ಏಪ್ರಿಲ್. 16: ಈ ವರ್ಷ ಕರ್ನಾಟಕ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಯನ್ನು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿದೆ. ರಾಜ್ಯದ ಸುಮಾರು 8.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದೆ.
ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬರುವ ಮೌಲ್ಯಮಾಪಕರ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಸಂಭಾವನೆ ಬಿಲ್ಲುಗಳನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡಿ ಸಲ್ಲಿಸುವ ಬಗ್ಗೆ ಕರ್ನಾಟಕ ಸರ್ಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಆದೇಶ ಹೊರಡಿಸಿದೆ.
ಮಾರ್ಚ್/ಏಪ್ರಿಲ್-2024 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಉತ್ತರ ಪತ್ರಿಕೆಗಳ ಮೌಲ್ಯಮಾಪನಾ ಕಾರ್ಯವು ಏಪ್ರಿಲ್ 15 ರಿಂದ ಪ್ರಾರಂಭವಾಗಿದ್ದು, ಸದರಿ ಕೇಂದ್ರಗಳಲ್ಲಿ ಮಾಲ್ಯಮಾಪನಾ ಕಾರ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸುವ ಮೌಲ್ಯಮಾಪಕರ ಹಾಗೂ ಅಧಿಕಾರಿ / ಸಿಬ್ಬಂದಿಯ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಸಂಭಾವನೆ ಬಿಲ್ಲುಗಳನ್ನು ಮಂಡಳಿ ಒದಗಿಸುವ ಲಾಗಿನ್ ಮೂಲಕ ಆನ್‌ಲೈನ್‌ನಲ್ಲಿಯೇ ದಾಖಲೀಕರಣದೊಂದಿಗೆ ಸಲ್ಲಿಸಲು ತಿಳಿಸಿದೆ. ಸದರಿ ಆನ್‌ಲೈನ್ ಬಿಲ್ಲುಗಳನ್ನು ಮಂಡಳಿಯಲ್ಲಿ ಪರಿಶೀಲಿಸಿ, ಅರ್ಹ ಮೊತ್ತವನ್ನು ಸಂಬಂಧಿಸಿದ ಮೌಲ್ಯಮಾಪಕರುಗಳ ಬ್ಯಾಂಕ್ ಖಾತೆಗೆ ನೆಫ್ಟ್ ಮೂಲಕ ಜಮೆಗೊಳಿಸಲಾಗುವುದು.
ದಿನಭತ್ಯೆ ಮತ್ತು ಸಂಭಾವನೆ ಮೊತ್ತದ ವಿವರ ಹಾಗೂ ಪಾಲಿಸಬೇಕಾದ ಕ್ರಮಗಳು
1. ಮೌಲ್ಯಮಾಪಕರುಗಳು ತಮಗೆ ಒದಗಿಸಿರುವ ಆನ್‌ಲೈನ್ ಬಿಲ್ ಪೋರ್ಟಲ್‌ನಲ್ಲಿ ಕೋರಿರುವ ಮಾಹಿತಿಯನ್ನು, ಬ್ಯಾಂಕ್ ಖಾತೆ ವಿವರಗಳೊಂದಿಗೆ ಭರ್ತಿಮಾಡಬೇಕು ಮತ್ತು ಉಪ ಮುಖ್ಯಮೌಲ್ಯಮಾಪಕರು ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿಸಿರಬೇಕು.
2. ಉಪ ಮುಖ್ಯ ಮೌಲ್ಯಮಾಪಕರು, ಸಹಾಯಕ ಮೌಲ್ಯಮಾಪಕರುಗಳ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಸಂಭಾವನೆಯನ್ನು ಪರಿಗಣಿಸುವಾಗ ಕೆಳಕಂಡಂತೆ ಮಾಹಿತಿಗಳನ್ನು ಖಾತರಿಪಡಿಸಿಕೊಂಡು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದು.
