Thursday, November 14, 2024

Regarding giving incentives to caretakers of patients suffering from diseases

  Wisdom News       Thursday, November 14, 2024
Hedding ; Regarding giving incentives to caretakers of patients suffering from diseases 


ಬೆನ್ನುಹುರಿ ಅಪಘಾತದ ಅಂಗವಿಕಲರು, ಬುದ್ಧಿಮಾಂಧ್ಯತೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1,000 ರೂ. ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ ಇವರು 2024-25ನೇ ಸಾಲಿನ ಆಯವ್ಯಯ ជ -1510, 2024-25 Cerebral Palsy, Muscular Dystrophy, Parkinsons , Multiple Sclerosis ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಯವರು ಘೋಷಿಸಿರುತ್ತಾರೆ.

2024-25 Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವ ಹೊಸ ಯೋಜನೆಯೊಂದಿಗೆ ಬೆನ್ನುಹುರಿ ಅಪಘಾತದ ಅಂಗವಿಕಲರು (Spinal Cord Injury) ಮತ್ತು ಬುದ್ಧಿಮಾಂದ್ಯತೆ (Mentally retarded) ಈ ಎರಡು ಬಗೆಯ ವಿಕಲತೆಗಳನ್ನು ಸೇರ್ಪಡೆಗೊಳಿಸಿದ್ದು, ಲೆಕ್ಕಶೀರ್ಷಿಕೆ:2235-02-101-0- 99, 100, 422, 423ರಡಿ ವೆಚ್ಚ ಭರಿಸಲು ಯೋಜನೆಗೆ ಸಂಬಂಧಿಸಿದಂತೆ ತಡೆಪಟ್ಟಿಯೊಂದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.


ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಅನಧಿಕೃತ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು Cerebral Palsy, Muscular Dystrophy, Parkinsons & Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವ ಯೋಜನೆಯ ವೆಚ್ಚವನ್ನು ಲೆಕ್ಕಶೀರ್ಷಿಕೆ:2235-02-101-0-99 ರಡಿ ರೂ.400.00 ಲಕ್ಷಗಳ ಆಯವ್ಯಯವನ್ನು ಮೀಸಲಿರಿಸಿ ನಿಗದಿಪಡಿಸಿರುತ್ತದೆ.

ಮೇಲಿನ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ: 151ರಲ್ಲಿ ಘೋಷಿಸಿರುವಂತೆ, 2024-25ನೇ ಸಾಲಿನಲ್ಲಿ Cerebral Palsy, Muscular Dystrophy, Parkinson 2 Multiple Sclerosis ជ ខ្ញុំ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವ ಯೋಜನೆಯನ್ನು ಲೆಕ್ಕಶೀರ್ಷಿಕೆ:2235-02-101-0-99ರಡಿ ನಿಗದಿಪಡಿಸಿರುವ ರೂ.400.00 ಲಕ್ಷಗಳ ಅನುದಾನದ ಮಿತಿಯೊಳಗೆ ವೆಚ್ಚ ಭರಿಸಿ ಪ್ರಾರಂಭಿಸಲು ಹಾಗೂ ಈ ಕೆಳಕಂಡ ಕಟ್ಟುನಿಟ್ಟಾದ ಮಾರ್ಗಸೂಚಿಯನ್ವಯ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ.

1. ವಿಶಿಷ್ಟ ಗುರುತಿನ ಚೀಟಿ ಕಡ್ಡಾಯ (UDID CARD).

2. ಅಂಗವಿಕಲತೆಯ ಪ್ರಮಾಣ ಶೇ.75 ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು.

3. ವಯಸ್ಸಿನ ಮಿತಿ ಇಲ್ಲ

4. ಆದಾಯದ ಮಿತಿ ಇಲ್ಲ.

5. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
6. ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಯ ಆರೈಕೆದಾರರ ಬ್ಯಾಂಕ್ / ಅಂಚೆ ಕಛೇರಿ ಉಳಿತಾಯ ಖಾತೆಗೆ ಪ್ರೋತ್ಸಾಹಧನವನ್ನು ಜಮಾ ಮಾಡಬೇಕು.

7. ಆಯ್ಕೆಯಾದ ವಿಕಲಚೇತನ ಫಲಾನುಭವಿಯ ಆರೈಕೆದಾರರು ಮರಣ ಹೊಂದಿದಲ್ಲಿ ಅಥವಾ ವಿಕಲಚೇತನ ಫಲಾನುಭವಿಯು ಲಿಖಿತ ಮನವಿಯ ಮೇರೆಗೆ ಬೇರೆ ಆರೈಕೆದಾರರನ್ನು ಜಿಲ್ಲಾ ಸಮಿತಿಯಲ್ಲಿ ಆಯ್ಕೆ ಮಾಡುವುದು.

8. ವಿಕಲಚೇತನ ಫಲಾನುಭವಿ ಮರಣ ಹೊಂದಿದಲ್ಲಿ ಪ್ರೋತ್ಸಾಹಧನ ಮಂಜೂರಾತಿ ತಂತಾನೇ ರದ್ದಾಗುವುದು.

logoblog

Thanks for reading Regarding giving incentives to caretakers of patients suffering from diseases

Previous
« Prev Post

No comments:

Post a Comment