. ಶೀರ್ಷಿಕೆ, ಪ್ರಾರಂಭ ಮತ್ತು ಅನ್ವಯ.-(1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021 ಎಂದು ಕರೆಯತಕ್ಕದ್ದು
(2) ಅವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಉಳಿದು, ಅವು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕದ್ದು
ಪರಂತು. ಈ ನಿಯಮಗಳಲ್ಲಿರುವುದು ಯಾವುದೂ-
(ಎ) ಅಖಿಲ ಭಾರತ ಸೇವೆಯ ಸದಸ್ಯನಾಗಿರುವ
(ಬಿ) ಯಾವ ಹುದ್ದೆಯ ಸಂಬಂಧದಲ್ಲಿ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಈ ನಿಯಮಗಳು ಅನ್ವಯವಾಗತಕ್ಕದ್ದಲ್ಲ ಎಂದು ಸರ್ಕಾರ ಘೋಷಿಸುವುದೋ ಆ ಯಾವುದೇ ಹುದ್ದೆಯನ್ನು ಹೊಂದಿರುವ,
ಮತ್ತು ಪರಂತು ಈ ನಿಯಮಗಳಲ್ಲಿ ಇರುವ ಯಾವುದೂ
(ಎ) ತತ್ಕಾಲದಲ್ಲಿ ಜಾರಿಯಲ್ಲಿರುವ ಕೈಗಾರಿಕಾ ನಿಯೋಜನೆ (ಸ್ನಾಯೀ ಆದೇಶಗಳು) ಅಧಿನಿಯಮ, 1946 (ಕೇಂದ್ರ ಅಧಿನಿಯಮ 1946ರ XX) ರ ಉಪಬಂಧಗಳು ಅನ್ವಯವಾಗುವಂತಹ ಸರ್ಕಾರಿ ಕೈಗಾರಿಕಾ ಸಂಸ್ಥೆಯ ನೌಕರ,
) (1) ಅರೆಕಾಲಿಕ ಅಥವಾ ತಾತ್ಕಾಲಿಕ ಆಧಾರದ ಮೇಲೆ:
(ಬಿ
(ii) ಅಥವಾ ಗುತ್ತಿಗೆ ಆಧಾರದ ಮೇಲೆ
(iii) ಅಥವಾ ಸ್ಥಳೀಯ ಅಭ್ಯರ್ಥಿಯಾಗಿ;
(iv) ಅಥವಾ ದಿನಗೂಲಿ ಆಧಾರದ ಮೇಲೆ
(v) ಅಥವಾ ಕಾರ್ಯಬ್ಬತ ಸಿಬ್ಬಂದಿಯಾಗಿ ನೇಮಕಗೊಂಡಿರುವ ಯಾವುದೇ ವ್ಯಕ್ತಿಗೆ ಅನ್ವಯವಾಗತಕ್ಕದ್ದಲ್ಲ
2. ಪರಿಭಾಷೆಗಳು- (1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
1 'ಸರ್ಕಾರ' ಎಂದರೆ, ಕರ್ನಾಟಕ ಸರ್ಕಾರ:
2 "ಸರ್ಕಾರಿ ನೌಕರ' ಎಂದರೆ, ಕರ್ನಾಟಕ ರಾಜ್ಯದ ನಾಗರಿಕ ಸೇವಾ ಸದಸ್ಯನಾಗಿರುವ ಅಥವಾ ಕರ್ನಾಟಕ ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟ ನಾಗರಿಕ ಹುದ್ದೆಯನ್ನು ಧಾರಣ ಮಾಡಿರುವಂಥ ಯಾರೇ ವ್ಯಕ್ತಿ ಎಂದು ಅರ್ಥ ಹಾಗೂ ಅದು. ಯಾವ ವ್ಯಕ್ತಿಯ ಸೇವೆಗಳನ್ನು ತಾತ್ಕಾಲಿಕವಾಗಿ ಭಾರತ ಸರ್ಕಾರ, ಮತ್ತೊಂದು ರಾಜ್ಯ ಸರ್ಕಾರ ಕಂಪನಿ ನಿಗಮ, ನಿಗಮಿತವಾಗಿರುವ ಮಂಡಳಿ, ಸಂಸ್ಥೆ ಅಥವಾ ನಿಗಮಿತವಾಗಿಲ್ಲದಿರುವ ಸ್ಥಳೀಯ ಪ್ರಾಧಿಕಾರದ ಸೇವೆಗೆ ನಿಯೋಜಿಸಲಾಗಿದೆಯೋ ಅಂಥ ವ್ಯಕ್ತಿಯು ರಾಜ್ಯದ ಸಂಚಿತ ನಿಧಿಯ ಹೊರತಾದ ಇತರೆ ಯಾವುದೇ ಮೂಲಗಳಿಂದ ವೇತನ ಪಡೆದುಕೊಳ್ಳುತ್ತಿರುವುದು ಏನೇ ಇದ್ದರೂ ಅಂಥ ವ್ಯಕ್ತಿಯನ್ನು ಒಳಗೊಳ್ಳುತ್ತದೆ:
ವಿವರಣೆ: ಈ ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ 'ಸರ್ಕಾರಿ ನೌಕರ' ಎಂದರೆ ಈ ನಿಯಮಗಳು ಅನ್ವಯವಾಗುವ ಯಾವುದೇ ವರ್ಗ ಅಥವಾ ಸೇವೆಗೆ ಸೇರಿದ ಅಧಿಕಾರಿ ಮತ್ತು సిబ్బంది.
