ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ ಮಾದರಿ / ಆಟಲ್ ಬಿಹಾರಿ ವಾಜಪೇಯಿ / ಶ್ರೀಮತಿ ಇಂದಿರಾ ಗಾಂಧಿ / ಡಾ| ಬಿ.ಆರ್. ಅಂಬೇಡ್ಕರ್ / ಮಾಸ್ತಿ ವೆಂಕಟೇಶ ಅಯ್ಯಂಗಾರ್ / ಸಂಗೊಳ್ಳಿ ರಾಯಣ್ಣ / ಕವಿರನ್ನ / ಗಾಂಧಿತತ್ವ / ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ದಾಖಲಾತಿ ಪ್ರವೇಶ ಪರೀಕ್ಷೆ-2024ರ ಅಂತಿಮ Rank list ಪ್ರಕಟ.
ಕೆಆರ್‌ಇಐಎಸ್‌ನ ವಿವಿಧ ವಸತಿ ಶಾಲೆಗಳಲ್ಲಿ 6ನೇ ಕ್ಲಾಸ್ ಪ್ರವೇಶಕ್ಕೆ ನಡೆಸಿದ್ದ ಎಂಟ್ರ್ಯಾನ್ಸ್ ಟೆಸ್ಟ್ ರಿಸಲ್ಟ್ ಅನ್ನು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಬಿಡುಗಡೆ ಮಾಡಿದೆ. ಚೆಕ್ ಮಾಡಲು ಲಿಂಕ್ ಹಾಗೂ ವಿಧಾನ ಇಲ್ಲಿ ತಿಳಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಹಲವು ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ನಡೆಸಿದ ಅರ್ಹತಾ ಪರೀಕ್ಷೆಯ ಫಲಿತಾಂಶವನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ನೀವಾಗಿದ್ದಲ್ಲಿ ಈಗಲೇ ರಿಸಲ್ಟ್ ಚೆಕ್ ಮಾಡಿಕೊಳ್ಳಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜಿಲ್ಲಾವಾರು ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಾವು ಪರೀಕ್ಷೆ ಬರೆದ ಜಿಲ್ಲೆಯನ್ನು ಆಯ್ಕೆ ಮಾಡಿ ರಿಸಲ್ಟ್ ಚೆಕ್ ಮಾಡಬಹುದು.
ಮೆರಿಟ್ ಪಟ್ಟಿಯಲ್ಲಿ ವಿದ್ಯಾರ್ಥಿಗಳ SATS ನಂಬರ್, ರಿಜಿಸ್ಟ್ರೇಷನ್ ನಂಬರ್, ಹೆಸರು, ಜನ್ಮ ದಿನಾಂಕ, ಅಂಕಗಳು, State Rank ಎಷ್ಟು ಎಂಬ ಮಾಹಿತಿಗಳನ್ನು ನೀಡಲಾಗಿದೆ. ರಿಸಲ್ಟ್ ಚೆಕ್ ಮಾಡುವ ವಿಧಾನ, ಲಿಂಕ್ ಅನ್ನು ಕೆಳಗಿನಂತೆ ನೀಡಲಾಗಿದೆ.
ಕೆಆರ್‌ಇಐಎಸ್ ಪ್ರವೇಶ ಪರೀಕ್ಷೆ ರಿಸಲ್ಟ್ ಚೆಕ್ ಮಾಡುವ ವಿಧಾನ
- ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶಕ್ಕಾಗಿ ಎಂಟ್ರ್ಯಾನ್ಸ್ ಟೆಸ್ಟ್ ಬರೆದ ವಿದ್ಯಾರ್ಥಿಗಳು ವೆಬ್ ವಿಳಾಸ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಇತ್ತೀಚಿನ ಪ್ರಕಟಣೆಗಳು ಮೆನು ಅಡಿಯಲ್ಲಿ ಜಿಲ್ಲಾವಾರು ಮೆರಿಟ್ ಪಟ್ಟಿ ಪ್ರಕಟಿಸಲಾಗಿದ್ದು, ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಪಿಡಿಎಫ್ ಪುಟವೊಂದು ತೆರೆಯುತ್ತದೆ. ಫಲಿತಾಂಶ ಚೆಕ್ ಮಾಡಿಕೊಳ್ಳಿ.
ಕೆಇಎ ಪ್ರಸ್ತುತ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಸೀಟು ಹಂಚಿಕೆ ಪಟ್ಟಿಗಳನ್ನು ಬಿಡುಗಡೆ ಮಾಡಲಿದೆ. ನಂತರ ಪ್ರವೇಶಕ್ಕೆ ನೀಡಿದ ವೇಳಾಪಟ್ಟಿಯಂತೆ ಅಗತ್ಯ ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.
ಪ್ರವೇಶ ಪರೀಕ್ಷೆ ಮೂಲಕ ಯಾವೆಲ್ಲ ವಸತಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಅವಕಾಶ ನೀಡಲಾಗುತ್ತದೆ.
ಏಕಲವ್ಯ ಮಾದರಿ ವಸತಿ ಶಾಲೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ
ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ
ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
ಕವಿರನ್ನ ವಸತಿ ಶಾಲೆ
ಗಾಂಧಿತತ್ವ ವಸತಿ ಶಾಲೆ
ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳು
6ನೇ ಕ್ಲಾಸ್ ಪ್ರವೇಶ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿ ಪ್ರಕಟ...
