ಪ್ರಾಥಮಿಕ ವಿದ್ಯಾಭ್ಯಾಸವು ಕಲಿಕೆಯ ಮೊದಲ ಹಂತ ; ಕ್ರಮೇಣ ಅದಕ್ಕೆ ನರ್ಸರಿ , ಪ್ರಿ-ನರ್ಸರಿ ಎಂಬ ಆಟ-ಪಾಠದ ಎರಡು ವರ್ಷದ ಶಿಕ್ಷಣವನ್ನು ನಾಲ್ಕು ಮತ್ತು ಐದನೇ ವರ್ಷದ ಮಕ್ಕಳಿಗಾಗಿ ಸೇರಿಸಲಾಯಿತು. ನಮ್ಮ ಶಿಕ್ಷಣ ಪದ್ದತಿಯು,17, 18 ನೇ ಶತಮಾನದಲ್ಲಿ ಮನೆ/ಕುಟುಂಬ ಮತ್ತು ಮಠದ/ಗುರುಕುಲದ ಕೇಂದ್ರವಾಗಿ ಇದ್ದದ್ದು, ಅಧಿಕೃತ ಶಾಲಾ ಮಂದಿರಗಳಿಗೆ ಸ್ಥಳಾಂತರವಾಯಿತು. ಇದು ಬ್ರಿಟಿಷರ ಯೋಜನೆ. ಕ್ರಮೇಣ ಮಠ-ಮಂದಿರಗಳ/ಗುರುಕುಲ ಶಿಕ್ಷಣ ವ್ಯವಸ್ಥೆ ಕೊನೆಗೊಂಡು ಶಾಲಾಶಿಕ್ಷಣ ಪದ್ದತಿ ನೆಲೆಗೋಡಿತು . ಸರ್ಕಾರಗಳೇ ಶಿಕ್ಷಣದ ಹೊಣೆಯನ್ನು ಹೊತ್ತುಕೊಂಡು ನಾಡಿನಾದ್ಯಂತ ಶಾಲೆಗಳನ್ನು ಆರಂಭಿಸಿ ಒಂದೇ ಬಗೆಯ ಶಿಕ್ಷಣ ಸಾರ್ವತ್ರಿಕವಾಗಿ ಸಿಗುವಂತೆ ಮಾಡಿದವು. ಅದರ ಜೊತೆ ಜತೆಜೊತೆಯಲ್ಲಿಯೇ ಸರ್ಕಾರೇತರ ಸಂಸ್ಥೆಗಳು ವ್ಯಕ್ತಿಗಳು ಶಾಲಾ ಶಿಕ್ಷಣ ಕೇಂದ್ರಗಳನ್ನು ಸ್ವಲ್ಪ ಅದೇ ಮಾದರಿಯಲ್ಲಿ ಆರಂಭಿಸಿದವು. ಆದರೆ ಕೇಂದ್ರ ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸುವುದು ಅದರ ಒಂದು ಆದ್ಯ ಅಗತ್ಯ ಕರ್ತವ್ಯವೆಂದು ಕಡ್ಡಾಯ ಶಿಕ್ಷಣದ ಕಾನೂನು ತಂದವು. ಅದರಲ್ಲಿ ರಾಜ್ಯ ಸರ್ಕಾರದ ಪಾತ್ರ ಹಿರಿದು.
ಮೊಟ್ಟಮೊದಲಿಗೆ ಅದಕ್ಕೆ ಒಂದು 'ಓದು- ಬರೆಹ-ಗಣಿತ ಈ ಅತಿ ಅಗತ್ಯದ ಶಿಕ್ಷಣಕ್ಕೆ ರೂಪು-ರೇಶೆ ಕೊಟ್ಟವನು ಭಾರತಕ್ಕೆ ಬಂದ ಲಾರ್ಡ ಮೆಕಾಲೆ; ಕಂಪನಿಯ ಆಡಳಿತ, ಗೌ.ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್ ಕಾಲ (1828-35) ಇಂಗ್ಲಿಷ್ ನ ಶಿಕ್ಷಣವನ್ನು ಜಾರಿಗೆ ತರಬೇಕೆಂದು ಗೌರ್ನರ್ ಜನರಲ್`ನು ಲಾರ್ಡ ಮೆಕಾಲೆಗೆ ಅದರ ರೂಪು ರೇಷೆಯ ಹೊಣೆ ಹೊರಿಸಿದನು ಪ್ರಾಥಮಿಕ ಶಿಕ್ಷಣ-ಮಾಧ್ಯಮಿಕ-(ದೇಶೀ ಭಾಷೆ-4+4 ನಂತರ ಇಂಗ್ಲಿಷ್ ಮಾಧ್ಯಮ;-ಪ್ರೌಢ ಶಿಕ್ಣಣ ಇಂಗ್ಲಿಷ್ -3 ಇಂಟರ್`ನಿಡಿಯೇಟ್-1 ವರ್ಷ, ನಂತರ 3 ವರ್ಷ ಪದವಿ ಶಿಕ್ಷಣ. ಈ ಶಿಕ್ಷಣ ಪದ್ದತಿಯಿಂದ ಭಾರತದ ವಿದ್ಯಾವಂತ ಜನರಿಗೆ, ಹೊಸ ಚಿಂತನೆಯ, -ವಿಜ್ಞಾನದ, ಪಾಶ್ಚಿಮಾತ್ಯರ ಲೋಕದೊಳಗೆ ಪ್ರವೇಶ ಮಾಡುವಂತಾಯೊತು.ದಕ್ಷಿಣ ಭಾರತದ ತುದಿಯಿಂದ ಉತ್ತರದವರೆಗೆ ಒಂದು ಸಂಪರ್ಕ ಭಾಷೆ ಭಾರತೀಯರಿಗೆ ಒದಗಿತು.