10 ಹಾಗೂ 12ನೇ ತರಗತಿಗಳ ಪ್ರಾಯೋಗಿಕ ಪರೀಕ್ಷೆಯ ವೇಳಾ ಪಟ್ಟಿಯನ್ನು ಸಿಬಿಎಸ್‌ಇ ಬಿಡುಗಡೆಗೊಳಿಸಿದೆ. 2024ರ ಜ.1ರಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಚಳಿಗಾಲ ತೀವ್ರ ವಾಗುವ ಪ್ರದೇಶಗಳ ಶಾಲೆಗಳಲ್ಲಿ 2023ರ ನ.14ರಿಂದ ಡಿ.14ರ ವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.
10 ಹಾಗೂ 12ನೇ ತರಗತಿಗಳ ಅಂತಿಮ ಬೋರ್ಡ್ ಪರೀಕ್ಷೆಗಳು 2024ರ ಫೆ.15ರಿಂದ ಆರಂಭವಾಗಿ ಎ.10ಕ್ಕೆ ಸಂಪನ್ನಗೊಳ್ಳುವ ಸಾಧ್ಯತೆಗಳಿವೆ. ಪರೀಕ್ಷೆ ಆರಂಭಕ್ಕೂ ಎರಡು ತಿಂಗಳ ಮುನ್ನ ಅಧಿಕೃತವಾಗಿ ಪರೀಕ್ಷಾ ದಿನಾಂಕವನ್ನು ಸಿಬಿಎಸ್‌ಇ ಪ್ರಕಟಿಸುತ್ತದೆ.
ಇ.ಡಿ. ತನಿಖೆಗೆ ಗೈರಾದ ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿ ವಾಲ್ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ತನಿಖಾ ಸಂಸ್ಥೆಗೆ ಪತ್ರ ಬರೆದಿರುವ ಅವರು, “ಸಮನ್ಸ್ ರಾಜಕೀಯ ಪ್ರೇರಿತ ವಾಗಿದೆ, ವಿಚಿತ್ರವಾಗಿದೆ. ನನಗೆ ನೀಡಿರುವ ಸಮನ್ಸ್ ವಾಪಸ್ ಪಡೆಯಬೇಕು’ ಆಗ್ರಹಿಸಿದ್ದಾರೆ. ತಮಗೆ ಯಾವ ನೆಲೆಯಲ್ಲಿ ಸಮನ್ಸ್ ನೀಡಲಾಗಿದೆ ಎಂದು ಪತ್ರದಲ್ಲಿ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಕೇಜ್ರಿವಾಲ್ ಗೈರುಹಾಜರಾದ ಹಿನ್ನೆಲೆಯಲ್ಲಿ ಇ.ಡಿ. ಅವರಿಗೆ ಹೊಸತಾಗಿ ಸಮನ್ಸ್ ನೀಡಲು ನಿರ್ಧರಿಸಿದೆ.
No comments:
Post a Comment