2023-24ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-01ರ ಫಲಿತಾಂಶ ಹೊರಬಿದ್ದಿರುತ್ತದೆ. ಸದರಿ ಫಲಿತಾಂಶದಲ್ಲಿ ಅನುತ್ತೀರ್ಣರಾಗಿರುವ ಹಾಗೂ ಮತ್ತೊಮ್ಮೆ ಪರೀಕ್ಷೆ ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಎರಡನೇ ಅವಧಿಯ ಪರೀಕ್ಷೆಯು ಜೂನ್-07 ರಿಂದ ಪ್ರಾರಂಭವಾಗಲಿದೆ. ಆದ್ದರಿಂದ, : 15.05.2024 21 Q, ৬ : 05.06.2024 0 ವರೆಗೆ ಎರಡನೇ ಪರೀಕ್ಷೆ ತಯಾರಿಗೆ ವಿಶೇಷ ತರಗತಿಗಳನ್ನು ನಡೆಸಲು ಕಾಲಾವಕಾಶವಿರುತ್ತದೆ.
ಈ ಅವಧಿಯಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಅನುತ್ತೀರ್ಣರಾದ ಹಾಗೂ ಕಡಿಮೆ ಅಂಕ ಗಳಿಸಿದ (C ಮತ್ತು C+) ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ದಿನಾಂಕ: 15.05.2024 ರಿಂದ 05.06.2024ರ ವರೆಗೆ, ರಜಾ ದಿನಗಳನ್ನೊಳಗೊಂಡಂತೆ ವಿಶೇಷ ತರಗತಿ ನಡೆಸುವ ಮೂಲಕ ಸದರಿ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಹಾಗೂ ಹೆಚ್ಚಿನ ಅಂಕ ಪಡೆಯುವಂತೆ ಪರೀಕ್ಷೆಗೆ ಸಿದ್ದಗೊಳಿಸಲು ಉದ್ದೇಶಿಸಲಾಗಿದೆ.
ಇದಕ್ಕೆ ಅನುಕೂಲವಾಗುವಂತೆ, ಜಿಲ್ಲಾ ಮತ್ತು ತಾಲ್ಲೂಕ ಮಟ್ಟದಲ್ಲಿರುವ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳೊಂದಿಗೆ ಮತ್ತು ತಮ್ಮ ಡಯಟ್ ಗಳಲ್ಲಿರುವ ಹಿರಿಯ ಉಪನ್ಯಾಸಕರು ಹಾಗೂ ಕಿರಿಯ ಉಪನ್ಯಾಸಕರುಗಳನ್ನು ಆಯಾ ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಸೂಚಿಸಿದೆ. ನೋಡಲ್ ಅಧಿಕಾರಿಗಳು ಆಯಾ ಹಂತದಲ್ಲಿ ಸಮನ್ವಯ ಸಾಧಿಸಿಕೊಂಡು, ಈ ಕಾರ್ಯವನ್ನು ಯಶಸ್ವಿಗೊಳಿಸಬೇಕಿದೆ.
-: ವಿಶೇಷ ತರಗತಿಗಳನ್ನು ನಡೆಸುವ ಉದ್ದೇಶಕ್ಕಾಗಿ ಗಮನಿಸಬೇಕಾದ 10 ಅಂಶಗಳು:-
1. ಆಯಾ ಶಾಲೆಯ ಮುಖ್ಯ ಶಿಕ್ಷಕರು ಅರ್ಹ ವಿದ್ಯಾರ್ಥಿಗಳನ್ನು ಪಟ್ಟಿಮಾಡಿ, ವಿಶೇಷ ತರಗತಿಗಳ ವೇಳಾ ಪಟ್ಟಿಯನ್ನು ಆಯಾ ವಿಷಯ ಶಿಕ್ಷಕರೊಂದಿಗೆ ಚರ್ಚಿಸಿ ದಿನಾಂಕ: 14.05.2024 ರಂದೇ ಸಿದ್ಧಪಡಿಸುವುದು.
