Hon'ble DK Shivakumar Deputy Chief Minister's letter to Hon'ble Chief Minister regarding appointment of date to discuss cancellation of NPS by Government of Karnataka
ಸಂಪುಟ ಚರ್ಚೆ ಬಳಿಕ ಎನ್‌ಪಿಎಸ್ ರದ್ದು ನಿರ್ಧಾರ, ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಭರವಸೆ
ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಯಿಂದ ಎದುರಾಗುವ ಸಾಧಕ - ಬಾಧಕಗಳ ಬಗ್ಗೆ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಜುಲೈ 7ರ ಬಜೆಟ್‌ನಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರಿ ನೌಕರ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
ಗೃಹ ಕಚೇರಿ 'ಕೃಷ್ಣಾ'ದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಹಾಗೂ ನಾನಾ ನೌಕರ ಸಂಘಟನೆಗಳ ಪದಾಧಿಕಾರಿಗಳಿಗೆ ಈ ಭರವಸೆ ನೀಡಿದ್ದಾರೆ.
ಬೆಂಗಳೂರು: ರಾಜ್ಯ ಸರಕಾರಿ ನೌಕರ ಸಮುದಾಯದ ಪ್ರಮುಖ ಬೇಡಿಕೆಯಾಗಿರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಯಿಂದ ಎದುರಾಗುವ ಸಾಧಕ - ಬಾಧಕಗಳ ಕುರಿತಂತೆ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಜುಲೈ 7ರ ಬಜೆಟ್‌ನಲ್ಲಿ ಪ್ರಕಟಿಸುವ ಬಗ್ಗೆ ನಿರ್ಧರಿಸಲಾಗುವುದು," ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದರು.
ಗೃಹ ಕಚೇರಿ 'ಕೃಷ್ಣಾ'ದಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಹಾಗೂ ನಾನಾ ನೌಕರ ಸಂಘಟನೆಗಳ ಪದಾಧಿಕಾರಿಗಳ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು. "ನೌಕರರರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದೆ. ಸರಕಾರ ಜಾರಿ ಮಾಡುತ್ತಿರುವ ಐದು 'ಗ್ಯಾರಂಟಿ' ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಲುಪಿಸಲು ನೌಕರ ಸಮುದಾಯ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು,'' ಎಂದು ಸಿಎಂ ಸಲಹೆ ನೀಡಿದರು.
ರಾಜ್ಯದಲ್ಲಿ 2006ರ ಏಪ್ರಿಲ್ 1ರಿಂದ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಿದ್ದು, ಸುಮಾರು 2.98 ಲಕ್ಷ ಸರಕಾರಿ ನೌಕರರು ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದಾರೆ. ನಿಶ್ಚಿತ ಮೊತ್ತದ ಪಿಂಚಣಿ ಖಾತರಿ ಇಲ್ಲದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ನಿವೃತ್ತಿ ಬದುಕಿಗೆ ಆರ್ಥಿಕ ಭದ್ರತೆ ಖಾತರಿಗಾಗಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂಬುದು ನೌಕರ ಸಮುದಾಯದ ಬೇಡಿಕೆಯಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೆಪಿಟಿಸಿಎಲ್, ಆರೋಗ್ಯ, ಜಲಮಂಡಳಿ, ಕಂದಾಯ ಇಲಾಖೆ ನೌಕರರ ಸಂಘಗಳು ಸೇರಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಈ ನಿಯೋಗದಲ್ಲಿದ್ದರು.
