Sunday, February 9, 2025

SSLC First Language Kannada Subject Question Paper Design 2025 published by Board of School Examination and Valuation Bangalore.

  Wisdom News       Sunday, February 9, 2025
Subject ; SSLC First Language Kannada Subject Question Paper Design 2025 published by Board of School Examination and Valuation Bangalore...


ಪ್ರಶ್ನೆ ಪತ್ರಿಕೆ ವಿನ್ಯಾಸ : ಪ್ರಥಮ ಭಾಷೆ ಕನ್ನಡ-01ಕೆ

ಪ್ರಮುಖಾಂಶಗಳು

ಪ್ರಥಮ ಭಾಷೆ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆ 2019-20ನೇ ಸಾಲಿನ ಮಾದರಿಯನ್ನು ಅನುಸರಿಸಿದೆ. ಈ ಪ್ರಶ್ನೆ ಪತ್ರಿಕೆ ಭಾಷಾ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಾಗುವಂತೆ ಬರೆವಣಿಗೆಗೆಒತ್ತು ನೀಡಿ ವಿವರಣಾತ್ಮಕ ಉತ್ತರಗಳ ಪ್ರಶ್ನೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು, ಪೋಷಕರಾದಿಯಾಗಿ ಶಿಕ್ಷಕರು ಅಂಕಗಳ ಬೆನ್ನುಹತ್ತಿ ಕೇವಲ ಪರೀಕ್ಷಾದೃಷ್ಟಿಯಿಂದ ಪಾಠ ಬೋಧನೆ, ಅಧ್ಯಯನ ಮಾಡುವುದನ್ನು ತಡೆಯುವ ದೃಷ್ಟಿಯಿಂದ ಘಟಕವಾರು ಅಂಕ ಹಂಚಿಕೆಯನ್ನು ಕೈಬಿಟ್ಟು ಗದ್ಯ, ಪದ್ಯ, ಪೂರಕ ಅಧ್ಯಯನ ಹಾಗೂ ವ್ಯಾಕರಣ ಎಂಬ ವಿಭಾಗವಾರು ಅಂದರೆ ಥೀಮ್ ಬೇಸ್ಟ್[THEME BASED] ಮಾದರಿಯ ಅಂಕ ಹಂಚಿಕೆಯನ್ನು ಮಾಡಲಾಗಿದೆ. ಅಂಕಗಳನ್ನು ಆಧರಿಸಿ ಏರಿಕೆ ಕ್ರಮದಲ್ಲಿ ಪ್ರಶ್ನೆಗಳ ಜೋಡಣೆಯನ್ನು ಮಾಡಿ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಏಕರೂಪತೆಯನ್ನು ತರಲಾಗಿದೆ.

ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು:

. ಗುಣಾತ್ಮಕ ಕಲಿಕೆ ಇಂದಿನ ಅಗತ್ಯವಾಗಿದೆ.

• ಪಠ್ಯಪುಸ್ತಕದ ಆಶಯಗಳು ಈಡೇರಬೇಕಾಗಿದೆ.

• ಹತ್ತನೆಯ ತರಗತಿಯ ಅಂತ್ಯದಲ್ಲಿ ನಡೆಸುವ ಪಬ್ಲಿಕ ಪರೀಕ್ಷೆ ಜೀವನದ ದಿಕ್ಕೂಚಿಯಾಗಿರುವುದರಿಂದ ಪರೀಕ್ಷೆಯೂ ಗುಣಾತ್ಮಕವಾಗಿ ಆಗಬೇಕಾಗಿದೆ.

• ಪರೀಕ್ಷಾ ಪ್ರಶ್ನೆಗಳು ಕಲಿಕಾ ಪ್ರಶ್ನೆಗಳೇ ಆಗಿರದೇ ಕಲಿಕೆಯ ಫಲವನ್ನು ಅಳೆಯುವಂತೆ ಇರಬೇಕು.


ಉದ್ದಿಷ್ಟವಾರು ರಚನೆಯಾಗುವ ಪ್ರಶ್ನೆಗಳು, ಪಠ್ಯಪುಸ್ತಕದ ಅಭ್ಯಾಸ ಭಾಗದ ಪ್ರಶ್ನೆಗಳೇ ಅಲ್ಲದೆ ಉದ್ದಿಷ್ಟಕ್ಕನುಸಾರ ರಚಿಸಲಾದ ಹೊಸ ಪ್ರಶ್ನೆಗಳೂ ಆಗಿರುತ್ತವೆ.