2. ಆಯಾ ಶಾಲೆಯ ವಿಷಯ ಸಹ ಶಿಕ್ಷಕರನ್ನೇ ಕರ್ತವ್ಯಕ್ಕೆ ಹಾಜರಾಗಿ ಪರಿಹಾರ ಭೋಧನೆ ಮಾಡಲು ತಿಳಿಸುವುದು. ದಿನಾಂಕ: 15.05.2024 ರಂದು ನಡೆಯುವ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಆಯಾ ಶಾಲೆಯ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವುದು.
3. ಡಯಟ್ ಪ್ರಾಂಶುಪಾಲರುಗಳು ನೇಮಕ ಮಾಡುವ ನೋಡಲ್ ಅಧಿಕಾರಿಗಳ ಮಾಹಿತಿಯನ್ನು ದಿನಾಂಕ: 15.05.2024 ರ ಒಳಗಾಗಿ ಆಯಾ ಉಪನಿರ್ದೇಶಕರು(ಆಡಳಿತ) ರವರಿಗೆ ಹಾಗೂ ನಮ್ಮ ಕಛೇರಿಗೆ ತಿಳಿಸುವುದು.
ಅರ್ಹ ವಿದ್ಯಾರ್ಥಿಗಳಿಗೆ ಎರಡನೇ ಅವಧಿಯ ಪರೀಕ್ಷೆಗೆ ನಿಯಮಾನುಸಾರ ದಿನಾಂಕ: 16.05.2024 ರ ಒಳಗಾಗಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳುವಂತೆ ಕ್ರಮವಹಿಸುವುದು.
5. ಆಯಾ ಶಾಲೆಯ ಮುಖ್ಯ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವುದು.
6. ಪ್ರಸ್ತುತ ಬಿಸಿಲಿನ ತಾಪ ಹೆಚ್ಚು ಇರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು.
7. ಕರ್ತವ್ಯಕ್ಕೆ ಹಾಜರಾದ ಎಲ್ಲಾ ಶಿಕ್ಷಕರಿಗೆ ಕ.ನಾ.ಸೇ.ನಿ ಪ್ರಕಾರ ಗಳಿಕೆ ರಜೆಯನ್ನು ಕರ್ತವ್ಯದ ದಿನಗಳಿಗೆ ಮಂಜೂರಿಸುವುದು. ಮೂರು ದಿನಗಳ ಕರ್ತವ್ಯಕ್ಕೆ ನಿಯಮಾನುಸಾರ ಒಂದು ಗಳಿಕೆ ರಜೆ ದೊರೆಯಲಿದೆ.
8. ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯನ್ನು ಮುಖ್ಯ ಶಿಕ್ಷಕರು ಮಾಡುವುದು. ಜಿಲ್ಲಾ ಮತ್ತು ತಾಲ್ಲೂಕ ಹಂತದ ಅಕ್ಷರ ದಾಸೋಹ ಅಧಿಕಾರಿಗಳು ವಿದ್ಯಾರ್ಥಿಗಳ ಸಂಖ್ಯೆಯನ್ನು ಸದರಿ ಶಾಲೆಯ ಮುಖ್ಯ ಶಿಕ್ಷಕರಿಂದ ಮುಂಚಿತವಾಗಿಯೇ ಪಡೆದು ಅಗತ್ಯತೆಯನ್ನು ಪೂರೈಸುವುದು.
9. 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಸಮೀಪದ ಶಾಲೆಯೊಂದಿಗೆ ಒಗ್ಗೂಡಿಸಿ, ಒಂದೆಡೆ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳುವುದು. ಬೋಧನೆಗಾಗಿ ಆಯಾ ಶಾಲಾ ವ್ಯಾಪ್ತಿಯ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡುವುದು.
10. ಈಗಾಗಲೇ ವಿದ್ಯಾರ್ಥಿಗಳಿಗೆ ವಿತರಿಸಿದ ಕಲಿಕಾಸರೆ ಪುಸ್ತಕಗಳನ್ನು ಉಪಯೋಗಿಸಿ ಶಿಕ್ಷಕರು ಭೋಧನೆಯನ್ನು ಮಾಡುವುದು. ಪುಸ್ತಕಗಳ ಕೊರತೆಯಾದಲ್ಲಿ, ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಕಲಿಕಾಸರೆ ಪುಸ್ತಕಗಳನ್ನು ಪಡೆದು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸುವುದು.
No comments:
Post a Comment