3 ಸರ್ಕಾರಿ ನೌಕರನಿಗೆ ಸಂಬಂಧಪಟ್ಟಂತೆ 'ಕುಟುಂಬದ ಸದಸ್ಯರು' ಎಂಬುದು;
(i) ಸಂದರ್ಭಾನುಸಾರ ಸರ್ಕಾರಿ ನೌಕರನ/ ನೌಕರಳ ಪತ್ನಿಯು ಅಥವಾ ಪತಿಯು, ಸರ್ಕಾರಿ ನೌಕರನನೌಕರಳ ಜೊತೆ ವಾಸವಾಗಿರಲಿ ಅಥವಾ ಇಲ್ಲದಿರಲಿ ಅವರನ್ನು. ಒಳಗೊಳ್ಳುತ್ತದೆ. ಆದರೆ ಸಕ್ಷಮ ನ್ಯಾಯಾಲಯದ ಡಿಕ್ರಿಯ ಅಥವಾ ಅದೇಶದ ಮೂಲಕ ಸರ್ಕಾರಿ ನೌಕರನಿಂದ/ ನೌಕರಳಿಂದ ಬೇರ್ಪಟ್ಟಿರುವ ಸಂದರ್ಭಾನುಸಾರ ಪತ್ನಿ ಅಥವಾ ಪತಿಯನ್ನು ಒಳಗೊಳ್ಳುವುದಿಲ್ಲ.
(ii) ಸರ್ಕಾರಿ ನೌಕರನ ಮತ್ತು ಸಂಪೂರ್ಣವಾಗಿ ಆತನ ಮೇಲೆಯೇ ಅವಲಂಬಿಸಿರುವ ಮಗನನ್ನು ಅಥವಾ ಮಗಳನ್ನು ಅಥವಾ ಮಲ-ಮಗ ಅಥವಾ ಮಲ-ಮಗಳನ್ನು ಒಳಗೊಳ್ಳುತ್ತದೆ ಆದರೆ ಸರ್ಕಾರಿ ನೌಕರನ ಮೇಲೆ ಯಾವುದೇ ರೀತಿಯಲ್ಲಿ ಅವಲಂಬಿಸಿರದ ಅಥವಾ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಯಾವ ಮಗುವಿನ ಅಥವಾ ಮಲ ಮಗುವಿನ ಅಭಿರಕ್ಷೆಯನ್ನು ಸರ್ಕಾರಿ ನೌಕರನಿಗೆ ನೀಡಲಾಗಿಲ್ಲವೋ ಆ ಮಗುವನ್ನು ಅಥವಾ ಮಲ-ಮಗುವನ್ನು ಒಳಗೊಳ್ಳುವುದಿಲ್ಲ.
(iii) ಸರ್ಕಾರಿ ನೌಕರನಿಗೆ ಅಥವಾ ಸರ್ಕಾರಿ ನೌಕರನ/ನೌಕರಳ ಪತ್ನಿಗೆ ಅಥವಾ ಪತಿಗೆ ರಕ್ತ ಸಂಬಂಧದ ಅಥವಾ ವಿವಾಹದ ಮೂಲಕ ಸಂಬಂಧಿಯಾದ ಪೂರ್ಣವಾಗಿ ಸರ್ಕಾರಿ ನೌಕರರನ್ನೇ ಅವಲಂಬಿಸಿರುವ ಯಾರೇ ಇತರ ವ್ಯಕ್ತಿಯನ್ನು ಒಳಗೊಳ್ಳುತ್ತದೆ:
4. "ನಿಯಮಿಸಿದ ಪ್ರಾಧಿಕಾರ' ಎಂದರೆ,-
(1) ಕರ್ನಾಟಕ ನ್ಯಾಯಿಕ ಸೇವೆಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯ:
(ii) ಸಮೂಹ ಎ ದರ್ಜೆಯ ಯಾವುದೇ ಹುದ್ದೆಯನ್ನು ಹೊಂದಿರುವ ಮತ್ತು ಸಮೂಹ - ಬಿ ಯಲ್ಲಿ ತಹಶೀಲ್ದಾರ್ ದರ್ಜೆ-1 ಹುದ್ದೆಯನ್ನು ಹೊಂದಿರುವ ಸರ್ಕಾರಿ ನೌಕರನ
ಸಂಬಂಧದಲ್ಲಿ ಸರ್ಕಾರ: (iii) ಸಮೂಹ. ಬಿ ಯಲ್ಲಿನ ತಹಶೀಲ್ದಾರ್ ದರ್ಜೆ-11 ಅನ್ನು ಹೊರತುಪಡಿಸಿ, ಸಮೂಹ-ಬಿ, ಸಮೂಹ-ಸಿ ಹಾಗೂ ಸಮೂಹ-ಡಿ ಯಲ್ಲಿನ ಯಾವುದೇ ಹುದ್ದೆಯನ್ನು ಹೊಂದಿರುವ ಸರ್ಕಾರಿ ನೌಕರನ ಸಂಬಂಧದಲ್ಲಿ ಇಲಾಖೆಯ ಮುಖ್ಯಸ್ಥ;
3. ಸಾಮಾನ್ಯ ತತ್ತ್ವಗಳು
(1) ಪ್ರತಿಯೊಬ್ಬ ಸರ್ಕಾರಿ ನೌಕರನು, ಎಲ್ಲ ಕಾಲಗಳಲ್ಲಿಯೂ, -
(i) ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು
(ii) ಕರ್ತವ್ಯ ಶ್ರದ್ಧೆಯನ್ನು ಹೊಂದಿರತಕ್ಕದು
(iii) ಸರ್ಕಾರಿ ನೌಕರನಿಗೆ ತಕ್ಕದಲ್ಲದ ಯಾವುದನ್ನೂ ಮಾಡತಕ್ಕದ್ದಲ್ಲ: ಮತ್ತು
(iv) ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ತೊಡಗತಕ್ಕದ್ದಲ್ಲ
(2) ಪ್ರತಿಯೊಬ್ಬ ಸರ್ಕಾರಿ ನೌಕರನು-
(i) ಉನ್ನತ ನೈತಿಕ ಆದರ್ಶಗಳನ್ನು ಹೊಂದಿರತಕ್ಕದ್ದು:
(ii) ರಾಜಕೀಯವಾಗಿ ತಟಸ್ತನಾಗಿರತಕ್ಕದ್ದು
(ii) ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅರ್ಹತಾದಾಯಕ, ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತತೆಯ ಮೂಲ ತತ್ತ್ವಗಳನ್ನು ಅಳವಡಿಸಿಕೊಂಡಿರತಕ್ಕದ್ದು
iv) ಉತ್ತರದಾಯಿತ್ನ ಮತ್ತು ಪಾರದರ್ಶಕತೆಯನ್ನು ( ನಿರ್ವಹಿಸತಕ್ಕದ್ದು:
(v) ಸಾರ್ವಜನಿಕರಿಗೆ ಸ್ಪಂದನಾಶೀಲನಾಗಿರತಕ್ಕದ್ದು; ಹಾಗೂ
(vi) ಸಾರ್ವಜನಿಕರೊಂದಿಗೆ ಸೌಜನ್ಯ ಹಾಗೂ ವಿನಯದಿಂದ ವರ್ತಿಸತಕ್ಕದ್ದು.
