Wednesday, May 22, 2024

2024 regarding the formation of School Alumni Association for all-round development of government schools of the state under the 'Namma Shala Namma Responsibilities' programme.

  Wisdom News       Wednesday, May 22, 2024
Hedding ; 2024 regarding the formation of School Alumni Association for all-round development of government schools of the state under the 'Namma Shala Namma Responsibilities' programme...



ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮದಡಿ ರಾಜ್ಯದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ (ALUMNI ASSOCIATION) 4 2

ಉಲ್ಲೇಖ:1) ಸರ್ಕಾರದ ಆದೇಶ ಸಂಖ್ಯೆ: ಇಪಿ 2/ಎಂ.ಹೆಚ್.ಟಿ /2020,ದಿನಾಂಕ:02/07/2020, 2) 4.0.4/.../22/01/2021-22, 20៥:16/05/2022

ರಾಜ್ಯದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಶಾಲೆಗಳನ್ನು ಬಲವರ್ಧನೆಗೊಳಿಸುವ ಸರ್ಕಾರವು ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಿದೆ. ಸದರಿ ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳಲ್ಲಿ ಸರ್ಕಾರದೊಂದಿಗೆ ಸಮುದಾಯದ ಸಹಭಾಗಿತ್ವದಿಂದ ವೈಯಕ್ತಿಕ/ಸಾಮೂಹಿಕ ಬೆಂಬಲ ಮತ್ತು ಸಂಪನ್ಮೂಲಗಳು ದೊರಕಿದರೆ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಬಹುದಾಗಿದೆ ಎಂಬುದು ಸರ್ಕಾರದ ಆಶಯವಾಗಿದೆ. ಈ ಹಿನ್ನಲೆಯಲ್ಲಿ · ನಮ್ಮ ಶಾಲೆ ನಮ್ಮ ಜವಬ್ದಾರಿ" ಎಂಬ ಕಾರ್ಯಕ್ರಮವನ್ನು ಪ್ರಸ್ತುತ ಸಾಲಿನಿಂದ ರೂಪಿಸಿ, ಯಸ್ವಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಪ್ರಯುಕ್ತ, ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಹಿಂದೆ ವ್ಯಾಸಂಗ ಮಾಡಿರುವ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಶಾಲೆಯ ಪಾರಂಪರಿಕ ಹಿನ್ನೆಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯಲು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ (ALUMNI ASSOCIATION)ವನ್ನು ದಿನಾಂಕ: 31-ಮಾರ್ಚ್-2024 ರ ಅಂತ್ಯದೊಳಗಾಗಿ ರಚಿಸುವುದು. ಈ ಮುಖೇನ ಶಾಲೆಯನ್ನು ಶೈಕ್ಷಣಿಕವಾಗಿ ಮತ್ತಷ್ಟು ಬಲವರ್ಧನೆಗೊಳಿಸಲು ಅಗತ್ಯವಿರುವ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಲಯ, ಪೀಠೋಪಕರಣಗಳು, ಪಾಠೋಪಕರಣಗಳು, ವಿಜ್ಞಾನ ಉಪಕರಣಗಳು, SMART CLASS ಹಾಗೂ ಇ-ಕಲಿಕಾ ಕೇಂದ್ರ ಸ್ಥಾಪನೆಯಂತಹ ಪರಿಣಾಮಕಾರಿ ಸೌಲಭ್ಯಗಳ ಪೂರೈಕೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಅವಶ್ಯಕತೆಗನುಗುಣವಾಗಿ ಆದ್ಯತಾನುಸಾರ ಸದರಿ ದಾನಿಗಳ (ಹಳೆ ವಿದ್ಯಾರ್ಥಿಗಳ ಸಂಘದ) ಸಹಕಾರದಿಂದ ಪೂರೈಸಿಕೊಳ್ಳಲು ಅನುವಾಗುವಂತೆ ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಮೇಲ್ಕಂಡಂತೆ " ನಮ್ಮ ಶಾಲೆ ನಮ್ಮ ಜವಬ್ದಾರಿ ” ಕಾರ್ಯಕ್ರಮದಡಿ ಈ ದಾನಿಗಳು ಕೊಡುಗೆಯಾಗಿ ನೀಡುವ ಸದರಿ ಸೌಲಭ್ಯಗಳನ್ನು ಸರ್ಕಾರದ ಮತ್ತು ಈ ಕಛೇರಿಯ ಉಲ್ಲೇಖಿತ ಪತ್ರಗಳಂತೆ ನಿಯಮಾನುಸಾರ ಸ್ವೀಕರಿಸಿ ಯಶಸ್ವಿ ಅನುಷ್ಠಾನಕ್ಕೆ ಮುಖ್ಯಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ರವರು ಅಗತ್ಯ ಕ್ರಮವಹಿಸಿ ಅನುಪಾಲನೆ

ಮಾಡುವುದು. ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರನ್ನು ಒಳಗೊಂಡ ತಂಡ ಹಾಗೂ ಶಾಲೆಯೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕಿಸಲು ಸಹಾಯವಾಗುವಂತೆ ವಾಟ್ಸ್ ಅಪ್ ಗ್ರೂಪ್ ರಚನೆ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಾಲಾ ಅಭಿವೃದ್ಧಿಗೆ ಕಾರ್ಯೋನ್ಮುಖರಾಗುವುದು.

logoblog

Thanks for reading 2024 regarding the formation of School Alumni Association for all-round development of government schools of the state under the 'Namma Shala Namma Responsibilities' programme.

Previous
« Prev Post

No comments:

Post a Comment