Thursday, September 21, 2023

‘ಕರ್ನಾಟಕ ಸಂಭ್ರಮ-೫೦’ ಲಾಂಛನ(ಲೋಗೋ) ಮಾದರಿಗಳ ಆಹ್ವಾನ.

  Wisdom News       Thursday, September 21, 2023
Heading:‘ಕರ್ನಾಟಕ ಸಂಭ್ರಮ-೫೦’ ಲಾಂಛನ(ಲೋಗೋ) ಮಾದರಿಗಳ ಆಹ್ವಾನ.


Language: Kannada

ನಮ್ಮ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ ೫೦” “ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉದ್ದೇಶಿಸಿದೆ. ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲು ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ(ಲೋಗೋ)ವನ್ನು ಬಳಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಸುಂದರವಾದ ಲಾಂಛನ(ಲೋಗೋ)ದ ಮಾದರಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಮಾದರಿ ಲಾಂಛನಕ್ಕೆ ನಗದು ಬಹುಮಾನವನ್ನು ನಿಗದಿಪಡಿಸಲಾಗಿದೆ.

1.ಕರ್ನಾಟಕ ಸಂಭ್ರಮ-೫೦’ ಎಂದು ಕಡ್ಡಾಯವಾಗಿ ನಮೂದಿಸಬೇಕು.

2.ಲಾಂಛನ(ಲೋಗೋ)ವನ್ನು ಬಹುವರ್ಣದಲ್ಲಿ ವಿನ್ಯಾಸಗೊಳಿಸಬಹುದು

3.ಲಾಂಛನ(ಲೋಗೋ)ವನ್ನು ನಮ್ಮ ನಾಡು-ನುಡಿ,ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಮಾದರಿಯಲ್ಲಿ ರಚಿಸಬೇಕು.

4.ತಾವು ರಚಿಸುವ ಲಾಂಛನ(ಲೋಗೋ)ವನ್ನು ಆನ್‌ಲೈನ್‌ನಲ್ಲಿಯೇ ಕಡ್ಡಾಯವಾಗಿ ಹೈ ರೆಸೊಲ್ಯೂಷನ್‌ (high resolution) ಪಿಡಿಎಫ್‌/ ಪಿ.ಎನ್.ಜಿ/ಜೆ.ಪಿ.ಜಿ. ಮಾದರಿಯಲ್ಲಿಯೇ ಸಲ್ಲಿಸಬೇಕು. (2 MB max)

5.ವಿನ್ಯಾಸಗೊಳಿಸುವ ಲಾಂಛನ(ಲೋಗೋ)ದ ಅಳತೆಯು ಕಡ್ಡಾಯವಾಗಿ 1000X1000 pixel, 300DPI (Resolution) ನಲ್ಲಿ ಇರತಕ್ಕದ್ದು.

6.ಆಯ್ಕೆಯಾದ ಲಾಂಛನ(ಲೋಗೋ)ದ ಹಕ್ಕು ಮತ್ತು ಸ್ವಾಮ್ಯ ಸಂಪೂರ್ಣ ಸರ್ಕಾರದ್ದಾಗಿರುತ್ತದೆ.

7.ಆಸಕ್ತರಿಂದ ಬಂದಂತಹ ಎಲ್ಲಾ ಮಾದರಿಗಳನ್ನು ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ ಅಂತಿಮವಾಗಿ ಒಂದು ಮಾದರಿಯನ್ನು ಆಯ್ಕೆ ಮಾಡಲಾಗುವುದು. ತಜ್ಞರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

8.ಆಯ್ಕೆಯಾದ ಉತ್ತಮ ಗುಣಮಟ್ಟದ ಲಾಂಛನ(ಲೋಗೋ)ಕ್ಕೆ ಇಲಾಖೆಯಿಂದ ರೂ.25,000/-ಗಳ ಬಹುಮಾನ ನೀಡಲಾಗುವುದು.

9.ಆಯ್ಕೆಯಾದ ಲಾಂಛನ(ಲೋಗೋ)ದ ಮಾದರಿಯನ್ನು ಬದಲಾವಣೆ ಮಾಡುವ ಹಕ್ಕು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದಾಗಿರುತ್ತದೆ.

10.ಆಯ್ಕೆಯಾದ ಲಾಂಛನ(ಲೋಗೋ)ದ ಸಾಫ್ಟ್‌ಪ್ರತಿಗಳನ್ನು ಹೈ-ರೆಸೊಲ್ಯೂಷನ್‌ ಮೂಲಕ ಕೋರಲ್‌ ಡ್ರಾ/ ಪೋಟೋಶಾಪ್ ಮಾದರಿಯಲ್ಲಿ ಕಡ್ಡಾಯವಾಗಿ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು.

11.ಲಾಂಛನ(ಲೋಗೋ) ಮಾದರಿ ಸಲ್ಲಿಸಲು ಕೊನೆಯ ದಿನಾಂಕ: 30/09/2023 ಆಗಿರುತ್ತದೆ.

ಲಾಂಛನ(ಲೋಗೋ)ದ ಮಾದರಿಯನ್ನು ಕಳುಹಿಸಲು ದಿನಾಂಕ: ೨೦.೦೯.೨೦೨೩ ರಿಂದ ದಿ:೩೦.೦೯.೨೦೨೩ರ ವರೆಗೆ ಅವಕಾಶವಿದ್ದು, ಆಸಕ್ತರು ಈ ಕುರಿತು ಅಗತ್ಯ ಮಾಹಿತಿಗಳನ್ನು ಇಲಾಖೆಯ ಜಾಲತಾಣ https://kanaja.karnataka.gov.in/k_sambhrama/ ದಲ್ಲಿ ಪಡೆಯಬಹುದಾಗಿದೆ.


Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only









logoblog

Thanks for reading ‘ಕರ್ನಾಟಕ ಸಂಭ್ರಮ-೫೦’ ಲಾಂಛನ(ಲೋಗೋ) ಮಾದರಿಗಳ ಆಹ್ವಾನ.

Previous
« Prev Post

No comments:

Post a Comment