತರೆ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ವಿಚಕ್ಷಣಾ ಜಾಗೃತದಳವನ್ನು ರಚಿಸಿ, ಅವರ ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲು ಜಿಲ್ಲಾಧಿಕಾರಿಗಳಲ್ಲಿ ಸಹಕಾರ ಕೋರುವುದು.

36. ಇಲಾಖೆಯಿಂದ ನೇಮಕವಾಗಿರುವ ವಿಚಕ್ಷಣ ಜಾಗೃತದಳದವರಿಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಮಾಹಿತಿ ಒದಗಿಸುವುದು.


logoblog

Thanks for reading Guidelines on the duties and responsibilities to be performed by various levels of officers and staff of the department in relation to the SSLC Examination-1 for the year 2024-25.

Previous
« Prev Post

No comments:

Post a Comment