ನಮ್ಮ ಭಾಷೆ
ಅಭ್ಯಾಸ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಭಾಷೆ ಯಾವುದಕ್ಕೆ ಸಾಧನವಾಗಿದೆ?
ಉತ್ತರ:- ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಸಾಧನವಾಗಿದೆ.
2. ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಬೇತು ಕೊಡುತ್ತವೆ?
ಉತ್ತರ:-ಪ್ರಾಣಿಗಳು ತಮ್ಮ ಮಕ್ಕಳಿಗೆ ಚಲನವಲನಗಳ ವಿಷಯವಾಗಿ, ಆಹಾರ ವಿಚಾರಗಳ ವಿಚಾರವಾಗಿ ತರಬೇತು ಕೊಡುತ್ತವೆ.
3. ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು?
ಉತ್ತರ:- ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದನೋ ಅಂದಿನಿಂದ ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು.
4. ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು?
ಉತ್ತರ:- ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ನಯಸೇನ.
5. ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು?
ಉತ್ತರ:- ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಬಂದವು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
ಉತ್ತರ:- ವ್ಯಾವಹಾರಿಕವೆಂದರೆ ಜೀವದ್ಭಾಷೆ. ಅದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಕನ್ನಡ, ತಮಿಳು, ತೆಲುಗು, ತುಳು, ಮರಾಠಿ, ಉರ್ದು, ಇಂಗ್ಲಿಷ್ ಇದಕ್ಕೆ ಉದಾಹರಣೆಗಳಾಗಿವೆ. ಗ್ರಾಂಥಿಕವೆಂದರೆ ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ. ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ, ಇತ್ಯಾದಿ ಈ ವರ್ಗಕ್ಕೆ ಉದಾಹರಣೆಗಳಾಗಿವೆ.
2. ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ?
ಉತ್ತರ:- ಪ್ರಾಕ್ತನ ವಿಮರ್ಶಕ ಸುಮರ್ (sumer) ನೈಲ್ (ಈಜಿಪ್), ಕಿಟಗಿರಿ (crete) ಇತ್ಯಾದಿ ಪ್ರದೇಶಗಳಲ್ಲಿ ಉಪಲಬ್ಧವಾದ ಅತ್ಯಂತ ಪುರಾತನ ಅವಶೇಷಗಳಲ್ಲಿ ವ್ಯಾಪಾರ, ವ್ಯವಹಾರ ಲೆಕ್ಕಗಳಿಗೆ ಸಂಬಂಧಿಸಿದ ಲಿಪಿ ಸಾಕ್ಷ್ಯಗಳನ್ನು ಕಂಡುಕೊಂಡಿದ್ದಾರೆ. ಇದೇ ಲಿಪಿಯ ಮೊದಲಿನ ಜಾಡು.
3. ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು?
ಉತ್ತರ:- ಲೆಕ್ಕಪತ್ರಗಳನ್ನು ಇಡಲು ಉಪಯುಕ್ತವಾದ ಮೂಲಲಿಪಿಯನ್ನು ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡ. ಆ ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಹೀಗೆ ಭದ್ರವಾಯಿತು.
4. ಕನ್ನಡ ಭಾಷೆ ಹದಗೊಂಡದ್ದು ಹೇಗೆ?
ಉತ್ತರ:- ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದ- ಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು, ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸಶ್ರೇಷ್ಠರು ಸುಲಭ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡಿತು.
5. ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವೇನು?
ಉತ್ತರ:- ದೇಶ-ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ತನ್ಮೂಲಕ ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು, ಅರಳಿಸಿದರು. ಎಲ್ಲಕ್ಕೂ ಮೇಲಾಗಿ ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ, ವಿಚಾರ ಮುಂತಾದುವನ್ನು ಆ ಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ಆಂಗ್ಲ ವಿಜ್ಞಾನಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಆ ಭಾಷೆ ಬೆಳೆದು ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ ಒಂದಾಗಿ ಆಂಗ್ಲ ಭಾಷೆ ವಿಶ್ವವ್ಯಾಪಿಯಾಗಲು ಕಾರಣವಾಯಿತು.
