Saturday, March 15, 2025

Group B Government High School HM Special Increment

  Wisdom News       Saturday, March 15, 2025
Subject : Group B Government High School HM Special Increment.....

1999ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಲ್ಲಿ 25 ವರ್ಷಗಳಿಂದ ಪದೋನ್ನತಿ ಹೊಂದದೇ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, 1999ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಲ್ಲಿ 25 ವರ್ಷಗಳಿಂದ ಪದೋನ್ನತಿ ಹೊಂದದೇ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಒಂದು ಹೆಚ್ಚವರಿ ವೇತನ ಬಡ್ತಿ ನೀಡುವ ಕುರಿತಂತೆ 2011ರ ಆಧಿಕಾರಿ ವೇತನ ಸಮಿತಿಯ ಶಿಫಾರಸ್ಸಿನಂತೆ, ಮೊದಲ 15 ವೇತನ ಶ್ರೇಣಿಗಳಲ್ಲಿನ ಹುದ್ದೆಗಳನ್ನು ಧಾರಣೆ ಮಾಡಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 25 ವರ್ಷ ಮತ್ತು 30 ವರ್ಷಗಳ ಪದೋನ್ನತಿ ರಹಿತ ಸೇವೆಗಾಗಿ ಕ್ರಮವಾಗಿ 2ನೇ ಮತ್ತು 3ನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಲು ದಿನಾಂಕ:14/06/2012ರ ಸರ್ಕಾರಿ ಆದೇಶ ಸಂಖ್ಯೆ: ಆಇ 12 ಎಸ್‌ಆರ್‌ಪಿ 2012(vii)ರಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಸದರಿ ಸೌಲಭ್ಯವನ್ನು ಮಂಜೂರು ಮಾಡಲು ನೇಮಕಾತಿ ಪ್ರಾಧಿಕಾರಿಯೇ ಸಕ್ಷಮ ಪ್ರಾಧಿಕಾರಿಯಾಗಿರುತ್ತದೆ.

ಆದ್ದರಿಂದ ಪ್ರಸ್ತುತ ಪ್ರಕರಣದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ನೇರ ನೇಮಕಾತಿ ಹೊಂದಿದ ಮುಖ್ಯ ಶಿಕ್ಷಕರುಗಳಿಗೆ 25 ವರ್ಷಗಳ ಪದೋನ್ನತಿ ರಹಿತ ಸೇವೆಗಾಗಿ ಅರ್ಹ ಮುಖ್ಯ ಶಿಕ್ಷಕರುಗಳಿಗೆ 2ನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವುದನ್ನು ದಿನಾಂಕ: 14/06/2012ರ ಸರ್ಕಾರಿ ಆದೇಶ ಸಂಖ್ಯೆ:ಆಇ 12 ಎಸ್‌ಆರ್‌ಪಿ 2012 (VIII)ರ ಅವಕಾಶಗಳನ್ವಯ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳುವುದು.





logoblog

Thanks for reading Group B Government High School HM Special Increment

Previous
« Prev Post

No comments:

Post a Comment