Tuesday, February 18, 2025

Early implementation of Karnataka Arogya Sanjeevini Scheme: "Karnataka Arogya Sanjeevini Yojana" to provide cashless treatment facility to state government employees and dependent family members.

  Wisdom News       Tuesday, February 18, 2025
Subject ; Early implementation of Karnataka Arogya Sanjeevini Scheme:"Karnataka Arogya Sanjeevini Yojana" to provide cashless treatment facility to state government employees and dependent family members.


1. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವುದು:

> ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಗೆ 2022-23ನೇ ಸಾಲಿನ ಅಯ-ವ್ಯಯದಲ್ಲಿ ಅನುದಾನವನ್ನು ಕಾಯ್ದಿರಿಸಿ ಸಚಿವ ಸಂಪುಟ ಸಭೆಯ ಅನುಮೋದನೆಯನ್ನು ಪಡೆದು ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ಸಾಂಕೇತಿಕವಾಗಿ ಲೋಕಾರ್ಪಣೆ ಸಹ ಮಾಡಲಾಗಿದೆ.

> ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕೆಲವು ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಯೋಜನೆ ಈವರೆಗೂ ಅನುಷ್ಠಾನ ಆಗಿರುವುದಿಲ್ಲ.

> ಈ ಯೋಜನೆ ಅನುಷ್ಠಾನದ ನಿರೀಕ್ಷೆಯಲ್ಲಿದ್ದ ನೌಕರರು ಹಾಗೂ ನೌಕರರ ಅಬಲಂಭಿತ ಕುಟುಂಬ ಸದಸ್ಯರು ದುಬಾರಿ ವೆಚ್ಚದ ಮಾರಣಾಂತಿಕ ಖಾಯಿಲೆ ಹಾಗೂ ಅಂಗಾಗ ಕಸಿ ಶಸ್ತ್ರಚಿಕಿತ್ಸೆ ಪಡೆಯಲು ದುಬಾರಿ ವೆಚ್ಚ ಭರಿಸಲಾಗದೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದಾರೆ.

> ಈ ಯೋಜನೆಗೆ ಸರ್ಕಾರ ಕಾಯ್ದಿರಿಸಿರುವ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಸರ್ಕಾರಿ ನೌಕರರು ಮಾಸಿಕ ವಂತಿಗೆ ಮೂಲಕ ಹೆಚ್ಚುವರಿ ಹಣವನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ಈ ವಿಷಯವನ್ನು ಸಂಘವು ಸರ್ಕಾರದ ಗಮನಕ್ಕೆ ತಂದಿರುತ್ತದೆ.

> ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಭರವಸೆಯನ್ನು ನೀಡಿದ್ದಾಗ್ಯೂ ಈವರೆಗೆ ಯೋಜನೆ ಜಾರಿಯಾಗಿರುವುದಿಲ್ಲ.


ಆದುದರಿಂದ, ಅಧಿಕ ಕಾರ್ಯಭಾರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ಅಧಿಕ ವೆಚ್ಚ ಭರಿಸಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರದ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಜಾರಿಗೊಳಿಸಲು ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ವಿನಂತಿಸುತ್ತೇವೆ.

2. ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡುವುದು:

> ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಕಳೆದ 25-30 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳು ತಿದ್ದುಪಡಿಯಾಗದೇ ಇರುವುದು ಸಂಘದ ಗಮನಕ್ಕೆ ಬಂದಿರುತ್ತದೆ.

> ಸರ್ಕಾರವು ಪ್ರತಿ 03 ವರ್ಷಕ್ಕೊಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಸುತ್ತೋಲೆ/ನಿರ್ದೇಶನ ನೀಡಿದ್ದಾಗ್ಯೂ ಹಲವು ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಕ್ರಮವಹಿಸಿರುವುದಿಲ್ಲ. ಆಡಳಿತ ಸುಧಾರಣಾ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳನ್ನು ವಿಲೀನಗೊಳಿಸಿ ಆದೇಶ ಹೊರಡಿಸಿ 5-6 ವರ್ಷಗಳು ಕಳೆದರೂ ವಿಲೀನಗೊಂಡ ಇಲಾಖೆಗಳ ಕ್ರೂಡೀಕೃತ ವೃಂದ ಮತ್ತು ರಚನೆಯಾಗಿರುವುದಿಲ್ಲ. ನೇಮಕಾತಿ ನಿಯಮಗಳ