ಸಂದರ್ಭ: ಜ್ಞಾನ ಭಂಡಾರ ಭದ್ರವಾದ ಸಂಗತಿಯನ್ನು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಕಾಣುತ್ತೇವೆ.
ವಿವರಣೆ: ಲೆಕ್ಕಪತ್ರಗಳನ್ನು ಇಡಲು ಉಪಯುಕ್ತವಾದ ಮೂಲಲಿಪಿಯನ್ನು ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡ. ಆ ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಹೀಗೆ ಭದ್ರವಾಯಿತು. ಸಂಸ್ಕೃತಿಯ ಇತಿಹಾಸ ಉಳಿಯಿತು, ಪ್ರಗತಿಪಥ ಸುಗಮವಾಯಿತು ಎಂದು ಲೇಖಕರು ವಿವರಿಸಿದ್ದಾರೆ.
ಸ್ವಾರಸ್ಯ: ಸಂಸ್ಕೃತಿಯ ಇತಿಹಾಸ ಉಳಿದಿದ್ದರಿಂದಲೇ ಪ್ರಗತಿಪಥ ಸುಗಮವಾಯಿತು ಎನ್ನುವ ಅಂಶವನ್ನು ಇಲ್ಲಿ ಗಮನಿಸಬಹದಾಗಿದೆ.
2. “ತಕ್ಕುದೆ ಬೆರಸ ಧೃತಮುಮಂ ತೈಲಮುಮಂ”
ಉತ್ತರ:- ಆಯ್ಕೆ: ಪ್ರಸ್ತುತ ಸಾಲನ್ನು ಎಂ. ಮರಿಯಪ್ಪಭಟ್ಟ ಅವರು ರಚಿಸಿದ, ‘ನಮ್ಮ ಭಾಷೆ’ ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ:- ಕನ್ನಡಕ್ಕಾದ ಹೀನ ಪರಿಸ್ಥಿತಿಯನ್ನು ನಯಸೇನ ವಿವರಿಸುವ ಸಂದರ್ಭದಲ್ಲಿ ಈ ಸಾಲನ್ನು ಬಳಸಿಕೊಂಡಿದ್ದಾನೆ.
ವಿವರಣೆ: ವೈದಿಕ ಹಾಗೂ ಜೈನ ಧಾರ್ಮಿಕ ತತ್ವಗಳನ್ನು ಕನ್ನಡದಲ್ಲಿ ಬರೆಯಬೇಕೆನ್ನುವ ಅಭಿಲಾಷೆಯಿಂದ ಅನೇಕ ಪಂಡಿತರು ಅನೇಕ ಕಾವ್ಯಗಳನ್ನು ರಚಿಸಿದರು. ಆದರೆ ಅವರಲ್ಲಿ ಕನ್ನಡವನ್ನು ಸಂಸ್ಕೃತಮಯವನ್ನಾಗಿ ಮಾಡಿದರು. ಕನ್ನಡ ಮಾತ್ರ ತಿಳಿದವರಿಗೆ ಇದು ಕಬ್ಬಿಣದ ಕಡಲೆಯೇ ಆಯಿತು. ಅವರ ಉದ್ದುದ್ದ ವಾಕ್ಯಗಳಲ್ಲಿ ఎల్ల ಸಂಸ್ಕೃತ ಶಬ್ದಗಳೇ; ಈ ಪರಿಸ್ಥಿತಿಯನ್ನು ಗಮನಿಸಿದ 12ನೆಯ ಶತಮಾನದ ನಯಸೇನ ಕವಿ ಮೇಲಿನ ವಾಕ್ಯದಂತೆ ಹಲುಬಿದನು.
ಸ್ವಾರಸ್ಯ: ಮೇಲಿನ ಸಾಲಿನ ಮೂಲಕ ಕನ್ನಡಕ್ಕಾದ ಹೀನ ಪರಿಸ್ಥಿತಿಯನ್ನು ಕಾಣಬಹುದಾಗಿದೆ.
3. “ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ”
ಉತ್ತರ: ಆಯ್ಕೆ: ಪ್ರಸ್ತುತ ಸಾಲನ್ನು ಎಂ. ಮರಿಯಪ್ಪಭಟ್ಟ ಅವರು ರಚಿಸಿದ, ‘ನಮ್ಮ ಭಾಷೆ’ ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ:- ಕನ್ನಡ ಭಾಷೆಯ ಸುಲಭತೆಯನ್ನು ವಿವರಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಕಾಣಬಹುದಾಗಿದೆ.
