Sunday, February 9, 2025

Question Paper Design 2025 Published by Board of School Examination and Valuation Bangalore on SSLC Science Subject....

  Wisdom News       Sunday, February 9, 2025
Subject : Question Paper Design 2025 Published by Board of School Examination and Valuation Bangalore on SSLC Science Subject....




ಎಸ್. ಎಸ್. ಎಲ್. ಸಿ. ಪ್ರಶ್ನೆ ಪತ್ರಿಕೆ ಸ್ವರೂಪ 2024-2025

ವಿಷಯ: ವಿಜ್ಞಾನ

ನಮ್ಮ ರಾಜ್ಯದಲ್ಲಿ ಹತ್ತನೇ ತರಗತಿಯ ವಿಜ್ಞಾನ ವಿಷಯದಲ್ಲಿ 2024 -25 ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಪರಿಷ್ಕೃತಗೊಂಡ ಪಠ್ಯಕ್ರಮವನ್ನು ಅಭ್ಯಾಸ ಮಾಡಬೇಕಾಗಿದೆ. ರಾಜ್ಯಾದ್ಯಂತ ಈಗಾಗಲೇ ಪರಿಷ್ಕೃತಗೊಂಡ ಪಠ್ಯಕ್ರಮಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಏಕರೂಪವಾದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಜ್ಞಾನ ವಿಷಯದಲ್ಲಿ ಇಡೀ ರಾಜ್ಯಾದ್ಯಂತ ಎಸ್. ಎಸ್. ಎಲ್. ಸಿ. ಪರೀಕ್ಷೆ ತೆಗೆದುಕೊಳ್ಳುವ ಸುಮಾರು 8-9 ಲಕ್ಷ ವಿದ್ಯಾರ್ಥಿಗಳು ವಿಭಿನ್ನ ಮಾನಸಿಕ ಮತ್ತು ಬೌದ್ಧಿಕ ಮಟ್ಟವನ್ನು ಹೊಂದಿರುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವಾರ್ಷಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ರಚಿಸಬೇಕಾಗುತ್ತದೆ.

ಕೇವಲ ಕಂಠಪಾಠ ಮಾಡಿ ಉತ್ತರ ಬರೆಯುವುದು, ನೆನಪಿನ ಶಕ್ತಿಯಿಂದ ಮಾತ್ರ ಉತ್ತರಿಸುವುದನ್ನು ಪ್ರೋತ್ಸಾಹಿಸದ ತಾರ್ಕಿಕ ಚಿಂತನೆಯನ್ನು ಬೆಳೆಸುವ, ದತ್ತಾಂಶಗಳ ಅರ್ಥ ವಿವರಣೆಯನ್ನು ನೀಡುವ, ಹೋಲಿಕೆ ಮಾಡಿ ತೀರ್ಮಾನ ತೆಗೆದುಕೊಳ್ಳುವಂತಹ, ವಿವಿಧ ಪರಿಕಲ್ಪನೆಗಳನ್ನು ಕ್ರೂಢೀಕರಣಗೊಳಿಸಿ ಉತ್ತರಿಸುವ ಪ್ರಶ್ನೆಗಳನ್ನೂ ಪ್ರಶ್ನೆ ಪತ್ರಿಕೆ ಒಳಗೊಳ್ಳಬೇಕಾಗುತ್ತದೆ. ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನ ಒಂದಕ್ಕೊಂದು ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಗಳ ಗುಣಮಟ್ಟ ಹೆಚ್ಚಿದಂತೆ, ಬೋಧನಾ ಕಲಿಕೆ ಪ್ರಕ್ರಿಯೆಯನ್ನು ಗಮನಾರ್ಹ ಸುಧಾರಣೆ ಕಂಡುಬರುತ್ತದೆ.

ವಿಜ್ಞಾನ ಹೆಸರೇ ಹೇಳುವಂತೆ ವಿಶೇಷವಾದ ಜ್ಞಾನ. ವ್ಯವಸ್ಥಿತ ಅಧ್ಯಯನವೇ ವಿಜ್ಞಾನ. ಏನು? ಏಕೆ?; ಹೇಗೆ? ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸುವ ಜ್ಞಾನದ ಶಾಖೆಯ ವಿಜ್ಞಾನ. ಹಾಗಾಗಿ ವಿಜ್ಞಾನದ ಪ್ರಶ್ನೆ ಪತ್ರಿಕೆಯನ್ನು ರಚಿಸುವಾಗ ಈ ಕೆಳಗಿನ ಉದ್ದೇಶಗಳನ್ನು ಪ್ರಶ್ನೆ ಪತ್ರಿಕೆಯು ಈಡೇರಿಸುವಂತಿರಬೇಕು.

