Monday, February 26, 2024

Good news for employees who were expecting old pension: Feb. Important meeting of CM regarding OPS implementation on 28t

  Wisdom News       Monday, February 26, 2024
Hedding ; Good news for employees who were expecting old pension: Feb. Important meeting of CM regarding OPS implementation on 28t


OPS in Karnataka : ಹಳೆ ಪಿಂಚಣಿ ಯೋಜನೆಯ ಲಾಭ ನಿಮಗೂ ಸಿಗಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ : ಈ ದಾಖಲೆಗಳು ನಿಮ್ಮ ಬಳಿ ಇರಲೇ ಬೇಕು

ಕರ್ನಾಟಕ ಸರ್ಕಾರವು ತನ್ನ 13,000 ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ ತರಲು ಅಧಿಸೂಚನೆಯನ್ನು ಹೊರಡಿಸಿದೆ. ಯಾವ ಉದ್ಯೋಗಿಗಳು ಏಪ್ರಿಲ್ 1, 2006 ಕ್ಕೆ ಮೊದಲು ಅಧಿಸೂಚನೆ ಪಡೆದಿದ್ದರೋ ಆ ಎಲ್ಲಾ ಉದ್ಯೋಗಿಗಳು ಹಳೆ ಪಿಂಚಣಿ ಯೋಜನೆಯ ಲಾಭ ಪಡೆಯಲಿದ್ದಾರೆ. ಹೊಸ ಪಿಂಚಣಿ ಯೋಜನೆ ವಿರೋಧಿಸಿ ಮುಷ್ಕರ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ನೀಡಿದ ಭರವಸೆಯನ್ನು ಈ ಮೂಲಕ ಈಡೇರಿಸುವುದಾಗಿ ಮುಖ್ಯಮತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ್ದರು.  



ನೌಕರರು ಸಲ್ಲಿಸಬೇಕಾದ ಅರ್ಜಿ ನಮೂನೆಯ ವಿವರ ಹೀಗಿದೆ: 


ಮಾನ್ಯರೇ,  
ವಿಷಯ: ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು : 


ಉಲ್ಲೇಖ: ಸರ್ಕಾರಿ ಆದೇಶ ಸಂ: ಆಇ-ಪಿಇಎನ್/99/2023, ದಿನಾಂಕ 24/01/2024 

ಇಲಾಖೆಯಲ್ಲಿ....... ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ/ ಶ್ರೀಮತಿ..... ಆದ ನಾನು ಪ್ರಪ್ರಥಮವಾಗಿ.... ಇಲಾಖೆಯಲ್ಲಿ...... ಹುದ್ದೆಯಲ್ಲಿ ದಿನಾಂಕ...... ರಂದು ಸರ್ಕಾರಿ ಸೇವೆಯಲ್ಲಿ ವರದಿ ಮಾಡಿಕೊಂಡಿರುತ್ತೇನೆ. ಈ ಹುದ್ದೆಗೆ ನೇಮಕಾತಿ ಅಧಿಸೂಚನೆಯ ಪ್ರಕಟಣೆಯನ್ನು ದಿನಾಂಕ..... ರಂದು ಹೊರಡಿಸಲಾಗಿರುತ್ತದೆ. ನಾನು ಉಲ್ಲೇಖಿತ ಆದೇಶದನ್ವಯ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಲು ಅರ್ಹವಿರುವುದರಿಂದ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನಗೊಳಪಡಿಸಲು ನನ್ನ ಅಭಿಮತವನ್ನು ಈ ಮೂಲಕ ತಿಳಿಸುತ್ತಾ, ಈ ಕೆಳಕಂಡ ಮಾಹಿತಿ/ ದಾಖಲೆಗಳನ್ನು ಇದರೊಂದಿಗೆ ಸಲ್ಲಿಸುತ್ತಿದ್ದೇನೆ. 