ವಿವರಣೆ:- ಎಷ್ಟೋ ಕವಿಗಳು ತಮ್ಮ ತಮ್ಮ ಅನುಭವಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡುದರಿಂದ ಅದು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಕವಿ ಮಹಲಿಂಗರಂಗ ಉದ್ರೋಷಿಸಲು ಸಾಧ್ಯವಾಯಿತು ಎಂದು ಲೇಖಕರು ವಿವರಿಸಿದ್ದಾರೆ.
ಸ್ವಾರಸ್ಯ:- ಮೇಲಿನ ವಾಕ್ಯದ ಮೂಲಕ ಕನ್ನಡ ಭಾಷೆಯ ವಿಶೇಷತೆಯನ್ನು ತಿಳಿಯುತ್ತೇವೆ.
4. “ಒಬ್ಬ ತಾಯಿಯ ಗಾನದ ಶ್ರುತಿಯಂತೆ”
ಉತ್ತರ: ಆಯ್ಕೆ: ಪ್ರಸ್ತುತ ಸಾಲನ್ನು ಎಂ. ಮರಿಯಪ್ಪಭಟ್ಟ ಅವರು ರಚಿಸಿದ. ‘ನಮ್ಮ ಭಾಷೆ’ ಎನ್ನುವ ಗದ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ:-ಕನ್ನಡ ಭಾಷೆಯ ಕುರಿತು ವಿವರಿಸುವ ಸಂರ್ಭದಲ್ಲಿ ಈ ವಾಕ್ಯವನ್ನು ಕಾಣುತ್ತೇವೆ.
ವಿವರಣೆ:- ಎಲ್ಲ ಭಾಷೆಗಳೂ ಅಷ್ಟೇ. ಒಬ್ಬ ತಾಯಿಯ ಗಾನದ ಶ್ರುತಿಯಂತೆ ಎಲ್ಲಕ್ಕೂ ಅಷ್ಟೇ ಸ್ಥಾನವಿದೆ. ಇದನ್ನರಿತು ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ, ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳಿಸಿದರೆ ದೇಶದ ಸಂಸ್ಕೃತಿ ಮುಂದುವರಿಯುತ್ತದೆ.
ಸ್ವಾರಸ್ಯ: ಮೇಲಿನ ವಾಕ್ಯದ ಮೂಲಕ ಲೇಖಕರು ಎಲ್ಲ ಭಾಷೆಗಳನ್ನು ಗೌರವಿಸಿಬೇಕೆಂದು ತಿಳಿಸಿದ್ದಾರೆ.
ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1. ಭಾಷೆ ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ ವ್ಯಕ್ತಿ ಜಂತುವೇ ಸರಿ.
2. ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ ದೊರೆಯುತ್ತಾ ಬಂದಿದೆ.
3. ಕನ್ನಡ ಗ್ರಾಂಥಿಕ ಭಾಷಾ ವರ್ಗಕ್ಕೆ ಸೇರಿದೆ.
4. ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದುಬಿಟ್ಟಿವೆ.
5. ‘ನಮ್ಮ ಭಾಷೆ’ ಗದ್ಯ ಭಾಗದ ಆಕರ ಗ್ರಂಥ ಕನ್ನಡ ಸಂಸ್ಕೃತಿ.
ಊ) ಹೊಂದಿಸಿ ಬರೆಯಿರಿ:
1. ವ್ಯಾವಹಾರಿಕ ಅನ್ಯದೇಶ
2. ದಾಸರು ಚಾಕ್ಷುಷ
3. ದಿವಾನ ಕೀರ್ತನೆಗಳು
4.ಗ್ರಾಂಥಿಕ ರೂಪ ತದ್ಭವರೂಪ
5. ಶಿವಶರಣರು ವಚನಗಳು
ಶ್ರವಣ
ಉತ್ತರಗಳು:-
1.ಚಾಕ್ಷುಷ
2.ಕೀರ್ತನೆಗಳು
3. ಅನ್ಯದೇಶ
4. ತದ್ಭವರೂಪ
5. ವಚನಗಳು
ಪ್ರಾಯೋಗಿಕ ಅಭ್ಯಾಸ
ಅ. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ
ವಿಚಾರವಿನಿಮಯ = ನಾವು ವಿಚಾರವಿನಿಮಯ ಮಾಡಿ ಅನೇಕ ವಿಷಯಗಳನ್ನು ತಿಳಿಯುತ್ತವೆ.