• ಪಠ್ಯಪುಸ್ತಕದ ಪಠ್ಯಾಂಶವನ್ನು ಆಧರಿಸಿ ಪ್ರಶ್ನೆಗಳು ರಚನೆಯಾಗುವುದರಿಂದ ಪಠ್ಯಪುಸ್ತಕವನ್ನು ಅಭ್ಯಾಸ ಮಾಡಲೇಬೇಕು.

• ಥೀಮ್ ಬೇಸ್ಟ್ (ವಿಭಾಗವಾರು) ಅಂಕ ಹಂಚಿಕೆ ಇರುವುದರಿಂದ ಎಲ್ಲಾ ಘಟಕಗಳ ಅವಲೋಕನ ಅತ್ಯವಶ್ಯವಾಗಿದೆ.

ಸ್ಮರಣ / ಜ್ಞಾನಾತ್ಮಕ ಪ್ರಶ್ನೆಗಳಿಗಿಂತ ಅರ್ಥೈಸಿಕೊಂಡು ಉತ್ತರಿಸುವ ಹಾಗೂ ವಿವರವಾಗಿ ಬರೆವಣಿಗೆಯನ್ನು ನಿರೀಕ್ಷಿಸುವ ಪ್ರಶ್ನೆಗಳಿಗೆ ಪ್ರಾಶಸ್ತ್ರ ನೀಡಬೇಕಿದೆ.

• ವಿದ್ಯಾರ್ಥಿಗಳಿಗೆ ಸ್ವತಃ ಉತ್ತರ ಬರೆಯುವ ಭಾಷಾ ಸಾಮರ್ಥ್ಯವನ್ನು ರೂಢಿಸುವ ಅಗತ್ಯವಿದೆ.

• ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ(Choice) ಪ್ರಶ್ನೆಗಳ ಪ್ರಮಾಣ ಶೇಕಡಾ 25 ಆಗಿರುತ್ತದೆ.


ಆಯ್ಕೆ (Choice) ಪ್ರಶ್ನೆಗಳಲ್ಲಿ ಮೂರು ಅಂಕಗಳ ಗಾದೆ, ನಾಲ್ಕು ಅಂಕಗಳ ಪದ್ಯ ಪೂರ್ಣಗೊಳಿಸುವುದು, ಗದ್ಯ ಪದ್ಯ ಭಾಗದ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸುವ ಪ್ರಶ್ನೆಗಳು ಮತ್ತು ಐದು ಅಂಕಗಳ ಪತ್ರಲೇಖನ ಹಾಗೂ ಪ್ರಬಂಧ ಬರೆವಣಿಗೆಯ ಪ್ರಶ್ನೆಗಳು ಅಂದರೆ ಒಟ್ಟಾರೆ ಇಪ್ಪತ್ತೈದು ಅಂಕಗಳು ಇರುತ್ತವೆ.

• ಗಾದೆ ಮತ್ತು ಪ್ರಬಂಧ ವಿಷಯಗಳು ಭಾಷಾ ಸಾಮರ್ಥ್ಯವನ್ನು ಅಳೆಯಲು ಸಹಕಾರಿಯಾಗುವಂತೆ ಪ್ರಸಿದ್ಧ, ಪ್ರಚಲಿತ ವಿಷಯಗಳಲ್ಲದೆ ಇತರೇ ಪಠ್ಯ ವಿಷಯಗಳಿಂದ ಕಲಿತ ವಿಷಯಗಳನ್ನೂ ಒಳಗೊಂಡಿರುತ್ತವೆ.

• ಅಲಂಕಾರ ಮತ್ತು ಛಂದಸ್ಸಿನ ಪ್ರಶ್ನೆಗಳು ನಿಯಮವನ್ನು ಅರ್ಥೈಸಿಕೊಂಡು ಪಠ್ಯಪುಸ್ತಕದಲ್ಲಿ ನೀಡಲಾದ ಉದಾಹರಣೆಗಳಲ್ಲದೇ ಗ್ರಹಿಸಿ ಅರ್ಥೈಸಿಕೊಂಡ ಅಂಶಗಳನ್ನು ಪರೀಕ್ಷಿಸುವಂತೆ ಇತರೆ ಯಾವುದೇ ಸೂಕ್ತ ಉದಾಹರಣೆಗಳನ್ನು ನೀಡಲು ಅವಕಾಶ ಕಲ್ಪಿಸಿದೆ.


ವ್ಯಾಕರಣ, ಛಂದಸ್ಸು, ಅಲಂಕಾರ ಮತ್ತು ವಾಕ್ಯರಚನೆಗೆಒಟ್ಟಾರೆ 29 ಅಂಕಗಳನ್ನು ಮೀಸಲಿಟ್ಟದೆ. ಪಠ್ಯ ಪುಸ್ತಕದಲ್ಲಿ ಇರುವ ವ್ಯಾಕರಣಾಂಶಗಳಲ್ಲಿ ಈ ಕೆಳಕಾಣುವ ಅಂಶಗಳನ್ನು ಆಧರಿಸಿ ವಸ್ತುನಿಷ್ಠ ಪ್ರಶ್ನೆಗಳನ್ನು ತಯಾರಿಸಲಾಗುವುದು.