(3) ಮೇಲಿಚಾರಣಾ ಹುದ್ದೆಯನ್ನು ಹೊಂದಿರುವ ಪ್ರತಿಯೊಬ್ಬ ಸರ್ಕಾರಿ ನೌಕರನು ತತ್ಕಾಲದಲ್ಲಿ ತನ್ನ ನಿಯಂತ್ರಣಕ್ಕೆ ಮತ್ತು ಅಧಿಕಾರಕ್ಕೆ ಒಳಪಟ್ಟಿರುವ ಎಲ್ಲಾ ಸರ್ಕಾರಿ ನೌಕರರ ನೀತಿ ನಿಷ್ಠೆಯನ್ನು ಮತ್ತು ಕರ್ತವ್ಯ ಶ್ರದ್ಧೆಯನ್ನು ಸುನಿಶ್ಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು
(4) ಪ್ರತಿಯೊಬ್ಬ ಸರ್ಕಾರಿ ನೌಕರನು, ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಸೌಜನ್ಯಯುತವಾದ ವರ್ತನೆಯನ್ನು ಹೊಂದಿರತಕ್ಕದ್ದು.
(5) ಪ್ರತಿಯೊಬ್ಬ ಸರ್ಕಾರಿ ನೌಕರನು
6) ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಚತೆಗೆ ಸ್ವತಃ ಬದನಾಗಿರತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು
(11) ಭಾರತದ ಸಾರ್ವಭೌಮತ್ತ ಮತ್ತು ಅಖಂಡತೆ, ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಸಮರ್ಥಿಸತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು (iii) ಸಾರ್ವಜನಿಕ ಹಿತದೃಷ್ಟಿಯಿಂದ ಮಾತ್ರವೇ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಮತ್ತು
ಮಿತವ್ಯಯಕರವಾಗಿ ಬಳಸತಕ್ಕದ್ದು ಅಥವಾ ಬಳಸುವಂತೆ ಮಾಡತಕ್ಕದ್ದು;
(iv) ತನ್ನ ಸಾರ್ವಜನಿಕ ಕರ್ತವ್ಯಗಳಿಗೆ ಸಂಬಂಧಿಸಿದ ಯಾವುದೇ ಖಾಸಗಿ ಹಿತಾಸಕ್ತಿಯನ್ನು ಘೋಷಿಸತಕ್ಕದ್ದು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಸಂರಕ್ಷಿಸುವಂಥ ರೀತಿಯಲ್ಲಿ ಯಾವುದೇ ಬಿಕ್ಕಟ್ಟುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳತಕ್ಕದ್ದು:
(v) ತನ್ನ ಪದೀಯ ಕರ್ತವ್ಯಗಳ ನಿರ್ವಹಣೆಯಲ್ಲಿ ತನ್ನ ಮೇಲೆ ಪ್ರಭಾವ ಬೀರಬಹುದಾದ ಯಾರೇ ವ್ಯಕ್ತಿ ಅಥವಾ ಯಾವುದೇ ಸಂಸ್ಥೆಯ ಯಾವುದೇ ಹಣಕಾಸು ಅಥವಾ ಇತರ ಆಮಿಷಗಳಿಗೆ ತಾನು ಒಳಗಾಗತಕ್ಕದ್ದಲ್ಲ
(vi) ನಾಗರಿಕ
ನೌಕರನಾಗಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳತಕ್ಕದ್ದಲ್ಲ ಮತ್ತು ಸ್ವಂತಕ್ಕಾಗಿ ತನ್ನ ಕುಟುಂಬಕ್ಕಾಗಿ ಅಥವಾ ತನ್ನ ಸ್ನೇಹಿತರಿಗಾಗಿ ಹಣಕಾಸು ಅಥವಾ ಬಹು ಮುಖ್ಯ ಪ್ರಯೋಜನಗಳನ್ನು ದೊರಕಿಸಿಕೊಡುವ
ಉದ್ದೇಶದಿಂದ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕದ್ದಲ್ಲ: (vii) ಆರ್ಹತೆಯ ಆಧಾರದ ಮೇಲೆ ಮಾತ್ರವೇ ಆಯ್ಕೆಗಳನ್ನು ಮಾಡತಕ್ಕದ್ದು ನಿರ್ಣಯಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಶಿಫಾರಸ್ಸುಗಳನ್ನು ಮಾಡತಕ್ಕದ್ದು:
(viii) ನ್ಯಾಯ ಸಮ್ಮತವಾಗಿ ಮತ್ತು ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಯಾವುದೇ ವ್ಯಕ್ತಿಯ ಅಥವಾ ಪಕ್ಷದ ವಿರುದ್ಧ ತಾರತಮ್ಯ ಮಾಡತಕ್ಕದ್ದಲ್ಲ:
(ix) ಯಾವುದೇ ಕಾನೂನು, ನಿಯಮಗಳು, ವಿನಿಯಮಗಳು ಮತ್ತು ಸ್ಥಾಪಿತ ಪದ್ಧತಿಗಳಿಗೆ ವಿರುದ್ಧವಾಗಿರುವ ಅಥವಾ ವಿರುದ್ಧವಾಗಿರಬಹುದಾದ ಯಾವುದೇ ಕಾರ್ಯ ಮಾಡುವುದನ್ನು ನಿರ್ಬಂಧಿಸತಕ್ಕದ್ದು.
