Tuesday, May 14, 2024

International Nurses Day 2024

  Wisdom News       Tuesday, May 14, 2024
Hedding ; International Nurses Day 2024...


ಮೇ 12-ವಿಶ್ವ ಶುಶ್ರೂಷಕರ ದಿನ(World Nurses Day):*

ಶುಶ್ರೂಷಕರು ಸಮಾಜಕ್ಕೆ ನೀಡಿರುವ ಸೇವೆಗಳ ಗೌರವಾರ್ಥವಾಗಿ ಪ್ರತಿ ವರ್ಷ ಮೇ 12ರಂದು ವಿಶ್ವಾದ್ಯಂತ 'ಶುಶ್ರೂಷಕರ ದಿನ' ಆಚರಿಸಲಾಗುತ್ತದೆ. ಈ ದಿನ ಖ್ಯಾತ ದಾದಿ ಫ್ಲಾರೆನ್ಸ್‌ ನೈಟಿಂಗೇಲ್‌ ಹುಟ್ಟಿದ ದಿನವೂ ಹೌದು. 1965ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಯಿತು. 1820ರ ಮೇ 12ರಂದು ಜನಿಸಿದ ಪ್ಲಾರೆನ್ಸ್‌ ನೈಟಿಂಗೇಲ್ ಇವರನ್ನು "ಆಧುನಿಕ ನರ್ಸಿಂಗ್ ಸಂಜಾತೆ" ಎಂದು ಕರೆಯುತ್ತಾರೆ. ಮೂಲತಃ ಇಟಲಿ ದೇಶದಲ್ಲಿ ಜನಿಸಿ ಬಳಿಕ ಬ್ರಿಟಿಷ್ ದೇಶದ ಸಂಜಾತೆಯಾದ ಈಕೆ 13 ಆಗಸ್ಟ್‌ 1910ರಲ್ಲಿ ಇಹಲೋಕ ತ್ಯಜಿಸಿದರು. 



ಸುಮಾರು 90 ವರ್ಷಗಳ ಪರಿಪುರ್ಣ ಬದುಕು ಸವೆಸಿದ ಈಕೆ ತನ್ನ ಜೀವನವನ್ನು ಮನುಕುಲದ ಸೇವೆಗೆ ಮುಡಿಪಾಗಿಟ್ಟಿದ್ದಳು. ಇಂದಿಗೆ ಆಕೆ ಹುಟ್ಟಿ 200 ವರ್ಷಗಳು ಪೂರ್ತಿಯಾಗಿವೆ. ಆಕೆ ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ದಾದಿಯರ ದಿನ ನೆರವೇರಿಸಲಾಗುತ್ತದೆ.*
*ನಾಲ್ಕು ತಿಂಗಳಿಂದ ಸವಾಲಾಗಿರುವ ಕೊರೊನಾ ವಿರುದ್ಧದ ನರ್ಸ್‌ಗಳ ಹೋರಾಟ ಅಸಾಮಾನ್ಯ. ಕೇರಳದ ನರ್ಸ್‌ಗಳು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ. 



ನಮ್ಮ ರಾಜ್ಯದಲ್ಲಿಸುಮಾರು 10 ಸಾವಿರಕ್ಕೂ ಅಧಿಕ ಸರಕಾರಿ ಶುಶ್ರೂಷಕರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿಇದರ ಹತ್ತು ಪಟ್ಟು ನರ್ಸ್‌ಗಳಿದ್ದಾರೆ. ಕಣ್ಣೆದುರೇ ಮಗು ಇದ್ದರೂ ಮುದ್ದಾಡಲು ಆಗದ ಸ್ಥಿತಿ.ಹೆರಿಗೆ ದಿನಾಂಕ ಹತ್ತಿರವೇ ಇದ್ದರೂ ಕರ್ತವ್ಯದ ಕರೆಯೇ ಮೇಲು. ಅಮ್ಮಾ, ನಿನ್ನ ನೋಡಬೇಕು ಎನ್ನುವ ಒಡಲ ಕುಡಿಗಳ ಅಳಲು. ಎಂಥದ್ದೇ ಪರಿಸ್ಥಿತಿಯಲ್ಲೂ ರೋಗಿಗಳ ಆರೈಕೆ ಮಾಡಬೇಕೆಂಬ ವೃತ್ತಿಪ್ರಜ್ಞೆ.



ಕೊರೊನಾ ಸಂದರ್ಭದಲ್ಲಿಆರೈಕೆ ಮಾಡುತ್ತಿರುವ ದಾದಿಯರ ಬಿಡಿ ಬಿಡಿ ಭಾವಗಳಿವು. 'ವಿಶ್ವ ದಾದಿಯರ ದಿನ'ದ ನೆಪದಲ್ಲಿಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸುಯೋಗ ನಮಗೆಲ್ಲರಿಗೂ ದೊರೆತಿದೆ.*




logoblog

Thanks for reading International Nurses Day 2024

Previous
« Prev Post

No comments:

Post a Comment