ಅರ್ಜಿ ಸಲ್ಲಿಸುವ ವೇಳೆ ಸಲ್ಲಿಸಬೇಕಾದ ದಾಖಲೆಗಳು :  
- ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕದ ಪ್ರತಿ  
- ಸಂಬಂಧಪಟ್ಟ ಆಯ್ಕೆ ಪಟ್ಟಿ ದಿನಾಂಕ ಪ್ರತಿ 
- ನೇಮಕಾತಿ ಆದೇಶ ದಿನಾಂಕ ಪ್ರತಿ 
- ನೇಮಕಾತಿಯ ನಂತರ ಇಲಾಖೆ ಬದಲಾವಣೆಯಾಗಿದ್ದರೆ ಅದರ ವಿವಿರವನ್ನು ಕೂಡಾ ಸಲ್ಲಿಸಬೇಕು. 
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿ/ ಇಲಾಖೆಯ ವಿಳಾಸ , 
- ಕೆಜಿಐಡಿ ಸಂಖ್ಯೆ, NPS ಪ್ರಾನ್ ಸಂಖ್ಯೆ, 
- ಪ್ರಸ್ತುತ ವೇತನ ಚೀಟಿ:



ಅಲ್ಲದೆ, ಅರ್ಜಿ ನಮೂನೆ 2024 ಅನ್ನು ಸಲ್ಲಿಸಲು ಆಸಕ್ತಿ ಹೊಂದಿರುವ ಉದ್ಯೋಗಿ ಅಧಿಕೃತ ವೆಬ್‌ಸೈಟ್ ಅಂದರೆ https://finance.karnataka.gov.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. 


-ಹಳೆಯ ಪಿಂಚಣಿ ಯೋಜನೆಯ ಅಧಿಕೃತ ವೆಬ್‌ಪುಟಕ್ಕೆ ನ್ಯಾವಿಗೇಟ್ ಮಾಡಿ.
-ಮುಖಪುಟದಲ್ಲಿ Apply Online Link ಅನ್ನು ಕ್ಲಿಕ್ ಮಾಡಿ.
-ಅದರ ನಂತರ, ಅರ್ಜಿ ನಮೂನೆಯು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. 
-ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇತರ ಕಡ್ಡಾಯ ವಿವರಗಳನ್ನು ನಮೂದಿಸಿ.
-ಕೆಳಗೆ ತೋರಿಸಿರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
-ಇಷ್ಟು ಮಾಡಿದರೆ ನಿಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. 


ಹಳೆಯ ಪಿಂಚಣಿ ಯೋಜನೆಗೆ ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ? : 
- ಅರ್ಜಿದಾರರು ಮೊದಲು ಅಧಿಕೃತ ವೆಬ್‌ಸೈಟ್ ಅಂದರೆ https://finance.karnataka.gov.in/ ಗೆ ಭೇಟಿ ನೀಡಿ.
-ಈಗ ಮುಖಪುಟದಲ್ಲಿ ನೀಡಿರುವ Application Status ಬಟನ್ ಮೇಲೆ ಕ್ಲಿಕ್ ಮಾಡಿ.
-ಫಾರ್ಮ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ.
-ಕೆಳಗೆ ನೀಡಲಾದ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. 

ಚುನಾವಣೆಗೂ ಮುನ್ನ ನೂತನ ಪಿಂಚಣಿ ವ್ಯವಸ್ಥೆ ವಿರೋಧಿಸಿ ನೌಕರರು ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆ. ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ 13,000 ಉದ್ಯೋಗಿಗಳ ಕುಟುಂಬಗಳಿಗೆ ಪರಿಹಾರ ನೀದುತ್ತಿರುವ್ಯ್ದಾಗಿ ಕಳೆದ ಬುಧವಾರ ಸಿಎಂ ಸಿದ್ದರಾನಯ್ಯ ಘೋಷಿಸಿದ್ದರು. 


ಅನೇಕ ರಾಜ್ಯಗಳಲ್ಲಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಸಾಮಾನ್ಯ ಬಜೆಟ್ ನಲ್ಲಿ ಒಳ್ಳೆಯ ಸುದ್ದಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಸರ್ಕಾರಿ ಉದ್ಯೋಗಿಗಳು ಇದ್ದಾರೆ.




ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ 11 ಸಾವಿರಕ್ಕೂ ಹೆಚ್ಚು ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ ಒಳಪಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ನೌಕರರು ತಮ್ಮ ನಿರ್ಧಾರವನ್ನು ಜೂನ್‌ 30ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ.
ಬೆಂಗಳೂರು: ರಾಜ್ಯ ಸರಕಾರದ ನಾನಾ ಇಲಾಖೆಗಳ ಸುಮಾರು 11,366 ನೌಕರರು ಒಪಿಎಸ್‌ (ಹಳೆಯ ನಿಶ್ಚಿತ ಪಿಂಚಣಿ ಯೋಜನೆ) ವ್ಯಾಪ್ತಿಗೆ ಒಳಪಡಲು ಅವಕಾಶ ಕಲ್ಪಿಸಿ ಸರಕಾರ ಬುಧವಾರ ಆದೇಶ ಹೊರಡಿಸಿದೆ.


