Wednesday, November 1, 2023

HK GPSTR COUNSELING UPDATE 2022

  Wisdom News       Wednesday, November 1, 2023
Subject ; HK and Other Bangalore Districts GPSTR Counseling Updates

ಹೈದ್ರಾಬಾದ್ ಕರ್ನಾಟಕದ ಪ್ರಾಥಮಿಕ ಪದವೀಧರ ಶಾಲಾ ಶಿಕ್ಷಕರ ತಡೆ ಹಿಡಿಯಲಾದ ಕೌನ್ಸೆಲಿಂಗ್ ಪಟ್ಟಿಯ ಅಂತಿಮ  ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಮಹತ್ವದ ಆದೇಶ ನೀಡಿದ ಹೈಕೋರ್ಟ್‌
2022ನೇ ಸಾಲಿನಲ್ಲಿ ಅಧಿಸೂಚಿಸಲಾಗಿದ್ದ 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (ಜಿಪಿಎಸ್‌ಟಿಆರ್‌ ) ಸಂಬಂಧಿಸಿದಂತೆ, ಹೈಕೋರ್ಟ್‌ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್ ನೀಡಿದೆ. ನೇಮಕಾತಿಗೆ ಗ್ರೀನ್‌ ಸಿಗ್ನಲ್ ನೀಡಿದೆ.

ಕರ್ನಾಟಕ ರಾಜ್ಯದ 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸಮಸ್ಯೆ ಕೊನೆಗೂ ಬಗೆಹರಿದಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರಿಗೆ ಆದೇಶ ಪತ್ರ ನೀಡಲು ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ.


ಹೌದು, ಈ ಹಿಂದೆ ಮಾರ್ಚ್‌ 08, 2023 ರ ಆಯ್ಕೆ ಪಟ್ಟಿಯಂತೆ 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್‌ ಕಮಲ್‌ರಿದ್ದ ಹೈಕೋರ್ಟ್‌ ವಿಭಾಗೀಯ ಪೀಠವು ಗ್ರೀನ್‌ ಸಿಗ್ನಲ್‌ ನೀಡಿದೆ. ಹಾಗೂ ಈ ಹಿಂದಿನ ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿದೆ.

ಹೈಕೋರ್ಟ್‌ನ ಈ ಹಿಂದಿನ ಏಕಸದಸ್ಯ ಪೀಠವು ನೇಮಕಾತಿ ಮರುರೂಪಿಸಲು ಸೂಚಿಸಿತ್ತು. ಈ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿದೆ. ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣಪತ್ರ ಸಲ್ಲಿಸಿದವರ ಆಯ್ಕೆ ಅಂತಿಮಗೊಳಿಸಲು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶದವರೆಗೆ ಮುಂದೂಡುವಂತೆ ಸೂಚಿಸಿದೆ. ನೊಂದ ಅಭ್ಯರ್ಥಿಗಳು ಕೆಎಸ್‌ಎಟಿಯಲ್ಲಿ ದಾವೆ ಹೂಡಲು ಅವಕಾಶ ನೀಡಿದೆ. ಆದರೆ ಆ ದಾವೆ ಇತ್ಯರ್ಥವಾಗುವವರೆಗೆ ನಿಗದಿತ ನಮೂನೆಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡುವಂತೆ ಸೂಚನೆ ನೀಡಿದೆ.

6 ರಿಂದ 8ನೇ ತರಗತಿಗಳಿಗೆ ಬೋಧಕರ ಕೊರತೆ ಇರುವುದನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದೆ ಹೈಕೋರ್ಟ್‌. ಮೊದಲ ಆಯ್ಕೆಪಟ್ಟಿಯಲ್ಲಿ 451 ಅಭ್ಯರ್ಥಿಗಳನ್ನು ಜೂನ್ 8, 2023 ರ ಆಯ್ಕೆಪಟ್ಟಿಯಲ್ಲಿ ಬದಲಾವಣೆ ಮಾಡಿತ್ತು. ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಅನ್ವಯಿಸಿ ರೂಪಿಸಿದ ಹೊಸ ನಿಯಮದಡಿ 451 ಅಭ್ಯರ್ಥಿಗಳು ಬದಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಹೀಗೆ ನೇಮಕದಿಂದ ಹೊರಗುಳಿದ 451 ಅಭ್ಯರ್ಥಿಗಳ ಭವಿಷ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಆದೇಶದ ನಂತರ ನಿರ್ಧಾರವಾಗಲಿದೆ.