(x) ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತನ್ನು ಕಾಪಾಡಿಕೊಳ್ಳತಕ್ಕದ್ದು ಮತ್ತು ತನಗೆ ಯುಕ್ತವಾಗಿ ತಿಳಿಸಲಾದ ಕಾನೂನುಬದ ಆದೇಶಗಳನ್ನು ಜಾರಿಗೊಳಿಸಲು ಬದ್ಧನಾಗಿರತಕ್ಕದ್ದು.
(xi) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನುಗಳ ಮೂಲಕ ಅಗತ್ಯಪಡಿಸಲಾದಂಥ ಪದೀಯ ಕರ್ತವ್ಯಗಳನ್ನು ನಿರ್ವಹಿಸುವಾಗ, ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬದ್ಧನಾಗಿರತಕ್ಕದ್ದು ಅದರಲ್ಲೂ ಮುಖ್ಯವಾಗಿ ಭಾರತದ ಸಾರ್ವಭೌಮತೆಗೆ ಮತ್ತು ಅಖಂಡತೆಗೆ ರಾಷ್ಟ್ರದ ಭದ್ರತೆಗೆ, ರಾಷ್ಟ್ರದ ಕಾರ್ಯತಂತ್ರ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ, ವಿದೇಶಿ ರಾಷ್ಟ್ರಗಳೊಂದಿಗಿನ ಸ್ನೇಹ ಸಂಬಂಧಗಳಿಗೆ ಬಾಧಕವನ್ನುಂಟು ಮಾಡುವಂತೆ ಅಥವಾ ಒಂದು ಅಪರಾಧದ ಚಿತಾವಣೆಗೆ ಕಾರಣವಾಗುವಂತೆ ಅಥವಾ ಯಾವುದೇ ವ್ಯಕ್ತಿಗೆ ಕಾನೂನು ಬಾಹಿರ ಪ್ರಯೋಜನಗಳನ್ನು ಮಾಡಿಕೊಡುವಂತೆ ಮಾಹಿತಿಯನ್ನು ಬಹಿರಂಗಪಡಿಸತಕ್ಕದ್ದಲ್ಲ.
(xii) ಅತ್ಯುನ್ನತ ಮಟ್ಟದ ನೈಪುಣ್ಯತೆಯಿಂದ ಹಾಗೂ ತನ್ನ ಗರಿಷ್ಠ ಸಾಮರ್ಥ್ಯದ ವೃತ್ತಿಪರತೆಯಿಂದ ತನ್ನ ಕರ್ತವ್ಯಗಳನ್ನು ಪಾಲಿಸತಕ್ಕದು ಹಾಗೂ ನಿರ್ವಹಿಸತಕ್ಕದ್ದು.
ವಿವರಣೆ: ಒಬ್ಬ ಸರ್ಕಾರಿ ನೌಕರನಿಗೆ ಇತರ ಕಾರ್ಯಗಳ ನಡುವೆ ವಹಿಸಿದ ಒಂದು ಕಾರ್ಯವನ್ನು ನಿಗದಿಪಡಿಸಿದ ಸಮಯದೊಳಗೆ ಮತ್ತು ಆತನ ನಿರೀಕ್ಷಿತ ಕಾರ್ಯಕ್ಷಮತೆಯ ಗುಣಮಟ್ಟದೊಂದಿಗೆ ನಿರ್ವಹಿಸಲು ಆತನು ರೂಢಿಗತವಾಗಿ ವಿಫಲನಾದಲ್ಲಿ ಅದನ್ನು (1)ನೇ ಉಪ-ನಿಯಮ ಮತ್ತು (3)ನೇ ಉಪ-ನಿಯಮದ ಉದ್ದೇಶಕ್ಕಾಗಿ ಕರ್ತವ್ಯದ ಮೇಲಿನ ಶ್ರದ್ಧೆಯ ಕೊರತೆ ಎಂದು ಭಾವಿಸತಕ್ಕದ್ದು.