ಬಿಲ್ಲುಗಳನ್ನು ಪರಿಶೀಲಿಸುವಾಗ ಮೌಲ್ಯಮಾಪಕರು ಸ್ಥಳೀಯರೇ ಅಥವಾ ಪರಸ್ಥಳದಿಂದ ಬಂದವರೇ ಎಂಬುದನ್ನು ಕಡ್ಡಾಯವಾಗಿ ಅವರ ವೇತನ ಪ್ರಮಾಣ ಪತ್ರ ಹಾಗೂ ಶಾಲೆಯಿಂದ ಮೌಲ್ಯಮಾಪನಾ ಕಾರ್ಯಕ್ಕೆ ಬಿಡುಗಡೆಗೊಂಡಿರುವ ಆದೇಶ ಪತ್ರವನ್ನು ಪರಿಶೀಲಿಸಿ ದೃಢಪಡಿಸಿಕೊಂಡು ದಿನಭತ್ಯೆ ಯನ್ನು ದಾಖಲಿಸುವುದು.
* ಮೌಲ್ಯಮಾಪಕರು ವೈಯಕ್ತಿಕ ಮಾಹಿತಿಯನ್ನು ಹಾಗೂ ಬ್ಯಾಂಕ್ ಖಾತೆ, IFSC Code ಒಳಗೊಂಡ ಮಾಹಿತಿಯನ್ನು ನೋಂದಣಿ ವೇಳೆಯಲ್ಲಿ ಮೂಲ ದಾಖಲೆಗಳೊಂದಿಗೆ ಸಲ್ಲಿಸಬೇಕು.
* ಮೌಲ್ಯಮಾಪಕರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಿಂದ ಮೌಲ್ಯಮಾಪನಾ ಕೇಂದ್ರಕ್ಕೆ ಇರುವ ನೈಜ ದೂರವನ್ನು ಸ್ಪಷ್ಟವಾಗಿ ನಮೂದಿಸುವಂತೆ ಸೂಚಿಸಬೇಕು.
* ನಿಯಮಾನುಸಾರ ಅನ್ವಯಿಸುವ ದಿನಭತ್ಯೆ / ಸ್ಥಳೀಯ ಭತ್ಯೆ & ಸಂಭಾವನೆಯ, ಎ.ಇ. ಗಳ ಬಿಲ್‌ನ್ನು ಡಿ.ಸಿ.ಇ ಗಳು, ಡಿ.ಸಿ.ಇ ಗಳ ಬಿಲ್‌ನ್ನು ಜೆ.ಸಿ.ಇ ಗಳು ಹಾಗೂ ಜೆ.ಸಿ.ಇ ಗಳ ಬಿಲ್‌ನ್ನು ಕ್ಯಾಂಪಿನ ಕಸ್ಟೋಡಿಯನ್ ರವರು, ಕ್ಯಾಂಪ್ ಕಸ್ಟೋಡಿಯನ್ & ಸಿಬ್ಬಂದಿಗಳ ಬಿಲ್‌ನ್ನು ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸುವುದು.
* ಬಿಲ್ಲಿನಲ್ಲಿರುವ ಯಾವುದೇ ಕಾಲಂನ್ನು ಖಾಲಿ ಬಿಡುವಂತಿಲ್ಲ.
* ಪ್ರತಿ ದಿನಕ್ಕೆ ನಿಗದಿಪಡಿಸಿರುವ ಒಟ್ಟು 20 ಉತ್ತರ ಪತ್ರಿಕೆಗಳಲ್ಲಿ ಅಂತಿಮ ದಿನ ಒಂದು ವೇಳೆ ಭಿನ್ನಾಂಶ ಬಂದಲ್ಲಿ, 10 ಕ್ಕಿಂತ ಕಡಿಮೆ ಇದ್ದಲ್ಲಿ, ಅಥವಾ 10 ಪತ್ರಿಕೆ ಯವರೆಗೆ ಅರ್ಧ ದಿನಭತ್ಯೆ ಹಾಗೂ 10 ಕ್ಕಿಂತ ಮೇಲ್ಪಟ್ಟಿದ್ದಲ್ಲಿ ಮಾತ್ರ ಪೂರ್ಣ ದಿನಭತ್ಯೆಗೆ ಪರಿಗಣಿಸುವುದು.
