Wednesday, February 19, 2025

Order Granting permission to fill aided educational institutions from 2015 to 2020

  Wisdom News       Wednesday, February 19, 2025
Subject : Order Granting permission to fill aided educational institutions from 2015 to 2020....



ವಿಷಯ:ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015 ರಿಂದ 2020ರವರೆಗೆ ನಿವೃತ್ತಿಯಿಂದ ತೆರವಾಗಿರುವ ಹುದ್ದೆ ತುಂಬಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಅನುಮತಿ ನೀಡುವ .

ಉಲ್ಲೇಖ: ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಪತ್ರ ಸಂಖ್ಯೆ: ಸಿ8(1) ಶಾಶಿಲಿ ಖಾ 1507537/2024-25, 20:02.01.2025.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಪತ್ರ ದಿನಾಂಕ:02.01.2025 ರ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ. ಸಿ.ಆ.ಸು.ಇ 388 ಸನೆನಿ 2024, ದಿನಾಂಕ:25-11-2024 ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಲಾಗಿದೆ. ಆದರೆ, ಆಯ್ಕೆ ಪ್ರಾಧಿಕಾರಗಳು/ನೇಮಕಾತಿ ಪ್ರಾಧಿಕಾರಗಳು ಪರಿಶಿಷ್ಟ ಜಾತಿಯ ಒಳ ಮೀಸಲಾತಿ / ಉಪ ವರ್ಗೀಕರಣ ಪ್ರಕ್ರಿಯೆ ಜಾರಿಯಾದ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಕೂಲವಾಗುವಂತೆ ಉಲ್ಲೇಖಿತ ಪತ್ರದಲ್ಲಿ ಕೋರಿರುವಂತೆ ಪೂರ್ವಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಬಹುದು ಆದರೆ, ಒಳ ಮೀಸಲಾತಿ ಬಗ್ಗೆ ಸರ್ಕಾರದ ಆದೇಶವಾಗುವವರೆಗೆ ರಿಕ್ತ ಸ್ನಾನಗಳನ್ನು ತುಂಬುವ ಬಗ್ಗೆ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದು ಮತ್ತು ನೇಮಕಾತಿಯನ್ನು ಕೈಗೊಳ್ಳತಕ್ಕದ್ದಲ್ಲ ಎಂದು ಈ ಮೂಲಕ ಕೋರಲಾಗಿದೆ.

ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿಧನ, ರಾಜೀನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿಯಾದ ಬೋಧಕ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಸರ್ಕಾರದ ಪತ್ರ ಸಂಖ್ಯೆ ಇಪಿ:396 ಎಸ್.ಇ.ಎಸ್ 2021 ದಿನಾಂಕ:07-08-2024 ರಲ್ಲಿ ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ದಿನಾಂಕ:01.01.2016 ರಿಂದ 31.12.2020ರವರೆಗೆ ನಿಧನ, ನಿವೃತ್ತಿ, ರಾಜೀನಾಮೆ ಹಾಗೂ ಇತರ ಕಾರಣಗಳಿಂದ ಖಾಲಿಯಾದ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿಸಿ ಆದೇಶಿಸಿದೆ ಎಂದಿದ್ದಾರೆ.

ಸದರಿ ಆದೇಶದಲ್ಲಿ ಅನುದಾನಿತ ಶಾಲೆಗಳು ಆನ್‌ಲೈನ್ ಮೂಲಕ ವಿವರಗಳು/ದಾಖಲೆಗಳನ್ನು ಸಲ್ಲಿಸಲು ತಂತ್ರಾಂಶವನ್ನು ಅಭಿವೃದ್ಧಿವಡಿಸುವುದು ಹಾಗೂ ಈ ತಂತ್ರಾಂಶದ ಮೂಲಕ ವ್ಯವಹರಿಸುವುದು ಎಂದು ಸೂಚಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ಆದೇಶ ದಿನಾಂಕ:07-08-2024 ಹಾಗೂ ಸರ್ಕಾರದ ಪ್ರದಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಟಿಪ್ಪಣಿ ದಿನಾಂಕ:24-10-2024ರಂತೆ ಅನುದಾನಿತ ಶಿಕ್ಷಕರ ಖಾಲಿಯಾದ ಬೋದಕ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ತಂತ್ರಾಂಶ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ.
ತಂತ್ರಾಂಶವು ಕೆಳಕಂಡ ಆರು ಹಂತಗಳನ್ನು ಒಳಗೊಂಡಿದೆ ಎಂದಿದ್ದಾರೆ.

1. ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅನುದಾನಿತ ಶಾಲೆಗಳ ಮಂಜೂರಾದ/ಕಾರ್ಯನಿರತ ಮತ್ತು ಅರ್ಹ ಖಾಲಿ ಹುದ್ದೆಗಳ ಮಾಹಿತಿ ಇಂದೀಕರಿಸುವುದು.
2. ಆಡಳಿತ ಮಂಡಳಿಯಿಂದ ಖಾಲಿ ಹುದ್ದೆ ಭರ್ತಿಗೆ ಅನುಮತಿ ಕೋರಿ ಸಂಬಂಧಿಸಿದ ಆಯುಕ್ತಾಲಯಗಳಿಗೆ ಪ್ರಸ್ತಾವನ ಸಲ್ಲಿಕೆ.
3. ಆಯಾ ಆಯುಕ್ತಾಲಯಗಳಲ್ಲಿ ಸಮಿತಿಗಳನ್ನು ರಚಿಸಿ ಪುಸ್ತಾವನೆಗಳನ್ನು ಪರಿಶೀಲಿಸಿ ಶಿಫಾರಸು ಮಾಡುವುದು. ಶಿಫಾರಸ್ಸು ಆಧರಿಸಿ ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡುವುದು.
4. ಆಡಳಿತ ಮಂಡಳಿಗಳು ಅನುಮತಿಸಿದ ಹುದ್ದೆಗಳಿಗೆ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ಕೈಗೊಂಡು ಸಂಬಂಧಿಸಿದ ಉಪನಿರ್ದೇಶಕರಿಗೆ ನೇಮಕಾತಿ ಅನುಮೋದನೆಗೆ ಆನ್‌ಲೈನ್‌ನಲ್ಲಿ ಪ್ರಸ್ತಾವನೆ ಸಲ್ಲಿಕೆ