(xii) ಯಾವುದೇ ಹಂತದಲ್ಲಿ, ತೆಗೆದುಕೊಂಡ ಯಾವುದೇ ಉದ್ದೇಶಿತ ಕ್ರಮವು ಯಾವುದೇ ನಿಯಮ ಅಥವಾ ಕಾನೂನಿಗೆ ತದ್ದಿರುದ್ಧ ಇದ್ದಲ್ಲಿ ಅಥವಾ ಸರ್ಕಾರದ ಕಾರ್ಯನೀತಿಗಳಿಗೆ ಭಿನ್ನವಾಗಿದ್ದಲ್ಲಿ, ಅಥವಾ ವಹಿಸಲಾದ ಪ್ರಕರಣದಲ್ಲಿ ಪ್ರಕ್ರಿಯಾ ಲೋಪ ಕಂಡು ಬಂದಲ್ಲಿ, ಆ ಅಂಶವನ್ನು ಮೇಲಾಧಿಕಾರಿಗಳ ಗಮನಕ್ಕೆ ತರತಕ್ಕದ್ದು:
(xiv) ತನ್ನ ಕರ್ತವ್ಯಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದಕ್ಕಾಗಿ ಅಗತ್ಯವಾಗಿರುವ ವೃತ್ತಿಪರ ಜ್ಞಾನ ಮತ್ತು ಅನುಭವವನ್ನು ಪಡೆಯಲು ಪ್ರಯತ್ನ ಮಾಡತಕ್ಕದ್ದು ಹಾಗೂ ತನ್ನ ಕಾರ್ಯಕ್ಷೇತ್ರದ ಜ್ಞಾನವನ್ನು ವೃದ್ಧಿಸಿಕೊಳ್ಳಲು ಮತ್ತು ಕಚೇರಿ ಆಡಳಿತಾತ್ಮಕ ಸುಧಾರಿತ ವಿಧಾನಗಳಿಗೆ ತನ್ನನ್ನು ಸಿದ್ಧಪಡಿಸಿಕೊಳ್ಳಲು ಸರ್ವ ರೀತಿಯಲ್ಲೂ ಶ್ರಮಿಸತಕ್ಕದ್ದು ಹಾಗೂ
(xv) ಸಾರ್ವಜನಿಕರೊಂದಿಗೆ ಅಧಿಕೃತ ವ್ಯವಹಾರ ನಡೆಸುವಲ್ಲಿ ಉದ್ದೇಶ ಪೂರ್ವಕವಾಗಿ ವಿಳಂಬ ಧೋರಣೆಯನ್ನು ತೋರತಕ್ಕದ್ದಲ್ಲ ಅಥವಾ ಆತ/ಆಕೆಗೆ ವಹಿಸಲಾದ ಕೆಲಸಗಳನ್ನು ವಿಲೇ ಮಾಡುವಲ್ಲಿ ದುರುದ್ದೇಶ ಪೂರ್ವಕವಾಗಿ ವಿಳಂಬ ಮಾಡತಕ್ಕದ್ದಲ್ಲ.
(6) (i) ಯಾರೇ ಸರ್ಕಾರಿ ನೌಕರನು, ತನ್ನ ಪದೀಯ ಕರ್ತವ್ಯಗಳನ್ನು ನಿರ್ವಹಿಸುವಾಗ ಅಥವಾ ಆತನಿಗೆ ಪ್ರದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸುವಾಗ, ತನ್ನ ವರಿಷ್ಠಾಧಿಕಾರಿಯ ನಿರ್ದೇಶನದ ಮೇರೆಗೆ ಆತನು ಕಾರ್ಯನಿರ್ವಹಿಸುತ್ತಿರುವ ಸಂದರ್ಭದ ಹೊರತಾಗಿ, ತನ್ನ ಸ್ವಂತ ಅತ್ಯುತ್ತಮ ನಿರ್ಣಯ ಸರಿಯಾಗಿದೆ ಮತ್ತು ಕರಾರುವಾಕ್ಕಾಗಿದೆ ಎಂದೆನಿಸದೆ ಬೇರೆ ರೀತಿಯಲ್ಲಿ
ಕಾರ್ಯನಿರ್ವಹಿಸತಕ್ಕದಲ್ಲ.
(ii) ಮೇಲಾಧಿಕಾರಿಯ ನಿರ್ದೇಶನವು ಸಾಮಾನ್ಯವಾಗಿ ಲಿಖಿತರೂಪದಲ್ಲಿರತಕ್ಕದ್ದು ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಮೌಖಿಕ ನಿರ್ದೇಶನ ನೀಡುವುದು ಅನಿವಾರ್ಯವಾದಾಗ, ಮೇಲಾಧಿಕಾರಿಯು ತಾನಾಗಿಯೇ ಆಗಲಿ, ಅಥವಾ ಸಂಬಂಧಿಸಿದ ಅಧೀನ ಸರ್ಕಾರಿ ನೌಕರನ ಕೋರಿಕೆಯ ಮೇಲಾಗಲಿ ಅದನ್ನು ಆ ನಂತರ ಕೂಡಲೇ ಲಿಖಿತವಾಗಿ ಸ್ಥಿರೀಕರಿಸತಕ್ಕದ್ದು, ಮತ್ತು
(iii) ತನ್ನ ಮೇಲಾಧಿಕಾರಿಯಿಂದ ಮೌಖಿಕ ನಿರ್ದೇಶನವನ್ನು ಸ್ವೀಕರಿಸಿದಂಥ ಸರ್ಕಾರಿ ನೌಕರನು, ಸಾಧ್ಯವಾದಷ್ಟು ಬೇಗನೆ ಆ ನಿರ್ದೇಶನವನ್ನು ಲಿಖಿತದಲ್ಲಿ ಸ್ಥಿರೀಕರಿಸುವಂತೆ ಕೋರತಕ್ಕದ್ದು ಮತ್ತು ಅಂಥ ಸಂದರ್ಭದಲ್ಲಿ ನಿರ್ದೇಶನವನ್ನು ಲಿಖಿತವಾಗಿ ಸ್ಥಿರೀಕರಿಸುವುದು ಮೇಲಾಧಿಕಾರಿಯ ಕರ್ತವ್ಯವಾಗಿರತಕ್ಕದ್ದು.
ವಿವರಣೆ: (6)ನೇ ಉಪ-ನಿಯಮದ (iii)ನೇ ಖಂಡದಲ್ಲಿ ಇರುವುದು ಯಾವುದನ್ನೂ ಅಧಿಕಾರಗಳು ಮತ್ತು ಹೊಣೆಗಾರಿಕೆಗಳ ಹಂಚಿಕೆ ಮತ್ತು ಪ್ರತ್ಯಾಯೋಜನೆಯ ಅಡಿಯಲ್ಲಿ ಅಂಥ ನಿರ್ದೇಶನಗಳು ಅಗತ್ಯವಿಲ್ಲದಿರುವಾಗ, ವರಿಷ್ಠ ಅಧಿಕಾರಿ ಅಥವಾ ಪ್ರಾಧಿಕಾರಿಯಿಂದ ನಿರ್ದೇಶನವನ್ನು ಕೋರುವ ಮೂಲಕ ಸರ್ಕಾರಿ ನೌಕರನು ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಅವನನ್ನು ಅದು ಶಕ್ತಗೊಳಿಸುತ್ತದೆ ಎಂದು ಅರ್ಥೈಸತಕ್ಕದ್ದಲ್ಲ.