* ನಿಯಮಗಳನ್ನು ಮೀರಿ ಹೆಚ್ಚಿನ ಹಣ ಪಾವತಿಗೆ ಕಾರಣರಾದಲ್ಲಿ ಕ್ರಮವಾಗಿ ಸಂಬಂಧಿಸಿದ ಉಪ ಮುಖ್ಯ ಮೌಲ್ಯಮಾಪಕರು, ಜಂಟಿ ಮುಖ್ಯ ಪರೀಕ್ಷಕರು, ಕ್ಯಾಂಪಿನ ಕಸ್ಟೋಡಿಯನ್, & ನೋಡಲ್ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ.
* ಒಂದು ವೇಳೆ ಬಿಲ್ಲುಗಳಲ್ಲಿ ತಪ್ಪು ಮಾಹಿತಿ ನಮೂದಿಸಿದ್ದಲ್ಲಿ ಸಂಬಂಧಿಸಿದ ಶಿಕ್ಷಕರಿಂದ ಅಗತ್ಯ ಮಾಹಿತಿ ಪಡೆದು ಕೂಡಲೇ ಪಾವತಿಗೆ ಕ್ರಮವಹಿಸುವುದು.
* ಆನ್‌ಲೈನ್ ಪೋರ್ಟಲ್‌ನಲ್ಲಿ ನಮೂದಿಸುವ ಬ್ಯಾಂಕ್ ವಿವರದ ಮಾಹಿತಿಯನ್ನೇ ಆಧರಿಸಿ ಹಣ ಜಮೆಗೆ ಕ್ರಮವಹಿಸುವುದರಿಂದ, ತಪ್ಪು ಮಾಹಿತಿಯಿಂದ / ಕಾರಣಾಂತರಗಳಿಂದ ಬ್ಯಾಂಕ್ ನೆಫ್ಟ್ ತಿರಸ್ಕೃತಗೊಂಡಲ್ಲಿ, ಸಂಬಂಧಿಸಿದ ಮೌಲ್ಯಮಾಪಕರೇ ಹೊಣೆಗಾರರಾಗಿರುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಮಂಡಳಿಗೆ ದೂರವಾಣಿ / ಪತ್ರ ವ್ಯವಹರಿಸಿ ಇತ್ಯರ್ಥಪಡಿಸಿಕೊಳ್ಳಬಹುದಾಗಿರುತ್ತದೆ.
3. ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಸಂಭಾವನೆ ವಿವರ
* ಪ್ರಯಾಣ ಭತ್ಯೆ: ಬಸ್ಸಿನ ಪ್ರಯಾಣ ದರವನ್ನು ಮಂಜೂರು ಮಾಡುವಾಗ ಪ್ರಯಾಣದ ದೂರವು 200 ಕಿ.ಮೀ. ಗಿಂತಲೂ ಕಡಿಮೆ ಇದ್ದಲ್ಲಿ ಪ್ರತಿ ಕಿಮೀಗೆ 1 ರೂಪಾಯಿಯಂತೆ ಹಾಗೂ ಅದಕ್ಕಿಂತ ಮೇಲ್ಪಟ್ಟಿದ್ದಲ್ಲಿ ಪ್ರತಿ ಕಿಮೀಗೆ 1.31 ರೂಪಾಯಿಯಂತೆ ಲೆಕ್ಕಾಚಾರ ಮಾಡಿ ನೀಡುವುದು.