ವಿಜ್ಞಾನದ ಪ್ರಶ್ನೆ ಪತ್ರಿಕೆಯನ್ನು ರಚಿಸುವಾಗ ರಚಿಸುವ ಪ್ರಶ್ನೆಗಳು ಈ ಕೆಳಗಿನ ಉದ್ದೇಶಗಳನ್ನು ಪರಿಪೂರ್ಣಗೊಳಿಸುವಂತಿರಬೇಕು.

• ದಿನನಿತ್ಯದಲ್ಲಿ ನಮ್ಮ ಸುತ್ತಮುತ್ತಲೂ ನಡೆಯುವ ಹಲವಾರು ಘಟನೆಗಳಿಗೆ ಕಾರಣ ಹುಡುಕುವ ಸಾಮರ್ಥ್ಯವನ್ನು ಬೆಳೆಸುವುದು.

• ಪರಿಸರದ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸುವುದು.

• ಮೂಢನಂಬಿಕೆಗಳನ್ನು ತೊಡೆದು ಹಾಕುವುದು.

• ಪರೀಕ್ಷಿಸಿ ನೋಡುವ ಗುಣಧರ್ಮವನ್ನು ಬೆಳೆಸುವುದು.

• ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯಗಳನ್ನು ವೃದ್ಧಿಸುವುದು.

• ವೈಜ್ಞಾನಿಕ ಮನೋಭಾವನೆಯನ್ನು ರೂಢಿಸುವುದು.

• ವಿಜ್ಞಾನದ ಅನೇಕ ಪರಿಕಲ್ಪನೆಗಳನ್ನು ಕ್ರೂಢೀಕರಿಸುವುದರ ಮೂಲಕ ತೀರ್ಮಾನ ತೆಗೆದುಕೊಳ್ಳುವುದು.


ವಿಜ್ಞಾನದ ಪರಿಕಲ್ಪನೆಗಳ ಅರಿವು, ಅವುಗಳ ಅನ್ವಯ, ಕಾರ್ಯ- ಕಾರಣ ಸಂಬಂಧಗಳನ್ನು ಗುರುತಿಸುವುದು.

ಸಂದರ್ಭಗಳನ್ನು ವಿಶ್ಲೇಷಿಸುವುದು.

ವಿಭಿನ್ನ ವಿಚಾರಗಳನ್ನು ಸಂಶೇಷಿಸಿ ಉತ್ತರಿಸುವುದು.

ಅನುಭವಗಳಿಂದ ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳುವುದು.

ಇತ್ಯಾದಿ, ಅನೇಕ ಅಂಶಗಳು ವಿಜ್ಞಾನ ವಿಷಯದ ಬೋಧನಾ ಕಲಿಕೆಯಲ್ಲಿಯೂ ಹಾಗೂ ಮೌಲ್ಯಮಾಪನದಲ್ಲಿಯೂ ಒಳಗೊಂಡಿರಬೇಕು. ಈ ಉದ್ದೇಶಗಳು ಈಡೇರಿವೆಯೇ ಎಂದು ಪರೀಕ್ಷಿಸಲು ಪ್ರಶ್ನೆ ಪತ್ರಿಕೆಯನ್ನು ಸೃಜನಾತ್ಮಕವಾಗಿ ರಚಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ 2019-20 ನೇ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಮುಂದುವರೆಯುತ್ತದೆ. ಮಾಡಲಾಗಿತ್ತು. ಅದರಂತೆಯೇ ಪ್ರಸಕ್ತ ವರ್ಷಗಳಲ್ಲಿಯೂ

ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯ ವಿನ್ಯಾಸದಲ್ಲಿ ಮಾಡಿರುವ ಬದಲಾವಣೆಗಳು:

ಮುಖ್ಯಾಂಶಗಳನ್ನು ಆಧರಿಸಿ ಅಂಕಗಳ ಹಂಚಿಕೆ:

