2023-24ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಬರೆದ ವಿದ್ಯಾರ್ಥಿಗಳು ಹಾಗೂ ಇವರ ಪೋಷಕರು ತಿಳಿಯಲೇಬೇಕಾದ ಮಾಹಿತಿ ಇದು. ಈ ಪರೀಕ್ಷೆ ಮೌಲ್ಯಮಾಪನ, ರಿಸಲ್ಟ್ ಕುರಿತು ಪ್ರಮುಖ ಮಾಹಿತಿಗಳು ಇಲ್ಲಿವೆ.
ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ಒಟ್ಟು 3 ಪರೀಕ್ಷೆಗಳನ್ನು ಈ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನಡೆಸಲಾಗುತ್ತಿದೆ. ಅದರಂತೆ ಈಗಾಗಲೇ ಪರೀಕ್ಷೆ 1 ಆರಂಭವಾಗಿದ್ದು, ಏಪ್ರಿಲ್ 06 ರಂದು ಅಂತ್ಯಗೊಳ್ಳಲಿದೆ. ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಎಷ್ಟು ಬೇಗ ಮೌಲ್ಯಮಾಪನ ಮುಗಿಯುತ್ತೋ, ಎಷ್ಟು ಬೇಗ ಫಲಿತಾಂಶ ಬರುತ್ತೋ ಅನ್ನೋ ಪ್ರಶ್ನೆ ಮೂಡುವಲ್ಲಿ ಯಾವುದೇ ಸಂಶಯವಿಲ್ಲ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಕೆಎಸ್‌ಇಎಬಿ ಈ ಬಾರಿ 3 ಪರೀಕ್ಷೆಗಳನ್ನು (ಪೂರಕ ಪರೀಕ್ಷೆ ಅಲ್ಲದ) ನಡೆಸುವ ಹಿನ್ನೆಲೆಯಲ್ಲಿ, ಬಹುಬೇಗ ಪರೀಕ್ಷೆ 1 ರಿಸಲ್ಟ್ ಪ್ರಕಟಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಮಂಡಲಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಏಪ್ರಿಲ್ 15 ರಿಂದಲೇ ನಡೆಸಲು ಕ್ರಮಕೈಗೊಂಡಿದೆ.
ಮೌಲ್ಯಮಾಪನವನ್ನು ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಎಚ್ಚರಿಕೆಯಿಂದ ನಡೆಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಮಂಡಳಿಯು ಸೂಚನೆಯನ್ನು ಸಹ ನೀಡಿದೆ. ಅಲ್ಲದೇ ಇವ್ಯಾಲುಯೇಷನ್ ಪ್ರಕ್ರಿಯೆಯ ಡಿಡಿಪಿಐಗಳು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಮಾರ್ಗಸೂಚಿಯನ್ನು ಮಂಡಳಿ ಪ್ರಕಟಿಸಿದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಕರ್ನಾಟಕದಾದ್ಯಂತ ಏಪ್ರಿಲ್ 15 ರಿಂದ ಪ್ರಾರಂಭಗೊಳ್ಳಲಿದೆ. ಮೌಲ್ಯಮಾಪಕರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು. ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ವ್ಯಕ್ತಿಗಳು ಕೇಂದ್ರಕ್ಕೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇನ್ನು ಮೌಲ್ಯಮಾಪನ ಕಾರ್ಯ ನಡೆಸಲಾಗುವ ಕೇಂದ್ರಗಳ ಶಾಲಾ ಕಟ್ಟಡದ 200 ಮೀಟರ್ ಪ್ರದೇಶವನ್ನು ನಿಷೇಧಿತವೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಇತರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅದನ್ನು ಪಾಲಿಸಲು ಸೂಚನೆಯನ್ನು ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರಿಸಲ್ಟ್ ಯಾವಾಗ?