ಸಂಶೋಧಕ = ನಮ್ಮ ದೇಶ ಅನೇಕ ಶ್ರೇಷ್ಠ ಸಂಶೋಧಕರನ್ನು ಹೊಂದಿದೆ.
ಪರಿಷ್ಕರಿಸು = ಈ ವರ್ಷ ಪಠ್ಯಪುಸ್ತಕ ಪರಿಷ್ಕರಿಸುತ್ತಾರೆ.
ಪ್ರಗತಿಪಥ = ನಮ್ಮ ದೇಶ ಪ್ರಗತಿಪಥದತ್ತ ಸಾಗಲು ನಾವು ನಮ್ಮ ಸೇವೆ ನೀಡಬೇಕು.
ಆ. ಕೊಟ್ಟಿರುವ ಕನ್ನಡರೂಪಗಳ ಮೂಲರೂಪ ಬರೆಯಿರಿ.
ಹೋಟ್ಲು = ಹೋಟೇಲು
ಇಸ್ಕೂಲು = ಶಾಲೆ
ಆಫೀಸು = ಕಚೇರಿ
ಲೈಟು = ವಿದ್ಯುತ್ ದೀಪ
ಹಾಸ್ಪಿಟಲು = ಆಸ್ಪತ್ರೆ
ಭಾಷಾ ಚಟುವಟಿಕೆ
1. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ:
ಕಾರ್ಯ, ಕತ್ತಲೆ, ಇಲ್ಲ, ಶಸ್ತ್ರ ಸ್ಫೋಟಿಸು, ಎಚ್ಚರ, ಕಣ್ಣಿಗೆ, ಅದ್ಭುತ, ಡಾಕ್ಟರ್, ಬಟ್ಟೆ.
ಉತ್ತರ:- ವಿಜಾತೀಯ ಸಂಯುಕ್ತಾಕ್ಷರಗಳು:
ಕಾರ್ಯ, ಶಸ್ತ್ರ, ಸ್ಫೋಟಿಸು, ಅದ್ಭುತ, ಡಾಕ್ಟರ್, ಬಟ್ಟೆ.
2. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.
ಸಮನಾಗಿ, ದೇಶ,ರೋದನ ,ಬಳಿಕ, ನೆಲ, ಮದುವೆ ,ಮಾನುಷ, ಹೊತ್ತು, ಒಳಗೆ
ಉತ್ತರ:
ಸಮನಾಗಿ- ಸ
ದೇಶ –ಶ
ಮನೆಯ – ಯ
ರೋದನ –ರ
ಬಳಿಕ –ಳ
ನೆಲ –ಲ
ಮದುವೆ – ವ
ಮಾನುಷ –ಷ
ಹೊತ್ತು – ಹ
ಒಳಗೆ –ಳ
3. ಕೊಟ್ಟಿರುವ ಪದಗಳಲ್ಲಿನ ಧ್ವನಿ ವ್ಯತ್ಯಾಸದೊಂದಿಗೆ ಆಗುವ ಅರ್ಥ ವ್ಯತ್ಯಾಸ ಅರಿಯಿರಿ:
ಪ್ರದಾನ > ಪ್ರಧಾನ, ಮದ್ಯ > ಮಧ್ಯ, ಹುಣ್ಣು > ಉಣ್ಣು, ಸುಳಿ > ಸುಲಿ.
1) ಪ್ರದಾನ > ಪ್ರಧಾನ :
ಪ್ರದಾನ = ನೀಡುವುದು, ಕೊಡುವುದು, ಒಪ್ಪಿಸುವುದು.
ಪ್ರಧಾನ = ಮುಖ್ಯವಾದುದು, ಪ್ರಮುಖವಾದುದು
2) ಮದ್ಯ > ಮಧ್ಯ :
ಮದ್ಯ = ಸರಾಯಿ, ಹೆಂಡ, ಮಾದಕ ದ್ರವ್ಯ.
