ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿಯೇ ಎನ್‌ಡಿಎ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೊಳಿಸಲು ಅನುಮೋದನೆ ನೀಡಿದೆ. ಈ ಯೋಜನೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಸರ್ಕಾರ ಹೇಳಿದೆ.
ಏಪ್ರಿಲ್ 1, 2025ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಅಥವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆ (ಒಪಿಎಸ್)ಗಾಗಿ ಪಟ್ಟು ಹಿಡಿದಿದ್ದಾರೆ.
ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರ ಒಪಿಎಸ್ ಮರು ಜಾರಿಗೊಳಿರುವ ರಾಜ್ಯಗಳಲ್ಲಿ ಅದನ್ನು ಹೇಗೆ ಜಾರಿಗೊಳಿಸಲಾಗಿದೆ? ಎಂದು ಪರಿಶೀಲಿಸಿ ವರದಿ ನೀಡಲು, ಸಮಿತಿಯನ್ನು ರಚಿಸಿದೆ.
ಯುಪಿಎಸ್ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, "ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯುಪಿಎಸ್ ಪಿಂಚಣಿ ಯೋಜನೆ ಜಾರಿಗೆ ತೆಗೆದುಕೊಂಡಿರುವ ತೀರ್ಮಾನ ತೃಪ್ತಿಕರವಾಗಿಲ್ಲ. ಸರ್ಕಾರವು ಮತ್ತೊಮ್ಮೆ ಪರಿಶೀಲಿಸಲಿ. ಶೇ 100ರಷ್ಟು ಪಿಂಚಣಿ ನೀಡುವ ತೀರ್ಮಾನ ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಎನ್‌ಪಿಎಸ್, ಯುಪಿಎಸ್ ಮತ್ತು ಒಪಿಎಸ್ ನಡುವೆ ಇರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿದೆ. ಅವುಗಳನ್ನು ಸರ್ಕಾರಿ ನೌಕರರ ಮಾಹಿತಿಗಾಗಿ ಬಿಡುಗಡೆ ಮಾಡಿದೆ.
3 ಪಿಂಚಣಿ ಯೋಜನೆಯ ವ್ಯತ್ಯಾಸಗಳು
ಕ್ರಮ
ಸಂಖ್ಯೆ ಹಳೆ ಪಿಂಚಣಿ ಯೋಜನೆ
(ಒಪಿಎಸ್) ರಾಷ್ಟ್ರೀಯ ಪಿಂಚಣಿ ಯೋಜನೆ
(ಎನ್‌ಪಿಎಸ್) ಏಕೀಕೃತ ಪಿಂಚಣಿ ಯೋಜನೆ
(ಯುಪಿಎಸ್)
1 * ನೌಕರರ ವೇತನದಿಂದ ಯಾವ ಹಣ ಕಡಿತವಿಲ್ಲ * ನೌಕರರ ಪಾಲು ಶೇ 10 ಮತ್ತು ಸರ್ಕಾರದ ಪಾಲು ಶೇ 14 * ನೌಕರರ ಪಾಲು ಶೇ 10, ಸರ್ಕಾರದ ಪಾಲು ಶೇ 18
2 * ಸರ್ಕಾರವೇ ಎಲ್ಲಾ ವೆಚ್ಚ ಪಾವತಿ ಮಾಡುತ್ತದೆ * ಷೇರು ಮಾರುಕಟ್ಟೆ, ಇತರೆಡೆ ಪಿಂಚಣಿ ನಿಧಿ ಹೂಡಿಕೆ * ಕಡೆಯ ವೇತನದ ಶೇ 50ರಷ್ಟು ಪಿಂಚಣಿ ಖಾತರಿ
3 * ಕಡೆಯ ವೇತನದ ಶೇ 50ರಷ್ಟು ಪಿಂಚಣಿ ಖಚಿತ * ಎಲ್ಲಿ ಎಷ್ಟು ಹೂಡಿಕೆ ಎಂಬುದರ ಮೇಲೆ ಪಿಂಚಣಿ ಹಣ * ಉದ್ಯೋಗಿ ನಿಧನವಾದರೆ ಕುಟುಂಬಕ್ಕೆ 60% ಪಿಂಚಣಿ
4 * ಈ ಪಿಂಚಣಿ ಹಣಕ್ಕೆ ಯಾವುದೇ ತೆರಿಗೆ ಇಲ್ಲ * ಪಿಂಚಣಿ ಹೆಚ್ಚಾಗಬಹುದು ಅಥವ ಕಡಿಮೆಯೂ ಆಗಬಹುದು * 2024ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯ
5 * ಯೋಜನೆ ಸರ್ಕಾರಿ ನೌಕರರಿಗೆ ಮಾತ್ರ * ಸರ್ಕಾರದ ಜೊತೆ ಖಾಸಗಿ ನೌಕರರಿಗೂ ಅವಕಾಶ * ಕೇಂದ್ರ ನೌಕರರಿಗೆ ಜಾರಿ, ರಾಜ್ಯಗಳಲ್ಲೂ ಲಭ್ಯ

No comments:
Post a Comment