ಏಪ್ರಿಲ್ 15 ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗುವ ಹಿನ್ನೆಲೆಯಲ್ಲಿ ನೋಡುವುದಾದಲ್ಲಿ ಈ ಹಿಂದೆ ತಿಳಿಸಿದಂತೆ ಮೇ 8 ರಂದು ಅಥವಾ ಮೇ 15 ರ ನಂತರವೇ ಎಸ್‌ಎಸ್‌ಎಲ್‌ಸಿ ರಿಸಲ್ಟ್ ನಿರೀಕ್ಷಿಸಬಹುದಾಗಿದೆ. ಮೇ 23 ರಂದು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಮಾಡುವ ಕುರಿತು ಈ ಹಿಂದೆ ಕೆಎಸ್‌ಇಎಬಿ ತಿಳಿಸಿತ್ತು. ಕಾರಣ ಈ ಪ್ರಕ್ರಿಯೆಗಳನ್ನು ಮುಗಿಸಿ ರಿಸಲ್ಟ್ ಬಿಡುಗಡೆ ಮಾಡಲು ಒಂದು ತಿಂಗಳಾದರು ಕಾಲಾವಕಾಶ ಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಬರೆದ ವಿದ್ಯಾರ್ಥಿಗಳು
ಪರೀಕ್ಷೆ 2 ಗೆ ಶೀಘ್ರದಲ್ಲೇ ವೇಳಾಪಟ್ಟಿ
ಪರೀಕ್ಷೆ 1 ಮುಗಿಯುತ್ತಿದ್ದಂತೆ ಒಂದು ವಾರದ ಒಳಗಾಗಿ ಮಂಡಲಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಈ ಹಿಂದಿನ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ದಿನಾಂಕಗಳು
ಜೂನ್ 12-19 ರವರೆಗೆ ಪರೀಕ್ಷೆ. ಜೂನ್ 29 ಕ್ಕೆ ರಿಸಲ್ಟ್ ಬಿಡುಗಡೆ. ಜುಲೈ 10 ರಂದು ಮರುಮೌಲ್ಯಮಾಪನದ ರಿಸಲ್ಟ್ ಬಿಡುಗಡೆ.
ಮೈಸೂರು/ಮೈಸೂರು : ನಗರದಾದ್ಯಂತ 6 ಕೇಂದ್ರಗಳಲ್ಲಿ ಅ.12ರಿಂದ 25ರವರೆಗೆ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದ್ದು, ನಗರ ಪೊಲೀಸರು 200 ಮೀಟರ್‌ಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ಮೌಲ್ಯಮಾಪನ ಕೇಂದ್ರಗಳ ಸುತ್ತ ಮುಂಜಾನೆ 6 ರಿಂದ ಸಂಜೆ 6 ರವರೆಗೆ.
ಅದರಂತೆ ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳ ಸಂಚಾರ ಮತ್ತು ಆಕ್ಷೇಪಾರ್ಹ ಲೇಖನಗಳನ್ನು ಸಾಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಗರದಲ್ಲಿನ ಮೌಲ್ಯಮಾಪನ ಕೇಂದ್ರಗಳು: ಗೋಪಾಲಸ್ವಾಮಿ ಶಿಶುವಿಹಾರದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಲಕ್ಷ್ಮೀಪುರಂ, ಕಾವೇರಿ ಪಿಯು ಕಾಲೇಜು, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಜ್ಞಾನಗಂಗಾ ಪ್ರೌಢಶಾಲೆ, ಕುವೆಂಪುನಗರ, ಗುಡ್ ಶೆಫರ್ಡ್ ಕಾನ್ವೆಂಟ್, ಲಷ್ಕರ್ ಮೊಹಲ್ಲಾ, ಸೇಂಟ್ ಫಿಲೋಮಿನಾ ಮತ್ತು ಪ್ರೌಢಶಾಲೆ, ಎನ್.ಆರ್. ನಿರ್ಮಲಾ ಪ್ರೌಢಶಾಲೆ, ವಿವಿ ಮೊಹಲ್ಲಾ.

No comments:
Post a Comment