Saturday, March 22, 2025

Further order regarding inclusion of employees selected through recruitment prior to the notifications dated 01.04.2006 and joining the service of the State Government on or after that date under the old Defence Pension Scheme

  Wisdom News       Saturday, March 22, 2025
Hedding : Further order regarding inclusion of employees selected through recruitment prior to the notifications dated 01.04.2006 and joining the service of the State Government on or after that date under the old Defence Pension Scheme....


ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ 1 ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿ ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಆದೇಶದ ವ್ಯಾಪ್ತಿಗೊಳಪಡುವ ಸರ್ಕಾರಿ ನೌಕರರಿಂದ ದಿನಾಂಕ:30.06.2024ರೊಳಗ ಅಭಿಮತವನ್ನು ಪಡೆದು ಕ್ರೋಢೀಕೃತ ಪ್ರಸ್ತಾವನೆಯನ್ನು ಸರ್ಕಾರದ ಪರಿಶೀಲನೆಗಾಗಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು.

ಮುಂದುವರೆದು, ದಿನಾಂಕ:24.01.2024ರ ಸರ್ಕಾರಿ ಆದೇಶದನ್ವಯ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್.ಪಿ.ಎಸ್. ಪ್ರಾನ್ ಖಾತೆಯಲ್ಲಿ ಜಮೆಯಾಗಿರುವ ಸರ್ಕಾರದ ಹಾಗೂ ನೌಕರರ ವಂತಿಗೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.


ಅದರಂತೆ, ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ಸಂಬಂಧಿತ ಅಧಿಕಾರಿ/ನೌಕರರು ಚಲಾಯಿಸಿದ ಅಭಿಮತವನ್ನು ಪರಿಶೀಲಿಸಿದ ಸರ್ಕಾರವು ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಟ್ಟ ಅಧಿಕಾರಿ/ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 38 ಎಎಬಿ 2024, ಬೆಂಗಳೂರು, ದಿನಾಂಕ:20ನೇ ಮಾರ್ಚ್, 2025.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಈ ಕೆಳಕಂಡ ಅಧಿಕಾರಿ / ನೌಕರರು ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿರುವುದರಿಂದ ದಿನಾಂಕ:24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ವಯ ಅವರನ್ನು ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಿ ಆದೇಶಿಸಿದೆ. ಸದರಿ ಅಧಿಕಾರಿ/ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 2-C ಅನ್ವಯವಾಗುವುದಿಲ್ಲ ಮತ್ತು ಇವರಿಗೆ ಅದೇ ನಿಯಮಾವಳಿಯ ನಾಲ್ಕನೇಯ ಭಾಗ ಅನ್ವಯವಾಗತಕ್ಕದ್ದು.

logoblog

Thanks for reading Further order regarding inclusion of employees selected through recruitment prior to the notifications dated 01.04.2006 and joining the service of the State Government on or after that date under the old Defence Pension Scheme

Previous
« Prev Post

No comments:

Post a Comment