(ಇಂದಿಗೂ ಅದು ಹಾಗೇ ಉಳಿದಿದೆ). ಆದುನಿಕ ಚಿಂತನೆಯ-ರಾಷ್ರೀಯವಾದ-ಸಮಾಜವಾದ-ಸಮಾಜ ಸುಧಾರಣೆ, ಮಾನವತಾವಾದದ ಕನಸಿನ ಒಂದು ಹೊಸ ಉತ್ಸಾಹಿ ಪೀಳಿಗೆ ಅಥವಾ ಯುವ ತಂಡವೇ ಭಾರತದಲ್ಲಿ ಉದಯಿಸಿ, ಭಾರತದ ಇತಿಹಾಸ-ಮತ್ತು ಭವಿಷ್ಯದ ದಿಕ್ಕನ್ನೇ ಬದಲಿಸಲು ಕಾರಣವಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ. ಇಂದಿಗೂ ಲಾರ್ಡ ಮೆಕಾಲೆಯ ಹೆಸರು ಆ ಶಿಕ್ಷಣ ಪದ್ದತಿಗೆ ಅಂಟಿಕೊಂಡಿದೆ. ಈಗ ಅದು ಬಹಳ ವಿಸ್ತೃತಗೊಂಡು ಭಾರತೀಯ ಪದ್ದತಿಯನ್ನು ಅಳವಡಿಸಿಕೊಂಡಿದೆ. ಮತ್ತು ಶಿಕ್ಷಣವನ್ನು ಮಗುವಿನ ಒಂದು ಹಕ್ಕೆಂದು ಪರಿಗಣಿಸಲಾಗಿದೆ. ಹಾಗಾಗಿ ಸರ್ಕಾರದ ಶಿಕ್ಷಣದ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ.
ರಾಜ್ಯದಲ್ಲಿ 44,615 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 4,452 ಸರ್ಕಾರಿ ಪ್ರೌಢಶಾಲೆಗಳು ಇವೆ. ಆದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಆರಂಭವಾಗಿದೆ. ಆದ್ದರಿಂದ 2013-2014;2015 ರಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದ 539 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ವಿಲೀನಗೊಳಿಸಲಾಗಿದೆ.! ಶಾಲೆಗಳ ಸ್ಥಿತಿ ಅಷ್ಟು ಚೆನ್ನಾಗಿಲ್ಲ. ಆದ್ದರಿಂದ ಸರ್ಕಾರ 2014–15ನೇ ಸಾಲಿನಲ್ಲಿ 180 ಅನೇಕ ಕಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡ ದುರಸ್ತಿಗೆ ₨ 2.31 ಕೋಟಿ ಮತ್ತು 300 ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡ ದುರಸ್ತಿಗೆ ₨ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಪ್ರಾಥಮಿಕ ಶಾಲೆಗಳಲ್ಲಿ (+ಮಾಧ್ಯಮಿಕಸೇರಿ) ಎಸ್.ಟಿ.ಎಸ್.ಟಿ ಹಿಂದುಳಿದ ವರ್ಗಗಳ ಶಾಲೆ -346 ಶಾಲೆಗಳು ವಸತಿ ಶಾಲೆಗಳು; 171 ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ. ಅವುಗಳಲ್ಲಿ 105ಕ್ಕೆ ಶೌಚಾಲಯ ,ಸ್ನಾನ ಗೃಹಗಳು ಇಲ್ಲ.ಕಟ್ಟಡ , ಶೌಚಾಲಯ, ಸ್ನಾನ ಗೃಹಗಳನ್ನು ಒದಗಿಸಲು 1088.5 ಕೋಟಿ ರೂ. ಅಗತ್ಯವಿದೆ.ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ವಿಧಾನ ಪರಿಷತ್ತಿನಲ್ಲಿ ಹೇಳಿಕೆ -ಪ್ರಜಾವಾಣಿ ೮-೭-೨೦೧೪)
ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಶಾಲೆಬಿಟ್ಟ ಮಕ್ಕಳ ಸಂಖ್ಯೆ 1,68,621. ಕಳೆದ ಮೂರು ವರ್ಷಗಳಿಂದ ಶಾಲೆಬಿಟ್ಟ ಮಕ್ಕಳ ಸಂಖ್ಯೆ 2,43,356 ಆಗಿದೆ. (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದ್ದಾರೆ.ಪ್ರಜಾವಾಣಿ ೨೬-೬=-೨೦೧೪)
ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಶಾಲೆಬಿಟ್ಟ ಮಕ್ಕಳ ಸಂಖ್ಯೆ 1,68,621. ಕಳೆದ ಮೂರು ವರ್ಷಗಳಿಂದ ಶಾಲೆಬಿಟ್ಟ ಮಕ್ಕಳ ಸಂಖ್ಯೆ 2,43,356 ಆಗಿದೆ. (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದ್ದಾರೆ.ಪ್ರಜಾವಾಣಿ ೨೬-೬=-೨೦೧೪)
(ಶಾಲೆಬಿಟ್ಟ ಮಕ್ಕಳನ್ನು ಗುರುತಿಸಲು 2013–14ನೇ ಸಾಲಿನಲ್ಲಿ ಶಾಲಾ ಸಮೀಕ್ಷೆ ಮತ್ತು ಕುಟುಂಬ ಸಮೀಕ್ಷೆ ಎಂದು ಎರಡು ಹಂತದಲ್ಲಿ ನಡೆಸಲಾಗಿದೆ. ಶಿಕ್ಷಣ ಇಲಾಖೆಯು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಸಮೀಕ್ಷೆ ನಡೆಸಿತ್ತು. ಶಾಲೆ ದುರಸ್ತಿಗೆ ₨ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೆಲವು
ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ನೀಡುತ್ತಿರುವ ಅನುದಾನ ಸಾಲದು. ಹಲವು ಶಾಲೆಗಳ ಸ್ಥಿತಿ ಶೋಚನೀಯವಾಗಿದೆ ಎಂಬುದು ಸಾರ್ವಜನಿಕರ ದೂರು.(ನೋಡಿ)
ಸಣ್ಣ ಶಾಲೆಗಳ ಕುರಿತಂತೆ ಪ್ರತ್ಯೇಕವಾದ ನೀತಿ ನಮ್ಮ ರಾಷ್ಟ್ರದ ಹಂತದಲ್ಲಾಗಲೀ ಅಥವಾ ರಾಜ್ಯದ ಹಂತದಲ್ಲಾಗಲೀ ಇಲ್ಲ. ಶಿಕ್ಷಣ ಇಲಾಖೆಯ ೨೦೧೩-–೧೪ನೇ ಸಾಲಿನ ಅಧಿಕೃತ ಅಂಕಿ-–ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ೨೬,೦೫೮ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳ ಪೈಕಿ ೧೪,೫೪೮ ಶಾಲೆಗಳಲ್ಲಿ (ಶೇ ೫೫.೮) ಮಕ್ಕಳ ದಾಖಲಾತಿ ೩೦ಕ್ಕಿಂತ ಕಡಿಮೆ ಇದ್ದು, ಸಣ್ಣ ಗಾತ್ರದ ಶಾಲೆಗಳಾಗಿವೆ. ಈ ಶಾಲೆಗಳ ಪೈಕಿ ತಲಾ ೫ ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳು ೪೫೬ ಇದ್ದು, ೬ ರಿಂದ ೧೦ ಮಕ್ಕಳಿರುವ ಶಾಲೆಗಳು ಒಟ್ಟು ೧,೯೨೩ ಇವೆ. ಅಂದರೆ ರಾಜ್ಯದ ಒಟ್ಟು ೨,೩೭೯ ಶಾಲೆಗಳಲ್ಲಿ ೧೦ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇಂತಹ ಶಾಲೆಗಳನ್ನು ಅತೀ ಸಣ್ಣ ಶಾಲೆಗಳೆನ್ನಬಹುದು.
ಇನ್ನು ರಾಜ್ಯದಲ್ಲಿರುವ ಒಟ್ಟು ೩೪,೪೨೭ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ತಲಾ ೭೦ ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ಒಟ್ಟು ಶಾಲೆಗಳು ೭,೧೨೮ (ಶೇ ೨೦.೭೦). ರಾಜ್ಯದ ಒಟ್ಟು ೧,೮೮೯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ೩೫ ಮಕ್ಕಳಿಗಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದು, ಇವು ಅತಿ ಸಣ್ಣ ಶಾಲೆಗಳಾಗಿವೆ.