> ಈ ಸಂಬಂಧ ಕಳೆದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಇದಕ್ಕೆ ಪೂರಕವಾಗಿ ತಮ್ಮ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಟ್ಟಿಗೆ ಸಭೆ ನಡೆದಿದ್ದಾಗ್ಯೂ ಯಾವುದೇ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ/ಪರಿಷ್ಕರಣೆಯಾಗದೇ ಇರುವುದನು ಗಮನಕ್ಕೆ ತರಬಯಸುತ್ತೇವೆ.

4/10

> ವಿಲೀನಾತಿ ಇಲಾಖೆಗಳ ಕ್ರೂಢೀಕೃತ ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣೆಯಾಗದೇ ಇರುವುದಿಂದ ಕಳೆದ 4-5 ವರ್ಷಗಳಿಂದ ಇಲಾಖೆಯ ಅಧಿಕಾರಿ-ನೌಕರರು ಪದೋನ್ನತಿ ಸೇರಿದಂತೆ ಇನ್ನಿತರೆ ಸೇವಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಆದ್ದರಿಂದ; ಪ್ರಸ್ತುತ ಪರಿಸ್ಥಿತಿಗನುಗುಣವಾಗಿ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಪರಿಷ್ಕರಣೆ ಮಾಡಲು ಕಾಲಮಿತಿಯನ್ನು ನಿಗದಿಪಡಿಸಿ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಮನವಿ ಮಾಡುತ್ತೇವೆ.

3. ಇಲಾಖೆಗಳ ಅಧಿಕಾರಿ-ನೌಕರರ ಜೇಷ್ಠತಾ ಪಟ್ಟಿ ಪ್ರಕಟಿಸುವುದು:

ಹಲವು ಇಲಾಖೆಗಳು ಕಾಲ-ಕಾಲಕ್ಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸದೇ ಇರುವುದರಿಂದ ಮುಂಬಡ್ತಿ ಸೇರಿದಂತೆ ಇತರೆ ಸೇವಾ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ.

>ಸರ್ಕಾರ ಪ್ರತಿವರ್ಷ ಇಲಾಖೆಯ ವೃಂದವಾರು ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಸುತ್ತೋಲೆ ಹೊರಡಿಸಿದ್ದಾಗ್ಯೂ ಹಲವು ಇಲಾಖೆಗಳು ನೌಕರರ ಹಾಗೂ ಸರ್ಕಾರದ ಹಂತದಲ್ಲಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರತಿವರ್ಷ ಪ್ರಕಟಿಸುತ್ತಿಲ್ಲ.

ಆದ್ದರಿಂದ; ಎಲ್ಲಾ ಇಲಾಖೆಗಳಲ್ಲಿ ಪ್ರತಿವರ್ಷ ಜನವರಿ ಅಥವಾ ಡಿಸೆಂಬರ್ ಮಾಹೆಯಲ್ಲಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ-ನೌಕರರ ಜೇಷ್ಠತಾ ಪಟ್ಟಿಯನ್ನು ಕಾಲಮಿತಿಯೊಳಗೆ ಪ್ರಕಟಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಮನವಿ ಮಾಡುತ್ತೇವೆ.

4. ನಿಗದಿತ ಅವಧಿಯಲ್ಲಿ ವೇತನ-ಭತ್ಯೆಗಳನ್ನು ಪಾವತಿಸುವುದು:

> ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಮಕ್ಕಳ ಶೈಕ್ಷಣಿಕ ಶುಲ್ಕ, ಸಾಲದ ಕಂತುಗಳ ಪಾವತಿ, ವಿಮಾ ಪಾಲಿಸಿ ಕಂತುಗಳ ಪಾವತಿಯಲ್ಲಿ ವಿಳಂಬವಾಗುವುದರಿಂದ ಸಾಲದ ಮೇಲಿನ ಬಡ್ಡಿ ಸೇರಿದಂತೆ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಹಾಗೂ ಇನ್ನಿತರೆ ದೈನಂದಿನ ಖರ್ಚು-ವೆಚ್ಚಗಳನ್ನು ನಿರ್ವಹಿಸುವಲ್ಲಿ ಸರ್ಕಾರಿ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.


