Subject : Question Paper Design 2025 published by Board of School Examination and Valuation Bangalore on SSLC Mathematics subject....
ಗಣಿತ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2019-20ನೇ ಸಾಲಿನಲ್ಲಿ ಎಸ್.ಎಸ್. ಎಲ್. ಸಿ. ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಬದಲಾವಣೆಯನ್ನು ಮಾಡಿ ಅಂದಿನಿಂದಲೂ 2023-24ನೆಯ ಸಾಲಿನವರೆಗೂ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಪರೀಕ್ಷೆಯನ್ನು ನಡೆಸುತ್ತಾ ಬಂದಿರುತ್ತದೆ. ಆದರೆ 2023-24ನೇ ಸಾಲಿನಲ್ಲಿ ಎನ್.ಸಿ.ಇ.ಆರ್.ಟಿಯು ಹತ್ತನೇ ತರಗತಿಯ ತನ್ನ ಗಣಿತ ಪಠ್ಯದಲ್ಲಿ ಕೆಲವು ಪಠ್ಯ ವಿಷಯಗಳನ್ನು ತೆಗೆದಿರುವುದರಿಂದ ಕರ್ನಾಟಕ ಪುಸ್ತಕ ಸಂಘವು ಕೂಡ 2024-25 ನೇ ಸಾಲಿನಲ್ಲಿ ಈ ವಿಷಯಗಳನ್ನು ತನ್ನ ಗಣಿತ ವಿಷಯದ ಪಠ್ಯಪುಸ್ತಕದಿಂದ ತೆಗೆದಿರುತ್ತದೆ. ಈ ಕಾರಣದಿಂದ ಮಂಡಲಿಯು 2024- 25 ನೇ ಸಾಲಿನಲ್ಲಿ ಗಣಿತ ವಿಷಯದ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಅಲ್ಪ ಬದಲಾವಣೆಯನ್ನು ತರಲು ಇಚ್ಛಿಸಿರುತ್ತದೆ. ಈಗಾಗಲೇ ಪ್ರಸಕ್ತ ಸಾಲಿನಲ್ಲಿ ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿರುವ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಆಯಾಮ-1 (ವಿಷಯಾಧಾರಿತ/ ಥೀಮ್ರಲ್ಲಿ ಅಲ್ಪ ಬದಲಾವಣೆಯನ್ನು ಮಾಡಿರುತ್ತದೆ. ಮುಖ್ಯವಾಗಿ ಕೌಶಲ್ಯ ಆಧಾರಿತ ಪ್ರಶ್ನೆಗಳಾದ ರಚನೆ ಮತ್ತು ಓಜೀವ್ ರಚನೆಯ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಪ್ರಸ್ತುತ ಸಾಲಿನ ಪಠ್ಯಪುಸ್ತಕದಲ್ಲಿ ತೆಗೆದಿರುವುದರಿಂದ, ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಸುವ ದೃಷ್ಟಿಯಿಂದ 2024-25ನೇ ಸಾಲಿನ ಪ್ರಶ್ನೆಪತ್ರಿಕೆ ವಿನ್ಯಾಸದಲ್ಲಿ ಈ ಹಿಂದೆ ಆಯಾಮ-2 (ಜ್ಞಾನಗ್ರಹಣ ಆಧಾರಿತ)ರ ಕೌಶಲ್ಯಕ್ಕೆ ನಿಗದಿಪಡಿಸಿದ್ದ ಶೇಕಡ 15 ಅಂಕಗಳ ಪ್ರಶ್ನೆಗಳಿಗೆ ಬದಲಾಗಿ ಶೇಕಡ 10 ಅಂಕಗಳನ್ನು ನಿಗದಿಪಡಿಸಲಾಗಿದೆ. 