ಪ್ರೌಢಶಾಲಾ ಹಂತದಲ್ಲಿ ರಾಜ್ಯದಲ್ಲಿರುವ ಒಟ್ಟು ೧೪,೪೦೯ ಶಾಲೆಗಳ ಪೈಕಿ ತಲಾ ೮೦ ಮಕ್ಕಳಿಗಿಂತ ಕಡಿಮೆ ಇರುವ ೫,೪೬೭ (ಶೇ ೩೭.೭೮) ಪ್ರೌಢಶಾಲೆಗಳನ್ನು ಸಣ್ಣ ಶಾಲೆಗಳೆನ್ನಬಹುದು. ಇದೇ ರೀತಿ ಒಟ್ಟು ಮಕ್ಕಳ ದಾಖಲಾತಿ ೪೦ಕ್ಕಿಂತ ಕಡಿಮೆ ಇರುವ ಪ್ರೌಢಶಾಲೆಗಳು ೧,೦೨೭ (ಶೇ ೭) ಇದ್ದು, ಇವುಗಳನ್ನು ಅತಿ ಸಣ್ಣ ಶಾಲೆಗಳೆನ್ನಬಹುದು.
ಸರ್ಕಾರಿ ಒಡೆತನದ ಶಾಲೆಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ಶಾಲೆಗಳ ಸಂಖ್ಯೆ ಹೆಚ್ಚಿದೆ. ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ಸಿರ್ಸಿ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ಶಾಲೆಗಳು ಹೆಚ್ಚಾಗಿವೆ
ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳ ವಿವರ
ಸಂಪಾದಿಸಿ
28-2-2014 ಕ್ಕೆ--[೩]
ರಾಜ್ಯದಲ್ಲಿ ಸರ್ಕಾರಿ ಶಾಲೆಗಳು 56305;
ಖಾಸಗಿ ಅನುದಾನಿತ ಶಾಲೆಗಳು 3160;
ಖಾಸಗಿ ಅನುದಾನ ರಹಿತ ಶಾಲೆಗಳು --11386;
ಶೇ. 87 ಪ್ರಾಥಮಿಕ ಶಾಲೆಗಳು ಗ್ರಾಮೀಣ ಭಾಗದಲ್ಲಿವೆ.;
ಶೇ. 89 ರಷ್ಟು ಭಾಗ ಗ್ರಾಮೀಣ ಪ್ರಾಥಮಿಕ ಶಾಲೆಗಳು ಸರ್ಕಾರಿ ಶಾಲೆಗಳು ;.
ಸರ್ಕಾರಿ ಶಾಲೆಗಳಲ್ಲಿ ರುವ ಶಿಕ್ಷಕರು 2,28,681 ;
ಇವರ ವೇತನ ಒಟ್ಟು ವೆಚ್ಚ -- ರೂ.3,292 ಕೋಟಿ ರೂ .
ಹೆಸ ಆರ್ ಟಿ ಇ ಕಾಯಿದೆ ಪ್ರಕಾರ ಆರ್ಥಿಕವಾಗಿ , ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇ. 25 ಮೀಸಲಾತಿ ಇಡಬೇಕಾಗಿದೆ .
ಕುಸ್ಮಾ ಸರ್ಕಾರಿ ಶಾಲೆಗಳಲ್ಲಿ ಸೀಟುಗಳು ಭರ್ತಿಯಾಗಿ ಇನ್ನೂ ಮಕ್ಕಳು ಉಳಿದಿದ್ದಲ್ಲಿ ಖಾಸಗೀ ಶಾಲೆಗಳಲ್ಲಿ ಅವಕಾಶ ನೀಡಲಾಗುವುದೆಂದು ತಿಳಿಸಿದ್ದಾರೆ.
ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು /ಅದರಲ್ಲಿ (ಕುಸ್ಮಾ)(1800 ಶಾಲೆಗಳ ಸದಸ್ಯತ್ವ ಹೊಂದಿದೆ.)
೨೮-೫-೨೦೧೫/೧೬:
ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು:26118
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು :34795
ಸರ್ಕಾರಿ ಪ್ರೌಢ ಶಾಲೆಗಳು :15140.
ಖಾಸಗಿ ಪ್ರಾಥಮಿಕ ಶಾಲೆಗಳು :4082.
ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳು :8809.
ಖಾಸಗಿ ಪ್ರೌಢ ಶಾಲೆಗಳು : 6013.[೧]*[೧] Archived 2016-06-05 ವೇಬ್ಯಾಕ್ ಮೆಷಿನ್ ನಲ್ಲಿ.

No comments:
Post a Comment