Hedding; General Transfer Of Teachers for the year 2023-24 are hereby notified...
2023-24ನೇ ಸಾಲಿನ ಶಿಕ್ಷಕರ ಹಾಗೂ ಪ್ರಾಥಮಿಕ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು-2020ರ ನಿಯಮಗಳಲ್ಲಿನಂತೆ ಶಿಕ್ಷಣ ಇಲಾಖೆಯ ಸರ್ಕಾರಿ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಪ್ರಾಥಮಿಕ ಶಾಲಾ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು/ತತ್ಮಾನ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಮಾರ್ಗಸೂಚಿಗಳನ್ನೊಳಗೊಂಡಂತೆ ಉಲ್ಲೇಖದಲ್ಲಿ ವೇಳಾಪಟ್ಟಿ, ಸಹಿತ ಮಾರ್ಗಸೂಚಿಯನ್ನು ನೀಡಲಾಗಿತ್ತು.
ವರ್ಗಾವಣಾ ಕಾಯ್ಕೆ ಸೆಕ್ಷನ್-10 ರಡಿಯಲ್ಲಿ ವರ್ಗಾವಣೆ ಪಡೆಯಲು ಆಧ್ಯತೆಯಂತೆ ನಿಗಧಿಪಡಿಸಿದ ಪ್ರಮಾಣ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿತ್ತು.
ಮುಂದುವರೆದು, ವಿಶೇಷ ಪ್ರಕರಣದ ವರ್ಗಾವಣೆಯಲ್ಲಿ ವೈಧ್ಯಕೀಯ ಸಂಬಂಧ ಮಾರಣಾಂತಿಕ ಖಾಯಿಲೆಗಳಾದ ಕ್ಯಾನ್ಸರ್, ಹೃದಯ ಶಸ್ತ್ರ ಚಿಕಿತ್ಸೆ ಕಿಡ್ನಿ ವೈಪಲ್ಯಗಳ ಹೊರತಾಗಿ ಸಾಮಾನ್ಯ ಖಾಯಿಲೆಗಳಿಗೂ ಸಹಾ ಜಿಲ್ಲಾ ಮಟ್ಟದ ವೈಧ್ಯಕೀಯ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವ ಮೂಲಕ ಲಾಭಿ ನಡೆಸಿ ವರ್ಗಾವಣಾ ಸೌಲಭ್ಯವನ್ನು ಪಡೆದಿದ್ದು ಇದರಿಂದ ವರ್ಗಾವಣಾ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದು ವರ್ಗಾವಣೆ ಪಡೆದ ಶಿಕ್ಷಕರ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ದೂರು ಸ್ವೀಕೃತವಾಗಿರುತ್ತದೆ.
ಈಗಾಗಲೇ ಪ್ರಕರಣದ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ದಿನಾಂಕ: 15/03/2024ರ ಅಧಿಸೂಚನೆಯ ಪುಟ ಸಂಖ್ಯೆ 7 ಮತ್ತು 8 ರಲ್ಲಿ ಸಕ್ಷಮ ವರ್ಗಾವಣಾ ಪ್ರಾಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿತ್ತು. ಸದರಿ ಸೂಚನೆಯ ಅಂಶಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳತಕ್ಕದ್ದು ವೈದ್ಯಕೀಯ ದೃಢೀಕರಣ ಪ್ರಮಾಣ ಪತ್ರಗಳನ್ನು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಶಿಕ್ಷಕರು ಪಡೆಯಬೇಕಾಗಿದ್ದು ಸದರಿ ಪ್ರಮಾಣ ಪತ್ರವನ್ನು ವಿತರಿಸುವ ಜಿಲ್ಲಾ ಪ್ರಾಧಿಕಾರಿಯವರಿಗೆ ಆಯಾ ವ್ಯಾಪ್ತಿಯ ಶಿಕ್ಷಕ ಅರ್ಜಿದಾರರಿಗೆ ಪರೀಕ್ಷಣೆಯನ್ನು ಹಮ್ಮಿಕೊಂಡು ತ್ರಿಸದಸ್ಯ ಪ್ರಮಾಣ ಪತ್ರಗಳನ್ನು ವಿತರಿಸಲು ಕ್ರಮ ವಹಿಸುವಂತೆ ಇಲಾಖೆಯಿಂದ ಅಗತ್ಯ ಮಾಹಿತಿ ವಿವರಗಳನ್ನು ಒದಗಿಸಿ ಸಮನ್ವಯ ಪಾತ್ರವನ್ನು ನಿರ್ವಹಿಸಲು ತಿಳಿಸಲಾಗಿರುತ್ತದೆ.
No comments:
Post a Comment