2023-24ನೇ ಸಾಲಿನ ಕೆಆರ್‌ಇಐಎಸ್ ಶಾಲೆಗಳ ಆರನೇ ತರಗತಿ ಅಡ್ಮಿಷನ್ ಸಂಬಂಧ ನಡೆಸಿದ್ದ ಸಿಇಟಿ ಪರೀಕ್ಷೆಯ ಆಧಾರದಲ್ಲಿ ಇದೀಗ ಅಂತಿಮ ಮೆರಿಟ್ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. ಚೆಕ್ ಮಾಡಲು ಲಿಂಕ್, ವಿಧಾನ ಇಲ್ಲಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಸಂಬಂಧ, ಎಂಟ್ರ್ಯಾನ್ಸ್ ಎಕ್ಸಾಮ್ ಬರೆದ ವಿದ್ಯಾರ್ಥಿಗಳ ಅಂತಿಮ ಮೆರಿಟ್ ಪಟ್ಟಿಯನ್ನು ಇದೀಗ ಕೆಇಎ ಬಿಡುಗಡೆ ಮಾಡಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳು / ಅವರ ಪೋಷಕರು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ ಮೆರಿಟ್ ಪಟ್ಟಿ ಚೆಕ್ ಮಾಡಿಕೊಳ್ಳಬಹುದು.
ಪ್ರಸ್ತುತ ಬಿಡುಗಡೆ ಮಾಡಿರುವ ಕೆಆರ್‌ಇಐಎಸ್ ಅಂತಿಮ ಮೆರಿಟ್ ಪಟ್ಟಿಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಇ-ಮೇಲ್ keauthority-ka@nic.in ಗೆ ಏಪ್ರಿಲ್ 17, 2024 ರ ಸಂಜೆ 05-00 ಗಂಟೆಯೊಳಗೆ ತಲುಪಿಸಬಹುದು.
ಜಿಲ್ಲಾವಾರು ಅಂತಿಮ ಶ್ರೇಣಿ ಪಟ್ಟಿಯಲ್ಲಿ ವಿದ್ಯಾರ್ಥಿಗಳ STATS ನಂಬರ್, ರಿಜಿಸ್ಟ್ರೇಷನ್ ನಂಬರ್, ವಿದ್ಯಾರ್ಥಿಗಳ ಹೆಸರು, ಲಿಂಗ, ಜನ್ಮ ದಿನಾಂಕ ಮಾಹಿತಿ, ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ರಾಜ್ಯ ಶ್ರೇಣಿಯ ಮಾಹಿತಿಗಳನ್ನು ನೀಡಿದೆ.
ಆಕ್ಷೇಪಣೆ ಸ್ವೀಕಾರ ನಂತರ, ಅವುಗಳನ್ನು ಪರಿಶೀಲಿಸಿ ಮುಂದಿನ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಲಿದೆ.
KREIS 2024 ಅಂತಿಮ ಮೆರಿಟ್ ಪಟ್ಟಿ ಚೆಕ್ ಮಾಡುವ ವಿಧಾನ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ವಿಳಾಸ https://cetonline.karnataka.gov.in/kea/ ಕ್ಕೆ ಭೇಟಿ ನೀಡಿ.
- 'ಇತ್ತೀಚಿನ ಪ್ರಕಟಣೆಗಳು' ಅಡಿಯಲ್ಲಿ ಗಮನಿಸಿ.
- ಏಪ್ರಿಲ್ 12 ರಂದು ಪ್ರಕಟವಾಗಿರುವ ಜಿಲ್ಲಾವಾರು ಆಯ್ಕೆಪಟ್ಟಿಗಳ ಲಿಂಕ್ ಇರುತ್ತದೆ.
- ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
- ಪಿಡಿಎಫ್ ಫೈಲ್ ಓಪನ್ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ಹೆಸರು ಇರುವ ಬಗ್ಗೆ ಚೆಕ್ ಮಾಡಿಕೊಳ್ಳಿ.
ಯಾದಗಿರಿ, ವಿಜಯಪುರ, ವಿಜಯನಗರ, ಉತ್ತರ ಕನ್ನಡ, ಉಡುಪಿ, ತುಮಕೂರು, ಶಿವಮೊಗ್ಗ, ರಾಮನಗರ, ರಾಯಚೂರು, ಮೈಸೂರು, ಮಂಡ್ಯ, ಕೊಪ್ಪಳ, ಕೋಲಾರ, ಕೊಡಗು, ಕಲಬುರಗಿ, ಹಾವೇರಿ, ಹಾಸನ, ಗದಗ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕೋಡಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳ ಪ್ರತ್ಯೇಕ ಅಂತಿಮ ಮೆರಿಟ್ ಪಟ್ಟಿಯ ಲಿಂಕ್‌ಗಳನ್ನು ನೀಡಲಾಗಿದೆ.
ಈ ಕೆಳಗಿನ ಲಿಂಕ್ ಮೂಲಕ ಜಿಲ್ಲಾವಾರು ರ್ಯಾಂಕ್ ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

No comments:
Post a Comment