SUBJECT : For the teaching staff, with effect from the year 2025-26...
ಶಿಕ್ಷಕ ವೃಂದದವರಿಗೆ 2025-26ನೇ ಸಾಲಿನಿಂದ ಅನ್ವಯವಾಗುವಂತೆ ಪ್ರತಿ ಶಿಕ್ಷಕನಿಗೆ ವರ್ಷಕ್ಕೆ ಗರಿಷ್ಠ 12 ದಿನಗಳವರೆಗೆ ಮಾತ್ರ ತರಬೇತಿಯನ್ನು ಆಯೋಜಿಸತಕ್ಕದ್ದು. ಇದರಲ್ಲಿ ಪ್ರತಿ ಶೈಕ್ಷಣಿಕ ಸಾಲಿನ ಮೊದಲನೇ ಅವಧಿಯಲ್ಲಿ ಗರಿಷ್ಠ 06 ದಿನಗಳು ಮತ್ತು ಎರಡನೇ ಶೈಕ್ಷಣಿಕ ಅವಧಿಯಲ್ಲಿ ಗರಿಷ್ಠ 06 ದಿನಗಳ ತರಬೇತಿಯನ್ನು ಮಾತ್ರ ಹಮ್ಮಿಕೊಳ್ಳತಕ್ಕದ್ದು.
2. ಮೊದಲನೇ ಶೈಕ್ಷಣಿಕ ಅವಧಿಯಲ್ಲಿ ಓರ್ವ ಶಿಕ್ಷಕನಿಗೆ ನಿಗದಿಪಡಿಸಿದ 06 ದಿನಗಳಿಗಿಂತ ಕಡಿಮೆ ದಿನಗಳು ತರಬೇತಿ ನಡೆದಿದ್ದರೂ ಸಹ, ಮೊದಲಾರ್ಧದಲ್ಲಿ ಉಳಿದಿರುವ ತರಬೇತಿ ದಿನಗಳನ್ನು ಎರಡನೇ ಶೈಕ್ಷಣಿಕ ಅವಧಿಗೆ ವರ್ಗಾಯಿಸಲು (Carry forward ಮಾಡಲು) ಬರುವುದಿಲ್ಲ. ಪ್ರತಿ ಅವಧಿಯ ತರಬೇತಿ ದಿನಗಳು ಆ ಅವಧಿಗೆ ಮಾತ್ರ ಸೀಮಿತವಾಗಿರುತ್ತವೆ.
3. ಒಂದು ವೇಳೆ ವರ್ಷಾರ್ಧದಲ್ಲಿ 06 ದಿನಗಳಿಗಿಂತ ಹಾಗೂ ವರ್ಷದಲ್ಲಿ 12 ದಿನಗಳಿಗಿಂತ ಹೆಚ್ಚಿಗೆ ತರಬೇತಿಗಾಗಿ ಓರ್ವ ಶಿಕ್ಷಕನನ್ನು ನಿಯೋಜಿಸಿದ್ದಲ್ಲಿ ಅಂತಹ ನಿಯೋಜನೆಗೊಂಡ ಶಿಕ್ಷಕರು ಸದರಿ ತರಬೇತಿಯನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ.
4. ಶಿಕ್ಷಕರ ತರಬೇತಿ ನೀಡಲು ನಿಯೋಜಿಸಲಾಗುವ ಸಂಪನ್ಮೂಲ ವ್ಯಕ್ತಿಗಳು(MRP) ಒಂದು ವರ್ಷಕ್ಕೆ ಗರಿಷ್ಠ 20 ದಿನಗಳಿಗಿಂತ ಹೆಚ್ಚಿನ ಅವಧಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವಂತೆ ಯಾವುದೇ ಸಂಸ್ಥೆಗಳು ನಿಯೋಜಿಸಿ ಆದೇಶಿಸುವಂತಿಲ್ಲ. ಮೊದಲನೇ ಅವಧಿಯಲ್ಲಿ ಗರಿಷ್ಠ 10 ದಿನಗಳು ಹಾಗೂ ಎರಡನೇ ಅವಧಿಯಲ್ಲಿ ಗರಿಷ್ಠ 10 ದಿನಗಳವರೆಗೆ ಮಾತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸತಕ್ಕದ್ದು. ಮೊದಲಾರ್ಧದಲ್ಲಿ ಉಳಿದಿರುವ ತರಬೇತಿ ದಿನಗಳನ್ನು ಎರಡನೇ ಶೈಕ್ಷಣಿಕ ಅವಧಿಗೆ ವರ್ಗಾಯಿಸಲು (Carry forward ಮಾಡಲು) ಬರುವುದಿಲ್ಲ.
5. ಇದಕ್ಕಿಂತಲೂ ಹೆಚ್ಚಿನ ಅವಧಿಗೆ ಸಂಪನ್ಮೂಲ ಶಿಕ್ಷಕರನ್ನು ನಿಯೋಜಿಸಿದರೆ, ಅಂತಹ ನಿಯೋಜನೆಯನ್ನು ಸಂಪನ್ಮೂಲ ಶಿಕ್ಷಕರು (ಎಮ್.ಆರ್.ಪಿ) ತರಬೇತಿಯನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ.
No comments:
Post a Comment