Hedding ; Karnataka SSLC Exam-1 Final Timetable 2025 Released...
SSLC And 2nd PUC Exam Date Announced: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಡಿಸೆಂಬರ್ನಲ್ಲಿ ದ್ವಿತೀಯ ಪಿಯುಸಿ ಹಾಗೂ SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು.
ಇದೀಗ ಫೈನಲ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಯಾವ ದಿನ, ಯಾವ ಪರೀಕ್ಷೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.
2025ನೇ ಸಾಲಿನ ಎಸ್ಎಸ್ಎಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆ-1 ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಇಂದು(ಜನವರಿ 10) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ -1 ನಡೆಯುತ್ತಿದ್ದರೆ, ಮಾರ್ಚ್ 21ರಿಂದ ಏಪ್ರಿಲ್ 04-04 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿವೆ ಎಂದು
ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಮಾರ್ಚ್ 1ರಿಂದ ಮಾರ್ಚ್ 19ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ಹಾಗೂ ಮಾರ್ಚ್ 20 ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 16ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಶಿಕ್ಷಣ ಇಲಾಖೆ ಶುಕ್ರವಾರ (ಜ10) ಬಿಡುಗಡೆ ಮಾಡಿದೆ.
ಜನವರಿ 10: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024-25ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಇಂದು(ಜನವರಿ 10) ಶುಕ್ರವಾರದಂದು ಪ್ರಕಟಿಸಿದೆ. 2025ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯು ಮಾರ್ಚ್ 21ರಿಂದ ಪ್ರಾರಂಭವಾಗಿ ಏಪ್ರಿಲ್ 04ರವರೆಗೆ ನಡೆಯಲಿದೆ. ಇನ್ನು 2025ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯು ಮಾರ್ಚ್ 1ರಿಂದ ಪ್ರಾರಂಭವಾಗಿ ಮಾರ್ಚ್ 20ರವರೆಗೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ವಿವರ
🟣*21-03-2025 ಶುಕ್ರವಾರ- ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ಇಂಗ್ಲಿಷ್, ಸಂಸ್ಕೃತ, ತಮಿಳು, ಉರ್ದು
🔴*24-03-2025 ಸೋಮವಾರ- ಗಣಿತ, ಸಮಾಜ ಶಾಸ್ತ್ರ,
🔵*26-03-2025 ಬುಧವಾರ- ದ್ವಿತೀಯ ಭಾಷೆ-ಇಂಗ್ಲಿಷ್, ಕನ್ನಡ
🟠*29-03-2025 ಶನಿವಾರ- ಸಮಾಜ ವಿಜ್ಞಾನ
🟡*02-04-2025 ಬುಧವಾರ- ವಿಜ್ಞಾನ
🟢*04-04-2025 ಶುಕ್ರವಾರ- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಉರ್ದು, ಸಂಸ್ಕೃತ, ಕೊಂಕಣಿ ಅರೇಬಿಕ್, ಪರ್ಷಿಯನ್, ತುಳು
2025ರ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ
🟫ಮಾರ್ಚ್ 21, 2025 (ಶುಕ್ರವಾರ): ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCERT), ಸಂಸ್ಕೃತ (ಪ್ರಥಮ ಭಾಷೆ)
🟪ಮಾರ್ಚ್ 24, 2025 (ಸೋಮವಾರ): ಗಣಿತ, ಸಮಾಜಶಾಸ್ತ್ರ
🟦ಮಾರ್ಚ್ 26, 2025 (ಬುಧವಾರ): ಇಂಗ್ಲೀಷ್, ಕನ್ನಡ (ದ್ವಿತೀಯ ಭಾಷೆ).
🟦ಮಾರ್ಚ್ 29, 2025 (ಶನಿವಾರ): ಸಮಾಜ ವಿಜ್ಞಾನ
🟩ಏಪ್ರಿಲ್ 01, 2025 (ಮಂಗಳವಾರ): ಎಲಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್-IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV, ಪ್ರೋಗ್ರಾಮಿಂಗ್ ಇನ್ ANSI ‘C’, ಅರ್ಥಶಾಸ್ತ್ರ
🟨ಏಪ್ರಿಲ್ 02, 2025 (ಬುಧವಾರ): ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
🟧ಏಪ್ರಿಲ್ 04, 2025 (ಶುಕ್ರವಾರ): ಹಿಂದಿ (NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು (ತೃತೀಯ ಭಾಷೆ)
🟥ಏಪ್ರಿಲ್ 04, 2025 (ಶುಕ್ರವಾರ): ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋಮೊಬೈಲ್, ಬ್ಯೂಟಿ ಆ್ಯಂಡ್ ವೆಲ್ನೆಸ್, ಅಪರೆಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ & ಹಾರ್ಡ್ವೇರ್ (NSQF ವಿಷಯಗಳು)


No comments:
Post a Comment