ಆದ್ದರಿಂದ, ಎಲ್ಲಾ ಇಲಾಖೆಗಳ ಹಾಗೂ ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆಗಳ ಅಧಿಕಾರಿ-ನೌಕರರಿಗೆ ಪ್ರತಿ ಮಾಹೆಯ ಮೊದಲ ವಾರದಲ್ಲಿಯೇ ವೇತನ-ಭತ್ಯೆಗಳನ್ನು ಪಾವತಿ ಮಾಡಲು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರುತ್ತೇವೆ.

5. ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು ರೂ. 15.00 ಲಕ್ಷಗಳಿಗೆ ಹೆಚ್ಚಳ ಮಾಡುವುದು:

> ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯಲು ಕೆನೆಪದರ ಮಿತಿಯನ್ನು ವಾರ್ಷಿಕವಾಗಿ ರೂ. 8.00 ಲಕ್ಷಗಳಿಗೆ ನಿಗಧಿಪಡಿಸಿದೆ.

> ರಾಜ್ಯ ಸರ್ಕಾರವು ರಾಜ್ಯ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದಿಂದಾಗಿ ಸರ್ಕಾರಿ ನೌಕರರ ಮೂಲವೇತನದಲ್ಲಿ ಹೆಚ್ಚಳವಾಗಿರುವುದರಿಂದ 'ಸಿ' ಮತ್ತು 'ಡಿ' ವೃಂದದ ನೌಕರರ ಮಕ್ಕಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ.

ಸರ್ಕಾರಿ ನೌಕರರ ಪ್ರಸ್ತುತ ವಾರ್ಷಿಕ ಆದಾಯದ ಆಧಾರದ ಮೇಲೆ 2025ರ ಕೇಂದ್ರ ಆದಾಯ ತೆರಿಗೆ ಪದ್ದತಿಯಲ್ಲಿ ರೂ. 12.75 ಲಕ್ಷದ ವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯಲು ಕೆನೆಪದರ ಮಿತಿಯನ್ನು ವಾರ್ಷಿಕವಾಗಿ ರೂ. 15.00 ಲಕ್ಷಗಳಿಗೆ ಹೆಚ್ಚಳ ಮಾಡುವಂತೆ ಕೋರುತ್ತೇವೆ.

6. ರಾಜ್ಯ ಸರ್ಕಾರದ ಅಧಿಕಾರಿ-ನೌಕರರ ಇಲಾಖಾ ವಿಚಾರಣೆಯನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವುದು:

ಅಧಿಕಾರಿ-ನೌಕರರ ಮೇಲಿನ ವಿಚಾರಣೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಸರ್ಕಾರದ ಆದೇಶವಿದ್ದಾಗ್ಯೂ, ಹಲವು ಇಲಾಖೆಗಳಲ್ಲಿ ಇಲಾಖಾ ವಿಚಾರಣೆಯನ್ನು ಇತ್ಯರ್ಥಗೊಳಿಸಲು ವಿಚಾರಣಾ ಸಮಿತಿಯನ್ನೇ ರಚಿಸುವಲ್ಲಿ ಹಾಗೂ ವಿಚಾರಣಾ ವರದಿ ನೀಡುವಲ್ಲಿ ವಿಳಂಭ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ಬಾಧಿತ

ನೌಕರರು ಅನಗತ್ಯವಾಗಿ ಮುಂಬಡ್ತಿ ಸೇರಿದಂತೆ ಸೇವಾ ಸವಲತ್ತುಗಳಿಂದ ವಂಚಿತರಾಗುವುದಲ್ಲದೆ, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.

ಆದ್ದರಿಂದ; ಎಲ್ಲಾ ಇಲಾಖೆಗಳಲ್ಲೂ ಅಧಿಕಾರಿ-ನೌಕರರ ಮೇಲಿನ ಇಲಾಖಾ ವಿಚಾರಣೆಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸಿ ಲಭ್ಯವಿರುವ ಸೇವಾ ಸವಲತ್ತುಗಳನ್ನು ಮಂಜೂರು ಮಾಡಲು ಸೂಕ್ತ ಆದೇಶ ಹೊರಡಿಸಲು ಮನವಿ ಮಾಡುತ್ತೇವೆ.

