AISSEE 2023 : ಸೈನಿಕ ಶಾಲೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ..
ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ 2023 ಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಬಿಡುಗಡೆ ಆಗಿದೆ. ಸೈನಿಕ ಶಾಲೆಗಳಲ್ಲಿ ಆರನೇ ತರಗತಿ ಮತ್ತು 9ನೇ ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
2023-24ರ ಶೈಕ್ಷಣಿಕ ಸಾಲಿಗೆ ದೇಶದಾದ್ಯಂತ ಇರುವ ಸೈನಿಕ ಶಾಲೆಗಳಲ್ಲಿ 6 ನೇ ತರಗತಿ ಮತ್ತು 9ನೇ ತರಗತಿಗಳಿಗೆ ಪ್ರವೇಶ ಪಡೆಯಲು, ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದೇಶದಲ್ಲಿ ಇರುವ ಒಟ್ಟು 33 ಸೈನಿಕ ಶಾಲೆಗಳಲ್ಲಿ ಮುಂದಿನ ವರ್ಷ ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು.
ಪರೀಕ್ಷೆಯು ಜನವರಿ 8, 2023 ರಂದು ನಡೆಯಲಿದೆ. ಆರನೇ ತರಗತಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ದಿನಾಂಕ 31-03-2023 ಕ್ಕೆ 10 ರಿಂದ 12 ವರ್ಷ ವಯೋಮಾನದವರಾಗಿರಬೇಕು. ಇನ್ನು 9ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ದಿನಾಂಕ 31-03-2023 ಕ್ಕೆ 13 ರಿಂದ 15 ವರ್ಷ ವಯೋಮಾನದವರಾಗಿರಬೇಕು.
ಅರ್ಜಿ ಆರಂಭ ದಿನಾಂಕ - 21-10-2022.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 30-11-2022.
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ - 30-11-2022.
AISSEE -2023 ಪ್ರವೇಶ ಪರೀಕ್ಷೆ ದಿನಾಂಕ - 08-01-2023.
ಪರೀಕ್ಷೆ ಮಾದರಿ
ಪರೀಕ್ಷೆ ಮಾದರಿ - ಪೆನ್ ಪೇಪರ್ (ಓಎಂಆರ್ ಶೀಟ್ ಆಧಾರಿತ ).
ಪ್ರಶ್ನೆ ಪತ್ರಿಕೆ ಮಾದರಿ - ಬಹು ಆಯ್ಕೆ ಪ್ರಶ್ನೆಗಳು.
ಆರನೇ ತರಗತಿಗೆ ಅರ್ಹತೆ - ಆರನೇ ತರಗತಿಗೆ ಹೆಣ್ಣುಮಕ್ಕಳಿಗೂ ಎಲ್ಲಾ ಸೈನಿಕ್ ಶಾಲೆಗಳಿಗೆ ಪ್ರವೇಶ ಇರುತ್ತದೆ.
9ನೇ ತರಗತಿಗೆ ಅರ್ಹತೆ - ವಿದ್ಯಾರ್ಥಿಗಳು 13 ರಿಂದ 15 ವರ್ಷ ವಯೋಮಾನದವರಾಗಿರಬೇಕು. ಹಾಗೂ ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ ಎಂಟನೇ ತರಗತಿ ತೇರ್ಗಡೆ ಹೊಂದಿರಬೇಕು.
ಪರೀಕ್ಷಾ ಶುಲ್ಕ ಎಷ್ಟು ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ - ರೂ. 500.
ಸಾಮನ್ಯ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ - ರೂ. 650.
ಪ್ರವೇಶ ಶುಲ್ಕವನ್ನು ಆನ್‌ಲೈನ್ ಮೂಲಕ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮೂಲಕ ಪಾವತಿಸಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ. ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದಾಗಿದ್ದು, ಶುಲ್ಕ ಪಾವತಿಸಲು ನವೆಂಬರ್ 30 ಕೊನೆಯ ದಿನವಾಗಿದೆ.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ / ಕಾಲಾವಾಧಿ/ ಮಾಧ್ಯಮ / ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ಕೇಂದ್ರಗಳು, ಅರ್ಹಾತ ಅಂಕಗಳು, ಇತರೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

No comments:
Post a Comment