ಮಧ್ಯ = ನಡುವಣ ಜಾಗ. ಕೇಂದ್ರ,
3) ಹುಣ್ಣು > ಉಣ್ಣು :
ಹುಣ್ಣು = ವ್ರಣ, ಗಾಯ, ಬೊಕ್ಕೆ.
ಉಣ್ಣು = ತಿನ್ನು, ಸೇವಿಸು.
4) ಸುಳಿ > ಸುಲಿ.
ಸುಳಿ = ಚಕ್ರಾಕಾರವಾಗಿ ಸುತ್ತು, ತಿರುಗಣೆ
ಸುಲಿ = ಸಿಪ್ಪೆ ತೆಗೆಬಿ,ಬಿಡಿಸು; ಲೂಟಿಮಾಡು.
4. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.
ಅ ) ಕ್ ಗ್ : ಅಲ್ಪಪ್ರಾಣಾಕ್ಷರಗಳು :: ಛ ಝ್ : ಮಹಾಪ್ರಾಣಗಳು.
ಆ) ವರ್ಗೀಯ ವ್ಯಂಜನಾಕ್ಷರಗಳು 25 :: ಅವರ್ಗಿಯ ವ್ಯಂಜನಾಕ್ಷರಗಳು :9
ಇ) ಆ, ಈ, ಊ : ದೀರ್ಘಸ್ವರಗಳು : : ಅ ಇ ಉ ಋ : ಹೃಸ್ವಸ್ವರಗಳು.
ಈ) ಸ್ವರಗಳು : 13 : :ಯೋಗವಾಹಗಳು : ಎರಡು.
5. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ.
1. ರಾಷ್ಟ್ರೀಯ ಹಬ್ಬಗಳ ಮಹತ್ವ
2. ಗ್ರಂಥಾಲಯಗಳ ಮಹತ್ವ.
3. ಸಾಮಾಜಿಕ ಪಿಡುಗುಗಳು.
1. ರಾಷ್ಟ್ರೀಯ ಹಬ್ಬಗಳ ಮಹತ್ವ
1. ರಾಷ್ಟ್ರೀಯ ಹಬ್ಬಗಳ ಮಹತ್ವ
ಉತ್ತರ:
ಭಾರತೀಯ ರಾಷ್ಟ್ರೀಯ ಹಬ್ಬಗಳ ಮಹತ್ವವು ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಅಪಾರವಾಗಿದೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಮತ್ತು ಗಾಂಧಿ ಜಯಂತಿ ಸೇರಿದಂತೆ ಇವುಗಳು ಕೇವಲ ಸಾರ್ವಜನಿಕ ರಜಾದಿನಗಳಲ್ಲ. ಇವು ಭಾರತದ ಸಮೃದ್ಧ ಇತಿಹಾಸ, ಸ್ವಾತಂತ್ರ್ಯ ಹೋರಾಟ, ಸಂವಿಧಾನದ ಮೌಲ್ಯಗಳನ್ನು ನೆನಪಿಸುವ ಶಕ್ತಿಯುತ ಸಂದೇಶವಿರುತ್ತವೆ. ಈ ಹಬ್ಬಗಳನ್ನು ಆಚರಿಸುವುದರಿಂದ ರಾಷ್ಟ್ರೀಯ ಏಕತೆ, ದೇಶಭಕ್ತಿ ಬೆಳೆಸುವುದು, ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಒದಗಿಸುವ ವೇದಿಕೆ ಒದಗಿಸುತ್ತದೆ.