2025ರ ಎಸ್ ಎಸ್ ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ 8 ಅಂಕಗಳಿಗೆ ಸಂಶ್ಲೇಷಣೆ, ವಿಶ್ಲೇಷಣೆ ಮತ್ತು ರಚನಾ ಕೌಶಲ್ಯವನ್ನು ಒಳಗೊಂಡಂತೆ ಪ್ರಶ್ನೆಗಳನ್ನು ಕೇಳಲಾಗುವುದು. ಇದರಿಂದ ಸ್ಮರಣೆಗೆ ಒಟ್ಟು 12 (ಶೇಕಡಾ 15) ಅಂಕಗಳನ್ನು ನಿಗದಿಪಡಿಸಲಾಗಿದೆ. ಉಳಿದಂತೆ ಎಲ್ಲಾ ಆಯಾಮಗಳನ್ನು 2019-20ರಲ್ಲಿ ಇದ್ದಂತೆಯೇ ಮುಂದುವರೆಸಿದ್ದು ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಸ್ತುತ ಸಾಲಿನಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘವು ನಿಗದಿಪಡಿಸಿರುವ ಗಣಿತ ಪಠ್ಯವಸ್ತುವಿನಿಂದ ಮಾತ್ರ ಪ್ರಶ್ನೆಗಳನ್ನು ಕೇಳಲಾಗುವುದು.
ಪ್ರಶ್ನೆಪತ್ರಿಕೆ ತಯಾರಕರು ಅನುಸರಿಸಬೇಕಾದ ಮಾರ್ಗಸೂಚಿಗಳು:
1. ನಿರ್ದಿಷ್ಟ ಥೀಮ್ ಗೆ ನಿಗದಿಪಡಿಸಿದ ಒಟ್ಟು ಅಂಕಗಳನ್ನು ಬದಲಾಯಿಸದೆ, ಥೀಮ್ನಲ್ಲಿ ನೀಡಲಾದ ಅಧ್ಯಾಯಗಳಿಗೆ ಅಂಕಗಳನ್ನು ಹಂಚಿಕೆ ಮಾಡಬೇಕು.
2. ಪ್ರಶ್ನೆಪತ್ರಿಕೆ ವಿನ್ಯಾಸದ ಆಯಾಮಗಳಾದ ಜ್ಞಾನಗ್ರಹಣ ಆಧಾರಿತ, ಪ್ರಶ್ನೆಗಳ ವಿಧ ಆಧಾರಿತ, ಪ್ರಶ್ನೆಗಳ ಕಠಿಣತೆಯ ಮಟ್ಟಕ್ಕೆ ಅನುಗುಣವಾಗಿ ಅಂಕ ಹಂಚಿಕೆಯನ್ನು ಮಾಡಬೇಕು.
3. ಪ್ರಶ್ನೆಪತ್ರಿಕೆ ತಯಾರಕರು ವಿವಿಧ ಆಯಾಮಗಳಿಗೆ ಅನುಸಾರವಾಗಿ ನೀಲನಕ್ಷೆಯನ್ನು ಸಿದ್ಧಪಡಿಸಬೇಕು. ಇದಕ್ಕೆ ಅನುಗುಣವಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಪ್ರಶ್ನೆಗಳನ್ನು ರಚಿಸಬೇಕು.
4. ಅಧ್ಯಾಯವಾರು ಕಲಿಕಾ ಫಲಗಳು ಇರುವಂತೆ ಪ್ರಶ್ನೆಗಳನ್ನು ರೂಪಿಸಬೇಕು. ಅಧ್ಯಾಯವಾರು ಪ್ರಶ್ನೆಗಳ ಸ್ಥಾನವು ಗಣನೆಗೆ ಬರುವುದಿಲ್ಲ.
