ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆಯನ್ನು ಇ.ಇ.ಡಿಎಸ್ ನಲ್ಲಿ ಇಂದೀಕರಿಸುವ ಬಗ್ಗೆ.
ಉಲ್ಲೇಖ:-1.ಮಾನ್ಯ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ
) ಬೆಂಗಳೂರು ಇವರ ಪತ್ರ ಸಂಖ್ಯೆ 23(5) .. ໖໖ 3 10/2024-25 20:22/10/2024 2.ಮಾನ್ಯ ಉಪನಿದೆರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಹಾಸನ ಜಿಲ್ಲೆ ಹಾಸನ ಪತ್ರ ಸಂಖ್ಯೆ ಸಿ1/ಪ್ರಾ.ಶಾ ಇ.ಇ.ಡಿ.ಎಸ್ ಶಿ ಮಾಹಿತಿ 65/2024-25 ໖:22/10/2024
ಮೇಲ್ಕಂಡ ವಿಷಯಕ್ಕೆ ಸಂಧಿಸಿದಂತೆ 2017 ಕ್ಕಿಂತ ಹಿಂದೆ ನೇಮಕವಾದ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆಯ ಮಾಹಿತಿಯನ್ನು ಉಲ್ಲೇಖ (1) &(2) ರಲ್ಲಿ ಎಲ್ಲಾ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳು ಪದವಿ ವಿದ್ಯಾರ್ಹತೆ ಹೊಂದಿದ್ದಲ್ಲ, ವಿದ್ಯಾರ್ಹತೆ ಕುರಿತಾದ ಪೂರ್ಣ ಮಾಹಿತಿಯನ್ನು ಇ.ಇ.ಡಿಎಸ್ ನಲ್ಲಿ ಅಂದರೆ ಯಾವ ಪದವಿ, ಪದವಿಯ ಅವಧಿ, ಪದವಿ ಪಡೆದ ವರ್ಷ ಯಾವ ವಿಶ್ವವಿದ್ಯಾಲಯದಿಂದ ಪಡೆದಿದೆ, ಅಭ್ಯಸಿಸಿರುವ ವಿಷಯದ ಮಾಹಿತಿ, ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇ.ಇ.ಡಿಎಸ್ ನಲ್ಲಿ ಇಂದೀಕರಿಸಲು ತಿಳಿಸಿದ್ದು, ಸದರಿ ಪದವಿ ಕುರಿತಾದ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಲು ತಿಳಿಸಿರುವುದರಿಂದ ದಿನಾಂಕ: 23/10/2024 ರಿಂದ ໖:25/10/2024 ថ ಪದವಿ ಕುರಿತಾದ ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ನ ಒಂದು ಪ್ರತಿ ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ನೀಡಿ ಕೂಡಲೆ ಇಂದೀಕರಿಸಿಕೊಳ್ಳಲು ತಿಳಿಸಿದೆ. ಹಾಗೂ ಶಾಲಾ ನಿರ್ವಹಣೆಗೆ ತೊಂದರೆಯಾಗದಂತೆ ಕ್ರಮವಹಿಸುವುದು.
ಮಾನ್ಯ ಪ್ರಾಥಮಿಕ ಶಿಕ್ಷಣದ ನಿರ್ದೇಶಕರ ಆದೇಶದಂತೆ ಎಲ್ಲಾ ಪದವಿ ಪಡೆದ ಶಿಕ್ಷಕರುಗಳು ತಮ್ಮ ಪದವಿಯನ್ನು EEDS ನಲ್ಲಿ ಮಾಹಿತಿಯನ್ನು ಭರ್ತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಅದರಂತೆ ಕ್ರಮ ಕೈಗೊಳ್ಳಲು ಎಲ್ಲಾ ಶಿಕ್ಷಕರುಗಳು ತಾವು ಪಡೆದ ಪದವಿ ಹಾಗೂ ಉನ್ನತ ವ್ಯಾಸಂಗದ ಮೂಲ ಅಂಕಪಟ್ಟಿಗಳನ್ನು ಹಾಗೂ ಒಂದು ಜೊತೆ ಜೆರಾಕ್ಸ್ ಪ್ರತಿಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು( ಮೂಲ ಪ್ರತಿಗಳನ್ನು ನೋಡಿ ವಾಪಸ್ ಕೊಡುತ್ತಾರೆ).
ನಿಮ್ಮ ನಿಮ್ಮ ವಿಷಯ ನಿರ್ವಾಹಕರುಗಳಿಗೆ ಖುದ್ದಾಗಿ ನೀಡುವುದು.*
ಇಲಾಖೆ ನೀಡಿರುವ ಅವಕಾಶವನ್ನು ಬಳಸಿಕೊಳ್ಳಲು ಕೋರಿದೆ. EEDS ನಲ್ಲಿ ಮಾಹಿತಿ ಭರ್ತಿ ಮಾಡಲು ಕೊನೆ ದಿನಾಂಕ 30/10/202ಆಗಿದೆ. ಶಿಕ್ಷಕರುಗಳೇ EEDS ನಲ್ಲಿ ಮಾಹಿತಿ ಭರ್ತಿ ಮಾಡಲು ಅವಕಾಶವಿರುವುದಿಲ್ಲ.
ಇಲಾಖೆ ಯವರು ಮಾಹಿತಿ ಭರ್ತಿ ಮಾಡಲು ಸಮಯ ಬೇಕಿರುವುದರಿಂದ ಆದಷ್ಟು ಬೇಗ ಸಲ್ಲಿಸಲು ಕೊರಿದೆ.ದಯವಿಟ್ಟು ಯಾವುದೇ ಪದವಿ ಪಡೆದ ಶಿಕ್ಷಕರು ಮಾಹಿತಿಯನ್ನು ನೀಡದಿದ್ದರೆ ಮುಂದಿನ ಬಡ್ತಿ ಹಾಗೂ ಮುಖ್ಯ ಶಿಕ್ಷಕರ ಭರ್ತಿ ಪ್ರೌಢಶಾಲಾ ಶಿಕ್ಷಕರ ಭಡ್ತಿ ಗೆ ಅವಕಾಶವನ್ನು ವಂಚಿತರಾಗುತೀರಿ.
ದಯವಿಟ್ಟು ಅವಕಾಶವನ್ನು ಬಳಸಿಕೊಂಡು ತಾವು ಪಡೆದಿರುವ ಪದವಿ ಹಾಗು ಇತರೆ ಉನ್ನತ ವ್ಯಾಸಂಗದ ಮಾಹಿತಿಯನ್ನು ಸಲ್ಲಿಸಲು ಕೋರಲಾಗಿದೆ.
No comments:
Post a Comment