Hedding ; To watch live broadcast of SDMC Pusthi program broadcast by DSERT todayDate: 10-01-2025Timings: 11:00 AM to 1:00 PM...
ಡಿ.ಎಸ್.ಇ.ಆರ್.ಟಿ. ವತಿಯಿಂದ ರಾಜ್ಯ ಯೋಜನಾ ಕಚೇರಿಯ ಸಹಯೋಗದೊಂದಿಗೆ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಪುಷ್ಠಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯು ಟ್ಯೂಬ್ ಲೈವ್‌ನ್ನು ದಿನಾಂಕ:10/01/2024 ರಂದು ಡಿ.ಎಸ್.ಇ.ಆರ್.ಟಿ.ಯಲ್ಲಿ ಆಯೋಜಿಸಲಾಗಿದೆ.
ಸ್ಟುಡಿಯೋ ವಿಭಾಗದ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರು. ಸದರಿ ದಿನದಂದು ಯು ಟ್ಯೂಬ್ ಲೈವ್ ಮೂಲಕ ಕಾರ್ಯಕ್ರಮವನ್ನು ನಡೆಸಲು ಅನುವಾಗುವಂತೆ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ಹಾಗೂ ಸದರಿ ಕಾರ್ಯಕ್ರಮವನ್ನು ಯು ಟ್ಯೂಬ್ ಲೈವ್ ನೀಡಲು ಕ್ರಮ ವಹಿಸಿ ಲಿಂಳನ್ನು ಶೇರ್ ಮಾಡಲು ತಿಳಿಸಿದೆ.
ಯು ಟ್ಯೂಬ್ ಲೈವ್ ಮೂಲಕ ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳಾದ ಉಪನಿರ್ದೇಶಕರು (ಆಡಳಿತ & ಅಭಿವೃದ್ಧಿ), ಎಲ್ಲಾ ಅಧಿಕಾರಿ ವರ್ಗದವರು, ಬಿ.ಇಓ, ಬಿಆರ್‌ಸಿ, ಬಿ.ಆರ್.ಪಿ, ಇ.ಸಿ.ಓ, ಸಿ.ಆರ್.ಪಿ.ಗಳು, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಮಧ್ಯಾಹ್ನ ಉಪಹಾರ ಯೋಜನೆಯ ಅಧಿಕಾರಿಗಳು ಭಾಗವಹಿಸುವಂತೆ ಸೂಕ್ತ ಕ್ರಮಕೈಗೊಳ್ಳಲು ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ & ಅಭಿವೃದ್ಧಿ) ರವರಿಗೆ ಸೂಚಿಸಿದೆ. ಸಂಬಂಧಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪತ್ರ ಮುಖೇನ ತಿಳಿಸಲು ತಿಳಿಸಿದ.
ಡಯಟ್ ಹಂತದ ಎಲ್ಲಾ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರುಗಳು ತಪ್ಪದೇ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಬೆಳಗ್ಗೆ 11.00 ಗಂಟೆಯಿಂದ 1.00 ಗಂಟೆಯವರೆಗೆ ಯು ಟ್ಯೂಬ್ ಲೈವ್ ಕಾನ್ಸರೆನ್ಸ್ ನಡೆಯಲ್ಲಿದ್ದು,
ಕಾರ್ಯಕ್ರಮದ ಲಿಂಕ್‌ನ್ನು ಮುಂದಿನ ದಿನಗಳಲ್ಲಿ ಇ-ಮೇಲ್ ಮೂಲಕ ಕಳುಹಿಸಲಾಗುವುದು. ಲಿಂಕ್‌ನ್ನು
ಸಂಬಂಧಿಸಿದವರಿಗೆ ತಲುಪಿಸಲು ಡಯಟ್ ಪ್ರಾಂಶುಪಾಲರಿಗೆ ತಿಳಿಸಿದೆ.
ಸದರಿ ಕಾರ್ಯಕ್ರಮದಲ್ಲಿ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ನಿರ್ದೇಶಕರುಗಳಾದ ಮಾದೇಗೌಡರು, ಶ್ರೀ.ಮಾರುತಿ ಎಂ.ಆರ್., ಹಾಗೂ ಶ್ರೀಮತಿ.ಹೇಮಾವತಿ, ಕಿರಿಯ ಕಾರ್ಯಕ್ರಮಾಧಿಕಾರಿಗಳು, ಶ್ರೀ.ಉದಯ ಕುಮಾರ್, ಉಪನ್ಯಾಸಕರು, ಸಿಟಿಇ ಮೈಸೂರು ಹಾಗೂ ಮತ್ತಿತರ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಾರೆ.
ಧನ್ಯವಾದಗಳು🙏🙏


No comments:
Post a Comment