ಸ್ವಾತಂತ್ರ್ಯ ದಿನ, ಆಗಸ್ಟ್ 15ರಂದು, 1947ರಲ್ಲಿ ಬ್ರಿಟಿಷ್ ವಸಾಹತುಶಾಹಿಯ ಅಂತ್ಯವನ್ನು ಮತ್ತು ಸ್ವಾಯತ್ತ ರಾಷ್ಟ್ರದ ಹುಟ್ಟನ್ನು ಗುರುತಿಸುತ್ತದೆ. ಇದು ದೇಶದ ಉಲ್ಲಾಸ ಮತ್ತು ಪರಾಮರ್ಶೆಯ ದಿನವಾಗಿದ್ದು, ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುತ್ತದೆ. ಈ ದಿನವನ್ನು ರಾಷ್ಟ್ರದಾದ್ಯಂತ ಧ್ವಜಾರೋಹಣ ಸಮಾರಂಭಗಳು, ಪರೇಡ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ದೆಹಲಿಯ ರೆಡ್ ಫೋರ್ಟ್‌ನಲ್ಲಿ ಪ್ರಧಾನ ಮಂತ್ರಿಯವರ ಭಾಷಣ ಪ್ರಮುಖ ಘಟನೆವಾಗಿದ್ದು, ಸಾಧನೆಗಳನ್ನು ಹೊಗಳಿ, ಮುಂದಿನ ಮಾರ್ಗವನ್ನು ವಿವರಿಸುತ್ತಾರೆ. ಈ ದಿನವು ಸ್ವಾತಂತ್ರ್ಯ ಸ್ಫೂರ್ತಿಯನ್ನು ಬಲಪಡಿಸುವುದು ಹಾಗೂ ನಾಗರಿಕರನ್ನು ರಾಷ್ಟ್ರದ ಪ್ರಗತಿಗೆ ಹೋರಾಟ ಮಾಡುವಂತೆ ಪ್ರೇರೇಪಿಸುತ್ತದೆ.
ಗಣರಾಜ್ಯೋತ್ಸವ, ಜನವರಿ 26ರಂದು, 1950ರಲ್ಲಿ ಭಾರತೀಯ ಸಂವಿಧಾನದ ಅಂಗೀಕಾರವನ್ನು ಸ್ಮರಿಸುತ್ತದೆ. ಈ ದಿನವು ಭಾರತವನ್ನು ಗಣರಾಜ್ಯವನ್ನಾಗಿ ಸ್ಥಾಪಿಸುತ್ತಿದ್ದು, ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ದೇಶವನ್ನು ನೆಡಸಲಾಗುವುದು ಎಂದು ಖಚಿತಪಡಿಸುತ್ತದೆ. ದೆಹಲಿಯ ರಾಜಪಥದಲ್ಲಿ ನಡೆಯುವ ಅದ್ದೂರಿ ಪಥಸಂಚಲನವು ಭಾರತದ ಸೈನಿಕ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ, ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಗಳನ್ನು ಪ್ರದರ್ಶಿಸುತ್ತದೆ. ಇದು ಪ್ರಜಾಪ್ರಭುತ್ವದ ತತ್ವಗಳು ಮತ್ತು ರಾಷ್ಟ್ರದ ಮುನ್ನೆಡಸಲು ಬೇಕಾದ ಮೌಲ್ಯಗಳನ್ನು ಆಚರಿಸುವ ದಿನವಾಗಿದೆ. ಈ ಸಂದರ್ಭದಲ್ಲಿ ಸೈನಿಕರು ಹಾಗೂ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ ನಾಗರಿಕರನ್ನು ಗೌರವಿಸುವ ಅವಕಾಶವೂ ಆಗಿದೆ.
ಗಾಂಧಿ ಜಯಂತಿ, ಅಕ್ಟೋಬರ್ 2ರಂದು, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಗೌರವಿಸುತ್ತದೆ. ಗಾಂಧಿಯವರ ಅಹಿಂಸೆ, ಸತ್ಯ, ಶಾಂತಿಪೂರ್ಣ ಹೋರಾಟದ ತತ್ವಗಳು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಸಾಧನೆಯಾಗಿದ್ದು, ಇಡೀ ಜಗತ್ತಿನ ನ್ಯಾಯ ಮತ್ತು ಸಮಾನತೆಯ ಚಲನೆಗಳಿಗೆ ಸ್ಫೂರ್ತಿಯಾಗಿದೆ. ಈ ದಿನವನ್ನು ಪ್ರಾರ್ಥನಾ ಸೇವೆಗಳು, ನಮನಗಳು, ಮತ್ತು ಗಾಂಧಿಯವರ ಮೌಲ್ಯಗಳನ್ನು ಪ್ರಚಾರ ಮಾಡುವ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಇದು ಸರಳತೆ, ವಿನಯ, ಮತ್ತು ಮಾನವ ಸೇವೆಯ ತತ್ವಗಳನ್ನು ಪುನಃ ಒಪ್ಪಿಕೊಳ್ಳುವ ಸಮಯವಾಗಿದೆ.
