ಕರ್ನಾಟಕ ರಾಜ್ಯದಲ್ಲಿ ಈಗಾಗಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಹಾಗು ಪೋಷಕರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಹಾಗು ಪೋಷಕರಲ್ಲಿ ಎಸ್‌ಎಸ್‌ಎಲ್ಸಿ ನಂತರ ಏನು ಮಾಡಬೇಕು..? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು..? ಎನ್ನುವ ಪ್ರಶ್ನೆ ಕಾಡುತ್ತಿದೆ. ಅಂತಹ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಸ್‌ಎಸ್‌ಎಲ್ಸಿ ನಂತರ ಆಯ್ಕೆ ಮಾಡಬಹುದಾದ ಕೆಲವು ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳು ಹಾಗು ಪೋಷಕರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಹಾಗು ಪೋಷಕರಲ್ಲಿ ಎಸ್‌ಎಸ್‌ಎಲ್ಸಿ ನಂತರ ಏನು ಮಾಡಬೇಕು..? ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು..? ಎನ್ನುವ ಪ್ರಶ್ನೆ ಕಾಡುತ್ತಿದೆ.
ಯಾಕೆಂದರೆ 1 ತರಗತಿಯಿಂದ ಎಸ್‌ಎಸ್‌ಎಲ್‌ದಿ ವರೆಗೂ ವಿದ್ಯಾರ್ಥಿ ಜೀವನದಲ್ಲಿ ಇತಂಹ ಆಯ್ಕೆಗಳಿಗೆ ಅವಕಾಶವಿರುವುದಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಶ್ನೆ ಉದ್ಭವಿಸಿರುವ ಕಾರಣ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸಂಧಿಗ್ಧ ಪ್ರಶ್ನೆ ಎದುರಾಗುತ್ತದೆ. ಅಂತಹ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಸ್‌ಎಸ್‌ಎಲ್ಸಿ ನಂತರ ಆಯ್ಕೆ ಮಾಡಬಹುದಾದ ಕೆಲವು ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಪಿಯುಸಿ (ಪದವಿ ಪೂರ್ವ ಶಿಕ್ಷಣ )
ಎಸ್‌ಎಸ್‌ಎಲ್‌ಸಿ ನಂತರ ಎಲ್ಲರು ಮೊದಲು ಸಜೆಸ್ಟ್ ಮಾಡುವುದು ಪಿಯುಸಿ ಯನ್ನ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್‌ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ ( ವಿಜ್ಞಾನ ವಿಭಾಗ), ಕಾಮರ್ಸ್ ( ವಾಣಿಜ್ಯ ವಿಭಾಗ), ಆರ್ಟ್ಸ ( ಕಲಾ ವಿಭಾಗ ), ಈ ಮೂರು ವಿಭಾಗಗಳಲ್ಲಿ ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದಾಗಿದೆ.
ಸೈನ್ಸ್ ( ವಿಜ್ಞಾನ ವಿಭಾಗ)
ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಗಿಸಿ ಪಿಯುಸಿ ಹಂತವನ್ನು ಏರಿದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಪದವಿಪೂರ್ವ ಕೋರ್ಸುಗಳು ಹೀಗಿವೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ (PCMB)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ (PCMC)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ (PCME)
ಕಾಮರ್ಸ್ ( ವಾಣಿಜ್ಯ ವಿಭಾಗ)
ಇನ್ನು ವಾಣಿಜ್ಯ ವಿಭಾಗದಲ್ಲಿ- ಯಾರಿಗೆ ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ, ಚಾರ್ಟರ್ಡ್ ಅಕೌಂಟೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದಕ್ಕೆ ಅವಕಾಶ ನೀಡುತ್ತದೆ. ಇನ್ನು ಯಾವ ವಿದ್ಯಾರ್ಥಿಯೂ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ನಿಮಗೆ ಬಿಟ್ಟಿದ್ದು.
ಆರ್ಟ್ಸ್ ( ಕಲಾ ವಿಭಾಗ )
ಇನ್ನು ಕಲೆ- ಭಾಷಾ ವಿಷಯದಲ್ಲಿ ಪಾಂಡಿತ್ಯ ಇರುವವರು ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಹಲವಾರು ಅವಕಾಶಗಳನ್ನು ಒದಗಿಸಿಕೊಡಬಹುದು. ಜೊತೆಗೆ ಹಲವಾರು ಆಯ್ಕೆಗಳು ಕೂಡ ನಿಮಗೆ ಇಲ್ಲಿ ಸಿಗಬಹುದು. ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಬಹುದು. ಅದಲ್ಲದೆ ಪಿಯುಸಿ ನಂತರ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಮಾಡುವುದಕ್ಕೂ ಅವಕಾಶವಿದೆ.
