Friday, November 15, 2024

402 PSI Final Marks 2024

  Wisdom News       Friday, November 15, 2024
Hedding ; 402 PSI Final Marks 2024


2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಗಳ ಪಟ್ಟಿ (Final Score List) ಯನ್ನು KEA ಇದೀಗ ಪ್ರಕಟಿಸಿದೆ, ಶೀಘ್ರದಲ್ಲಿಯೇ ಈ ಅಂತಿಮ ಅಂಕ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ, ಆ ಇಲಾಖೆಯವರೇ ಆಯ್ಕೆಪಟ್ಟಿಯನ್ನು ಪ್ರಕಟಿಸುತ್ತಾರೆ.!!

⚫ Paper-1 ಗೆ 313 & Paper-2 ಗೆ 219 ಆಕ್ಷೇಪಣೆಗಳು ಸೇರಿದಂತೆ ಒಟ್ಟಾರೆ 532 Objections ಸಲ್ಲಿಕೆಯಾಗಿದ್ದವು.!



ಪತ್ರಿಕೆ-1 ರ 1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸವಾಗಿದ್ದಲ್ಲಿ 3ನೇ ಮೌಲ್ಯಮಾಪನ ಮಾಡಲಾಗಿದೆ.

ಪಿ.ಎಸ್.ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆ- ಅಂತಿಮ ಅಂಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ದಿನಾಂಕ 03.10.2024 ರಂದು ನಡೆದ ಪಿ.ಎಸ್.ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ಅಂಕ ಪಟ್ಟಿಯನ್ನು ದಿನಾಂಕ 06.11.2024 ರಂದು ಪ್ರಕಟಿಸಿ, ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 09.11.2024 ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಲಾಗಿತ್ತು.


ನಿಗದಿತ ದಿನಾಂಕದೊಳಗೆ ಪತ್ರಿಕೆ-1 ಕ್ಕೆ 313 ಹಾಗೂ ಪತ್ರಿಕೆ-2 ಕ್ಕೆ 219 ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಪತ್ರಿಕೆ-1 ರ 1ನೇ ಮೌಲ್ಯಮಾಪನದ ಅಂಕಗಳು, 2ನೇ ಮೌಲ್ಯಮಾಪನದ ಅಂಕಗಳು ಮತ್ತು 3ನೇ ಮೌಲ್ಯಮಾಪನದ ಅಂಕಗಳು (1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚಿನ ಅಂಕಗಳ ವ್ಯತ್ಯಾಸವಿದ್ದ ಪತ್ರಿಕೆಗಳನ್ನು ಮಾತ್ರ 3ನೇ ಮೌಲ್ಯಮಾಪನ ಮಾಡಲಾಗಿರುತ್ತದೆ. ಇವುಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದು (ಮರು ಏಣಿಕೆ), ಈಗಾಗಲೇ ಈ ವಿದ್ಯಾರ್ಥಿಗಳು ಪಡೆದಿರುವುದಾಗಿ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ. ಆದ್ದರಿಂದ ಇವರ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶವಿರುವುದಿಲ್ಲವೆಂದು ತೀರ್ಮಾನಿಸಲಾಯಿತು.

-2 ಒ.ಎಮ್.ಆರ್ ಉತ್ತರ ಪತ್ರಿಕೆಯು ಅಂತಿಮ ಕೀ ಉತ್ತರಗಳೊಂದಿಗೆ ಮೌಲ್ಯಮಾಪನವಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿದ್ದು, ಈಗಾಗಲೇ ವಿದ್ಯಾರ್ಥಿಗಳು ಪಡೆದಿರುವುದಾಗಿ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ. ಆದ್ದರಿಂದ ಇವರ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶವಿರುವುದಿಲ್ಲವೆಂದು ತೀರ್ಮಾನಿಸಲಾಯಿತು.

ಅದರಂತೆ ದಿನಾಂಕ 03.10.2024 ರಂದು ನಡೆದ ಪರೀಕ್ಷೆಯಲ್ಲಿ ಪತ್ರಿಕೆ-1 ಮತ್ತು ಪತ್ರಿಕೆ-2 ರಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗಿದೆ ಮತ್ತು ಸದರಿ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಸಂಬಂಧಪಟ್ಟ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಸಂಬಂಧಪಟ್ಟ ಸಂಸ್ಥೆಯವರು ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸುವರು.


logoblog

Thanks for reading 402 PSI Final Marks 2024

Previous
« Prev Post

No comments:

Post a Comment