2006ರ ಏ.1ರಿಂದ ನೂತನ ಅಂಶದಾಯಿ ಕೊಡುಗೆ ಯೋಜನೆ (ಎನ್‌ಪಿಎಸ್‌) ಜಾರಿಯಾಗಿದೆ. ಈ ದಿನಾಂಕಕ್ಕೆ ಮುನ್ನ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಗಳಂತೆ, ನಂತರ ಸೇವೆಗೆ ಸೇರಿದ ನಾನಾ ಇಲಾಖೆಗಳ ನೌಕರರು ತಮ್ಮನ್ನು ಒಪಿಎಸ್‌ಗೆ ಸೇರಿಸಬೇಕು ಎಂದು ಬಹು ದಿನಗಳಿಂದ ಒತ್ತಾಯಿಸುತ್ತಿದ್ದರು.

ಈ ಬೇಡಿಕೆಯಂತೆ ಎನ್‌ಪಿಎಸ್‌ ಜಾರಿಗೆ ಮುಂಚೆ ಹೊರಡಿಸಲಾಗಿದ್ದ ಅಧಿಸೂಚನೆಗಳ ಪ್ರಕಾರ ನೇಮಕಗೊಂಡಿರುವವರು ಒಪಿಎಸ್‌ ವ್ಯಾಪ್ತಿಗೆ ಒಳಪಡಬಹುದಾಗಿದೆ. ಅದಕ್ಕಾಗಿ ಸಂಬಂಧಪಟ್ಟ ನೌಕರರು ತಮ್ಮ ತೀರ್ಮಾನವನ್ನು ಸಕ್ಷಮ ನೇಮಕಾತಿ ಪ್ರಾಧಿಕಾರದ ಮೂಲಕ ಸಲ್ಲಿಸಲು ಜೂನ್‌ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಹ ನೌಕರರು ಈ ಅವಧಿಯೊಳಗೆ ತಮ್ಮ ಇಚ್ಚೆ ತಿಳಿಸದಿದ್ದರೆ ಎನ್‌ಪಿಎಸ್‌ ಯೋಜನೆಯಲ್ಲಿ ಮುಂದುವರಿಯುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸಂಘದ ಮನವಿ ಪರಿಗಣಿಸಿ ನಾನಾ ಇಲಾಖೆಗಳ 11,366 ನೌಕರ ವರ್ಗವನ್ನು ಒಪಿಎಸ್‌ ವ್ಯಾಪ್ತಿಗೆ ತರಲು ಅವಕಾಶ ಕಲ್ಪಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರಕ್ಕೆ ಅಭಿನಂದನೆಗಳು."
ಸಿ.ಎಸ್‌.ಷಡಕ್ಷರಿ, ರಾಜ್ಯ ಸರಕಾರಿ ನೌಕರರ ಸಂಘ


ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುವುದಾಗಿ ಘೋಷಿಸಿರುವ ಬೆನ್ನಲ್ಲೇ ಹೊಸ ಪಿಂಚಣಿ ಯೋಜನೆ (NPS) ಬಗ್ಗೆ ಅಸಮಾಧಾನ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಎನ್ ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಅನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.ಇದಕ್ಕಾಗಿ ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನೂ ರಚಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


Government Order On Old Pension Scheme : 2006 ರ ಬಳಿಕ ನೇಮಕಾತಿಯಾದ ಸರ್ಕಾರಿ ನೌಕರರಿಗೂ ಹಳೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು 13 ಸಾವಿರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ ನೌಕರರ ಬೇಡಿಕೆ ಈಡೇರಿಸಿದ್ದೇವೆ ಎಂದಿದ್ದಾರೆ.



logoblog

Thanks for reading Good news for employees who were expecting old pension: Feb. Important meeting of CM regarding OPS implementation on 28t

Previous
« Prev Post

No comments:

Post a Comment