File Type: Check your all policy details, deduction details, login details, if login issue- how to solve that, mobile number update and other details
File Language: English or Kannada
How download file: click on given link wait a second it's start to download,
Where to click for download: after the given image, below there is a link which was mentioned as "Click to download "
How to apply online application: After the image there will be online application link or link of the official website, click then apply online application
How to find single page information: Click on the image, which was uploaded below the text, then magnifying that images to read, if you need to further use please download it
Which Department: Education
State: Karnataka
Published Date: April 2024
File format: jpg and pdf
File size: 84785 kb
Number of pages: 2
Availability for download: Yes
Availability of website link: Yes
Scanned copy : Yes
Editable Text: No
Copy text: No
Print enable: Yes
Quality: High
File size reduced: No
Password protected: No
Password encrypted: No
Image file available: Yes
Cost: free of cost
Go Green!!! Print this only if necessary
Government Employees: ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ‘KGID Online` ಬಳಕೆ ಹೇಗೆ ಗೊತ್ತಾ?
ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದಂತ ಕೆಜಿಐಡಿ ವ್ಯವಸ್ಥೆ, ಕೊನೆಗೂ ಆನ್ ಲೈನ್ ಆಗಿದೆ. ಇನ್ಮುಂದೆ ಕೆಜಿಐಡಿ ಮಾಹಿತಿಯನ್ನು ಸರ್ಕಾರಿ ನೌಕರರು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಹಾಗಿದ್ದರೇ.. ಕೆಜಿಐಡಿ ಆನ್ ಲೈನ್ ಮೂಲಕ ಹೇಗೆ ಬಳಕೆ ಮಾಡಬೇಕು ಎಂಬುವುದನ್ನ ತಿಳಿಯಿರಿ.
ಕರ್ನಾಟಕ ಸರ್ಕಾರ ವಿಮಾ ಇಲಾಖೆ(KGID) ವ್ಯವಸ್ಥೆ, ಈಗ ಸರ್ಕಾರಿ ನೌಕರರಿಗೆ ಆನ್ ಲೈನ್ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ https://kgidonline.karnataka.gov.in ಎನ್ನುವಂತ ಆನ್ ಲೈನ್ ವೆಬ್ ಸೈಟ್ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕೆಜಿಐಡಿ ಮಾಹಿತಿ, ಈಗ ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.
ಇದಾದ ನಂತ್ರ, ಮೊದಲಿಗೆ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ಅಂದ್ರೇ.. ರಾಜ್ಯ ಸರ್ಕಾರಿ ನೌಕರರ ಶಾಶ್ವತ ವಿಳಾಸ ಮತ್ತು ಪಿನ್ ಕೋಡ್ ಅನ್ನು ಮಾತ್ರ ಭರ್ತಿ ಮಾಡಬೇಕು. ಆನಂತ್ರ ವೈವಾಹಿಕ ಸ್ಥಿತಿ ಅನ್ನು ಬದಲಿಸುವುದಿದ್ದರೇ ಬದಲಿಸಬಹುದು. ಇಲ್ಲದೇ ಹಾಗೆಯೇ ನೆಕ್ಟ್ ಆಯ್ಕೆ , ಮುಂದುವರೆಯಿರಿ.
ಕೆಜಿಐಡಿ ಟ್ಯಾಬ್(KGDI Tab) ನಲ್ಲಿ ಕಡಿತಗೊಳಿಸಬೇಕಾದ ಮಾಸಿಕ ವಿಮಾ ಕಂತಿನ ವಿವರ (ಕನಿಷ್ಠ) ರೂ ತೋರಿಸುತ್ತದೆ. ಪ್ರೀಮಿಯಂ ಮೊತ್ತವನ್ನು ನಮೂದಿಸಿ. ಒಂದು ವೇಳೆ ನೀವು ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಬಯಸಿದ್ರೇ.. ಅಂತಹ ಅರ್ಜಿದಾರರು ತಮ್ಮ ಸಂಬಳದ ಶೇ.50ಕ್ಕಿಂತ ಕಡಿಮೆ ಮೊತ್ತವನ್ನು ಉಲ್ಲೇಖಿಸಬಹುದಾಗಿದೆ. ಆನಂತ್ರ ನೆಕ್ಟ್ ಆಯ್ಕೆ , ಮುಂದೆ ಸಾಗಿ..