ಈ ರಾಷ್ಟ್ರೀಯ ಹಬ್ಬಗಳು ಭಾರತದ ವೈವಿಧ್ಯಮಯ ಜನಸಂಖ್ಯೆಗೆ ಏಕತೆ ಮತ್ತು ನಾವೆಲ್ಲ ಒಂದೇ ಎನ್ನುವ ಬಾವನೆಯನ್ನು ಬೆಳಸುವಲ್ಲಿ ಮುಖ್ಯಭಾಗವಹಿಸುತ್ತವೆ. ಧರ್ಮ, ಭಾಷೆ, ಮತ್ತು ಸಂಸ್ಕೃತಿಯ ವಿಭಿನ್ನತೆಯನ್ನು ಹೊಂದಿರುವ ದೇಶದಲ್ಲಿ, ಈ ಹಬ್ಬಗಳು ಸಾಮಾನ್ಯ ನೆಲೆಯನ್ನು ಒದಗಿಸುತ್ತವೆ. ಇವು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂತರವನ್ನು ಕಡಿಮೆಮಾಡಿ, ಜನರನ್ನು ರಾಷ್ಟ್ರೀಯ ಹೆಮ್ಮೆ ಮತ್ತು ಸಂಯುಕ್ತ ಸ್ಮೃತಿಗಳ ಹಬ್ಬದಲ್ಲಿ ಒಗ್ಗೂಡಿಸುತ್ತವೆ.
ತುಂಬಾ ಹಬ್ಬಗಳು ಮುಂದಿನ ಪೀಳಿಗೆಗೆ ದೇಶದ ಇತಿಹಾಸ ಮತ್ತು ಅದರ ಮೌಲ್ಯಗಳ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶಾಲೆಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳನ್ನು ಈ ದಿನಗಳ ಮಹತ್ವವನ್ನು ತಿಳಿಸುವುದಕ್ಕಾಗಿ ಪ್ರಬಂಧ ಸ್ಪರ್ಧೆಗಳು, ವಾದ-ವಿವಾದಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಆಯೋಜಿಸುತ್ತವೆ. ಇದು ಯುವಜನತೆಗೆ ಜವಾಬ್ದಾರಿ ಮತ್ತು ನಾಗರಿಕತೆಯ ಭಾವನೆಯನ್ನು ಬೆಳೆಸುತ್ತದೆ, ಅವರ ಪೂರ್ವಜರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವಂತೆ ಖಚಿತಪಡಿಸುತ್ತದೆ.
ಭಾರತೀಯ ರಾಷ್ಟ್ರೀಯ ಹಬ್ಬಗಳು ಕೇವಲ ಹಬ್ಬಗಳಲ್ಲ, ಅವು ದೇಶದ ಪರಂಪರೆಯನ್ನು ಕಾಪಾಡುವುದು, ರಾಷ್ಟ್ರೀಯ ಏಕತೆವನ್ನು ಉತ್ತೇಜಿಸುವುದು, ಮತ್ತು ದೇಶಭಕ್ತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು ಅತ್ಯವಶ್ಯ. ಇವು ದೇಶದ ನಾಗರಿಕರಿಗೆ ಅವರ ಹೋರಾಟದ ಪರಂಪರೆಯನ್ನು ಮತ್ತು ದೇಶವನ್ನು ಮಾರ್ಗದರ್ಶಿಸುವ ತತ್ವಗಳನ್ನು ನೆನಪಿಸುತ್ತವೆ. ಈ ಹಬ್ಬಗಳನ್ನು ಆಚರಿಸುವ ಮೂಲಕ ಭಾರತ ತನ್ನ ಇತಿಹಾಸವನ್ನು ಗೌರವಿಸುತ್ತಿದ್ದು, ವೈವಿಧ್ಯಮಯ ಸಮಾಜವನ್ನು ಬಲಪಡಿಸುತ್ತದೆ.
