Subject ; Jayantis and the importance of celebration 2025....
ಕರ್ನಾಟಕ ಸರ್ಕಾರವು ಪ್ರತಿ ವರ್ಷ ಅನೇಕ ಮಹನೀಯರ ಜಯಂತಿ ಉತ್ಸವಗಳನ್ನು ಸರ್ಕಾರದ ವತಿಯಿಂದಲೇ ಆಚರಿಸುತ್ತಿದೆ. ಮಾನವನ ಬದುಕಿಗೆ ನೈತಿಕ ಮಾರ್ಗದರ್ಶನವನ್ನು ನೀಡಿ ಮಾನವನ ಬದುಕನ್ನು ಮಹೋನ್ನತವಾಗಿಸುವ ನಿಟ್ಟಿನಲ್ಲಿ ಅನೇಕ ದಾರ್ಶನಿಕರು, ಸಂತರು ಶರಣರು ಮಾರ್ಗದರ್ಶನ ನೀಡುತ್ತಲೇ ಬಂದಿದ್ದಾರೆ. ಅವರು ತೋರಿರುವ ಬೆಳಕಿನಲ್ಲಿ ನಾವು ನಮ್ಮ ಬಾಳನ್ನು ಬೆಳಗಿಕೊಳ್ಳುವುದರ ಜೊತೆಗೆ ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಿಸುವಂತೆ ಮಾಡಬೇಕಾಗಿದೆ.
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮತ್ತು ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ ಮಹನೀಯರನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅವರ ವಿಚಾರಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಜಯಂತಿ ಉತ್ಸವಗಳು ಸಹಕಾರಿಯಾಗಿವೆ.
ಶರಣರ ಮತ್ತು ದಾರ್ಶನಿಕರ ನುಡಿಗಳು ಇಂದಿಗೂ ಜನಸಾಮಾನ್ಯರ ಬದುಕನ್ನು ಸುಧಾರಿಸುವ ಮತ್ತು ಅವರನ್ನು ವಿಚಾರಶೀಲರನ್ನಾಗಿ ಮಾಡುವುದರ ಜೊತೆಗೆ ಅವರಲ್ಲಿ ನೈತಿಕ ಪ್ರಜ್ಞೆಯನ್ನು ಅರಳಿಸುವ ನಿಟ್ಟಿನಲ್ಲಿ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಈ ವಿಚಾರಗಳನ್ನು ಅರಿತ ಕರ್ನಾಟಕ ಸರ್ಕಾರವು 32 ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಪುನರ್ಮನನ ಮಾಡಲು ವೇದಿಕೆಯನ್ನು ಒದಗಿಸಿದೆ.
ಸರ್ಕಾರ ಆಚರಿಸುವ ಜಯಂತಿಗಳ ವಿವರಣೆ ಮತ್ತು ಆ ಮಹನೀಯರ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ಒಳಗೊಂಡ ಹೊತ್ತಿಗೆ ಇದಾಗಿದೆ.
No comments:
Post a Comment