ಕ್ರ. ಸಂ.

ವ್ಯಾಕರಣಾಂಶಗಳು

1

ವರ್ಣಮಾಲೆ

2

3

4

5

6

7

8

ನಾಮಪದಗಳು

ಸರ್ವನಾಮಗಳು

ವಿಭಕ್ತಿ ಪ್ರತ್ಯಯಗಳು (ಹಳಗನ್ನಡ ಮತ್ತು ಹೊಸಗನ್ನಡ), ಕಾರಕಗಳು

ಕ್ರಿಯಾಪದಗಳು (ಕಾಲರೂಪ ಮತ್ತು ಅರ್ಥರೂಪ), ಕರ್ತರಿಕರ್ಮಣಿ ವಾಕ್ಯ

ಸಂಧಿಗಳು ( ಕನ್ನಡ ಮತ್ತು ಸಂಸ್ಕೃತ )

ಸಮಾಸಗಳು

ಅನ್ಯದೇಶ್ಯ ಪದಗಳು

9

ತತ್ಸಮ ತದ್ಭವಗಳು

10

ಗ್ರಾಂಥಿಕರೂಪಗಳು

11

ದ್ವಿರುಕ್ತಿ-ಜೋಡುನುಡಿ

12

ಅವ್ಯಯಗಳು

13

ಕೃದಂತಗಳು

14

ತದ್ಧಿತಾಂತಗಳು

15

ವಾಕ್ಯ ಪ್ರಭೇದಗಳು

16

ಲೇಖನ ಚಿಹ್ನೆಗಳು

17

ಪದಗಳ ಅರ್ಥ

18

ಹೊಸಗನ್ನಡರೂಪ

19

ಛಂದಸ್ಸು

20

ಅಲಂಕಾರ


ನೀಲ ನಕಾಶೆಯಲ್ಲಿ ಪ್ರಶ್ನೆಗಳ ವಿಧಗಳನ್ನು ಈ ಮೇಲಿನಂತೆ ವಸ್ತುನಿಷ್ಠ, ಅತಿಕಿರುಉತ್ತರ 1, ಕಿರುಉತ್ತರ 2 ಮತ್ತು ದೀರ್ಘಉತ್ತರ 1.2.3 ಎಂದುಆರು ವಿಧಗಳಲ್ಲಿ ತೋರಿಸುವರೂಢಿಯಿದ್ದು, ವಸ್ತುನಿಷ್ಠ ಪ್ರಶ್ನೆಗಳು ಬಹುಆಯ್ಕೆ ಹಾಗೂ ಸಂಬಂಧಿಪದಗಳ ಒಂದು ಪದದ ಉತ್ತರಗಳದ್ದಾಗಿದ್ದು, ಆ.ಕಿ.ಉ.1 : ಒಂದು ಅಂಕದಒಂದು ವಾಕ್ಯದಉತ್ತರ, ಕಿ.ಉ.2: ಎರಡು ಅಂಕಗಳ ಎರಡು-ಮೂರು ವಾಕ್ಯಗಳ ಉತ್ತರ, ದೀ.ಉ.1: ಮೂರು ಅಂಕಗಳ ಪ್ರಶ್ನೆಗಳು, ದೀ.ಉ.2: ನಾಲ್ಕು ಅಂಕಗಳ ಪ್ರಶ್ನೆ ಮತ್ತು ದೀ.ಉ. 3: ಐದು ಅಂಕಗಳ ಪ್ರಶ್ನೆಗಳದ್ದಾಗಿವೆ. ಪ್ರಶ್ನಾ ವಿಧಗಳಲ್ಲಾದ ಬದಲಾವಣೆ ಈ ಮೇಲಿನ ಕೋಷ್ಟಕದಲ್ಲಿ ಕಾಣಸಿಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು 3 ಗಂಟೆ ಕಾಲಾವಕಾಶವಿದ್ದು, ಪ್ರಾರಂಭದಲ್ಲಿ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು 15 ನಿಮಿಷಗಳ ಸಮಯವನ್ನು ಮೀಸಲಿಟ್ಟಿದೆ.


logoblog

Thanks for reading SSLC First Language Kannada Subject Question Paper Design 2025 published by Board of School Examination and Valuation Bangalore.

Previous
« Prev Post

No comments:

Post a Comment