(7) ಹಾಜರಾತಿಯಲ್ಲಿ ಸಮಯಪಾಲನೆ-ಪ್ರತಿಯೊಬ್ಬ ಸರ್ಕಾರಿ ನೌಕರನು ಸಮಯಕ್ಕೆ ಸರಿಯಾಗಿ ಕಛೇರಿಗೆ ಹಾಜರಾಗತಕ್ಕದ್ದು ಹಾಗೂ ತನ್ನ ಹುದ್ದೆಯ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಗರಿಷ್ಠ ಸಮಯವನ್ನು ಮೀಸಲಿಡುವುದು ಮತ್ತು ತುರ್ತು ಸೇವೆ ಅಗತ್ಯವಿದ್ದಾಗ ಮತ್ತು ಉನ್ನತ ಅಧಿಕಾರಿಗಳ ಸೂಚನೆಯ ಮೇಲೆ, ಕಚೇರಿ ಕೆಲಸದ ಅವಧಿಗಳನ್ನು ಮೀರಿ ಕಾರ್ಯನಿರ್ವಹಿಸತಕ್ಕದ್ದು,
(8) ಪ್ರತಿಯೊಬ್ಬ ಸರ್ಕಾರಿ ನೌಕರನು, ಸರ್ಕಾರಿ ಸೇವೆಗೆ ಸೇರುವ ಸಮಯದಲ್ಲಿ, ಈ ಮುಂದಿನ ನಮೂನೆಯಲ್ಲಿನ ಪ್ರಮಾಣವನ್ನು ಮಾಡತಕ್ಕದ್ದು:-
"ನಿಷಾ ಪ್ರಮಾಣ ಪತ್ರ'
ಆದ ನಾನು ಭಾರತದ ವಿಚಾರದಲ್ಲಿ ಮತ್ತು ಕಾನೂನು ಮೇರೆಗೆ ಏರ್ಪಟ್ಟ ಭಾರತದ ಸಂವಿಧಾನದ ವಿಚಾರದಲ್ಲಿ ಭಕ್ತಿಯಿಂದಲೂ, ನಿಷ್ಠೆಯಿಂದಲೂ ನಡೆದುಕೊಳ್ಳುತ್ತೇನೆಂದು ಮತ್ತು ನನ್ನ ಹುದ್ದೆಗೆ ಸಂಬಂಧಪಟ್ಟ ಕರ್ತವ್ಯಗಳನ್ನು ಶ್ರದ್ಧೆಯಿಂದ. ಪ್ರಾಮಾಣಿಕತೆಯಿಂದ ಮತ್ತು ನಿಷ್ಪಕ್ಷಪಾತದಿಂದ ನಿರ್ವಹಿಸುತ್ತೇನೆಂದೂ ಪ್ರತಿಜ್ಞೆ ಮಾಡುತ್ತೇನೆ ಪ್ರಮಾಣ ಪೂರ್ವಕವಾಗಿ ನುಡಿಯುತ್ತೇನೆ.-
ಸರ್ಕಾರಿ ನೌಕರನ ಹೆಸರು ಹಾಗೂ ಪದನಾಮ
4. ಸರ್ಕಾರವು ಪೋಷಿಸಿಕೊಂಡು ಬರುತ್ತಿರುವ ಕಂಪನಿಯಲ್ಲಿ ಅಥವಾ ಸಂಸ್ಥೆಯಲ್ಲಿ ಸರ್ಕಾರಿ ನೌಕರನ ಕುಟುಂಬ ಸದಸ್ಯನಿಗೆ ಉದ್ಯೋಗ:
(1) ಯಾರೇ ಸರ್ಕಾರಿ ನೌಕರನು, ಯಾವುದೇ ಕಂಪನಿಯಲ್ಲಿ ಅಥವಾ ಫರ್ಮ್ ನಲ್ಲಿ ಅಥವಾ ಸಂಸ್ಥೆಯಲ್ಲಿ ತನ್ನ ಕುಟುಂಬದ ಯಾರೇ ಸದಸ್ಯನಿಗೆ ಉದ್ಯೋಗವನ್ನು ದೊರಕಿಸಿಕೊಡಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ನಾನವನ್ನು ಅಥವಾ ಪ್ರಭಾವವನ್ನು ಬಳಸಿಕೊಳ್ಳತಕ್ಕದ್ದಲ್ಲ.