ಕುಟುಂಬದ ವಿವರ ಭರ್ತಿಯ ಪುಟದಲ್ಲಿ ಕುಟುಂಬದ ವಿವರ ಆಯ್ಕೆ ಮಾಡಿಕೊಂಡು, ನೌಕರರು ಕುಟುಂಬ(Employees Family)ದ ಸದಸ್ಯರ ಅಂದರೆ ಸಂಬಂಧ, ಸದಸ್ಯರ ಹೆಸರು, ಹುಟ್ಟಿದ ದಿನಾಂಕ, ಜೀವಂತವೇ ಅಥವಾ ಮರಣ ಸ್ಥಿತಿಯ ವಿವರ ನಮೂದಿಸಿ ನೆಕ್ಟ್ ಮುಂದುವರೆದ್ರೇ ನಂತ್ರದ ಪುಟ ತೆರೆದುಕೊಳ್ಳಲಿದೆ.
ಅರ್ಜಿದಾರರು ಈಗಿನ ಪುಟದಲ್ಲಿ ನಾಮಿನಿ ವಿವರ(Nominee Details)ಗಳನ್ನು ಭರ್ತಿ ಮಾಡಬೇಕಾಗಿರುತ್ತದೆ. ನಾಮ ನಿರ್ದೇಶಿತ ವ್ಯಕ್ತಿಯ ಹೆಸರು ಆಯ್ಕೆ ಮಾಡಿ ಮತ್ತು ಶೇಕಡಾವಾರು ಹಂಚಿಕೆಯನ್ನು ನಮೂದಿಸಿ. ಇಲ್ಲಿ ಗಮನಿಸಿ, ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು. ಆದ್ರೇ.. ಒಟ್ಟು % ಪಾಲು 100%ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಾರದು.
ಇದಾದ ಬಳಿಕ ಆನಂತ್ರದ ಪುಟದಲ್ಲಿ ನೀವು ವೈಯಕ್ತಿಕ ವಿವರಗಳನ್ನು, ಡಿಕ್ಲೆರೇಷನ್ ಕಂಡಿಷನ್ ಒಪ್ಪಿ, ಮಾಸಿಕ ಪ್ರೀಮಿಯಂ(Monthly Premium) ಮೊತ್ತ ನಮೂದಿಸಿ, ನೌಕರರು ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೇ.. ನೌಕರರ ಭೌತಿಕ ವಿವರಗಳ ಭರ್ತಿಯ ನಂತ್ರ, ನೌಕರರ ಆರೋಗ್ಯ ಸ್ಥಿತಿಯ ವಿವರ ಭರ್ತಿ ಮಾಡಿ, ವೈದ್ಯರ ವಿವರಗಳಲ್ಲಿ ರಾಜ್ಯ ಪರಿಮಿತಿಯೊಳಗಿನ ವೈದ್ಯರು, ಇತರೆ ರಾಜ್ಯ ವೈದ್ಯರು ಆಯ್ಕೆ ಮಾಡಿಕೊಂಡು ಒಪ್ಪಿಗೆ ಸೂಚಿಸಿದ್ರೇ.. ನಿಮ್ಮ ಕೆಜಿಐಡಿ ಖಾತೆ ಆನ್ ಲೈನ್ ಮೂಲಕ ಸಕ್ರೀಯವಾಗಲಿದೆ.
ಸರಕಾರಿ ನೌಕರರು ಮತ್ತು ನಿವೃತ್ತ ಸಿಬ್ಬಂದಿ ಕಡ್ಡಾಯ ಜೀವ ವಿಮಾ ಯೋಜನೆಯಡಿ ಮಾಡಿಸಿರುವ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂ.ಗಳಿಗೆ 90 ರೂ. ಲಾಭಾಂಶವನ್ನು ಕರ್ನಾಟಕ ಸರಕಾರಿ ವಿಮಾ ಇಲಾಖೆ (ಕೆಜಿಐಡಿ) ಪ್ರಕಟಿಸಿದೆ.
ವಿಮಾ ಗಣಕರು ಮಾಡಿರುವ ಶಿಫಾರಸಿನಂತೆ ಲಾಭಾಂಶ ಪ್ರಕಟಿಸಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದು 2010ರಿಂದ 2012ರವರೆಗಿನ ವಿಮಾ ಮೊತ್ತಕ್ಕೆ ಅನ್ವಯವಾಗಲಿದೆ. 2012ರ ಏ.1ರಿಂದ 2014ರ ಮಾ.31ರ ಅವಧಿಯಲ್ಲಿ ಮೆಚ್ಯೂರಿಟಿಯಾಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ 90 ರೂ. ಮಧ್ಯಾಂತರ ಲಾಭಾಂಶವನ್ನೂ ಘೋಷಿಸಲಾಗಿದೆ.

No comments:
Post a Comment