7. ಅಧಿಕಾರಿ ನೌಕರರ ಮೇಲಿನ ದೈಹಿಕ ಹಲ್ಲೆ/ದೌರ್ಜನ್ಯವನ್ನು ತಪ್ಪಿಸಲು ಕಠಿಣ ಕಾನೂನು ರೂಪಿಸುವುದು:

> ಇತ್ತೀಚೆಗೆ ಖಾಸಗಿ ವ್ಯಕ್ತಿಗಳು ಕರ್ತವ್ಯನಿರತ ಕ್ಷೇತ್ರ (Field work) ಸರ್ಕಾರಿ ಅಧಿಕಾರಿ-ನೌಕರರ ಮೇಲೆ ನಿರಂತರವಾಗಿ ಹಲ್ಲೆ-ದೌರ್ಜನ್ಯ ನಡೆಯುತ್ತಿರುವುದರಿಂದ ಅಧಿಕಾರಿ-ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಲ್ಲಿ ಅನಾಸಕ್ತಿ ತೋರುವುದರ ಜೊತೆಗೆ ಮಾನಸಿಕವಾಗಿ ನೊಂದಿದ್ದು, ಸರ್ಕಾರಿ ಕೆಲಸವನ್ನು ಭಯದ ವಾತಾವರಣದಲ್ಲಿ ನಿರ್ವಹಿಸಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ, ಕ್ಷೇತ್ರ ಕಾರ್ಯ ನಿರ್ವಹಿಸುವ ಅಧಿಕಾರಿ-ನೌಕರರೂ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕಠಿಣ ಕಾನೂನುಗಳನ್ನು ರಚಿಸಿ ಸರ್ಕಾರಿ ನೌಕರರಿಗೆ ಭದ್ರತೆ ನೀಡಲು ಮನವಿ ಮಾಡುತ್ತೇವೆ.

8. ಪ್ರತಿವರ್ಷ ಏಪ್ರಿಲ್-21 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡುವುದು:

> ರಾಜ್ಯ ಸರ್ಕಾರವು ಪ್ರತಿವರ್ಷ ಏಪ್ರಿಲ್-21ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಆಚರಿಸಲು ಹಾಗೂ ಅದೇ ಕಾರ್ಯಕ್ರಮದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲು ಆದೇಶ ಹೊರಡಿಸಿರುತ್ತದೆ.

ಆದರೆ, ಸರ್ಕಾರವು ಕಳೆದ 2-3 ವರ್ಷಗಳಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅಧಿಕಾರಿ-ನೌಕರರನ್ನು ಆಯ್ಕೆಮಾಡಿ ಪ್ರಶಸ್ತಿ ಪ್ರಧಾನ ಮಾಡಿರುವುದಿಲ್ಲ.

ಆದ್ದರಿಂದ; ಹಿಂದಿನ ವರ್ಷಗಳ ಆಯ್ಕೆಯೂ ಸೇರಿದಂತೆ ಸರ್ಕಾರದ ಆದೇಶದಂತೆ ಪ್ರತಿವರ್ಷ ರಾಜ್ಯ ಸರ್ಕಾರಿ ನೌಕರರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡುವುದು ಮತ್ತು ಪ್ರಶಸ್ತಿಗಳನ್ನು ಏಪ್ರಿಲ್-21ರ ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ನಡೆಸಲು ಕ್ರಮವಹಿಸುವಂತೆ ನಿರ್ದೇಶನ ನೀಡಲು ಕೋರಿದೆ.

9. ಖಾಲಿ ಹುದ್ದೆಗಳನ್ನು ಭರ್ತಿ ಹಾಗೂ ರಾಜ್ಯದ ಜನಸಂಖ್ಯೆಗನುಗುಣವಾಗಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವುದು:

logoblog

Thanks for reading Early implementation of Karnataka Arogya Sanjeevini Scheme: "Karnataka Arogya Sanjeevini Yojana" to provide cashless treatment facility to state government employees and dependent family members.

Previous
« Prev Post

No comments:

Post a Comment