ವಿವಾದವೇನು ? 13,352 ಶಿಕ್ಷಕರ ನೇಮಕಾತಿಗೆ ವಿಳಂಬ ಏತಕ್ಕಾಗಿ?
ರಾಜ್ಯದ ಹಿಂದುಳಿದ ವರ್ಗದ ವಿವಾಹಿತ ಮಹಿಳೆಯನ್ನು ಆಯ್ಕೆಗೆ ಪರಿಗಣಿಸುವಾಗ ಪತಿಯ ಆದಾಯ ಪರಿಗಣನೆಗೆ ಸರ್ಕಾರ ನಿಯಮ ರೂಪಿಸಿತ್ತು. ರಾಜ್ಯ ಸರ್ಕಾರದ ಈ ನೀತಿಯನ್ನು ಏಕಸದಸ್ಯ ಪೀಠ ಅಮಾನ್ಯಗೊಳಿಸಿತ್ತು. ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣ ಪತ್ರ ಆಧರಿಸಲು ಸೂಚಿಸಿತ್ತು. ಇದೀಗ ಏಕಸದಸ್ಯ ಪೀಠದ ಈ ಆದೇಶ ರದ್ದುಪಡಿಸಿದ ಹೈಕೋರ್ಟ್‌, 13,352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಗ್ರೀನ್‌ ಸಿಗ್ನಲ್ ನೀಡಲಾಗಿದೆ.

ಈ ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಿಯೋಜನೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಇದೀಗ ಬಿಗ್‌ ರಿಲೀಫ್ ಸಿಕ್ಕಿದೆ. ಪ್ರಸ್ತುತ ಶಿಕ್ಷಕರ ಕೊರತೆ ನೀಗಿಸಿ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ. ಡಿಸೆಂಬರ್ ವೇಳೆಗೆ ಈ ಸಮಸ್ಯೆ ಬಗೆಹರಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡು ತಿಂಗಳು ಮುಂಚೆಯೇ ಸಮಸ್ಯೆ ಒಂದು ಹಂತಕ್ಕೆ ಬಗೆಹರಿದಿದೆ.

ಶಿಕ್ಷಣ ಇಲಾಖೆಯಿಂದ ಹೊಸ 20,000 ಶಿಕ್ಷಕರ ಭರ್ತಿಗೆ ಕ್ರಮ: ಇದರ ಕುರಿತ ಕಂಪ್ಲೀಟ್‌ ವರದಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿರಿ.

ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಮತ್ತು ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ಕೌನ್ಸೆಲಿಂಗ್ ಪ್ರಕ್ರಿಯೆಯ ಪ್ರಕಟಣೆಯನ್ನು ದಿನಾಂಕ 04-11-2023ರಂದು ಹಮ್ಮಿಕೊಳ್ಳಲಾಗಿದೆ.


 ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಇದನ್ನು ದಿನಾಂಕ 02-11-2023ರಂದು ದಿನ ಪತ್ರಿಕೆಗಳಲ್ಲಿ ರಾಜ್ಯ ಆವೃತ್ತಿಯಲ್ಲಿ ಹಾಗೂ ಎಲೆಕ್ಟ್ರಾನಿಕ್ ಮಾದ್ಯಮಗಳಲ್ಲಿ ಸುದ್ದಿಯಾಗಿ ಉಚಿತವಾಗಿ ಪ್ರಕಟಿಸಲು ಕ್ರಮವಹಿಸುವಂತೆ ಕೋರಿದೆ.





ಅಧಿಕೃತ ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಿ





logoblog

Thanks for reading HK GPSTR COUNSELING UPDATE 2022

Previous
« Prev Post

No comments:

Post a Comment