Thursday, March 20, 2025

21- 03-2025 Important Highlights on SSLC First Language Kannada Subject...

  Wisdom News       Thursday, March 20, 2025
Hediing : 21- 03-2025 Important Highlights on SSLC First Language Kannada Subject...


ಆಗ ಪದ್ಯಭಾಗದಿಂದ ಯಾವುದೇ ಪ್ರಶ್ನೆ ಬಂದರೂ ಸುಲಭವಾಗಿ ಉತ್ತರಿಸಲು ಸಾಧ್ಯವಿದೆ.

👉 *ಪ್ರಶ್ನೆ ಸಂಖ್ಯೆ - 34-35 - 4 ಅಂಕದ ಪ್ರಶ್ನೆಗಳು:*
ದೀರ್ಘ‌ ಉತ್ತರ ವಿಭಾಗದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಿ ಗಿಲ್ಲು, ಬಸಂತ ಕೀ ಸಚ್ಚಾಯಿ, ಕರ್ನಾಟಕ ಸಂಪದಾ ಪಾಠಗಳ ತಯಾರಿ ಮಾಡಿಕೊಳ್ಳಬೇಕು. ನಿಬಂಧ ತಯಾರಿಗಾಗಿ ಪಠ್ಯದ ಕರ್ನಾಟಕ ಸಂಪದಾ ಮತ್ತು ಇಂಟರ್‌ನೆಟ್‌ ಕ್ರಾಂತಿ ಅಧ್ಯಾಯವನ್ನು ಹೆಚ್ಚು ಗಮನವಿಟ್ಟು ಓದಿಕೊಳ್ಳಬೇಕು.

*ಪದ್ಯ ಭಾಗ ಪೂರ್ಣಗೊಳಿಸಿ.*
ಕೋಶಿಶ್‌ ಕರನೆ ವಾಲೋಂಕಿ ಕಭೀ ಹಾರ್‌ ನಹೀ ಹೋತಿ ಪದ್ಯದ ಕೊನೆಯ ಆರು ಸಾಲುಗಳಲ್ಲಿ ನಾಲ್ಕು ಸಾಲುಗಳು ಕೇಳಲಾಗುತ್ತದೆ. ಈ ಸಾಲುಗಳನ್ನು ಬರೆದು, ಬರೆದು ಕಂಠಪಾಠ ಮಾಡಿಕೊಳ್ಳುವುದು ಉತ್ತಮ.

👉 *5 ಅಂಕದ ಪ್ರಶ್ನೆ ಪತ್ರಲೇಖನ:*
ವ್ಯವಹಾರಿಕ ಪತ್ರದಲ್ಲಿ ರಜೆ ಕೇಳುವ ಪತ್ರವನ್ನು ಮುಖ್ಯ ಶಿಕ್ಷಕರನ್ನು ಉದ್ದೇಶಿಸಿ ಬರೆಯಬೇಕು. ವೈಯಕ್ತಿಕ ಪತ್ರದಲ್ಲಿ ಅಭ್ಯಾಸ ಅಥವಾ ಆರೋಗ್ಯದ ಕುರಿತು ತಂದೆ, ತಾಯಿ ಅಥವಾ ಸಂಬಂಧಿಕರಿಗೆ ಪತ್ರ ಬರೆಯಬೇಕಾಗುತ್ತದೆ. ಯಾವುದಾದರೊಂದು ಪತ್ರ ಆಯ್ಕೆ ಮಾಡಿ ಬರೆಯಬೇಕಾಗುತ್ತದೆ.

👉 *ಇನ್ನಷ್ಟು ಸಲಹೆಗಳು:* 
ಮಾದರಿ ಪ್ರಶ್ನೆ ಪತ್ರಿಕೆಯ ಸಣ್ಣ ಮತ್ತು ದೊಡ್ಡ ಉತ್ತರಗಳ ಪ್ರಶ್ನೆಗಳನ್ನು ಗಮನಿಸಬೇಕು. ಪ್ರಶ್ನೆಯೊಂದಿಗೆ ಉತ್ತರ ಎಷ್ಟಿರಬೇಕು, ಹೇಗೆ ಬರೆದರೆ ಅನುಕೂಲ ಎಂಬುದನ್ನು ಆಯಾ ಪಠ್ಯದ ಕೊನೆಗೆ ಇರುವ ನೋಟ್ಸ್‌ ಓದಿ ತಿಳಿದುಕೊಂಡು ನೆನಪಿಟ್ಟುಕೊಳ್ಳುವುದು. ಮುಖ್ಯವಾದ ಪಾಠಗಳನ್ನು ಗಮನಿಸಿ, ಸಣ್ಣ ಸಣ್ಣ ಅಂಶಗಳನ್ನು ನೆನಪಿಟ್ಟುಕೊಳ್ಳಿ. ಹಿಂಜ ರಿಕೆ ಬೇಡ. ಚೆನ್ನಾಗಿ ಓದಿ, ಪುನರಾವರ್ತಿಸಿ. ಸಂದೇಹಗಳೇನೇ ಇದ್ದರೂ ನಿಮ್ಮ ಗುರು ಗಳನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಟಿ.ವಿ., ಮೊಬೈಲ್‌ನಿಂದ ದೂರವಿದ್ದು, ಓದು, ಪರೀಕ್ಷೆಯ ಕಡೆಯೇ ಗಮನ ಇರಲಿ. ಸರಿಯಾಗಿ ನಿದ್ದೆ ಹಾಗೂ ನಿತ್ಯದ ವ್ಯಾಯಾಮವನ್ನು ಅವಗಣಿಸಬೇಡಿ. ಒತ್ತಡಗಳಿಂದ ದೂರವಾಗಿ ಪರೀಕ್ಷೆಯನ್ನು ಸಂತೋಷದಿಂದ ಎದುರುಗೊಳ್ಳಿ. ಖಂಡಿತ ಯಶಸ್ಸು ನಿಮ್ಮದಾಗಲಿದೆ.

ಹಿಂದಿ ಪಠ್ಯವನ್ನು ಓದುವ ಸಂದರ್ಭದಲ್ಲಿ ಪ್ರತಿಯೊಂದೂ ಅಧ್ಯಾಯದ ಪ್ರಮುಖಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳ ಬೇಕು. ಇದು ಪರೀಕ್ಷೆ ಸಮೀಪಿಸಿದಾಗ ವಿದ್ಯಾರ್ಥಿಗಳಿಗೆ ಅನುಕೂಲವಾಗು ತ್ತದೆ. ವ್ಯಾಕರಣವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಉತ್ತರಗಳ ಆಯ್ಕೆ ಸುಲಭವಾಗು ತ್ತದೆ. ಸಾಧ್ಯವಾ ದಷ್ಟು ಈ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳ ಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅಭ್ಯಾಸ ಮಾಡಿಕೊಂಡರೆ ಉತ್ತಮ. ಪುನರಾವರ್ತನೆಯಾದ ಮತ್ತು ಪ್ರಮುಖ ಪಾಠಗಳ ಪ್ರಶ್ನೆಗಳತ್ತ ಗಮನವನ್ನು ಕೇಂದ್ರೀಕರಿಸಿ ಓದಿದಲ್ಲಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಬಹುದು.



logoblog

Thanks for reading 21- 03-2025 Important Highlights on SSLC First Language Kannada Subject...

Previous
« Prev Post

No comments:

Post a Comment