Wednesday, November 1, 2023

Full Khush for school children! Rows of holidays in the month of November..!

  Wisdom News       Wednesday, November 1, 2023
Subject ; Full Khush for school children! Rows of holidays in the month of November..!


School Holiday: ಶಾಲಾ ಮಕ್ಕಳಿಗೆ ಫುಲ್‌ ಖುಷ್‌! ನವೆಂಬರ್‌ ತಿಂಗಳಲ್ಲಿ ಸಾಲು ಸಾಲು ರಜೆಯೋ ರಜೆ!!!

School Holidays: ನವೆಂಬರ್‌ನಲ್ಲಿ ಮಕ್ಕಳಿಗೆ ಸಾಲು ಸಾಲು ರಜೆಗಳಿದ್ದು, ಮಕ್ಕಳಿಗೆ ಖುಷಿಯೋ ಖುಷಿ. ನವೆಂಬರ್‌ 2023 ರಲ್ಲಿ ಮಕ್ಕಳಿಗೆ ಸಾಕಷ್ಟು ರಜೆಗಳಿವೆ. ಕೆಲವೊಂದು ರಜೆ ಭಾನುವಾರಕ್ಕೆ ಸಂಬಂಧಪಟ್ಟಿದ್ದರೆ, ಉಳಿದ ರಜೆ (School Holidays)ಮಕ್ಕಳಿಗೆ ತಿಳಿದರೆ ಕುಣಿದು ಕುಪ್ಪಳಿಸುವುದು ಖಂಡಿತ.

ನವೆಂಬರ್‌ 1 ರಂದು ಕನ್ನಡ ರಾಜ್ಯೋತ್ಸವ. ಈ ದಿನ ಸರಕಾರಿ ರಜೆ ಇರುವ ಕಾರಣ, ಶಾಲೆಗೆ ರಜೆ ಇರುತ್ತದೆ.

ನವೆಂಬರ್‌ 11 ಶನಿವಾರ ನೀರು ತುಂಬುವ ಹಬ್ಬ, ದೀಪಾವಳಿಯ ಮೊದಲ ದಿನ ಇದು. ಈ ದಿನ ಕೂಡಾ ಸರಕಾರಿ ರಜೆ.

ನವೆಂಬರ್‌ 12 ದೀಪಾವಳಿ ಹಬ್ಬ. ಈ ದಿನ ಮಕ್ಕಳಿಗೆ ರಜೆ.

ನವೆಂಬರ್‌ 14 ಮಕ್ಕಳ ದಿನಾಚರಣೆ. ಈ ಕಾರಣದಿಂದ ರಜೆ ಇರುತ್ತದೆ.

ನವೆಂಬರ್‌ 30 ಕನಕದಾಸ ಜಯಂತಿ. ಈ ದಿನ ಕೂಡಾ ರಜೆ ಇರಲಿದೆ ಮಕ್ಕಳಿಗೆ

ಪ್ರತಿ ಭಾನುವಾರ ರಜೆ ಇರುವುದರಿಂದ ಭಾನುವಾರ ಸೇರಿ ಈ ತಿಂಗಳಲ್ಲಿ ಒಟ್ಟು ಎಂಟು ರಜೆಗಳಿವೆ.

2023 November, Bank holidays list: ಶನಿವಾರ, ಭಾನುವಾರ ಸೇರಿ ಒಟ್ಟು 15 ರಜೆಗಳು ಈ ತಿಂಗಳಲ್ಲೇ ಇವೆ. ದೀಪಾವಳಿ ಹಬ್ಬವಲ್ಲದೇ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಇತ್ಯಾದಿಗೆ ರಜೆಗಳಿವೆ. ಕರ್ವಾ ಚೌತ್, ವಂಗಲಹಬ್ಬ, ಗೋವರ್ಧನ ಪೂಜೆ ಇತ್ಯಾದಿ ವಿವಿಧ ಪ್ರದೇಶಗಳಿಗೆ ಸೀಮಿತವಾದ ಹಬ್ಬಗಳಿಗೆ ಆಯಾ ಪ್ರದೇಶಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ನವೆಂಬರ್ ತಿಂಗಳಲ್ಲಿ ಒಟ್ಟು 9 ರಜೆಗಳಿವೆ. ಇವುಗಳ ಪಟ್ಟಿಯನ್ನು ಇಲ್ಲಿ ಕೆಳಗೆ ನೋಡಬಹುದು.