ಡಿಪ್ಲೊಮ ಕೋರ್ಸ್‌ಗಳು
ಎಸ್ಎಸ್ಎಲ್ಸಿ ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ನಿಮಗೆ ಅವಕಾಶವಿದೆ. ಅದಲ್ಲದೆ ಎಸ್‌ಎಸ್‌ಎಲ್ಸಿ ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಗಳು ಕೂಡಾ ಬೇಕಾಗಿದ್ದಲ್ಲಿ ಇಂಜಿನಿಯರಿಂಗ್‌ನಲ್ಲಿ ನೀವು ಡಿಪ್ಲೊಮ ಮಾಡಬಹುದು.
ಇಂಜಿನಿಯರಿಂಗ್ ಡಿಪ್ಲೊಮ ಕೋರ್ಸುಗಳು
ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್
ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್
ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್‌ಗಳು.
ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್‌ಗಳನ್ನು ಕೂಡ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ.
ಡಿಪ್ಲೊಮ ಕೋರ್ಸ್‌ಗಳು
ಡಿಪ್ಲೊಮ ಇನ್ ಫಾರ್ಮಸಿ
ಡಿಪ್ಲೊಮ ಇನ್ ನರ್ಸಿಂಗ್ ಮತ್ತು ಮಿಡ್ ವೈಫರಿ
ಡಿಪ್ಲೊಮ ಇನ್ ಇಂಟೀರಿಯರ್ ಡಿಸೈನಿಂಗ್
ಡಿಪ್ಲೊಮ ಇನ್ ಪ್ರಿಂಟಿಂಗ್ ಟೆಕ್ನಾಲಜಿ
ಡಿಪ್ಲೊಮ ಟೂಲ್ ಆಂಡ್ ಡೈ ಮೇಕಿಂಗ್
ಡಿಪ್ಲೊಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ
ಡಿಪ್ಲೊಮ ಇನ್ ಪೌಲ್ಟ್ರಿ
ಡಿಪ್ಲೊಮ ಇನ್ ಲೆದರ್ ಟೆಕ್ನಾಲಜಿ
ಡಿಪ್ಲೊಮ ಇನ್ ಮ್ಯೂಸಿಕ್(ಕರ್ನಾಟಿಕ್ ಮತ್ತು ಸಂಗೀತ)
ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ
ಡಿಪ್ಲೊಮ ಇನ್ ಫುಡ್ ಟೆಕ್ನಾಲಜಿ.
ಹೀಗೆ ಹಲವು ಆಯ್ಕೆಳಿದ್ದು, ನಿಮಗೆ ಯಾವುದು ಸುಲಭ ಎನಿಸುತ್ತದೆ ಹಾಗೂ ಯಾವ ವಿಷಯದ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದೆ ಆ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವುದು ಉತ್ತಮ. ನಿಮ್ಮ ಆಯ್ಕೆ ನಿಮ್ಮ ಮುಂದಿವೆ.
ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎನ್ನುವ ಚಿಂತೆ ಬಿಡಿ.. ಇಲ್ಲಿವೆ ಹಲವು ಕೋರ್ಸ್‌ಗಳು..
ಎಸ್ಎಸ್ಎಲ್ಸಿ ನಂತರ ವಿದ್ಯಾರ್ಥಿಗಳು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ಆರ್ಥಿಕತೆಯ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಕೇಳಗಿನ ಲೇಖನದಲ್ಲಿ ಹಲವು ಕೋರ್ಸ್‌ಗಳ ಮಾಹಿತಿಯನ್ನು ನೀಡಲಾಗಿದೆ.
ಇನ್ನೇನು ಕೇಲವೆ ದಿನಗಳಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಲಿದೆ. ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾದ ನಂತರ ವಿದ್ಯಾರ್ಥಿಗಳು ತಾವು ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಆಧಾರದ ಮೇಲೆ ಅವರ ಭವಿಷ್ಯದಲ್ಲಿ ವೃತ್ತಿಯ ಆಯ್ಕೆಗೆ ಅನುಕೂಲ ಆಗುತ್ತದೆ. ಇಲ್ಲಿ ಮಾಡುವ ಕೋರ್ಸ್‌ಗಳ ಆಯ್ಕೆ ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ ಭವಿಷ್ಯದ ಗುರಿಗೆ ಸಜ್ಜಾಗಲು ನೆರವಾಗುತ್ತದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿ ತನ್ನ ಆಸಕ್ತಿ, ಸಾಮರ್ಥ್ಯ ಹಾಗೂ ಆರ್ಥಿಕತೆಯ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಕೆಳಗೆ ಎಸ್‌ಎಸ್‌ಎಲ್‌ಸಿ ನಂತರ ಯಾವೆಲ್ಲಾ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದಾದ ಕೋರ್ಸ್‌ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
ಪಿಯುಸಿ (ಪದವಿ ಪೂರ್ವ ಶಿಕ್ಷಣ )
ಎಸ್‌ಎಸ್‌ಎಲ್‌ಸಿ ನಂತರ ಎಲ್ಲರು ಮೊದಲು ಸಜೆಸ್ಟ್ ಮಾಡುವುದು ಪಿಯುಸಿ ಯನ್ನ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್‌ನಲ್ಲಿ ನೀವು ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ ( ವಿಜ್ಞಾನ ವಿಭಾಗ), ಕಾಮರ್ಸ್ ( ವಾಣಿಜ್ಯ ವಿಭಾಗ), ಆರ್ಟ್ಸ ( ಕಲಾ ವಿಭಾಗ ), ಈ ಮೂರು ವಿಭಾಗಗಳಲ್ಲಿ ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದಾಗಿದೆ.
ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿ ನಂತರ ಅಥವಾ ಪಿಯುಸಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಬಹುದು. ಇದು ಮೂರು ವರ್ಷಗಳ ಕೋರ್ಸ್ ಆಗಿದೆ. ಈ ಕೋರ್ಸ್ ನಂತರ ಉತ್ತಮ ಉದ್ಯೋಗವಕಾಶಕಗಳು ಇವೆ.
ಕರ್ನಾಟಕದಲ್ಲಿ ಎಂಟು ಹೊಸ ಡಿಪ್ಲೊಮ ಕೋರ್ಸ್‌ಗಳಿವೆ. ಈ ಕೋರ್ಸ್‌ಗಳನ್ನು ಎಸ್‌ಎಸ್‌ಎಲ್‌ಸಿ ನಂತರ ಅಧ್ಯಯನ ಮಾಡಬಹುದು.
ಆಟೊಮೇಷನ್ ಮತ್ತು ರೊಬೊಟಿಕ್ಸ್ (Automation and Robotics)
ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ (Cloud Computing and Big Data)
ಫುಡ್ ಪ್ರೊಸೆಸಿಂಗ್ ಮತ್ತು ಪ್ರಿಸರ್ವೇಷನ್ (Food processing and preservation)
ಪ್ರವಾಸೋದ್ಯಮ (Travel and Tourism).
ಸೈಬರ್ ಭದ್ರತೆ (Cyber security).
ನಿರ್ದೇಶನ ಮತ್ತು ಚಿತ್ರಕತೆ ರಚನೆ, ಟಿವಿ ಕಾರ್ಯಕ್ರಮಗಳ ನಿರ್ಮಾಣ (Direction Screen Play Writing and TV Production).
ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security).
ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ (Alternative Energy Technology).
ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ನಂತರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಎರಡು ವರ್ಷದ ಕೋರ್ಸ್ ಆಗಿದ್ದು ಈ ಕೋರ್ಸ್ ನಂತರ ಉನ್ನತ ವ್ಯಾಸಂಗವನ್ನು ಮುಂದುವರೆಸಬಹುದು. ಅನೇಕ ಡಿಪ್ಲೊಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಕೋರ್ಸ್‌ನ ನಂತರ ಖಾಸಗಿ ಕೈಗಾರಿಕಾ ಕಂಪನಿಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಅಧಿನದ ಇಲಾಖೆಗಳು ಹಾಗೂ ಕೆಲವು ಸಚಿವಾಲಯಗಳಲ್ಲಿ ಉದ್ಯೋಗ ಅವಕಾಶ ಇದೆ.
ಅಲ್ಪಾವಧಿಯ ಕೋರ್ಸ್‌ಗಳು
ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಷನ್.
ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್‌ಗಳು.
ಡಿಜಿಟಲ್ ಮಾರ್ಕೆಟಿಂಗ್.
ಡಿಪ್ಲೊಮ ಇನ್ 2ಡಿ ಮತ್ತು 3ಡಿ ಎನಿಮೇಷನ್.
ಪ್ರೋಗ್ರಾಮಿಂಗ್ ಲಾಂಗ್ವೆಜ್ ಸರ್ಟಿಫಿಕೇಟ್ ಕೋರ್ಸ್‌ಗಳು.
ಹೀಗೆ ಹಲವು ಅಲ್ಪಾವಧಿಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ.
ಅರೆವೈದ್ಯಕೀಯ ಕೋರ್ಸ್‌ಗಳು..
ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
ಡಿಪ್ಲೊಮ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
ಡಿಪ್ಲೊಮ ಇನ್ ಹೆಲ್ತ್ ಇನ್‌ಸ್ಪೆಕ್ಟರ್.
ಡಿಪ್ಲೊಮ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ.
SSLC ವಿದ್ಯಾರ್ಥಿಗಳ ಪರೀಕ್ಷೆಯ ನಂತರ ಮುಂದೇನು ? ಯಾವ ಕೋರ್ಸ್‌ಗಳಿವೆ ಕೋರ್ಸ್ ಆಯ್ಕೆ ಮಾಡುವಾಗ ಈ ಅಂಶಗಳು ಗೊತ್ತಿರಲಿ...
No comments:
Post a Comment