Tuesday, February 4, 2025

GOVERNMENT Employees VRS Information

  Wisdom News       Tuesday, February 4, 2025
Hedding ; GOVERNMENT Employees VRS Information...


ಸ್ವಯಂ ನಿವೃತ್ತಿ
(VRS-Voluntary Retirement Scheme)

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 285 (1) (a) ರನ್ವಯ ಒಬ್ಬ ಸರ್ಕಾರಿ ನೌಕರನು ಅಥವಾ ಪತ್ರಾಂಕಿತ ಅಧಿಕಾರಿಯಾಗಿರಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ (ದಿನಾಂಕ:05.07.1990 ರ ತಿದ್ದುಪಡಿಯಂತೆ 20 ವರ್ಷಗಳ ಬದಲಿಗೆ 15 ವರ್ಷಗಳಿಗೆ ಇಳಿಕೆ ಮಾಡಲಾಗಿರುತ್ತದೆ) ನಂತರ ಸೂಕ್ತ ಕಾರಣಗಳೊಂದಿಗೆ....ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿರುತ್ತದೆ.

ನಿಯಮ 285 (1) (b) ರನ್ವಯ 50 ವರ್ಷಗಳ ವಯಸ್ಸು ದಾಟಿದ ನಂತರ ಸಹ ಸ್ವಯಂ ನಿವೃತ್ತಿ ಹೊಂದಲು ಅವಕಾಶ ಮಾಡಿಕೊಡಲಾಗಿದೆ.

ಷರತ್ತು ಮತ್ತು ನಿಬಂಧನೆಗಳು ನಿಯಮ 285 (2)ರನ್ವಯ : 👇
1. ನೇಮಕಾತಿ ಪ್ರಾಧೀಕಾರಿಯವರಿಗೆ ಸ್ವಯಂ ನಿವೃತ್ತಿ ಹೊಂದಲು ಅನುಮತಿಗಾಗಿ ಕೋರಿ 3 ತಿಂಗಳ ಮುಂಚಿತವಾಗಿ ಮನವಿ ಸಲ್ಲಿಸಬೇಕು.

2.‍ಸರ್ಕಾರಿ ನೌಕರ ಅಥವಾ ಅಧಿಕಾರಿ ಕಡ್ಡಾಯವಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಿರಬೇಕು.

3. ಸ್ವಯಂ ನಿವೃತ್ತಿ ಬಯಸುವ ಸರ್ಕಾರಿ ನೌಕರನು ಸ್ವಯಂ ಮನವಿ ಸಲ್ಲಿಸಬೇಕಾಗುತ್ತದೆ.

4. ಸ್ವಯಂ ನಿವೃತ್ತಿ ವೇತನ ಹೊಂದಿದ ಸರ್ಕಾರಿ ನೌಕರನು..ಪಿಂಚಣಿ ಮತ್ತು ಉಪಧನ ಪಡೆಯಲು ಅರ್ಹರಿರುತ್ತಾರೆ.

5. ಹೆಚ್ಚುವರಿಯಾಗಿ 5 ವರ್ಷಗಳವರೆಗೆ.....ಪಿಂಚಣಿ ಮತ್ತು ಉಪಧನದ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದು.

ಸ್ಪಷ್ಟವಾಗಿ ನೇಮಕಾತಿ ಪ್ರಾಧಿಕಾರಿಯು....

