Tuesday, November 7, 2023

Regarding the celebration of National Education Day on 11-11-2023

  Wisdom News       Tuesday, November 7, 2023
Subject ; Regarding the celebration of National Education Day on 11-11-2023....

ರಾಷ್ಟ್ರೀಯ ಶಿಕ್ಷಣ ದಿನದ ಆರಂಭ
ಶಿಕ್ಷಣ ಕ್ಷೇತ್ರಕ್ಕೆ ಮೌಲಾನಾ ಅಬುಲ್‌ ಕಲಾಂ ಆಜಾದ್‌ ನೀಡಿದ ಕೊಡುಗೆಯನ್ನು ಗುರುತಿಸಿ ಅವರ ಜನ್ಮದಿನವಾದ ನವೆಂಬರ್‌ 11ರಂದು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲು ಕೇಂದ್ರ ಸರಕಾರ 2008 ಸೆಪ್ಟೆಂಬರ್‌ನಲ್ಲಿ ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್‌ 11ರಂದು ದೇಶಾದ್ಯಂತ ಪ್ರತಿ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಿಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ದಿನದ ಥೀಮ್‌ ಏನು?
ಪ್ರತಿವರ್ಷ ಭಾರತದ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ದಿನಕ್ಕಾಗಿ ಒಂದೊಂದು ಥೀಮ್‌ ಅಥವಾ ಘೋಷವಾಕ್ಯ ನೀಡಿ ಅದರಂತೆ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ರಾಷ್ಟ್ರೀಯ ಶಿಕ್ಷಣ ದಿನದ ಥೀಮ್‌ Changing the course and transforming education. ಕೋರ್ಸ್‌ ಬದಲಾವಣೆ, ಶಿಕ್ಷಣದ ಪರಿವರ್ತನೆಯ ಉದ್ದೇಶವನ್ನುಈ ವರ್ಷ ಇಟ್ಟುಕೊಳ್ಳಲಾಗಿದೆ.

ಮೌಲಾನಾ ಬಗ್ಗೆ ನಿಮಗೆಷ್ಟು ಗೊತ್ತು?
ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ 1888 ನವೆಂಬರ್‌ 11ರಂದು ಜನಿಸಿದರು. ಆಜಾದ್‌ 10 ವರ್ಷದವರಿದ್ದಾಗ ಅವರ ಕುಟುಂಬ ಕೋಲ್ಕತ್ತಾಗೆ ಬಂದಿತು. ಅರಬ್ಬೀ, ಉರ್ದು, ಪರ್ಷಿಯನ್‌, ಇಂಗ್ಲಿಷ್‌ ಭಾಷೆ, ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡಿದ್ದ ಆಜಾದ್‌ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಖಿಲಾಫತ್‌ ಚಳವಳಿಯ ಮುಂದಾಳತ್ವ ವಹಿಸಿ ಹೋರಾಟದ ಕಿಚ್ಚು ಹೆಚ್ಚಿಸಿದರು. ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗಾಗಿ ‘ಆಜಾದ್‌’ ಎಂಬ ನಾಮಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್‌ ಎಂದೇ ಪ್ರಸಿದ್ದರು. ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿದ ಅವರು ಆಧುನಿಕ ಭಾರತದ ಶಿಕ್ಷಣ ಶಿಲ್ಪಿ ಎಂದೇ ಗುರುತಿಸಲ್ಪಟ್ಟಿದ್ದಾರೆ.


ರಾಷ್ಟ್ರೀಯ ಶಿಕ್ಷಣ ದಿನದ ಆಚರಣೆ ಉದ್ದೇಶ
ದೇಶದ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಆಚರಣೆಯ ಮುಖ್ಯ ಉದ್ದೇಶವಾಗಿದೆ. ಅಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ಸೆಮಿನಾರ್‌, ಪ್ರಬಂಧ ಬರವಣಿಗೆ, ವಾಕ್ಚಾತುರ್ಯ ಸ್ಪರ್ಧೆಗಳು, ಕಾರ್ಯಾಗಳು, ಸಾಕ್ಷರತೆ ಪ್ರಾಮುಖ್ಯತೆ ಕುರಿತ ಬ್ಯಾನರ್‌ ಒಳಗೊಂಡ ರಾರ‍ಯಲಿಯನ್ನು ನಡೆಸುವುದು ಇವೇ ಮುಂತಾದ ಕಾರ‍್ಯಗಳನ್ನು ಶಿಕ್ಷಣ ದಿನದಂದು ಹಮ್ಮಿಕೊಳ್ಳಲಾಗುತ್ತದೆ.