(2) (i) ಯಾರೇ ಎದರ್ಜೆಯ ಅಧಿಕಾರಿಯು, ಸರ್ಕಾರದ ಪೂರ್ವ ಮಂಜೂರಾತಿ ಪಡೆದ ಹೊರತು ತನ್ನ ಮಗ, ಮಗಳು ಅಥವಾ ಇತರೆ ಯಾವುದೇ ಅವಲಂಬಿತರಿಗೆ ಆತನು ಅಧಿಕೃತ ವ್ಯವಹಾರವನ್ನು ಹೊಂದಿರುವ ಯಾವುದೇ ಕಂಪನಿಯಲ್ಲಿ ಅಥವಾ ಫರ್ಮ್‌ನಲ್ಲಿ ಅಥವಾ ಸಂಸ್ಥೆಯಲ್ಲಿ ಅಥವಾ ಸರ್ಕಾರದೊಂದಿಗೆ ಅಧಿಕೃತ ವ್ಯವಹಾರಗಳನ್ನು ಹೊಂದಿರುವ ಯಾವುದೇ ಇತರ ಉದ್ಯಮದಲ್ಲಿ ಉದ್ಯೋಗವನ್ನು ಒಪ್ಪಿಕೊಳ್ಳಲು ಅನುಮತಿ ನೀಡತಕ್ಕದ್ದಲ್ಲ:
ಪರಂತು, ಉದ್ಯೋಗವನ್ನು ಒಪ್ಪಿಕೊಳ್ಳಲು ಸರ್ಕಾರದ ಪೂರ್ವಾನುಮತಿ ಪಡೆಯುವುದಕ್ಕಾಗಿ ಕಾಯಲು ಸಾಧ್ಯವಿಲ್ಲದಿರುವಾಗ ಅಥವಾ ಅನ್ಯಥಾ ತುರ್ತು ಎಂದು ಪರಿಗಣಿಸಿರುವಾಗ ಸರ್ಕಾರಕ್ಕೆ ಈ ವಿಷಯದ ಬಗ್ಗೆ, ವರದಿ ಮಾಡತಕ್ಕದು ಮತ್ತು ಸರ್ಕಾರದ ಅನುಮತಿಗೆ ಒಳಪಟ್ಟು, ತಾತ್ಕಾಲಿಕವಾಗಿ ಉದ್ಯೋಗವನ್ನು ಒಪ್ಪಿಕೊಳ್ಳಬಹುದು.
(ii) ಸರ್ಕಾರಿ ನೌಕರನು, ತನ್ನ ಕುಟುಂಬದ ಸದಸ್ಯನು ಯಾವುದೇ ಕಂಪನಿಯಲ್ಲಿ ಅಥವಾ ಫರ್ಮ್‌ನಲ್ಲಿ ಅಥವಾ ಸಂಸ್ಥೆಯಲ್ಲಿ ಉದ್ಯೋಗವನ್ನು ಒಪ್ಪಿಕೊಂಡಿದ್ದಾನೆ ಎಂಬುದು ತಿಳಿದ ಕೂಡಲೇ, ಹಾಗೆ ಒಪ್ಪಿಕೊಂಡಿರುವುದನ್ನು ನಿಯಮಿಸಿದ ಪ್ರಾಧಿಕಾರಿಗೆ ತಿಳಿಸತಕ್ಕದ್ದು ಮತ್ತು ಆ ಕಂಪನಿಯೊಂದಿಗೆ ಅಥವಾ ಫರ್ಮ್ ಅಥವಾ ಸಂಸ್ಥೆಯೊಂದಿಗೆ ಆತನು ಯಾವುದೇ ಸರ್ಕಾರಿ ವ್ಯವಹಾರ ಹೊಂದಿರುವದೇ ಅಥವಾ ಹೊಂದಿದ್ದನೇ ಎಂಬುದನ್ನು ಸಹ ತಿಳಿಸತಕ್ಕದ್ದು:
ಪರಂತು, ಅಧಿಕಾರಿಯು ಈಗಾಗಲೇ ಸರ್ಕಾರದ ಮಂಜೂರಾತಿಯನ್ನು ಪಡೆದಿದ್ದರೆ ಅಥವಾ ಈ ಉಪ-ನಿಯಮದ (6ನೇ ಖಂಡದ ಅಡಿಯಲ್ಲಿ ಆತನು ಸರ್ಕಾರಕ್ಕೆ ವರದಿ ಕಳುಹಿಸಿದ್ದರೆ, ಆ ಅಧಿಕಾರಿಯ ಸಂದರ್ಭದಲ್ಲಿ ಹಾಗೆ ತಿಳಿಸುವುದು ಅಗತ್ಯವಿರತಕ್ಕದ್ದಲ್ಲ
(3) (i) ಯಾರೇ ಸರ್ಕಾರಿ ನೌಕರನು, ತನ್ನ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಯಾವುದೇ ಕಂಪನಿಯೊಂದಿಗೆ ಅಥವಾ ಫರ್ಮಿನೊಂದಿಗೆ ಅಥವಾ ಸಂಸ್ಥೆಯೊಂದಿಗೆ ಅಥವಾ ಯಾರೇ ಇತರ ವ್ಯಕ್ತಿಯೊಂದಿಗೆ, ತನ್ನ ಕುಟುಂಬದ ಯಾರೇ ಸದಸ್ಯನು ಆ ಕಂಪನಿಯಲ್ಲಿ ಅಥವಾ ಫರ್ಮಿನಲ್ಲಿ ಅಥವಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೆ ಅಥವಾ ತಾನು ಅಥವಾ ತನ್ನ ಕುಟುಂಬದ ಯಾರೇ ಸದಸ್ಯನು ಅಂಥ ವಿಷಯದಲ್ಲಿ ಅಥವಾ ಕರಾರಿನಲ್ಲಿ ಯಾವುದೇ ಇತರ ರೀತಿಯಲ್ಲಿ ಹಿತಾಸಕ್ತಿ ಉಳ್ಳವನಾಗಿದ್ದರೆ, ಆ ಯಾವುದೇ ವಿಷಯದ ಬಗ್ಗೆ, ಅಥವಾ ಅವುಗಳ
ಪರವಾಗಿ ವ್ಯವಹರಿಸತಕ್ಕದ್ದಲ್ಲ ಅಥವಾ ಯಾವುದೇ ಕರಾರನ್ನು ನೀಡತಕ್ಕದ್ದಲ್ಲ ಅಥವಾ ಅದನ್ನು ಮಂಜೂರು ಮಾಡತಕ್ಕದ್ದಲ್ಲ.