ಈ ವರ್ಷದ ಹಬ್ಬದ ಸೀಸನ್ (festival season) ಅಕ್ಟೋಬರ್ನಿಂದ ನವೆಂಬರ್ಗೆ ಅಡಿ ಇಡುತ್ತಿದೆ. ದಸರಾ ಇದ್ದ ಅಕ್ಟೋಬರ್ಗಿಂತ ನವೆಂಬರ್ ತಿಂಗಳಲ್ಲಿ ಹೆಚ್ಚು ರಜೆಗಳಿವೆ. ಶನಿವಾರ, ಭಾನುವಾರ ಸೇರಿ ಒಟ್ಟು 15 ರಜೆಗಳು (bank holidays) ಈ ತಿಂಗಳಲ್ಲೇ ಇವೆ. ದೀಪಾವಳಿ ಹಬ್ಬವಲ್ಲದೇ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಇತ್ಯಾದಿಗೆ ರಜೆಗಳಿವೆ. ಕರ್ವಾ ಚೌತ್, ವಂಗಲಹಬ್ಬ, ಗೋವರ್ಧನ ಪೂಜೆ ಇತ್ಯಾದಿ ವಿವಿಧ ಪ್ರದೇಶಗಳಿಗೆ ಸೀಮಿತವಾದ ಹಬ್ಬಗಳಿಗೆ ಆಯಾ ಪ್ರದೇಶಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ನವೆಂಬರ್ ತಿಂಗಳಲ್ಲಿ ಒಟ್ಟು 9 ರಜೆಗಳಿವೆ. ಇವುಗಳ ಪಟ್ಟಿಯನ್ನು ಇಲ್ಲಿ ಕೆಳಗೆ ನೋಡಬಹುದು. ಬ್ಯಾಂಕುಗಳು ಈ ದಿನಗಳಲ್ಲಿ ಬಂದ್ ಆಗಿದ್ದರೂ ಕೂಡ ನಿಮ್ಮ ಸಾಮಾನ್ಯ ಹಣಕಾಸು ಚಟುವಟಿಕೆಗಳಿಗೆ ಹೆಚ್ಚಿನ ಅಡ್ಡಿ ಇರುವುದಿಲ್ಲ. ಎಟಿಎಂಗಳು, ಡಿಜಿಟಲ್ ಬ್ಯಾಂಕಿಂಗ್ ಇದ್ದೇ ಇರುತ್ತದೆ.