5. ಉಪನಿರ್ದೇಶಕರಿಂದ ಪರಿಶೀಲಿಸಿ ಸಂಬಂಧಿಸಿದ ಆಯುಕ್ತಾಲಯಗಳಿಗೆ ಆನ್‌ಲೈನ್‌ನಲ್ಲಿ ಪ್ರಸ್ತಾವನಗಳ ಸಲ್ಲಿಕೆ
6. ಸಂಬಂದಿಸಿದ ಆಯುಕ್ತಾಲಯಗಳಿಂದ ಸರ್ಕಾರಕ್ಕೆ ಆನ್‌ಲೈನ್‌ನಲ್ಲಿ ಅನುಮೋದನೆಗೆ ಸಲ್ಲಿಕೆ

ಪ್ರಸ್ತುತ ಮೇಲೆ ತಿಳಿಸಿರುವ ಆರು ಹಂತಗಳಲ್ಲಿ ಮೊದಲ ಎರಡು ಹಂತಗಳ ತಂತ್ರಾಂಶ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು ಉಳಿದ ಹಂತಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ. ಸರ್ಕಾರದ ಸುತ್ತೋಲೆ ಸಂಖ್ಯೆ ಸಿ.ಅ.ಸು.ಇ 388 ಸನನಿ.2024 ದಿನಾಂಕ:25-11-2024 ರಂದು ಎಲ್ಲಾ ನೇಮಕಾತಿ ಪ್ರಕ್ರಿಯೆಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಿಸದಿರಲು ಆದೇಶಿಸಲಾಗಿದೆ. ಸದರಿ ಆದೇಶದಂತ ಮೊದಲ ಹಂತದ ತಂತ್ರಾಂಶ (BEO Login) ನ್ನು ಚಾಲ್ತಿಗೊಳಿಸುವುದನ್ನು ತಡೆಹಿಡಿದು, ಈ ಕುರಿತು ಸರ್ಕಾರಕ್ಕೆ, ಮಾರ್ಗದರ್ಶನ ಕೋರಲಾಗಿದೆ ಎಂದು ಹೇಳಿದ್ದಾರೆ.

ಆದರೇ ವಿವಿಧ ಶಾಲಾ ಆಡಳಿತ ಮಂಡಳಿಗಳಿಂದ ಹಾಗೂ ಜನ ಪ್ರತಿನಿಧಿಗಳಿಂದ ಸರ್ಕಾರವು ಆದೇಶ ಸಂಖ್ಯೆ: ಇಪಿ:396 ಎಸ್.ಇ.ಎಸ್ 2021 ದಿನಾಂಕ:07-08-2024ರಲ್ಲಿ ಆದೇಶ ಮಾಡಿದ್ದರೂ ಸದರಿ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ತಿಳಿಸುತ್ತಾ ಪ್ರಕ್ರಿಯೆ ಪ್ರಾರಂಭಿಸಲು ಕೋರಿ ಮನವಿಗಳು ಸ್ವೀಕೃತವಾಗುತ್ತಲಿವೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಂತ್ರಾಂಶದ ಮೊದಲ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅನುದಾನಿತ ಶಾಲೆಗಳ ಮಂಜೂರಾದ/ಕಾರ್ಯನಿರತ ಮತ್ತು ಅರ್ಹ ಖಾಲಿ ಹುದ್ದೆಗಳ ಮಾಹಿತಿ ಇಂದೀಕರಿಸುವ ಪ್ರಕ್ರಿಯೆ ಒಳಗೊಂಡಿದ್ದು ಈ ಹಂತದಲ್ಲಿ ಯಾವುದೇ ರೋಸ್ಟರ್ ಬಿಂದು ನಿಗಧಿಪಡಿಸುವ ಪ್ರಕ್ರಿಯೆ ಇರುವುದಿಲ್ಲ. ಪ್ರಯುಕ್ತ ಮೊದಲ ಹಂತದ ತಂತ್ರಾಂಶ ಬಿಡುಗಡಗೆ ಅನುಮತಿ ನೀಡಲು ಕೋರಿ ಉಲ್ಲೇಖ-3ರಲ್ಲಿ ಮಾನ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆರವರನ್ನು ಕೋರಲಾಗಿದೆ. ಈ ಹಂತದಲ್ಲಿ ಯಾವುದೇ ರೋಸ್ಮರ್‌ ಬಿಂದು ನಿಗಧಿಪಡಿಸುವ ಪ್ರಕ್ರಿಯೆ ಇರುವುದಿಲ್ಲ. ಪ್ರಯುಕ್ತ ಮೊದಲ ಹಂತದ ತಂತ್ರಾಂಶ ಬಿಡುಗಡಗೆ ಅನುಮತಿ ನೀಡಲು ಕೋರಿದ್ದಾರೆ ಎಂದು ಹೇಳಿದ್ದಾರೆ.



logoblog

Thanks for reading Order Granting permission to fill aided educational institutions from 2015 to 2020

Previous
« Prev Post

No comments:

Post a Comment