ಹೊಸ ಪಿಂಚಣಿ ಯೋಜನೆ ನಡೆದು ಬಂದ ಹಾದಿ
2006ರಲ್ಲಿ ಎನ್‌ಪಿಎಸ್‌ಗೆ ಅಂದಿನ ಕೇಂದ್ರ ಸರಕಾರ ಪ್ರಾಸ್ತಾವಿಕ ಅನುಮೋದನೆ ನೀಡಿತು
2010-11ರ ಸಾಲಿನಲ್ಲಿ ನೂತನ ಪಿಂಚಣಿ ಯೋಜನೆ ವ್ಯವಸ್ಥಿತವಾಗಿ ಜಾರಿಗೊಂಡಿತು
ಇದರ ಅನಾನುಕೂಲಗಳನ್ನು ಅರಿತ ಪಿಂಚಣಿದಾರರು ನಂತರ ಹೋರಾಟ ಶುರು ಮಾಡಿದರು
ಎನ್‌ಪಿಎಸ್ ವಿರೋಧಿಸಿ ಹೋರಾಟ ನಡೆಸುವುದಕ್ಕಾಗಿಯೇ ನಿವೃತ್ತರು ಸಂಘ ಸ್ಥಾಪಿಸಿದರು
ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ಎಂಟು ವರ್ಷಗಳಿಂದ ಹೋರಾಟ ನಡೆಸುತ್ತಿದೆ
ಶಾಂತರಾಮ್ ತೇಜ ನೇತೃತ್ವದಲ್ಲಿ ರಾಜ್ಯಾದ್ಯಂತ ಪಿಂಚಣಿದಾರರನ್ನು ಜಾಗ್ರತಗೊಳಿಸುವ ಹೋರಾಟಗಳು ನಡೆದಿವೆ.
ಹಳೆ ಪಿಂಚಣಿಯಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತದೆ ಎನ್ನುವುದು ಕೇಂದ್ರ ಸರಕಾರದ ವಾದ
* ನಿವೃತ್ತರ ಪಿಂಚಣಿಯಿಂದ 10%, ಸರಕಾರದ ಭಾಗವಾಗಿ 14% ಹಣ ಕೂಡಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿ, ಬರುವ ಲಾಭಾವಂಶವನ್ನು ಪಿಂಚಣಿದಾರರಿಗೆ ಮರಳಿಸುವ ಯೋಜನೆಯನ್ನು ಕೇಂದ್ರ ಹಮ್ಮಿಕೊಂಡಿದೆ.
ಎನ್‌ಪಿಎಫ್ ಖಾತೆದಾರರು ಶೀಘ್ರದಲ್ಲೇ ಪಾಸ್‌ವರ್ಡ್ ಮೂಲಕ ಆಧಾರ್ ಅಥೆಂಟಿಕೇಷನ್ ಪೂರ್ಣಗೊಳಿಸಿ ಲಾಗಿನ್ ಆಗಬೇಕಿದೆ. ಈ ಹೊಸ ನಿಯಮವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಆಧಾರ್ ಅಥೆಂಟಿಕೇಷನ್ ಕುರಿತ ಪೂರ್ಣ ವಿವರ ಇಲ್ಲಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಗೆ ಸಂಬಂಧಿಸಿದಂತೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ಣಾಯಕ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಯು (CRA) ವ್ಯವಸ್ಥೆಯನ್ನು ಅಕ್ಸೆಸ್ ಮಾಡಲು ಕಡ್ಡಾಯವಾಗಿ ಆಧಾರ್ ಅಥೆಂಟಿಕೇಷನ್ ಪೂರ್ಣಗೊಳಿಸಬೇಕಿದೆ. ಹೊಸ ನಿಯಮ ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ. ಪ್ರಸ್ತುತ NPF ವಹಿವಾಟಿಗಾಗಿ CRA ಅನ್ನು ಅಕ್ಸೆಸ್ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೋಡಲ್ ಕಚೇರಿಗಳು ಪ್ರಸ್ತುತ ಪಾಸ್‌ವರ್ಡ್ ಆಧಾರಿತ ಲಾಗಿನ್ ಬಳಸುತ್ತವೆ.
ಆದಾಗ್ಯೂ, CRA ಸಿಸ್ಟಂಗೆ ಹೆಚ್ಚಿನ ಭದ್ರತೆ ಒದಗಿಸಲು ಮತ್ತು NPS ಚಂದಾದಾರರ ಹಿತಾಸಕ್ತಿಗಳನ್ನು ರಕ್ಷಿಸಲು PFRDA ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಪರಿಚಯಿಸಲು ಉದ್ದೇಶಿಸಿದೆ. ಈ ಸಂದರ್ಭದಲ್ಲಿ ಎರಡು ಹಂತದ ಅಥೆಂಟಿಕೇಷನ್ ಅನ್ನು ಪರಿಚಯಿಸಲಾಗಿದೆ.