(ii) ಈ ಉಪನಿಯಮದ (ನೇ ಖಂಡದಲ್ಲಿ ಉಲ್ಲೇಖಿಸಲಾದ ಸಂದರ್ಭದಲ್ಲಿ ಸರ್ಕಾರಿ ನೌಕರನು ಅಂತಹ ಪ್ರತಿಯೊಂದು ವಿಷಯದ ಅಥವಾ ಕರಾರಿನ ಬಗ್ಗೆ ತನ್ನ ವರಿಷ್ಠಾಧಿಕಾರಿಗೆ ತಿಳಿಸತಕ್ಕದ್ದು ಮತ್ತು ಕರಾರಿನ ಬಗೆಗಿನ ಆ ವಿಷಯವನ್ನು ಯಾವ ವರಿಷ್ಠಾಧಿಕಾರಿಗೆ ಅಥವಾ ಇತರ ಯಾವ ಪ್ರಾಧಿಕಾರಕ್ಕೆ ९९ ಬಗ್ಗೆ, ತಿಳಿಸಲಾಗಿದೆಯೋ ಸೂಚನೆಗನುಸಾರವಾಗಿ ಆ ತರುವಾಯ ಪ್ರಕರಣವನ್ನು ವಿಲೆ ಮಾಡತಕ್ಕದ್ದು. ಪ್ರಾಧಿಕಾರಿಯ
5. ರಾಜಕೀಯದಲ್ಲಿ ಮತ್ತು ಚುನಾವಣೆಯಲ್ಲಿ ಭಾಗವಹಿಸುವುದು:
(1) ಯಾರೇ ಸರ್ಕಾರಿ ನೌಕರನು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ. ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ.
(2) ಕಾನೂನಿನ ಮೂಲಕ ಸ್ವಾಪಿತವಾದ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವಂಥದ್ದಾಗಿರುವ ಅಥವಾ ಉರುಳಿಸುವ ಉದ್ದೇಶ ಹೊಂದಿರುವ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಯಾರೇ ಸದಸ್ಯನೂ ಭಾಗವಹಿಸದಂತೆ, ಅದರ ಸಹಾಯಾರ್ಥ ವಂತಿಗೆ ನೀಡದಂತೆ ಅಥವಾ ಇನ್ನಾವುದೇ ರೀತಿಯಿಂದ ನೆರವಾಗುವುದನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವಾಗಿರತಕ್ಕದ್ದು ಮತ್ತು ಅಂಥ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಸದಸ್ಯರು ಭಾಗವಹಿಸುವುದನ್ನು ವಂತಿಗೆ ನೀಡುವುದನ್ನು ಅಥವಾ ಬೇರೆ ರೀತಿಯಿಂದ ನೆರವು ನೀಡುವುದನ್ನು ತಡೆಗಟ್ಟಲು ಸರ್ಕಾರಿ ನೌಕರನಿಗೆ ಸಾಧ್ಯವಾಗದಿದ್ದರೆ, ಅವನು
ಆ ವಿಷಯವನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು. (3) ಯಾವುದೇ ಒಂದು ಪಕ್ಷವು ರಾಜಕೀಯ ಪಕ್ಷವೇ ಅಥವಾ ಯಾವುದೇ ಸಂಘ ಸಂಸ್ಥೆಯು ರಾಜಕೀಯದಲ್ಲಿ ಭಾಗವಹಿಸುತ್ತಿದೆಯೇ ಅಥವಾ ಯಾವುದೇ ಚಳವಳಿಯು ಅಥವಾ ಚಟುವಟಿಕೆಯು (2)ನೇ ಉಪನಿಯಮದ ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದಾಗ, ಆ ಕುರಿತು ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು
(4)
ಯಾರೇ ಸರ್ಕಾರಿ ನೌಕರನು ಸಂಸತ್ತು ರಾಜ್ಯ ವಿಧಾನಮಂಡಲದ ಯಾವುದೇ ಸದನ ಅಥವಾ ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಲ್ಲಿ ಪ್ರಚಾರ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಅಥವಾ ಆ ಸಂಬಂಧದಲ್ಲಿ ತನ್ನ ಪ್ರಭಾವವನ್ನು ಬೀರತಕ್ಕದ್ದಲ್ಲ ಅಥವಾ ಅದರಲ್ಲಿ ಭಾಗವಹಿಸತಕ್ಕದ್ದಲ್ಲ
ಪರಂತು.
(1) ಅಂಥ ಯಾವುದೇ ಚುನಾವಣೆಯಲ್ಲಿ ತನ್ನ ಮತವನ್ನು ಚಲಾಯಿಸಲು ಅರ್ಹನಾಗಿರುವ ಸರ್ಕಾರಿ ನೌಕರನು ಮತ ಹಾಕಲು ತನಗಿರುವ ಹಕ್ಕನ್ನು ಚಲಾಯಿಸಬಹುದು. ಆದರೆ ಆತನು ಹಾಗೆ ಮಾಡುವಾಗ, ಯಾವ ರೀತಿಯಲ್ಲಿ ತಾನು ಮತ ಹಾಕಲು ಉದ್ದೇಶಿಸಿದ್ದಾನೆ ಅಥವಾ ಮತ ಹಾಕಿದ್ದೇನೆ ಎಂಬ ಬಗ್ಗೆ ಯಾವುದೇ ಸೂಚನೆಯನ್ನು ನೀಡತಕ್ಕದ್ದಲ್ಲ. ಹಾಗೂ ಯಾರಿಗೆ ಮತ ನೀಡಲು ಉದ್ದೇಶಿಸಿದ್ದೇನೆ ಅಥವಾ ಯಾರಿಗೆ ಮತ ನೀಡಿದ್ದೇನೆ ಎಂಬ ಬಗ್ಗೆ ಯಾವುದೇ ಸೂಚನೆಗಳನ್ನು ನೀಡತಕ್ಕದ್ದಲ್ಲ.
No comments:
Post a Comment