Wednesday, January 22, 2025

Karnataka Voters FINAL List 2025

  Wisdom News       Wednesday, January 22, 2025
Hedding ; Karnataka Voters FINAL List 2025...



ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವ ರಾಜ್ಯದಲ್ಲಿ ಒಟ್ಟು 5,52,08,565 ಸಾಮಾನ್ಯ ಮತದಾರರಿದ್ದಾರೆ. ಇದರಲ್ಲಿ 2,75,62,634 ಪುರುಷ ಮತದಾರರು, 2,76,40,836 ಮಹಿಳಾ ಮತದಾರರು ಮತ್ತು 5,095 ಇತರ ಮತದಾರರು ಸೇರಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸೋಮಾವಾರದಂದು ಎಲ್ಲ ಜಿಲ್ಲೆಗಳ ಉಪ ಆಯುಕ್ತರು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ಪಟ್ಟಿ ನೋಂದಣಿ ಅಧಿಕಾರಿಗಳು ಮತ್ತು ಎಲ್ಲಾ ಮತಗಟ್ಟೆಗಳಲ್ಲೂ ಪ್ರಕಟಿಸಲಾಗಿದೆ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ https://ceo.karnataka.gov.in ಮತ್ತು DEOಗಳ ವೆಬ್‍ಸೈಟ್‍ಗಳಲ್ಲಿ ಸಹ ವಿಧಾನಸಭೆ ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿ ಲಭ್ಯವಿದೆ.

ಕರಡು ಪಟ್ಟಿಗೆ ಹೋಲಿಸಿದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 1,03,783 ಮತದಾರರು ಹೆಚ್ಚಳ ಆಗಿದ್ದಾರೆ. ಮಹಿಳಾ ಮತದಾರರು 72,754, ಪುರುಷ ಮತದಾರರು 30,999 ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿ 2025ರ ಪ್ರಕಾರ ಮತಗಟ್ಟೆಗಳ ಸಂಖ್ಯೆ 58,932 ಇದೆ.

ಅಂತಿಮ ಮತದಾರರ ಪಟ್ಟಿ ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಲು ಲಿಂಕ್ ಕ್ಲಿಕ್ ಮಾಡಿ 


ರಾಜ್ಯದ ಮತದಾರರ ಅಂತಿಮ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಿಸಿದೆ. 2,75,62,634 , 2,76,40,836 ಮತ್ತು 5,095 ಇತರ ಮತದಾರರು ಸೇರಿ 5,52,08,565 ಮತದಾರರಿದ್ದಾರೆ. 2025ರ ಕರಡು ಪಟ್ಟಿಗೆ ಹೋಲಿಸಿದರೆ 1,03,783 ಮತದಾರರ ಸಂಖ್ಯೆ ಹೆಚ್ಚಳವಾಗಿದೆ.

• ಮುಖ್ಯ

ಚುನಾವಣಾ ಅಧಿಕಾರಿ ಕಚೇರಿಯಿಂದ ಅಂತಿಮ ಪಟ್ಟಿ ಸಂಖ್ಯೆ ಟ

ಯುವ ಮತದಾರರ ಪಟ್ಟಿಯಲ್ಲಿ ಕರಡು 6,81,197 ໖໖, ಪರಿಷ್ಕರಣೆಯಲ್ಲಿ 8,02,423ಕ್ಕೆ ಏರಿಕೆಯಾಗಿದೆ. ಇದು 1,21,226 ಯುವ ಮತದಾರರ ಗಮನಾರ್ಹ ಏರಿಕೆಯನ್ನು ಸೂಚಿಸಿದೆ. ಅಂತಿಮ ಪಟ್ಟಿ ಪ್ರಕಾರ 2,77,616 ಪುರುಷ, 3,58,930, ಮಹಿಳಾ ಹಾಗೂ 5 ಇತರ ಮತದಾರರು 85 ವರ್ಷ ಮೇಲ್ಪಟ್ಟವರಾಗಿದ್ದಾರೆ. 8,747 ಪುರುಷ, 13,804 ಮಹಿಳಾ ಮತದಾರರು 100ಕ್ಕೂ ಹೆಚ್ಚಿನ ವಯಸ್ಸಿನವರಿದ್ದಾರೆ.

ಒಟ್ಟು 6,28,554 ದಿವ್ಯಾಂಗ ಮತದಾರರಿದ್ದಾರೆ. ಅಂತಿಮ ಮತದಾರರ ಪಟ್ಟಿಯ ಪ್ರಕಾರ ಸರಾಸರಿ ಒಂದು ಮತದಾನ ಕೇಂದ್ರಕ್ಕೆ 937 ಮತದಾರರಂತೆ ಒಟ್ಟು 58,932 ಮತಗಟ್ಟೆಗಳಿವೆ. ಅಂತಿಮ ಮತದಾರರ ಪಟ್ಟಿ 2024 ರಿಂದ 20250 3 29,84,125 , 7,04,339 ಅಳಿಸುವಿಕೆ ಹಾಗೂ 12,92,271 ಮಾರ್ಪಾಡುಗಳನ್ನು ಮಾಡ ಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಾಹಿತಿಗಾಗಿ ಸಾರ್ವಜನಿಕರು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ (https://ceo.karnataka.gov.in/ en) ಮೂಲಕ ಮತದಾರರ ಫೋಟೋ ಗುರುತಿನ ಚೀಟಿ ಮತ್ತು ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಸಂಬಂಧಿಸಿದ ಆಯಾ ಚುನಾವಣಾ ನೋಂದಣಾಧಿಕಾರಿಗಳು/ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು/ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಮತದಾರರು ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ 1950 (180042551950) ಸಂಪರ್ಕಿಸುವಂತೆ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.



logoblog

Thanks for reading Karnataka Voters FINAL List 2025

Previous
« Prev Post

No comments:

Post a Comment