5. ಪಠ್ಯಪುಸ್ತಕದಲ್ಲಿ ಚರ್ಚಿಸಲಾದ ಪರಿಕಲ್ಪನೆಗಳು ಮತ್ತು ಅಭ್ಯಾಸದ ಆಧಾರದ ಮೇಲೆ ಮಾತ್ರ ಸಮಸ್ಯೆಗಳನ್ನು ಕೇಳಬಹುದು. ಪಠ್ಯಪುಸ್ತಕದಲ್ಲಿ ಐಚ್ಛಿಕ ಪರಿಕಲ್ಪನೆಗಳು ಮತ್ತು ಅಭ್ಯಾಸದಲ್ಲಿ ನೀಡಲಾದ ಪ್ರಶ್ನೆಗಳನ್ನು ತೆಗೆದುಕೊಳ್ಳುವಂತಿಲ್ಲ.
6. ಪ್ರಶ್ನೆ ಪತ್ರಿಕೆಯು ನಿಗದಿತ ಪಠ್ಯವಸ್ತುವಿನ ಚೌಕಟ್ಟಿನೊಳಗೆ ಇರಬೇಕು ಮತ್ತು ವಿವಿಧ ಆಯಾಮಗಳಿಗೆ ನಿಗದಿಪಡಿಸಿರುವ ಅಂಕಗಳಿಗೆ ಬದ್ಧವಾಗಿರಬೇಕು.
7. ಪ್ರಶ್ನೆಗಳು ಸ್ಪಷ್ಟವಾಗಿರಬೇಕು ಮತ್ತು ನಿಸ್ಸಂದಿಗ್ಧ (Unambiguous)ವಾಗಿರಬೇಕು ಮತ್ತು ವ್ಯಾಕರಣ ದೋಷಗಳಿಂದ
8. ಮುಕ್ತವಾಗಿರಬೇಕು ಮತ್ತು ಪ್ರಶ್ನೆಯಲ್ಲಿಯಾವುದೇ ಅನಗತ್ಯ ಅಂಶಗಳಿರಬಾರದು.
9. ಜೋಡಿ ರೇಖಾತ್ಮಕ ಸಮೀಕರಣಗಳ ಪ್ರಶ್ನೆಗಳಿಗೆ ಗ್ರಾಫ್ ಶೀಟ್ ಬಳಸುವ ಸೂಚನೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ನೀಡಬೇಕು.
10. ಪ್ರಶ್ನೆಪತ್ರಿಕೆಯಲ್ಲಿ ಒಮ್ಮೆ ಕೇಳಲಾದ ಪ್ರಶ್ನೆಯ ಪರಿಕಲ್ಪನೆ ಪುನರಾವರ್ತನೆ ಆಗಬಾರದು.
11. ಚಿತ್ರಾಧಾರಿತ ಪ್ರಶ್ನೆಗಳನ್ನು ರೂಪಿಸುವಾಗ ಚಿತ್ರಗಳು ವಾಸ್ತವತೆಗೆ ಹತ್ತಿರವಾಗಿರುವಂತೆ ಚಿತ್ರಗಳನ್ನು ಬರೆಯಬೇಕು.
12. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ರಚಿಸುವ ಪ್ರಶ್ನೆಪತ್ರಿಕೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಬೇಕು ಮತ್ತು
13. ವಿವಿಧ ಹಂತಗಳಿಗೆ ಅಂಕಗಳನ್ನು ನಿಗದಿಪಡಿಸಬೇಕು. ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಲು ಬೇಕಾಗುವ
14. ಸಮಯವನ್ನು ಗಮನದಲ್ಲಿರಿಸಿಕೊಳ್ಳಬೇಕು.
15. ಪ್ರಶ್ನೆಪತ್ರಿಕೆ ವಿನ್ಯಾಸದ ವಿಶ್ಲೇಷಣಾ ವರದಿಯ ಪಟ್ಟಿಯನ್ನು ತಯಾರಿಸಬೇಕು.
ಎಲ್ಲ SSLC ವಿದ್ಯಾರ್ಥಿಗಳಿಗೆ ಶೇರ್ ಮಾಡಿ 🙏🙏

No comments:
Post a Comment