👇

"ಸದರಿ ನೌಕರನ ಸ್ವ ಇಚ್ಛೆ ಮೇರೆಗೆ...ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 285(1) ರನ್ವಯ ಸ್ವಯಂ ನಿವೃತ್ತಿಗೊಳಿಸಿ ಆದೇಶಿಸಿ....ಸದರಿವರ ಸಲ್ಲಿಸಿದ ಒಟ್ಟು ಸೇವಾವಧಿ ಮತ್ತು ನಿವೃತ್ತಿ ದಿನಾಂಕದವರೆಗೆ...5 ವರ್ಷಗಳ ಮಿತಿಗೊಳಪಟ್ಟು....ಹೆಚ್ಚುವರಿಯಾಗಿ ಪಿಂಚಣಿ ಮತ್ತು ಉಪಧನದ ಲೆಕ್ಕಾಚಾರಕ್ಕೆ ಪರಿಗಣಿಸಿದೆ....ಎಂದು ನೀಡಿದ್ದಲ್ಲಿ........
ಮಹಾಲೇಖಪಾಲರ ಕಚೇರಿಯಿಂದ......ಪಿಂಚಣಿ ಮತ್ತು ಉಪಧನ ಪಾವತಿಗೆ ಪ್ರಾಧೀಕರಿಸುತ್ತಾರೆ".

ಹೆಚ್ಚುವರಿಯಾಗಿ ನೀಡಲಾಗುವ ಅವಧಿಯನ್ನು ಯಾವುದೇ ಕಾರಣಕ್ಕೂ....ಆ ಅವಧಿಗೆ...ಸಂಬಳ ಮತ್ತತರೆ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ....ಕೇವಲ ಪಿಂಚಣಿ ಮತ್ತು ಉಪಧನದ ಲೆಕ್ಕಾಚಾರಕ್ಕೆ ಮಾತ್ರ ಪರಿಗಣಿತವಾಗುವುದು.

ಆದರೆ...ನಿಯಮ 285 (1) (b)ರಡಿಯಲ್ಲಿ 50 ವರ್ಷ ದಾಟಿದ ನಂತರ.... ಸ್ವಯಂ ನಿವೃತ್ತಿ ಹೊಂದಲು ಇಚ್ಛಿಸಿದ್ದಲ್ಲಿ......
ಹೆಚ್ಚುವರಿಯಾಗಿ ನೀಡಲಾಗುವ Weightage ಪರಿಗಣಿಸಲಾಗುವುದಿಲ್ಲ.

(ಆದರೆ...ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಪ್ರಕರಣಗಳ ಲ್ಲಿ...ನಿಯಮ 285 (1) (a) ಅಥವಾ 285 (1) (b) ಅಡಿಯಲ್ಲಿ ಸ್ವಯಂ ನಿವೃತ್ತಿ ಪಡೆಯಲಿಚ್ಚಿಸದವರಿಗೂ.....
ಗರಿಷ್ಠ 5 ವರ್ಷಗಳವರೆಗೆ ...ಪಿಂಚಣಿ ಮತ್ತು ಉಪಧನಕ್ಕೆ ಪರಿಗಣಿಸುವುದು ಎಂದು ಸಹ ತೀರ್ಪು ನೀಡಲಾಗಿರುತ್ತದೆ.


ನೌಕರನ ಸೇವೆಯು ತೃಪ್ತಿಕರವಾಗಿರದಿದ್ದಲ್ಲಿ.....
ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರಿ ಅಂದರೆ ನಮ್ಮ ಇಲಾಖಾ ಆಯುಕ್ತರು (ನೇಮಕಾತಿ ಪ್ರಾಧಿಕಾರಿ ಬಿ.ಸಿ.ಡಿ ವರ್ಗಗಳಿಗೆ) ನೀಡಲಾಗುವ ಪಿಂಚಣಿ ಮತ್ತು ಉಪಧನದ ಕಡಿತಗೊಳಿಸಲು ಶಿಫಾರಸ್ಸು ಮಹಾಲೇಖಪಾಲರ ಕಚೇರಿಗೆ ಮಾಡಬಹುದಾಗಿರುತ್ತದೆ (ಅನಧೀಕೃತ ಗೈರು ಹಾಜರಿ 3 ವರ್ಷಗಳ ಮೇಲ್ಪಟ್ಟ ಅವಧಿಗೆ)

ನೇಮಕಾತಿ ಪ್ರಾಧೀಕಾರವು..
ಮಹಾಲೇಖಪಾರ ಅಭಿಪ್ರಾಯ/ ಸಹಮತಿಯೊಂದಿಗೆ.....
ಪರಿಶೀಲಿಸಿ...ಸ್ವಯಂ ನಿವೃತ್ತಿಗೆ ಆದೇಶಿಸಲಾಗುತ್ತದೆ.

6. ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ ನಂತರ...ನಿವೃತ್ತಿ ದಿನಾಂಕದೊಳಗೆ ಸೂಕ್ತ ಕಾರಣಗಳೊಂದಿಗೆ ನೇಮಕಾತಿ ಪ್ರಾಧೀಕಾರಕ್ಕೆ ಮನವಿ ಸಲ್ಲಿಸಿ ಹಿಂಪಡೆಯ ಬಹುದಾಗಿರುತ್ತದೆ.

7. ನೇಮಕಾತಿ ಪ್ರಾಧೀಕಾರಿಯಿಂದ ಆದೇಶವಾಗದ ಹೊರೆತು ಅರ್ಜಿ ಮೂಲಕ ಮನವಿ ಸಲ್ಲಿಸಿದ ಮೇಲೆ ಸ್ವಯಂ ನಿವೃತ್ತಿ ಹೊಂದಿದಂತಾಗುವುದಿಲ್ಲ.

8. ಕರ್ನಾಟಕ ನಾಗರೀಕ (ವರ್ಗೀಕರಣ..ನಿಯಂತ್ರಣ..ಮೇಲ್ಮನವಿ) ಸೇವಾ ನಿಯಮಗಳು 1957 ರ ನಿಯಮ 8 ರಲ್ಲಿರುವಂತೆ....ಯಾವುದೇ ಸರ್ಕಾರಿ ನೌಕರ ಅಥವಾ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ...ಶಿಸ್ತು ಕ್ರಮ ಪ್ರಕರಣ ಅಥವಾ ಇನ್ನಿತರೇ ದಂಡನಾ ಪ್ರಕ್ರಿಯೆ ನಡೆಯುತ್ತಿದ್ದಲ್ಲಿ.....ಸ್ವಯಂ ನಿವೃತ್ತಿ ಆದೇಶ ಹೊರಡಿಸಲಾಗದು.

ಪ್ರಾಸ್ತವನೆಯನ್ನು ನೇಮಕಾತಿ ಪ್ರಾಧೀಕಾರಿಗೆ ಸರ್ಕರಿ ನೌಕರನ ಮನವಿ ಪತ್ರದೊಂದಿಗೆ ಕಳುಹಿಸಬೇಕಾದ

ಚೆಕ್ ಲಿಸ್ಟ್ 👇


ಸ್ವಯಂ ನಿವೃತ್ತಿ ಆದೇಶವನ್ನು...ಪತ್ರಾಂಕಿತ ಅಧಿಕಾರಿಗಳಿಗೆ ಸರ್ಕಾರದವರಿಯಿಂದ ನೀಡಲಾಗುವುದು ಹಾಗೆ...ಬಿ.ಸಿ.ಡಿ. ವರ್ಗದ
ನೌಕರರಿಗೆ....ನೇಮಕಾತಿ ಪ್ರಾಧೀಕಾರ (ಆಯುಕ್ತರವರ ಕಚೇರಿಯಿಂದ) ಆದೇಶ ನೀಡಲಾಗುತ್ತದೆ.

ನಂತರ ಸರ್ಕಾರದ ಸ್ವಾಮ್ಯದ ಹಾಗೂ ಸರ್ಕಾರದ ಅನುದಾನ ಪಡೆಯುವ ನಿಗಮ...ಮಂಡಳಿ...ಸಂಘ ಸಂಸ್ಥೆಗಳು..ವಿಶ್ವ ವಿದ್ಯಾಲಯ ಇತರೆಡೆ ನೇರ ನೇಮಕಾತಿಗೆ ಅವಕಾಶ ನೀಡಲಾಗುವುದಿಲ್ಲ.





logoblog

Thanks for reading GOVERNMENT Employees VRS Information

Previous
« Prev Post

No comments:

Post a Comment