ಹೆಚ್ಚಿಸುತ್ತವೆ. ಇವುಗಳು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನಿರ್ಬಂಧವಿಲ್ಲದ ಪ್ರವೇಶವನ್ನು ಒದಗಿಸುತ್ತವೆ, ಇದು ಸಂಶೋಧನೆ ಮತ್ತು ಅಧ್ಯಯನದ ನೈತಿಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಗ್ರಂಥಾಲಯವು ಮಾನವೀಯ ಮೌಲ್ಯಗಳನ್ನು ಮತ್ತು ವಸ್ತುನಿಷ್ಠ ಚಿಂತನೆಗೆ ಉತ್ತೇಜನ ನೀಡುತ್ತದೆ. ಒಬ್ಬರ ಒತ್ತಡ ಮತ್ತು ಹೊಣೆಗಾರಿಕೆಯಿಂದ ಮುಕ್ತವಾಗಿರುವ ಸ್ಥಳದಲ್ಲಿ ಪುಸ್ತಕಗಳನ್ನು ಓದುವ ಮೂಲಕ ಜನರು ಅವರ ಕಲ್ಪನೆಶಕ್ತಿ ಮತ್ತು ಸಂವೇದನೆಗಳನ್ನು ವಿಸ್ತರಿಸಬಹುದು. ಗ್ರಂಥಾಲಯವು ಸಹೃದಯತೆ, ಸಹಾನುಭೂತಿ, ಮತ್ತು ಸಮಾನತೆಯ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.
ಗ್ರಂಥಾಲಯವು ಜ್ಞಾನಕ್ಕೆ ಪ್ರವೇಶದ ದ್ವಾರವಾಗಿದೆ. ಇದು ಶಿಕ್ಷಣ, ಸಂಶೋಧನೆ, ಮತ್ತು ಸಾಂಸ್ಕೃತಿಕ ವೃದ್ಧಿಗೆ ಅತ್ಯಂತ ಮುಖ್ಯವಾಗಿದೆ. ಗ್ರಂಥಾಲಯವು ಎಲ್ಲರಿಗೂ ಲಭ್ಯವಾಗುವ ಸಂಪನ್ಮೂಲವಾಗಿದ್ದು, ಅಧ್ಯಯನ, ಸಂಶೋಧನೆ, ಮತ್ತು ವೈಯಕ್ತಿಕ ವಿಕಾಸವನ್ನು ಉತ್ತೇಜಿಸುತ್ತದೆ. ಡಿಜಿಟಲ್ ವಯಸ್ಸಿನಲ್ಲಿಯೂ, ಗ್ರಂಥಾಲಯದ ಪ್ರಸ್ತುತತೆ ಮತ್ತು ಮಹತ್ವವು ಆಧುನಿಕ ತಂತ್ರಜ್ಞಾನಗಳೊಂದಿಗೆ ಹೊಂದಾಣಿಕೆಯಾಗುವುದರ ಮೂಲಕ ಬೆಳೆಯುತ್ತಿದೆ. ಇದು ಜನರಿಗೆ ಶಿಕ್ಷಣ, ಜ್ಞಾನ, ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.
ಮೇಲ್ವಿಚಾರಣೆಯನ್ನು ನಡೆಸಬೇಕು. ಶಿಕ್ಷಣ, ಜಾಗೃತಿ, ಮತ್ತು ಆರ್ಥಿಕ ಸಮಾನತೆಯನ್ನು ಒದಗಿಸುವ ಮೂಲಕ, ನಾವು ಈ ಪಿಡುಗುಗಳನ್ನು ನಿವಾರಿಸಬಹುದು.
ಬಡತನ, ಅನಕ್ಷರತೆ, ಲಿಂಗಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಮುಂತಾದ ಸಾಮಾಜಿಕ ದೋಷಗಳು, ಸಮಾಜದ ಪ್ರಗತಿಗೆ ದೊಡ್ಡ ಅಡ್ಡಿ ಆಗಿವೆ. ಇವುಗಳನ್ನು ನಿವಾರಿಸುವುದು ನಮ್ಮ ಎಲ್ಲರ ಜವಾಬ್ದಾರಿ. ಸಮಾನತೆ, ನ್ಯಾಯ, ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ, ನಾವು ಸಮೃದ್ಧ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸಬಹುದು.



No comments:
Post a Comment