Hedding : Orders regarding the movement and maintenance of records of the Head Teacher when he leaves the school for other work ....
ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ ಸಮಾರಂಭಗಳಿಗೆ ತೆರಳುವ ಸಮಯದಲ್ಲಿ ಚಲನ ವಲನ ವಹಿಯಲ್ಲಿ ನಮೂದಿಸಿ ಸಮಾರಂಭದ ಅಹ್ವಾನ ಪತ್ರಿಕೆ/ ಸಭಾ ನೂಚನಾ ಪತ್ರವನ್ನು ಲಗತ್ತಿಸುವ ಕುರಿತು.
ಉಲ್ಲೇಖ:ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಇವರ ಟಿಪ್ಪಣಿ ದಿನಾಂಕ: 21-09-2024
ಮೇಲಿನ ವಿಷಯ ನಂಬಂಧಿಸಿದಂತೆ ಉಲ್ಲೇಖಿತ ಟಿಪ್ಪಣಿ ದಿನಾಂಕ: 21-09-2024 ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಶಾಲೆಯ ಸಮಯದಲ್ಲಿ ಶಾಲೆಯಲ್ಲಿ ಉಪಸ್ಥಿತರಿಲ್ಲದೇ ಸಭೆ ಮತ್ತು ಸಮಾರಂಭಕ್ಕೆ ತೆರಳಿರುವುದಾಗಿ ತಿಳಿದುಬಂದಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸಾಧ್ಯವಾಗುತ್ತಿರುವುದಿಲ್ಲ. ಪ್ರಯುಕ್ತ ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ ಸಮಾರಂಭಗಳಿಗೆ ತೆರಳುವ ಸಮಯದಲ್ಲಿ ಚಲನ ವಲನ ವಹಿಯಲ್ಲಿ ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ/ಸಭಾ ಸೂಚನಾ ಪತ್ರವನ್ನು ಲಗತ್ತಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ನಿರ್ದೇಶಿಸುವಂತೆ ಸೂಚಿಸಿರುತ್ತಾರೆ.
ಪ್ರಯುಕ್ತ ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ ಸಮಾರಂಭಗಳಿಗೆ ತೆರಳುವ ಸಮಯದಲ್ಲಿ ಚಲನ ವಲನ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ/ ಸಭಾ ಸೂಚನಾ ಪತ್ರವನ್ನು ಲಗತ್ತಿಸುವಂತೆ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.
(ಕಛೇರಿ ಟಿಪ್ಪಣಿ ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ)
No comments:
Post a Comment