2023ರ ನವೆಂಬರ್ ತಿಂಗಳಲ್ಲಿ ವಿವಿಧೆಡೆ ಇರುವ ಬ್ಯಾಂಕ್ ರಜಾ ದಿನಗಳು
ನವೆಂಬರ್ 1 ಬುಧವಾರ: ಕನ್ನಡ ರಾಜ್ಯೋತ್ಸವ, ಕತ್ ಮತ್ತು ಕರ್ವಾ ಚೌತ್ (ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ರಜೆ)
ನವೆಂಬರ್ 5: ಭಾನುವಾರದ ರಜೆ
ನವೆಂಬರ್ 10, ಶುಕ್ರವಾರ: ವಂಗಲ ಹಬ್ಬ (ಮೇಘಾಲಯ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
ನವೆಂಬರ್ 11: ಎರಡನೇ ಶನಿವಾರ
ನವೆಂಬರ್ 12: ಭಾನುವಾರ
ನವೆಂಬರ್ 13, ಸೋಮವಾರ: ಗೋವರ್ಧನ ಪೂಜೆ, ದೀಪಾವಳಿ ಹಬ್ಬ (ತ್ರಿಪುರಾ, ಸಿಕ್ಕಿಂ, ಉತ್ತರಾಖಂಡ್, ಮಣಿಪುರ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಬ್ಯಾಂಕುಗಳಿಗೆ ರಜೆ).
ನವೆಂಬರ್ 14, ಮಂಗಳವಾರ: ದೀಪಾವಳಿ ಹಬ್ಬ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಸಿಕ್ಕಿಂ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ.)
ನವೆಂಬರ್ 15, ಬುಧವಾರ: ದೀಪಾವಳಿ, ಚಿತ್ರಗುಪ್ತ ಜಯಂತಿ, ನಿಂಗೋಲ್ ಚಕ್ಕೋಬಾ, ಭ್ರತೃದ್ವಿತೀಯಾ ಆಚರಣೆ (ಸಿಕ್ಕಿಂ, ಮಣಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಹಿಮಾಚಲಪ್ರದೇಶದಲ್ಲಿ ಬ್ಯಾಂಕುಗಳಿಗೆ ರಜೆ)
ನವೆಂಬರ್ 19: ಭಾನುವಾರದ ರಜೆ
ನವೆಂಬರ್ 20, ಸೋಮವಾರ: ಆರ್ಘ್ಯ (ಬಿಹಾರ ಮತ್ತು ರಾಜಸ್ಥಾನದಲ್ಲಿ ಬ್ಯಾಂಕುಗಳಿಗೆ ರಜೆ)
ನವೆಂಬರ್ 23, ಮಂಗಳವಾರ: ಸೆಂಗ್ ಕುತ್ಸ್ನೆಮ್, ಇಗಾಸ್ ಬಾಗವಾಲ್ ಹಬ್ಬ (ಉತ್ತರಾಖಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ).

ನವೆಂಬರ್ 25: ನಾಲ್ಕನೇ ಶನಿವಾರದ ರಜೆ
ನವೆಂಬರ್ 26: ಭಾನುವಾರದ ರಜೆ
ನವೆಂಬರ್ 27, ಸೋಮವಾರ: ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಮಾ ಮತ್ತು ರಾಹಸ್ ಪೂರ್ಣಿಮಾ ಹಬ್ಬ ಪ್ರಯುಕ್ತ ಮಧ್ಯಪ್ರದೇಶ, ಒಡಿಶಾ, ತ್ರಿಪುರಾ, ಮಿಜೋರಾಂ, ಮಹಾರಾಷ್ಟ್ರ, ಚಂಡೀಗಡ, ಉತ್ತರಾಖಂಡ್, ತೆಲಂಗಾಣ, ರಾಜಸ್ಥಾನ, ಜಮ್ಮು, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ಬಿಹಾರ, ಜಾರ್ಖಂಡ್ ಮತ್ತು ಹಿಮಾಚಲಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ರಜೆ.
ನವೆಂಬರ್ 30, ಗುರುವಾರ: ಕನಕದಾಸ ಜಯಂತಿ (ಕರ್ನಾಟಕದಲ್ಲಿ ರಜೆ)

ಕರ್ನಾಟಕದಲ್ಲಿ ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 5: ಭಾನುವಾರ
ನವೆಂಬರ್ 11: ಎರಡನೇ ಶನಿವಾರ
ನವೆಂಬರ್ 12: ಭಾನುವಾರ
ನವೆಂಬರ್ 14, ಮಂಗಳವಾರ: ದೀಪಾವಳಿ ಹಬ್ಬ
ನವೆಂಬರ್ 19: ಭಾನುವಾರದ ರಜೆ
ನವೆಂಬರ್ 25: ನಾಲ್ಕನೇ ಶನಿವಾರದ ರಜೆ
ನವೆಂಬರ್ 26: ಭಾನುವಾರದ ರಜೆ
ನವೆಂಬರ್ 30, ಗುರುವಾರ: ಕನಕದಾಸ ಜಯಂತಿ

logoblog

Thanks for reading Full Khush for school children! Rows of holidays in the month of November..!

Previous
« Prev Post

No comments:

Post a Comment