Hedding ; Vijayanagara District VAO Final Selection List 2024....
ವಿಜಯನಗರ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 13 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇಮಕಾತಿ ಮಾಡುವ ಸಂಬಂಧ 1:1 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.
ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (1) ರನ್ನಯ ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ಅದರಂತೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ವಿಜಯನಗರ ಜಿಲ್ಲೆಗೆ ಅರ್ಹತೆ ವಡೆದಿರುವ ಒಟ್ಟು 264 ಅಭ್ಯರ್ಥಿಗಳ ಪೈಕಿ ವಿಜಯನಗರ ಜಿಲ್ಲೆಗೆ ಅನುಮೋದನೆಯಾಗಿರುವ 13 ಹುದ್ದೆಗಳಿಗೆ ಪ್ರಾಧಿಕಾರ ನೀಡಿರುವ ಮೆರಿಟ್ ಪಟ್ಟಿ ಸ್ವೀಕೃತವಾಗಿರುತ್ತದೆ.
ಅದರಂತೆ ಉಲ್ಲೇಖ (2) ರ ಸೂಚನೆಗಳಂತೆ ಕರ್ನಾಟಕ ವರೀಕ್ಷಾ ಪ್ರಾಧಿಕಾರವು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳ ಆಧಾರದಲ್ಲಿ ಸರ್ಕಾರ ನಿಗದಿಪಡಿಸಿದ ಮೀಸಲಾತಿ ರೋಸ್ಟರ್‌ನಿಯಮದ ವಕಾರ 13 ರ ಅನುಪಾತದಲ್ಲಿ ಮೀಸಲಾತಿ ಹಾಗೂ ಸಮತಳ ಮೀಸಲಾತಿವಾರು 37 ಅಭ್ಯರ್ಥಿಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿ (PROVISIONAL VERIFICATION LIST) ಯನ್ನು ಈ ಕಾರ್ಯಾಲಯದ ಉಲ್ಲೇಖಿತ (3) ರ ಅಧಿಸೂಚನೆಯನ್ವಯ ದಿನಾಂಕ:23-12-2024 ರಂದು ಪ್ರಕಟಿಸಿ, ಈ ಕಾರ್ಯಾಲಯದಲ್ಲಿ 13 ರ ಅನುಪಾತದ 37 ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಪರಿಣಿತರ ತಂಡವನ್ನು ರಚಿಸಿ, 37 ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ದಿನಾಂಕ:08-01-2025 ರಂದು ಕೈಗೊಳ್ಳಲಾಯಿತು. ಒಟ್ಟು 37 ಅಭ್ಯರ್ಥಿಗಳ ಪೈಕಿ ದಾಖಲೆ ಪರಿಶೀಲನೆಗೆ 31 ಅಭ್ಯರ್ಥಿಗಳು ಹಾಜರಾಗಿದ್ದು, ಕೆಳಗಿನ ಕೋಷ್ಟಕದಲ್ಲಿನ ಅಭ್ಯರ್ಥಿಗಳು 06 ಅಭ್ಯರ್ಥಿಗಳು ಗೈರುಹಾಜರಾಗಿರುವುದರಿಂದ ಸದರಿ ಅಭ್ಯರ್ಥಿಗಳನ್ನು 1:1 ಅನುಪಾತದ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ.
No comments:
Post a Comment