Friday, October 27, 2023

1st Community Endowment School Format 2023-24

  Wisdom News       Friday, October 27, 2023
Hedding ; 1st Community Endowment School Format 2023-24


Academic Calendar 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ; ಮೇ 29ಕ್ಕೆ ಶಾಲೆಗಳು ಆರಂಭ

ಬೆಂಗಳೂರು, ಏಪ್ರಿಲ್ 06; ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿ 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯ ಪಠ್ಯ ಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು, ರಾಜ್ಯಾದ್ಯಂತ ಏಕರೂಪದ ಯಶಸ್ವಿ, ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ ವಾರ್ಷಿಕ/ ಮಾಹೆವಾರು ಪಾಠ ಹಂಚಿಕೆ, ಪಠೇತರ ಚಟುವಟಿಕೆಗಳು ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ CCE ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.

ಪ್ರಸಕ್ತ ಸಾಲಿನಲ್ಲಿ 29/5/2023ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿತ್ತು. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಸುತ್ತೋಲೆ ಮೂಲಕ ಸೂಚನೆ ನೀಡಲಾಗಿದೆ.

ಸುತ್ತೋಲೆಯ ವಿವರಗಳು; ಈ ಸುತ್ತೋಲೆಯ ಪ್ರಕಾರ ಶಾಲಾ ಕರ್ತವ್ಯದ ದಿನಗಳು ಮೊದಲನೇ ಅವಧಿ ದಿನಾಂಕ 29/5/2023 ರಿಂದ ದಿನಾಂಕ 7/10/2023ರ ತನಕ. ಎರಡನೇ ಅವಧಿ ದಿನಾಂಕ 25/10/2023 ರಿಂದ ದಿನಾಂಕ 10/4/2024ರ ವರೆಗೆ ಎಂದು ಮಾಹಿತಿ ನೀಡಲಾಗಿದೆ. ರಜಾದಿನಗಳು ದಸರಾ ರಜೆ 8/10/2023 ರಿಂದ 24/10/2023ರ ತನಕ. ಬೇಸಿಗೆ ರಜೆ 11/4/2024 ರಿಂದ 28/5/2024ರ ತನಕ.

ಲಭ್ಯವಿರುವ ಶಾಲಾ ಕರ್ತವ್ಯದ ದಿನಗಳು ಸುತ್ತೋಲೆಯಂತೆ ಮೇ 3 ದಿನ, ಜೂನ್ 25 ದಿನ, ಜುಲೈ 25 ದಿನ, ಆಗಸ್ಟ್ 26 ದಿನ, ಸೆಪ್ಟೆಂಬರ್ 24 ದಿನ, ಅಕ್ಟೋಬರ್ 11 ದಿನ, ನವೆಂಬರ್ 23 ದಿನ, ಡಿಸೆಂಬರ್ 25 ದಿನ, ಜನವರಿ 24 ದಿನ, ಫೆಬ್ರವರಿ 23 ದಿನ, ಮಾರ್ಚ್ 26 ದಿನ, ಏಪ್ರಿಲ್ 9 ದಿನಗಳು ಸೇರಿ ಒಟ್ಟು 244 ದಿನಗಳು.

2022-23ನೇ ಶೈಕ್ಷಣಿಕ ಸಾಲಿನ ಮುಕ್ತಾಯ ಹಂತದಲ್ಲಿ 5 ಮತ್ತು 8ನೇ ತರಗತಿಯ SA-2 ಮೌಲ್ಯಾಂಕನ ಸೇರಿದಂತೆ ಉಳಿದ 1 ರಿಂದ 9 ನೇ ತರಗತಿಗಳ ಫಲಿತಾಂಶವನ್ನು ನಿಗದಿಪಡಿಸಿದಂತೆ ದಿನಾಂಕ 8/4/2023 ರಂದು ಪ್ರೌಢ ಶಾಲಾ ವಿಭಾಗ ಹಾಗೂ ದಿನಾಂಕ 10/4/2023ರಂದು ಪ್ರಾಥಮಿಕ ಶಾಲಾ ಹಂತದಲ್ಲಿ(ಈ ದಿನ ಎಸ್. ಎಸ್. ಎಲ್. ಸಿ ಪರೀಕ್ಷೆ ಇರುವುದರಿಂದ) ಸಮುದಾಯ ದತ್ತ ಶಾಲೆ/ ಪೋಷಕರ ಸಭೆ ಕರೆದು ಪ್ರಕಟಣೆ ಮಾಡುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್ 2023ರ ಮೊದಲನೇ ವಾರದಲ್ಲಿ ನೀಡುವುದು. ಅನುಮೋದಿಸಿದ ದಿನಾಂಕಗಳಿಗೆ ಮಾತ್ರ ಸ್ಥಳೀಯ ರಜೆ ಅನಮೋದನೆ ನೀಡುವುದು. ಪ್ರಸಕ್ತ ಶೈಕ್ಷಣಿಕ ಸಾಲು ಮುಕ್ತಾಯವಾಗುತ್ತಿದ್ದು, 1 ರಿಂದ 9ನೇ ತರಗತಿವರೆಗೆ ಮೌಲ್ಯಾಂಕನ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಅದರ ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಫಲಿತಾಂಶವನ್ನು ಶೇ 100 ಅಂಕಗಳಿಗೆ ಕ್ರೂಢೀಕರಿಸಿ ನಿಯಮಾನುಸಾರ ಗ್ರೇಡ್ ದಾಖಲಿಸಿ SATSನಲ್ಲಿ ದಿನಾಂಕ 25/4/2023ರೊಳಗಾಗಿ ಇಂದೀಕರಿಸತಕ್ಕದ್ದು ಎಂದು ಸುತ್ತೋಲೆ ಹೇಳಿದೆ.

ದಿನಾಂಕ 14/4/2023 ರಂದು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್. ಡಿ. ಎಂ. ಸಿ/ ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಕಡ್ಡಾಯವಾಗಿ ಆಚರಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

2023-24ನೇ ಸಾಲಿಗೆ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಮೊದಲನೇ ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಈಗಾಗಲೇ ಸಂಬಂಧಿಸಿದ ತಾಲ್ಲೂಕುಗಳಿಗೆ ಸರಬರಾಜು ಆಗುತ್ತಿದ್ದು, ಇವುಗಳನ್ನು ಮೊದಲನೇ ಹಂತದಲ್ಲಿ ದಿನಾಂಕ 10/4/2023ರೊಳಗೆ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರ ಮುಖಾಂತರ ಮಕ್ಕಳಿಗೆ ತಲುಪಿಸತಕ್ಕದ್ದು. ತದನಂತರ ಹಂತ ಹಂತವಾಗಿ ಮಕ್ಕಳಿಗೆ ತಲುಪಿಸಿ ಶಾಲಾ ಪ್ರಾರಂಭೋತ್ಸವದಂದು ಸಮವಸ್ತ್ರ ಧರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗೆ ಹಾಜರಾಗಲು ಕ್ರಮವಹಿಸುವುದು ಎಂದು ಸೂಚನೆ ಕೊಡಲಾಗಿದೆ

logoblog

Thanks for reading 1st Community Endowment School Format 2023-24

Previous
« Prev Post

No comments:

Post a Comment