ಆಜಾದ್‌ ಪಾತ್ರ
ಕೇಂದ್ರ ಶಿಕ್ಷಣ ಸಲಹಾಮಂಡಳಿ ಅಧ್ಯಕ್ಷರಾಗಿದ್ದ ಆಜಾದ್‌ ಅವರು ವಯಸ್ಕರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರು. ಮಾಧ್ಯಮಿಕ ಶಿಕ್ಷಣ ಮತ್ತು ವೃತ್ತಿ ತರಬೇತಿಗೆ ಒತ್ತು ನೀಡಿದರು. ದಿಲ್ಲಿಯಲ್ಲಿ ಕೇಂದ್ರ ಇನ್ಸಿಟಿಟ್ಯೂಟ್‌ ಸ್ಥಾಪಿಸಿದರು. ಅದು ಮುಂದೆ ಡಿಯು ಶಿಕ್ಷಣ ಇಲಾಖೆಯಾಗಿ ಮಾರ್ಪಟ್ಟಿತು. ಆಜಾದ್‌ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಚಿವಾಲಯವು 1951ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿತು. 1953ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು ರಚಿಸಿತು. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ವಿಭಾಗ ತೆರೆಯಲು ಒತ್ತು ನೀಡಿದರು. ಜಮಿಲಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1992ರಲ್ಲಿ ಅವರಿಗೆ ಕೇಂದ್ರ ಸರಕಾರ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಿತು.


ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನ'ವಾಗಿ ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಭಾರತದ ಹೆಮ್ಮೆಯ ಪುತ್ರ ಡಾ ಮೌಲಾನಾ ಅಬ್ದುಲ್ ಕಲಾಂ ಅಜಾದ್‌ ರ ಜನ್ಮ ದಿನವಾಗಿದ್ದು, ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಣೆ ಮಾಡಲಾಗುತ್ತದೆ.


ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರು. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಮೌಲಾನಾ ಅಜಾದ್ ರವರು 1947 ರ ಆಗಸ್ಟ್‌ 15 ರಿಂದ 1958 ರ ಫೆಬ್ರುವರಿ 2 ರವರೆಗೆ ಸೇವೆ ಸಲ್ಲಿಸಿದ್ದರು. 'ಭಾರತರತ್ನ' ಪ್ರಶಸ್ತಿ ಪುರಸ್ಕೃತರಾದ ಮೌಲಾನಾ ಅಜಾದ್‌ ರವರ ಜನ್ಮದಿನವನ್ನು 'ರಾಷ್ಟ್ರೀಯ ಶಿಕ್ಷಣ ದಿನ'ವಾಗಿ ದೇಶದಾದ್ಯಂತ ಶಾಲೆ-ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಈ ದಿನದಂದು ನೆನಪಿಸಿಕೊಳ್ಳಲಾಗುತ್ತದೆ. '

2008 ರ ಸೆಪ್ಟೆಂಬರ್ 11 ರಂದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಅಜಾದ್‌ ರವರ ಜನ್ಮ ದಿನ ನವೆಂಬರ್ 11 ನೇ ದಿನಾಂಕವನ್ನು 'ರಾಷ್ಟ್ರೀಯ ಶಿಕ್ಷಣ ದಿನ'ವಾಗಿ ಆಚರಣೆ ಮಾಡಲು ನಿರ್ಧರಿಸಿತು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಅದಕ್ಕೆ ಕಾರಣವಾಗಿದೆ. ಅಂದಿನಿಂದ ಅಜಾದ್ ರವರು ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಪ್ರಮುಖ ಕೊಡಗೆಗಾಗಿ, ಭಾರತೀಯರೆಲ್ಲರೂ ಅವರಿಗೆ ಗೌರವ ಸಲ್ಲಿಸಲು, ಅವರ ಸವಿನೆನಪಿಗಾಗಿ 'ರಾಷ್ಟ್ರೀಯ ಶಿಕ್ಷಣ ದಿನ' ಆಚರಿಸಲಾಗುತ್ತದೆ.


ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಈ ದೇಶದ ಒಬ್ಬ ಸ್ಕಾಲರ್ ಆಗಿಯೂ ಮತ್ತು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾಗಿಯೂ ಸಕ್ರಿಯರಾಗಿದ್ದರು. ಭಾರತದ ಪ್ರಪ್ರಥಮ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು ಜಾರಿಗೆ ತಂದಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೊಡುಗೆ ನೀಡಿದ್ದರು. 1922 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ' ನೀಡಿ ಅಜಾದ್‌ರನ್ನು ಗೌರವಿಸಲಾಯಿತು. ಭಾರತದಲ್ಲಿ ಐಐಟಿಗಳ ಸ್ಥಾಪನೆ ಮತ್ತು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗಗಳ ಅಡಿಪಾಯಕ್ಕೂ ಇವರ ಕೊಡುಗೆ ಪ್ರಶಂಸನೀಯವಾದದ್ದು.

ನವೆಂಬರ್ 11, 1888 ರಲ್ಲಿ ಮೌಲಾನಾ ಅಬ್ದುಲ್‌ ಕಲಾಂ ಅಜಾದ್ ರವರು ಜನಿಸಿದರು. ಉರ್ದು ವಿದ್ವಾಂಸರಾದ ಅವರು, ತಮ್ಮ ಬರಹಗಳಿಗೆ 'ಅಜಾದ್ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಆದ್ದರಿಂದ ಅವರು ಮೌಲಾನಾ ಅಜಾದ್ ಎಂದೇ ಪ್ರಸಿದ್ದಿಯಾದರು.

ವಿದ್ಯಾರ್ಥಿಗಳು ಮಾತ್ರವಲ್ಲದೇ ದೇಶದ ಪ್ರತಿಯೊಬ್ಬ ಪ್ರಜೆಯೂ ನೆನೆಯಬೇಕಾದ ಅಜಾದ್‌ ರವರ ಹೇಳಿಕೆಯೊಂದಿದೆ. ಅದೇನೆಂದರೆ 'ಶಿಕ್ಷಣ ಎಂದರೆ ಕೇವಲ ಓದುವುದು ಅಲ್ಲ. ಇತರರಿಂದ ಕಲಿಯುವುದು ಮತ್ತು ಇತರರಿಗೂ ಕಲಿಸುವುದು' ಎಂಬುದನ್ನು ಹೇಳಿಕೊಟ್ಟವರು ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು. ಈ ಮಾತನ್ನು ಸದಾ ಕಿರಿಯರು ಇಂದ ಹಿಡಿದು ಹಿರಿಯರೆಲ್ಲರೂ ನೆನಪಿನಲ್ಲಿ ಇಟ್ಟುಕೊಂಡು ನಡೆಯಬೇಕು.

ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿ ವಿಚಾರಣೆಯ ಮನೋಭಾವ ಬೆಳೆಸುವುದು, ಸೃಜನಶೀಲನೆ ಸಾಮರ್ಥ್ಯ ಹೆಚ್ಚಿಸುವುದು, ಉದ್ಯಮಶೀಲತೆ, ನೈತಿಕ ನಾಯಕತ್ವ ಗುಣಗಳನ್ನು ಬೆಳೆಸುವುದರ ಮೂಲಕ ಅವರ ಅದರ್ಶ ವ್ಯಕ್ತಿಗಳಾಗಬೇಕು". ಇದು ಉತ್ತಮ ಶಿಕ್ಷಣಕ್ಕೆ ನೀಡುವ ಕೊಡುಗೆ ಎಂದಿದ್ದಾರೆ ಮೌಲಾನಾ ಅಜಾದ್‌ರವರು.
- " ನಾಲಿಗೆಯಿಂದ ಬೋಧಿಸುವುದರಿಂದ ಬೆದರಿಸಬಹುದು. ಆದರೆ ಒಳ್ಳೆಯ ಕಾರ್ಯದಿಂದ ಬಲವಾಗಿ ಉಳಿಯಬಹುದು".
- "ಬಹುಸಂಖ್ಯಾತರು ಸಸಿಗಳನ್ನು ನೆಡುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಅದರ ಫಲವನ್ನು ಪಡೆಯುತ್ತಾರೆ".


logoblog

Thanks for reading Regarding the celebration of National Education Day on 11-11-2023

Previous
« Prev Post

No comments:

Post a Comment