ಅಧ್ಯಾಯವಾರು ಅಂಕಗಳ ಹಂಚಿಕೆಯ ಬದಲಾಗಿ, ಮುಖ್ಯಾಂಶಗಳನ್ನು ಆಧರಿಸಿ ( Theme Based) ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಎಲ್ಲಾ ಅಧ್ಯಾಯಗಳನ್ನು ಸಮಾನ ಪ್ರಾಮುಖ್ಯತೆಯನ್ನು ಕೊಟ್ಟು ಬೋಧಿಸುವ ಹಾಗೂ ಕಲಿಯುವ ಅವಕಾಶವಾಗುತ್ತದೆ. ಪಠ್ಯಪುಸ್ತಕದ ಯಾವುದೇ ಕಲಿಕಾಂಶ ಈ ಪ್ರಕ್ರಿಯೆಯಿಂದ ಹೊರಗುಳಿಯುವುದಿಲ್ಲ. ಅಲ್ಲದೆ ಒಟ್ಟು ಅಧ್ಯಾಯಗಳಲ್ಲಿ ಒಂದು ಅಧ್ಯಾಯಕ್ಕೆ ಇಷ್ಟೇ ಅಂಕಗಳು ಎಂದು ತಿಳಿದು ಅಷ್ಟು ಅಂಕಗಳಿಗೆ ಮಾತ್ರ ಪರೀಕ್ಷೆಗೆ ಸಿದ್ಧತೆ ಮಾಡುವ ಕ್ರಮದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊರಬರುತ್ತಾರೆ. ಅಧ್ಯಾಯಗಳಿಗೆ ನಿರ್ದಿಷ್ಟ ಅಂಕಗಳ ಹಂಚಿಕೆ ಇಲ್ಲದಿದ್ದರೂ ಮುಖ್ಯಾಂಶಗಳಿಗೆ ಅಂಕಗಳ ಹಂಚಿಕೆ ನಿರ್ದಿಷ್ಟವಾಗಿರುತ್ತದೆ. ಇದರಿಂದ ಒಂದು ಅಧ್ಯಾಯವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿದಂತಾಗುತ್ತದೆ. ಅಲ್ಲದೆ ಪ್ರತಿಯೊಂದು ಅಧ್ಯಾಯವಾರು ವೈವಿಧ್ಯಮಯ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ರಚಿಸಬಹುದಾಗಿರುತ್ತದೆ.

ಉದ್ದಿಷ್ಟವಾರು ಅಂಕಗಳ ಹಂಚಿಕೆ:

ಸ್ಮರಣೆ, ಗ್ರಹಿಕೆ, ಅನ್ವಯ ಈ ಉದ್ದಿಷ್ಟಗಳಿಗೆ ಕ್ರಮವಾಗಿ 20%, 40%, 20% ಅಂಕಗಳ ಹಂಚಿಕೆ ಇರುತ್ತದೆ. ಕೌಶಲಕ್ಕೆ ಸಂಬಂಧಿಸಿದಂತೆ, 15% ಅಂಕಗಳನ್ನು ಚಿತ್ರ ಬರೆಯಲು ಮತ್ತು 5% ಅಂಕಗಳನ್ನು ಉನ್ನತ ಮಟ್ಟದ ಆಲೋಚನೆಯ ಪ್ರಶ್ನೆಗಳಿಗೆ ಮೀಸಲಿಡಲಾಗಿದೆ. ಉನ್ನತ ಮಟ್ಟದ ಆಲೋಚನೆಯ ಪ್ರಶ್ನೆಗಳು ಸಂಶ್ಲೇಷಿಸುವ, ವಿಶ್ಲೇಷಿಸುವ, ಸಾಮಾನ್ಯಕರಣಗೊಳಿಸುವ ಮತ್ತು ಕ್ರೂಢೀಕರಿಸುವ ಸಾಮರ್ಥ್ಯಗಳನ್ನು ನಿರ್ಧಾರಗಳನ್ನು ಕೈಗೊಳ್ಳುವುದು ಸಮಸ್ಯೆಗಳನ್ನು ಬಿಡಿಸುವುದು ಕಾರಣ ಮತ್ತು ಪರಿಣಾಮಗಳನ್ನು ತಿಳಿಯುವುದು ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿರುತ್ತವೆ. ಇದರಿಂದ ಚಿತ್ರ ಬರೆಯುವ ಕೌಶಲವನ್ನಷ್ಟೇ ಅಲ್ಲದೆ ವಿದ್ಯಾರ್ಥಿಗಳ ಬೌದ್ಧಿಕ ಕೌಶಲವನ್ನು ಮೌಲ್ಯಮಾಪನ ಮಾಡಬಹುದು.