ಪ್ರಸ್ತುತ, ಬಳಕೆದಾರರು NPS ವಹಿವಾಟುಗಳಿಗಾಗಿ ಯೂಸರ್ ಐಟಿ ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ CRA ಸಿಸ್ಟಂ ಅನ್ನು ಅಕ್ಸೆಸ್ ಮಾಡುತ್ತಿದ್ದಾರೆ. ಇನ್ಮುಂದೆ ಆಧಾರ್ ದೃಢೀಕರಣವನ್ನು ಪಾಸ್‌ವರ್ಡ್‌ನೊಂದಿಗೆ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. 2 ಫ್ಯಾಕ್ಟರ್ ಅಥೆಂಟಿಕೇಷನ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಇತರರಿಂದ ಅನಧಿಕೃತ NPS ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗುವ ಬದಲು ಆಧಾರ್ ಆಧಾರಿತ ಲಾಗಿನ್ ವ್ಯವಸ್ಥೆಯನ್ನು ಸಂಯೋಜಿಸಲಾಗುವುದು ಎಂದು ಪಿಎಫ್‌ಆರ್‌ಡಿಎ ಹೇಳಿದೆ. ಸರ್ಕಾರಿ ಕಚೇರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳು ನಡೆಸುವ ಎಲ್ಲಾ ಎನ್‌ಪಿಎಸ್ (NPS) ಚಟುವಟಿಕೆಗಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಪ್ರಸ್ತುತ, ಆಧಾರ್ ಆಧಾರಿತ ಲಾಗಿನ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಏಪ್ರಿಲ್ 1 ರಿಂದ ಲಭ್ಯವಾಗಲಿದೆ. ಸರ್ಕಾರದ ನೋಡಲ್ ಕಚೇರಿಗಳಿಗೆ ಈ ಬದಲಾವಣೆಗಳ ಬಗ್ಗೆ CRA ವಿವರವಾದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP) ತಿಳಿಸಲಿದೆ.
ಎಲ್ಲ ಸಾರ್ವಜನಿಕ ವಲಯದ ಕಚೇರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಇದೇ ಸೂಚನೆಯನ್ನು ಗಮನಿಸಬೇಕಿದೆ. ಎಲ್ಲಾ ಎನ್‌ಪಿಎಸ್ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಆಧಾರ್ ಆಧಾರಿತ ಲಾಗಿನ್ ಅನ್ನು ಕಾರ್ಯಗತಗೊಳಿಸಲು ಅಗತ್ಯ ಚೌಕಟ್ಟನ್ನು ಜಾರಿಗೆ ತರಬೇಕಿದೆ. ಸಿಆರ್‌ಎ ವ್ಯವಸ್ಥೆಯಲ್ಲಿ ಹೆಚ್ಚುವರಿ ಫೀಚರ್ ಅನ್ನು ಪರಿಶೀಲಿಸುತ್ತದೆ ಎಂದು ಪಿಎಫ್‌ಆರ್‌ಡಿಎ ಸರ್ಕ್ಯುಲರ್‌ನಲ್ಲಿ ತಿಳಿಸಿದೆ.
ಭಾಗಶಃ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಪಿಎಫ್‌ಆರ್‌ಡಿಎ ಈ ತಿಂಗಳ ಆರಂಭದಲ್ಲಿ ಮಾಸ್ಟರ್ ಸುತ್ತೋಲೆ ಹೊರಡಿಸಿತ್ತು. NPS ಗ್ರಾಹಕರು ತಮ್ಮ ಹಣದ ಶೇ.25ರಷ್ಟನ್ನು ಮಾತ್ರ ಹಿಂಪಡೆಯಬಹುದು. NPFಗೆ ಸೇರಿದ ಮೂರು ವರ್ಷಗಳ ನಂತರ ಮಾತ್ರ ಭಾಗಶಃ ಹಿಂಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಮೂರು ಬಾರಿಯಷ್ಟೇ ಭಾಗಶಃ ಹಣ ಹಿಂಪಡೆಯಬಹುದು.

No comments:
Post a Comment