ಸ್ಥಳೀಯ ಭತ್ಯೆ :
1. ಬೆಂಗಳೂರು ನಗರಕ್ಕೆ : 258/- ರೂಪಾಯಿ
2. ಇತರೆ ಸ್ಥಳಗಳಿಗೆ : 208/- ರೂಪಾಯಿ
* ದಿನಭತ್ಯೆ:
1. ಬೆಂಗಳೂರು ನಗರಕ್ಕೆ : 657/- ರೂಪಾಯಿ (ಹೊರಗಿನಿಂದ ಬಂದ ಮೌಲ್ಯಮಾಪಕರಿಗೆ ಮಾತ್ರ)
2. ಇತರೆ ಸ್ಥಳಗಳಿಗೆ : 517/- ರೂಪಾಯಿ
ಸಂಭಾವನೆ:
ಜಂಟಿ ಮುಖ್ಯ ಪರೀಕ್ಷಕರಿಗೆ (ಜೆ.ಸಿ.ಇ) ಸಂಭಾವನೆ : 6,012/- ರೂಪಾಯಿ
ಉತ್ತರ ಪತ್ರಿಕೆಗಳ ಪರಿಶೀಲನೆಗೆ (ಪೂರ್ಣ ಅವಧಿಗೆ ಒಟ್ಟಾರೆ): 2,004 - 8,016 ರೂಪಾಯಿ
ಉಪ ಮುಖ್ಯ ಪರೀಕ್ಷಕರಿಗೆ (ಡಿ.ಸಿ.ಇ) ಸಂಭಾವನೆ : 5,422/ ರೂಪಾಯಿ
ಉತ್ತರ ಪತ್ರಿಕೆಗಳ ಪರಿಶೀಲನೆಗೆ : 602/- 6,024/- ರೂಪಾಯಿ
ಉತ್ತರ ಪತ್ರಿಕೆಗಳ ಸಂಭಾವನೆ ವಿವರ :
ಪ್ರತಿ ದಿನ ಮೌಲ್ಯಮಾಪನ ಮಾಡಬೇಕಾದ ಉತ್ತರ ಪತ್ರಿಕೆಗಳ ಸಂಖ್ಯೆ 20 ಆಗಿದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಮಾಹಿತಿ ತಂತ್ರಜ್ಞಾನ/ ರೀಟೇಲ್ / ಆಟೋ ಮೊಬೈಲ್/ ಹೆಲ್ತ್ ಕೇರ್/ ಬ್ಯೂಟಿ ಮತ್ತು ವೆಲ್‌ನೆಸ್ ಭಾಷೆಗಳ ಎಲ್ಲಾ ಪತ್ರಿಕೆಗಳಿವೆ. ಪ್ರಥಮ ಭಾಷೆಗೆ ಮಾತ್ರ ಪ್ರತಿ ಉತ್ತರ ಪತ್ರಿಕೆಗೆ 25 ರೂಪಾಯಿ ನೀಡಲಾಗುತ್ತದೆ. ಉಳಿದ ಎಲ್ಲಾ ಪತ್ರಿಕೆಗಳಿಗೆ 23 ರೂಪಾಯಿಯಂತೆ ಸಂಭಾವನೆ ನಿಗದಿಪಡಿಸಲಾಗಿದೆ.
ಕ್ಯಾಂಪ್ ಕಸ್ಟೋಡಿಯನ್ ಮತ್ತು ಸಿಬ್ಬಂದಿಗೆ :
1. ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ - 4,978 ರೂಪಾಯಿ
2. ಗರಿಷ್ಟ ಇಬ್ಬರು ಕಾರ್ಯ ನಿರ್ವಾಹಕರುಗಳಿಗೆ ತಲಾ 1,389 ರೂಪಾಯಿ
3. ಗರಿಷ್ಟ ಇಬ್ಬರು ಡಿ-ದರ್ಜೆ ನೌಕರರಿಗೆ ತಲಾ 2. 695 ರೂಪಾಯಿ. ಈ ಸಂಭಾವನೆಯು ಮೌಲ್ಯಮಾಪನಾ ಕಾರ್ಯದ ಪ್ರಾರಂಭದ ದಿನದಿಂದ ಮುಗಿಯುವವರೆಗೆ ಅನ್ವಯಿಸುತ್ತದೆ.
No comments:
Post a Comment