ಪ್ರಶ್ನೆಗಳ ವಿಧಗಳಿಗೆ ಅಂಕಗಳ ಹಂಚಿಕೆ:

ಒಂದು ಅಂಕದ ಪ್ರಶ್ನೆಗಳು ಹೆಚ್ಚು ಇದ್ದಾಗ ವಿದ್ಯಾರ್ಥಿಗಳು ಊಹೆ ಮಾಡಿ ಉತ್ತರಿಸಬಹುದು ಆದರೆ ವಿವರಣಾತ್ಮಕ ಉತ್ತರಗಳನ್ನು ಬಯಸುವ ಪ್ರಶ್ನೆಗಳು ಇದ್ದಾಗ ಸಹಜವಾಗಿ ವಿದ್ಯಾರ್ಥಿಗಳು ಆಲೋಚಿಸಿ ಉತ್ತರಿಸುತ್ತಾರೆ. ಇದರಿಂದ ಅವರ ಆಲೋಚನಾ ಸಾಮರ್ಥ್ಯ, ಬರವಣಿಗೆ ಸಾಮರ್ಥ್ಯ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗಾಗಿ ಈಗ ಪ್ರಶ್ನೆಪತ್ರಿಕೆಯಲ್ಲಿ 1 ಅಂಕದ ಮತ್ತು 2 ಅಂಕಗಳ ಪ್ರಶ್ನೆಗಳನ್ನು ಕಡಿಮೆ ಮಾಡಿ, 3 ಅಂಕಗಳ ಮತ್ತು 4 ಅಂಕಗಳ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 5 ಅಂಕದ ಒಂದು ಪ್ರಶ್ನೆಯನ್ನು ಪರಿಚಯಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಒಟ್ಟು 38 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 1 ಅಂಕದ ಪ್ರಶ್ನೆಗಳನ್ನು ಹೊರತುಪಡಿಸಿ, 3, 4 ಮತ್ತು 5 ಅಂಕಗಳ ಪ್ರಶ್ನೆಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉಪ ಪ್ರಶ್ನೆಗಳು ಇರಬಹುದು.

ಕಠಿಣತೆಯ ಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಯು ಇರುವುದಿಲ್ಲ.

ಸುಲಭ ಮತ್ತು ಅತಿ ಸುಲಭದ ಪ್ರಶ್ನೆಗಳಿಗೆ 30%, ಸಾಧಾರಣ ಮಟ್ಟದ ಪ್ರಶ್ನೆಗಳಿಗೆ 50% ಮತ್ತು ಕಠಿಣ ಪ್ರಶ್ನೆಗಳಿಗೆ 20% ಅಂಕ ಹಂಚಿಕೆಯನ್ನು ನೀಡಲಾಗಿದೆ.

ಆಂತರಿಕ ಆಯ್ಕೆ ಪ್ರಶ್ನೆಗಳು:

ಈ ಹಿಂದಿನಂತೆಯೇ 2024-25 ರ ಪ್ರಶ್ನೆ ಪತ್ರಿಕೆಯಲ್ಲಿಯೂ ಸಹ ಒಟ್ಟು 20 ಅಂಕಗಳಿಗೆ ಆಂತರಿಕ ಆಯ್ಕೆ ಪ್ರಶ್ನೆಗಳು ಇರುತ್ತವೆ, 2 ಅಂಕಗಳ ಎರಡು ಪ್ರಶ್ನೆಗಳಿಗೆ, 3 ಅಂಕಗಳ 4 ಪ್ರಶ್ನೆಗಳಿಗೆ, 4 ಅಂಕಗಳ ಒಂದು ಪ್ರಶ್ನೆಗೆ ಆಂತರಿಕ ಆಯ್ಕೆ ಇರುತ್ತದೆ. ಆಂತರಿಕ ಆಯ್ಕೆ ಪ್ರಶ್ನೆಗಳು ಒಂದೇ ಮುಖ್ಯಾಂಶಕ್ಕೆ ಹಾಗೂ ಒಂದೇ ಅಧ್ಯಾಯಕ್ಕೆ ಸಂಬಂಧಿಸಿರುತ್ತವೆ.



logoblog

Thanks for reading Question Paper Design 2025 Published by Board of School Examination and Valuation Bangalore on SSLC Science Subject....

Previous
« Prev Post

No comments:

Post a Comment